“ನಾನೇನಾದರೂ ಎಲ್ಲಾ ಹಿಂದುಗಳು ಒಗ್ಗಟ್ಟಾಗಿ ಅಂತ ಹೇಳದ್ರೆ.‌‌‌…”: ಪ್ರಧಾನಿ ಮೋದಿ

in Kannada News/News 361 views

ಕೂಚ್ ಬಿಹಾರ್:  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ತಲುಪಿದರು. ಇಲ್ಲಿ ಅವರು ಸಾರ್ವಜನಿಕ ಸಭೆ ನಡೆಸಿ ಪ್ರದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನೂ ಗುರಿಯಾಗಿಸಿಕೊಂಡರು. ಮತದಾನದ ಮೊದಲ ಎರಡು ಹಂತಗಳಲ್ಲಿ ಟಿಎಂಸಿ ಮತ್ತು ದೀದಿ ಅಧಿಕಾರದಿಂದ ಹೊರಹೋಗೋದು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ ಭಾರತೀಯ ಜನತಾ ಪಕ್ಷದ 41 ನೇ ಪ್ರತಿಷ್ಠಾನ ದಿನದಂದು ಪ್ರಧಾನಿ ಮೋದಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

Advertisement

ಬಂಗಾಳದಲ್ಲಿ ಬಿಜೆಪಿ ಅಲೆಯಿರುವ ಬಗ್ಗೆ ವಿಶ್ವಾಸ

ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯಲ್ಲಿ ಬಂಗಾಳ ಅಲೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಈ ಅಲೆ ದೀದಿಯ ಗೂಂ-ಡಾ-ಗಳನ್ನು ಸು-ತ್ತು-ವ-ರೆದಿದೆ. ಅವರು ಸಿಎಂ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡರು. ಅವರು ಮಾತನಾಡುತ್ತ, ಮತದಾನದ ಕಳೆದ ಎರಡು ಹಂತಗಳಲ್ಲಿ, ಟಿಎಂಸಿ ಮತ್ತು ದೀದಿ ನಿರ್ಗಮನವನ್ನು ಈಗಾಗಲೇ ಜನ ನಿರ್ಧರಿಸಿದ್ದಾರೆ. ಹೆಚ್ಚೆಚ್ಚು ಸಂಖ್ಯೆಯ ಜನರು ಹೊರಬಂದು ನಮ್ಮ ಪರವಾಗಿ ಮತ ಚಲಾಯಿಸಿದ್ದಾರೆ. ಬಂಗಾಳದ ಬಿಜೆಪಿ ಅಲೆಯು ದೀದಿ ಅವರ ಗೂಂ-ಡಾ-ಗಳನ್ನು ಮತ್ತು ಆಕೆಯ ಸೋದರಳಿಯನನ್ನು ಸು-ತ್ತು-ವ-ರೆದಿದೆ ಎಂದರು.

ಅವರು ರಾಜ್ಯದಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧುಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಮೇ 2 ರಂದು ಚುನಾವಣೆಯ ಫಲಿತಾಂಶಗಳು ಬಂದ ಬಳಿಕ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಅಭಿವೃದ್ಧಿ ಅಭಿಯಾನವನ್ನು ಮತ್ತಷ್ಟು ಹೆಚ್ಚಿಸಲಾಗುವುದು” ಎಂದು ಅವರು ಹೇಳಿದರು. ಪ್ರಧಾನಿ ಮುಂದೆ ಮಾತನಾಡುತ್ತ, ‘ನಿಮ್ಮ ಆಶೀರ್ವಾದ ನನಗೆ ದೊಡ್ಡ ಶಕ್ತಿ.  ಇಂದು ಈ ಪ್ರೀತಿಯನ್ನು ನೀಡುತ್ತಿರುವ ನೀವು, ಮೇ 2 ರ ನಂತರ ಬಿಜೆಪಿ ಸರ್ಕಾರ ರಚನೆಯಾದ ನಂತರ, ಈ ಪ್ರೀತಿಯನ್ನ ನಾನು ಬಡ್ಡಿಸಮೇತ ಅಭಿವೃದ್ಧಿಯ ಮೂಲಕ ತೀರುಸುತ್ತೇನೆ’ ಎಂದರು.

‘ಓ ದೀದಿ, ನಾವಂತೂ ಸಾಮಾನ್ಯ ಮನುಷ್ಯರು’

ಅದೇ ಸಮಯದಲ್ಲಿ, ಪ್ರಧಾನಿ ಮೋದಿ ಸಿಎಂ ಮಮತಾ ಬ್ಯಾನರ್ಜಿ ಅವರ ಬಿಜೆಪಿಯೇನು ದೇವರಾ? ಬಗೆಗಿನ ಹೇಳಿಕೆಯ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. “2 ಹಂತದ ಚುನಾವಣೆಯಲ್ಲೇ ಬಿಜೆಪಿಗೆ ದೊಡ್ಡ ಮಟ್ಟದ ಗೆಲುವು ಸಿಗಲಿದೆ ಅಂತ ಹೇಳಿಕೊಂಡು ಓಡಾಡುತ್ತಿರೋ ಬಿಜೆಪಿಯೇನು ದೇವರಾ? ಅಂತ ಮಮತಾ ಬ್ಯಾನರ್ಜಿ ಪ್ರಶ್ನೆ ಕೇಳುತ್ತಿರುವ ಬಗ್ಗೆಯೂ ನಾನು ಕೇಳ್ಪಟ್ಟೆ. ಆದರಣೀಯ ದೀದಿ, ಓ ದೀದಿ, ನಾವಂತೂ ಸಾಮಾನ್ಯ ಮನುಷ್ಯರು. ಆ ಈಶ್ವರನ ಆಜ್ಞೆ ಹಾಗು ಆಶೀರ್ವಾದದಿಂದ ದೇಶಸೇವೆ ಮಾಡುತ್ತಿದ್ದೇವೆ” ಎಂದರು. ಪ್ರಧಾನಿ ಮೋದಿ ಮುಂದೆ ಮಾತನಾಡುತ್ತ, “ದೀದಿ ನಿಮ್ಮ ಕೋ-ಪ, ಅಸಮಾಧಾನ, ನಿಮ್ಮ ಹಾವಭಾವ, ನಿಮ್ಮ ಮಾತುಗಳು ಇದೆಲ್ಲಾ ನೋಡಿದರೆ ಸಣ್ಣ ಮಗು ಕೂಡ ನೀವು ಚುನಾವಣೆ ಸೋಲುತ್ತೀರಂತ ಹೇಳುತ್ತೆ” ಎಂದರು.

ಮಮತಾ ಬ್ಯಾನರ್ಜಿಯ ಮುಸ್ಲಿಂ ಮತದಾರರ ಬಗೆಗಿನ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ದೀದಿ ನೀವಂತೂ ಚುನಾವಣಾ ಆಯೋಗಕ್ಕೂ ಬೈತೀರ, ಆದರೆ ಒಂದು ವೇಳೆ ನಾವು ಎಲ್ಲಾ ಹಿಂದುಗಳು ಒಗ್ಗಟ್ಟಾಗಿ ಬಿಜೆಪಿಗೆ ಮತ ನೀಡಿ ಅಂತ ಹೇಳಿದ್ದಿದ್ದರೆ ನಮಗೆ ಎಲೆಕ್ಷನ್ ಕಮಿಷನ್ ನಿಂದ 8-10 ನೋಟಿಸ್ ಬಂದಿರ್ತಿದ್ವು. ದೇಶದ ಎಲ್ಲಾ ಎಡಿಟೋರಿಯಲ್ ಗಳು ನಮ್ಮ ವಿ-ರು-ದ್ಧ-ವೇ ಬರೆದಿರುತ್ತಿದ್ದವು. ಯಾವ ಚುನಾವಣಾ ಆಯೋಗ ಚುನಾವಣೆ ನಡೆಸಿ ನಿಮ್ಮನ್ನ ಎರಡು ಬಾರಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿತೋ ಅದೇ ಚುನಾವಣಾ ಆಯೋಗದ ಬಗ್ಗೆ ನಿಮಗೀಗ ಅಸಮಾಧಾನವಾಗಿದೆಯೇ? ನಿಮ್ಮ ಈ ವರ್ತನೆ ನಿಮ್ಮ ಸೋಲು ಖಚಿತ ಅನ್ನೋದನ್ನ ತೋರಿಸುತ್ತಿದೆ” ಎಂದರು.

ಅವರು ಮುಂದೆ ಮಾತನಾಡುತ್ತ, “ಚುನಾವಣೆಯಲ್ಲಿ ಯಾರು ಸೋಲುತ್ತಿದ್ದಾರೆ ಯಾರು ಗೆಲ್ಲುತ್ತಿದ್ದಾರೆ ಅನ್ನೋದನ್ನ ಜನತೆಯೇ ತೀರ್ಮಾನ ಮಾಡಲಿದ್ದಾರೆ, ಅದಕ್ಕಾಗಿ ದೇವರಿಗೆ ಕಷ್ಟ ಕೊಡುವ ಅವಶ್ಯಕತೆಯಿಲ್ಲ. ಜನತೆಯೇ ದೇವರ ರೂಪವಾಗಿದ್ದಾರೆ. ಜನತಾ ಜನಾರ್ಧನರನ್ನ ನೋಡಿದರೇ ಅರ್ಥವಾಗುತ್ತೆ ಅಲೆ ಯಾವ ಕಡೆಯಿದೆಯೆಂದು.” ಎಂದರು.

ಮಮತಾ ಬ್ಯಾನರ್ಜಿಯ ಮೇಲೆ ತುಷ್ಟೀಕರಣದ ಆರೋಪ ಮಾಡಿದ ಪ್ರಧಾನಿ ಮೋದಿ, “ಅದು ಶಿಕ್ಷಕರ ಭರ್ತಿಯೇ ಆಗಲಿ ಅಥವ ಜನರ ಕೆಲಸಗಳದ್ದೇ ಆಗಲು ನೀವು ಸದಾ ತುಷ್ಟೀಕರಣ ಮಾಡಿದಿರಿ.ಬಂಗಾಳದ ಸಾಮಾನ್ಯ ಜನರಿಗೆ, ಬಂಗಾಳದ ಯುವಜನತೆಗೆ, ಇಲ್ಲಿನ ರೈತರಿಗೆ ನಿಮ್ಮ‌ ಹಣೆಬರಹ ನಿಮಗೆ ಅಂತ ನಡು ನೀರಲ್ಲಿ ಕೈಬಿಟ್ಟು ಬಿಟ್ಟಿರಿ. 10 ವರ್ಷಗಳ ನಿಮ್ಮ ಟೋಲಾಬಾಜ್ ಬಂಗಾಳವನ್ನ ಲೂ-ಟಿ ಮಾಡುತ್ತಲೇ ಇತ್ತು ಆದರೆ ನೀವು ಅದನ್ನ ನೋಡುತ್ತಲೇ ಇದ್ದಿರಿ” ಎಂದರು.

Advertisement
Share this on...