ನವದೆಹಲಿ: ದೇಶದ ಪ್ರಧಾನಿಯ ಬಿಗಿ ಭದ್ರತೆಗಾಗಿ ಅವರ ಬೆಂಗಾವಲು ಪಡೆಯ ಕಾರುಗಳು ಬದಲಾಗುತ್ತಲೇ ಇರುತ್ತವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಫ್ಲೀಟ್‌ನಲ್ಲಿ ಐಷಾರಾಮಿ ಮರ್ಸಿಡಿಸ್-ಮೇಬ್ಯಾಕ್ ಎಸ್650 ಕಾರು ಪ್ರವೇಶಿಸಿದೆ. 12 ಕೋಟಿ ಮೌಲ್ಯದ Mercedes-Maybach S650 ಕಾರು ಮರ್ಸಿಡಿಸ್‌ನ ಅತ್ಯಂತ ಸುರಕ್ಷಿತ ಕಾರು. ಈ ಹೊಸ ಮರ್ಸಿಡಿಸ್ ಕಾರು ಬುಲೆಟ್ ಪ್ರೂಫ್ ಮತ್ತು ಬ್ಲಾಸ್ಟ್ ಪ್ರೂಫ್ ಆಗಿದ್ದು, ಬುಲೆಟ್ ಗಳು ಮತ್ತು ಸ್ಫೋಟಗಳು ಈ ಕಾರಿನ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಧಾನ ಮಂತ್ರಿಯ ಭದ್ರತಾ ಪ್ರೋಟೋಕಾಲ್ ಪ್ರಕಾರ SPG ಮರ್ಸಿಡಿಸ್-ಮೇಬ್ಯಾಕ್ S650 ಅನ್ನು ಬೆಂಗಾವಲು ಪಡೆಗೆ ಸೇರಿಸಲಾಗಿದೆ. ಪ್ರಧಾನಿ ಮೋದಿ ಅವರು ಕಳೆದ ತಿಂಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಹೋದಾಗ ಮೊದಲ ಬಾರಿಗೆ ಮರ್ಸಿಡಿಸ್-ಮೇಬ್ಯಾಕ್ ಎಸ್ 650 ನಲ್ಲಿ ಕಾಣಿಸಿಕೊಂಡಿದ್ದರು.
ಪ್ರಧಾನಿಯ ಭದ್ರತೆಯನ್ನು ಸುಧಾರಿಸುವ ಸಲುವಾಗಿ, ಅವರ ಬೆಂಗಾವಲು ವಾಹನಗಳು ಬದಲಾಗುತ್ತಲೇ ಇರುತ್ತವೆ. ಪ್ರಧಾನಿಯ ಭದ್ರತೆಯ ಹೊಣೆ ಹೊತ್ತಿರುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG), ಅಗತ್ಯಕ್ಕೆ ಅನುಗುಣವಾಗಿ ಹೊಸ ಕಾರುಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆ. Mercedes-Maybach S650 ಅನ್ನು ಹೊಸ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಶಸ್ತ್ರಸಜ್ಜಿತ ಕಾರು ಎಂದು ಕರೆಯಲಾಗುತ್ತದೆ. ಪ್ರಧಾನಮಂತ್ರಿಗಳ ಬೆಂಗಾವಲು ವಾಹನದಲ್ಲಿರುವ ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್‌ನಿಂದ ಇದನ್ನು ಅಪ್‌ಗ್ರೇಡ್ ಮಾಡಿಸಲಾಗಿದೆ.
ಹಲವಾರು ಕಾರಣಗಳಿಗಾಗಿ ಮರ್ಸಿಡಿಸ್-ಮೇಬ್ಯಾಕ್ S650 ಅನ್ನು ಸುರಕ್ಷಿತ ಕಾರು ಎಂದು ಪರಿಗಣಿಸಲಾಗಿದೆ. ಮರ್ಸಿಡಿಸ್-ಮೇಬ್ಯಾಕ್ S650 ಟ್ವಿನ್-ಟರ್ಬೊ V12 ಎಂಜಿನ್ ಅನ್ನು ಹೊಂದಿದೆ. ಇದು 516 bhp ಪವರ್ ಮತ್ತು 900 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿಲೋಮೀಟರ್. Mercedes-Maybach S650 ಬ್ಲಾಸ್ಟ್ ಪ್ರೂಫ್ ಕಾರ್ ಆಗಿದ್ದು, ಇದು ಅತ್ಯಂತ ವಿಶೇಷವಾಗಿದೆ. 2 ಮೀಟರ್ ದೂರದಲ್ಲಿ 15 ಕೆಜಿಯಷ್ಟು TNT ಸ್ಫೋಟದಿಂದಲೂ ಈ ಕಾರಿಗೆ ಹಾನಿಯಾಗುವುದಿಲ್ಲ.
ಭದ್ರತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲಾ ವಾಹನಗಳ ಬೆಂಗಾವಲು ಪಡೆ ಅವರ ಜೊತೆಗಿರುತ್ತದೆ. ಸ್ಪಷ್ಟವಾಗಿ ಈಗ Mercedes-Maybach S650 ತಮ್ಮ ಬೆಂಗಾವಲುಪಡೆಯ ರಕ್ಷಣೆಗೆ ಬಲವಾದ ರಕ್ಷಣಾಕವಚವನ್ನ ಒದಗಿಸಲಿದೆ.
ಈ ಹಿಂದೆ ಪ್ರಧಾನಿ ಮೋದಿಯವರು ‘ರೇಂಜ್ ರೋವರ್ ವೋಗ್’, ‘ಟೊಯೋಟಾ ಲ್ಯಾಂಡ್’ ಕ್ರೂಸರ್‌ಗಳಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿತ್ತು. ಪ್ರಧಾನಿಯವರು ಹೊಸ ವಾಹನದಿಂದ ಇಳಿದಾಗಿನಿಂದ, ಇತರ ಕಾರುಗಳಿಗೆ ಹೋಲಿಸಿದರೆ ಈ ಕಾರು ಹೇಗೆ ಸುರಕ್ಷಿತವಾಗಿದೆ ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿವೆ.
Mercedes-Maybach S650 Guard VR10
ಈ ಐಷಾರಾಮಿ ಕಾರು ಮರ್ಸಿಡಿಸ್‌ನ ಇತ್ತೀಚಿನ ಲೇಟೆಸ್ಟ್ ಕಾರು ಆಗಿದ್ದು, ಇದರಲ್ಲಿ ಲೆವಲ್ ಪ್ರೊಟೆಕ್ಷನ್ ನೀಡಲಾಗಿದೆ. ಈ ಕಾರು ಇತರ ಕಾರುಗಳಿಗಿಂತ ಹೆಚ್ಚಿನ ರಕ್ಷಣೆಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಮರ್ಸಿಡಿಸ್-ಮೇಬ್ಯಾಕ್‌ನ ವಿಶೇಷತೆಯು ಅದರ ರಕ್ಷಣಾ ವ್ಯವಸ್ಥೆಯಾಗಿದೆ. ವರದಿಗಳ ಪ್ರಕಾರ, Mercedes-Maybach ಕಳೆದ ವರ್ಷ ಭಾರತದಲ್ಲಿ S600 ಗಾರ್ಡ್ ಅನ್ನು 10.5 ಕೋಟಿ ರೂಪಾಯಿಗಳಿಗೆ ಬಿಡುಗಡೆ ಮಾಡಿತು ಮತ್ತು Mercedes-Maybach S650 ಗೆ 12 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗುವ ನಿರೀಕ್ಷೆಯಿದೆ.
Mercedes-Maybach S650 Guard ಕಾರಿನಲ್ಲಿ ಹಲವು ಉತ್ತಮ ಫೀಚರ್ಸ್ ಗಳನ್ನ ನೀಡಲಾಗಿದೆ. ಮರ್ಸಿಡಿಸ್-ಮೇಬ್ಯಾಕ್ ಕಾರಿನ ಬಾಡಿ ಮತ್ತು ವಿಂಡೋಗಳು ಯಾವುದೇ ಬುಲೆಟ್ ಅಥವಾ ಬಾಂಬ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚುವರಿ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 2010 ಬ್ಲ್ಯಾಸ್ಟ್ ಪ್ರೂಫ್ ವೆಹಿಕಲ್ (ERV) ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಅದರೊಳಗೆ ಚಲಿಸುವವರು ಕೇವಲ 2 ಮೀಟರ್ ದೂರದಿಂದ 15kg TNT ಬ್ಲಾಸ್ಟ್‌ನಿಂದ ರಕ್ಷಿಸಲ್ಪಟ್ಟಿದ್ದಾರೆ. ಈ ಕಾರಿಗೆ ಎಲ್ಲಾ ಕಡೆಯಿಂದ ರಕ್ಷಣೆ ನೀಡಲು, ಸಾಕಷ್ಟು ಯೋಜನೆ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ. ಉದಾಹರಣೆಗೆ, ಗ್ಯಾಸ್ ದಾಳಿಯ ಸಂದರ್ಭದಲ್ಲಿ ರಕ್ಷಣೆ ನೀಡುವುದು, ಮದ್ದುಗುಂಡುಗಳ ದಾಳಿಯ ಸಂದರ್ಭದಲ್ಲಿ ರಕ್ಷಣೆ ನೀಡುವುದು ಇತ್ಯಾದಿ.
ಈ ಕಾರಿನ ಫ್ಯೂಲ್ ಟ್ಯಾಂಕ್ ಅನ್ನು ವಿಶೇಷ ವಸ್ತುಗಳಿಂದ ಲೇಪಿಸಲಾಗಿದೆ, ಅದು ಹಿಟ್ ಆದ ನಂತರ ಸ್ವಯಂಚಾಲಿತವಾಗಿ ರಂಧ್ರಗಳನ್ನು ಮುಚ್ಚುತ್ತದೆ. ಬೋಯಿಂಗ್ ತನ್ನ AH-64 ಅಪಾಚೆ ಟ್ಯಾಂಕ್ ದಾಳಿ ಹೆಲಿಕಾಪ್ಟರ್‌ಗಳಿಗೆ ಬಳಸುವ ಅದೇ ವಸ್ತುವಿನಿಂದ ಇದನ್ನು ತಯಾರಿಸಲಾಗುತ್ತದೆ. ಇದು ವಿಶೇಷ ರನ್-ಫ್ಲಾಟ್ ಟೈರ್‌ಗಳಲ್ಲಿಯೂ ಸಹ ಚಲಿಸುತ್ತದೆ, ಇದು ತ್ವರಿತವಾಗಿ ತಪ್ಪಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಟೈರ್‌ಗಳು ಹಾನಿ ಅಥವಾ ಚಪ್ಪಟೆಯಾದ ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.