“ಫೋನ್ ಮುಟ್ಟುವಂತಿಲ್ಲ, ಗೂಗಲ್ ಟ್ರಾನ್ಲೇಟ್ ಮಾಡುವಂತಿಲ್ಲ, ಮುಸ್ಲಿಂ ಹುಡುಗಿಯ ಜೊತೆ….”: ಪಾಕಿಸ್ತಾನದ 5 ಚಿತ್ರ ವಿಚಿತ್ರ ಕಾನೂನುಗಳು ಹೇಗಿವೆ ನೋಡಿ

in Uncategorized 9,859 views

Pakistan Strange Law: ಪಾಕಿಸ್ತಾನವು ತನ್ನ ದೇಶದಲ್ಲಿನ ಚಿತ್ರ ವಿಚಿತ್ರ ಪ್ರಕರಣಗಳ ಮೂಲಕ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಡಿಯೋವೊಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಇಮ್ರಾನ್ ಖಾನ್ ಮಹಿಳೆಯೊಬ್ಬಳೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ. ಆದರೆ, ಈ ಆಡಿಯೋವನ್ನು ಇನ್ನೂ ಯಾರೂ ಖಚಿತಪಡಿಸಿಲ್ಲ. ಈ ಆಡಿಯೋದಿಂದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರು.

Advertisement

ಇದರಂತೆಯೇ ಮತ್ತೊಂದು ಇಂಟರೆಸ್ಟಿಂಗ್ ಸಂಗತಿಯೆಂದರೆ ಪಾಕಿಸ್ತಾನದಲ್ಲಿರುವ ಚಿತ್ರ ವಿಚಿತ್ರ ಕಾನೂನುಗಳು. ಇಂತಹ ಸುದ್ದಿಗಳಿಗಾಗಿ ಪಕ್ಕದ ರಾಷ್ಟ್ರ ಪಾಕಿಸ್ತಾನ ನಂಬರ್ ಒನ್ ಸ್ಥಾನದಲ್ಲಿರುತ್ತದೆ. ಪಾಕಿಸ್ತಾನದಲ್ಲಿರುವ ಚಿತ್ರ ವಿಚಿತ್ರ ಕಾನೂನುಗಳಿಂದಾಗಿ ವಿಶ್ವದಾದ್ಯಂತ ಸದಾ ಟೀಕೆಗೊಳಗಾಗುತ್ತಲೇ ಇರುತ್ತದೆ. ಕೆಲ ತಿಂಗಳುಗಳ ಹಿಂದೆ ಪಾಕಿಸ್ತಾನದಲ್ಲಿ ಕಾನೂನೊಂದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವಿಚಿತ್ರ ಮಸೂದೆಯೊಂದನ್ನು ಮಂಡಿಸಲಾಗಿದೆ. ಈ ಮಸೂದೆಯು ನೆರೆಯ ದೇಶ ಭಾರತದ ಜೊತೆ ಜೊತೆಗೆ ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗಿತ್ತು.

18 ವರ್ಷ ವಯಸ್ಸಿನವರಿಗೆ ಮದುವೆಯನ್ನು ಕಡ್ಡಾಯಗೊಳಿಸಬೇಕು ಎಂದು ಮಸೂದೆ ಹೇಳುತ್ತದೆ. ಇದಲ್ಲದೆ, ಈ ಕಾನೂನನ್ನು ಅನುಸರಿಸದವರಿಗೆ ಶಿಕ್ಷೆಯ ನಿಬಂಧನೆಯೂ ಇದೆ. ಸಾಮಾಜಿಕ ಅನಿಷ್ಟಗಳು ಮತ್ತು ಮಕ್ಕಳ ಮೇಲಿನ ಅ ತ್ಯಾ ಚಾ ರಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ ಎಂದು ಪಾಕಿಸ್ತಾನಿ ರಾಜಕಾರಣಿಗಳು ಹೇಳುತ್ತಾರೆ. ಹೌದು ಇಂತಹುದೇ ಪಾಕಿಸ್ತಾನದ 5 ಚಿತ್ರ ವಿಚಿತ್ರ ಕಾನೂನುಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

ಅನುಮತಿಯಿಲ್ಲದೆ ಫೋನ್ ಮುಟ್ಟುವಂತಿಲ್ಲ

ಅನುಮತಿಯಿಲ್ಲದೆ ಯಾರೊಬ್ಬರ ಫೋನ್ ಅನ್ನು ಮುಟ್ಟುವುದು ಪಾಕಿಸ್ತಾನದಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಯಾರಾದರೂ ಆಕಸ್ಮಿಕವಾಗಿ ಮತ್ತೊಬ್ಬರ ಫೋನ್ ಅನ್ನು ಮುಟ್ಟಿದರೆ ಅದಕ್ಕೆ ಶಿಕ್ಷೆಯ ನಿಬಂಧನೆ ಇದೆ. ಹೀಗೆ ಮಾಡಿದ ಮಾಡಿದ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲೂಬಹುದು.

ಇಂಗ್ಲಿಷ್ ಅನುವಾದ ಅಮಾನ್ಯ

ಪಾಕಿಸ್ತಾನದಲ್ಲಿ ನೀವು ಕೆಲವು ಪದಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವಂತಿಲ್ಲ. ಈ ಪದಗಳನ್ನು ಇಂಗ್ಲಿಷ್‌ಗೆ ಅನುವಾದಿಸುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಈ ಪದಗಳು ಅಲ್ಲಾ, ಮಸ್ಜಿದ್, ರಸೂಲ್ ಅಥವಾ ಪೈಗಂಬರ್. ಒಂದು ವೇಳೆ ಇವುಗಳನ್ನು ಯಾರಾದರೂ ಇಂಗ್ಲಿಷ್‌ನಲ್ಲಿ ಅನುವಾದಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ‌.

ಶಿಕ್ಷಣದ ಶುಲ್ಕದ ಮೇಲೆ ತೆರಿಗೆ

ಪಾಕಿಸ್ತಾನದಲ್ಲಿ ಶಿಕ್ಷಣದ ಮೇಲೂ ತೆರಿಗೆ ವಿಧಿಸಲಾಗುತ್ತದೆ. ವಿದ್ಯಾರ್ಥಿಯು ಶಿಕ್ಷಣಕ್ಕೆ 2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ, ಅವನು 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಬಹುಶಃ ಈ ಭಯದಿಂದಾಗಿ, ಪಾಕಿಸ್ತಾನದ ಜನರು ಕಡಿಮೆ ಓದುತ್ತಾರೆ.

ಹುಡುಗಿಯ ಜೊತೆ ಸ್ನೇಹವಿದ್ದರೆ ಬೀಳುತ್ತೆ ಕೇಸ್

ಒಂದು ವೇಳೆ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆ ಇದ್ದಾಗ ಸಿಕ್ಕಿಬಿದ್ದರೆ, ಅವನಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಲ್ಲಿ ಯಾರೂ ಹುಡುಗಿಯರೊಂದಿಗೆ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿ ಮದುವೆಗೂ ಮುನ್ನ ಯುವಕ ಮತ್ತು ಯುವತಿ ಜೊತೆಯಾಗಿ ಇರುವಂತಿಲ್ಲ ಅಂದರೆ ಲಿವ್ ಇನ್ ರಿಲೇಶನ್‌ಶಿಪ್ ಗೆ ಇಲ್ಲಿ ಅನುಮತಿಯಿಲ್ಲ ಎಂಬ ಕಾನೂನು ಇದೆ.

ಈ ಜಾಗಕ್ಕೆ ಹೋಗಲು ನಿರ್ಬಂಧ

ಪಾಕಿಸ್ತಾನದ ಯಾವುದೇ ಪ್ರಜೆ ಇಸ್ರೇಲ್‌ಗೆ ಹೋಗುವಂತಿಲ್ಲ ಏಕೆಂದರೆ ಅಲ್ಲಿ ಯಾರಿಗೂ ಅವಕಾಶವಿಲ್ಲ. ಇಸ್ರೇಲ್‌ಗೆ ಭೇಟಿ ನೀಡಲು ಪಾಕಿಸ್ತಾನ ಸರ್ಕಾರ ವೀಸಾ ನೀಡುವುದಿಲ್ಲ.

Advertisement
Share this on...