ನಿರಾಶ್ರಿತ ಕಾಶ್ಮೀರಿ ಪಂಡಿತರ ಹೆಸರಲ್ಲಿ ಚಂದಾ ಎತ್ತುತ್ತಿದ್ದ ಜಿಹಾದಿಗಳು: #ಶಬ್ಬೀರ್, #ಫಾಜಿಲ್ ರನ್ನ ಹಿಡಿದ ಹಿಂದುಗಳು ಮಾಡಿದ್ದೇನು ನೋಡಿ

in Uncategorized 213 views

ದೆಹಲಿಯ ಸ್ಥಳೀಯರು ನಿರಾಶ್ರಿತ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಮನೆ ಮನೆಗೆ ತೆರಳಿ ಚಂದಾ ಎತ್ತುತ್ತಿದ್ದ ಗ್ಯಾಂಗ್ ಅನ್ನು ಹಿಡಿದಿದ್ದಾರೆ. ಅಚ್ಚರಿಯ ವಿಷಯವೆಂದರೆ ಸುಲಿಗೆಕೋರರು ಕಾಶ್ಮೀರಿ ಪಂಡಿತರಲ್ಲ ಬದಲಾಗಿ ಇದೊಂದು ಕಾಶ್ಮೀರಿ ಮುಸ್ಲಿಮರ ಗ್ಯಾಂಗ್ ಆಗಿದೆ.

Advertisement

ನಮಗೆ ಸಿಕ್ಕಿರುವ ಎಕ್ಸಕ್ಲೂಸಿವ್ ಮಾಹಿತಿಯ ಪ್ರಕಾರ, ಮಹಿಳೆ ಸೇರಿದಂತೆ 5-6 ಮುಸ್ಲಿಮರ ಗ್ಯಾಂಗ್ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಜನರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿದೆ. ಈ ಪೈಕಿ ಮೂವರನ್ನು ಸ್ಥಳೀಯರು ಹಿಡಿದಿದ್ದಾರೆ. ಇದಾದ ಬಳಿಕ ಅವರನ್ನ ಕಂಝವಾಲಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಈ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ವಿಷಯ ಬೆಳಕಿಗೆ ಬಂದ ನಂತರ ಮಾಧ್ಯಮಗಳು ಸ್ಥಳೀಯ ಜನರನ್ನು ಸಂಪರ್ಕಿಸಿದೆ. ಈ ಪ್ರಕರಣವು ವಾಯುವ್ಯ ದೆಹಲಿಯ ಕರಾಲಾ ಗ್ರಾಮಕ್ಕೆ ಸಂಬಂಧಿಸಿದೆ. ನಿರಾಶ್ರಿತ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಜನರಿಂದ ದೇಣಿಗೆ ಕೇಳುತ್ತಿದ್ದಾರೆ ಎಂದು ಜನರು ಹೇಳಿದರು. ಸ್ಥಳೀಯರಿಗೆ ಇವರ ಬಗ್ಗೆ ಅನುಮಾನ ಬಂದಾಗ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ.

ಗುರುತಿನ ಚೀಟಿ ತೋರಿಸುವ ಹೆಸರಿನಲ್ಲಿ ಶಂಕಿತರಿಬ್ಬರೂ ಜನರ ಗಮನ ಬೇರೆಡೆಗೆ ತಿರುಗಿಸಲು ಯತ್ನಿಸಲಾರಂಭಿಸಿದರು. ಇದು ಜನರ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಸ್ಥಳೀಯರು ಈ ಶಂಕಿತರನ್ನು ತಡೆದು ವಿಚಾರಣೆ ಆರಂಭಿಸಿದರು. ಶಂಕಿತರಿಂದ ನ್ಯಾಶನಲ್ ಸ್ಟೂಡೆಂಟ್ ಕ್ಯಾಂಪ್ ಎಂಬ ಹೆಸರಿನ ಹಲವಾರು ಪುಟಗಳ ಚೀಟಿಯನ್ನು ಜನರು ಪತ್ತೆ ಹಚ್ಚಿದ್ದಾರೆ. ಇದರ ಮೇಲೆ ಹಣ ಕೊಟ್ಟವರಿಂದ ಸಂಗ್ರಹಿಸಿದ ದೇಣಿಗೆಯ ಮೊತ್ತವನ್ನು ಬರೆಯಲಾಗಿದೆ.

ಇವರೊಂದಿಗೆ ಕಾಶ್ಮೀರಿ ಮಹಿಳೆಯೊಬ್ಬಳೂ ಸಿಕ್ಕಿಬಿದ್ದಿದ್ದಾಳೆ. ಈ ಸಂಬಂಧ ದೆಹಲಿಯ ಕಂಝಾವಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರ ಪ್ರಕಾರ, ನ್ಯಾಶನಲ್ ಸ್ಟೂಡೆಂಟ್ ಕ್ಯಾಂಪ್ ಹೆಸರಿನಲ್ಲಿ ಜನರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ 6 ಜನರ ತಂಡವಿದೆ.

ಸ್ಥಳೀಯ ಜನರು ಆ ಸ್ಲಿಪ್‌ನ ವೀಡಿಯೊವನ್ನು ಮಾಧ್ಯಮಗಳಿಗೆ ಹಸ್ತಾಂತರಿಸಿದ್ದಾರೆ, ಅದರಲ್ಲಿ ದೇಣಿಗೆ ಪಡೆದ ಜನರ ಹೆಸರು ಮತ್ತು ಮೊತ್ತವನ್ನು ದಾಖಲಿಸಲಾಗಿದೆ. ಚೀಟಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಸ್ಥಳೀಯರು ಈ ಗ್ಯಾಂಗ್ ಗೆ 500ರಿಂದ 5 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.

ವಸೂಲಿ ಮಾಡಿದ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕು ಎನ್ನುತ್ತಾರೆ ಜನ. ಕಾಶ್ಮೀರದಿಂದ ಓಡಿಸಲ್ಪಟ್ಟ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಹಣವನ್ನು ಕಲೆಕ್ಟ್ ಮಾಡಿದ ನಂತರ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ಜನರು ಶಂಕಿಸಿದ್ದಾರೆ.

ಈ ವಿಷಯದ ಬಗ್ಗೆ ಪೊಲೀಸರ ನಿಲುವನ್ನು ತಿಳಿಯಲು ಮಾಧ್ಯಮಗಳು ಹಲವಾರು ಬಾರಿ ಕಂಝವಾಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಯತ್ನಿಸಿದವು. ಆದರೆ, ಸದ್ಯ ಯಾವುದೇ ಮಾಹಿತಿಯನ್ನು ಪೊಲೀಸ್ ಠಾಣೆ ಹಂಚಿಕೊಂಡಿಲ್ಲ. ದೂರುದಾರರ ಪ್ರಕಾರ, ಆರಂಭದಲ್ಲಿ ಪೊಲೀಸರು ನುಣುಚಿಕೊಳ್ಳಲು ಪ್ರಯತ್ನಿಸಿದರು, ಆದರೆ ಸ್ಥಳೀಯ ಜನರ ಒತ್ತಡದಿಂದ ಅವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಂಝವಾಲಾ ಪೊಲೀಸ್ ಠಾಣೆಯಲ್ಲಿ 3 ಕಾಶ್ಮೀರಿ ಮುಸ್ಲಿಂ ಯುವಕರು ಮತ್ತು 3 ಮಹಿಳೆಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಹಿಂದೆಯೂ ಸಹ ಅನೇಕ ಶಂಕಿತರು ಗ್ರಾಮಕ್ಕೆ ಬಂದು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

2019 ರಲ್ಲಿ, ಹರಿಯಾಣದ ಫರಿದಾಬಾದ್‌ನ ಸ್ಥಳೀಯ ಪತ್ರಕರ್ತರೊಬ್ಬರು ಫೇಸ್‌ಬುಕ್ ಲೈವ್‌ನಲ್ಲಿ ನ್ಯಾಶನಲ್ ಸ್ಟೂಡೆಂಟ್ ಕ್ಯಾಂಪ್ ಹೆಸರಿನಲ್ಲಿ ಅಕ್ರಮ ಹಣ ಸುಲಿಗೆಯ ಬಗ್ಗೆ ಉಲ್ಲೇಖಿಸಿದ್ದರು. ಈ ಲೈವ್‌ನಲ್ಲಿ, ಫರಿದಾಬಾದ್‌ನ ವಿವಿಧ ಸ್ಥಳಗಳಿಂದ ಶಂಕಿತ ಕಾಶ್ಮೀರಿ ಮುಸ್ಲಿಮರು ಹಣ ಸಂಗ್ರಹಿಸುತ್ತಿರುವ ಬಗ್ಗೆ ಪತ್ರಕರ್ತರು ಮಾತನಾಡಿದ್ದರು.

Advertisement
Share this on...