ನವದೆಹಲಿ: ಶನಿವಾರ, ಅಸ್ಸಾಂನ ತಾಮುಲ್ಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ಅದೇ ಸಮಯದಲ್ಲಿ, ರ್ಯಾಲಿಯಲ್ಲಿ ಪಿಎಂ ಮೋದಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ಕಾರ್ತಕರ್ತನೊಬ್ಬನ ಆರೋಗ್ಯ ಹದಗೆಟ್ಟಿತು. ರ್ಯಾಲಿಯಲ್ಲಿ ಹಾಜರಿದ್ದ ಕಾರ್ಯಕರ್ತನೊಬ್ಬ ಪ್ರಜ್ಞಾಹೀನನಾದ ವಿಷಯ ತಿಳಿಯುತ್ತಿದ್ದಂತೆಯೇ ಪ್ರಧಾನಿ ಮೋದಿಯವರ ಕಣ್ಣು ಆ ಕಾರ್ಯಕರ್ತನ ಮೇಲೆ ಬಿದ್ದಿತು. ನಂತರ ಅವರು ಪಿಎಂಒ ಕಡೆಯಿಂದ ತನ್ನೊಂದಿಗೆ ಬಂದಿದ್ದ ವೈದ್ಯರ ತಂಡ ಸ್ಥಳಕ್ಕೆ ಕಳಿಸಿ ಚಿಕಿತ್ಸೆ ನೀಡುವಂತೆ ಪ್ರಧಾನಿ ಮೋದಿ ವೇದಿಕೆಯಿಂದ ಹೇಳಿದರು. ಪ್ರಧಾನಿ ಮೋದಿಯವರು ಪ್ರತಿ ಸಂದರ್ಭದಲ್ಲೂ ಕಾರ್ಯಕರ್ತರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ ಮತ್ತು ಯಾವಾಗಲೂ ಅವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಎಂದು ಇದರಿಂದ ಅರ್ಥಮಾಡಿಕೊಳ್ಳಬಹುದು. ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಕಾರ್ಯಕರ್ತರಿಗೆ ಸಹಾಯ ಮಾಡಿರುವ ಉದಾಹರಣೆಗಳೂ ಸಾಕಷ್ಟಿವೆ.
ವಿಡಿಯೋ ದಲ್ಲಿ ಪ್ರಧಾನಿ ಮೋದಿಯವರು, “ಪಿಎಂಓ ದ ಮೆಡಿಕಲ್ ಟೀಂ ಏನಿದೆಯೋ ಅದು ಕಾರ್ಯಕರ್ತನೊಬ್ಬ ನೀರಿನ ಅಭಾವದಿಂದ ಬಳಲುತ್ತಿದ್ದಾನೆ, ತಲ್ಷಣವೇ ಅವನ ಸಹಾಯಕ್ಕೆ ಹೋಗಿ. ನನ್ನ ಜೊತೆಗಿರುವ ವೈದ್ಯರು ಸ್ವಲ್ಪ ನನ್ನ ಆ ಮಿತ್ರನಿಗೂ ಸಹಾಯ ಮಾಡಿ. ಬಹುಶಃ ಇಲ್ಲಿ ನೀರಿನ ಅಭಾವದಿಂದ ಆತನಿಗೆ ಕಷ್ಟವಾಗಿರಬಹುದು, ತಕ್ಷಣವೇ ಆತನಿಗೆ ಚಿಕಿತ್ಸೆ ನೀಡಿ” ಎಂದು ಹೇಳುತ್ತಿರುವುದು ಕೇಳಬಹುದಾಗಿದೆ.
Pausing in the middle of his speech at Tamulpur in Assam, PM @narendramodi promptly directed the team of PMO doctors to give immediate assistance to an old-aged person, Shri Hari Charan Das, in the rally who was apparently dehydrated.
He has been attended to and is stable now. pic.twitter.com/iuCMCy9LqF
— BJP (@BJP4India) April 3, 2021
ಇತ್ತ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ಮೋದಿಯವರ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಯಾವ ರೀತಿಯಾಗಿ ಪ್ರಧಾನಿ ಮೋದಿ ಕಾರ್ಯಕರ್ತನೊಬ್ಬನ ಸಹಾಯಕ್ಕಾಗಿ ತಮ್ಮ ಮೆಡಿಕಲ್ ಟೀಂ ನ್ನ ಆ ವ್ಯಕ್ತಿಯೊಬ್ಬನ ಬಳಿ ತಕ್ಷಣವೇ ಕಳಸಿದ ಬಳಿಕ ಟ್ವಿಟ್ಟರ್ ನಲ್ಲಿ ಯೂಸರ್ ಗಳು ಪ್ರಧಾನಿ ಮೋದಿಯವರ ಈ ನಡೆಯನ್ನ ಶ್ಲಾಘಿಸುತ್ತಿದ್ದಾರೆ.