ಕೇವಲ ಮೂರೇ ಗಂಟೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಹೀರೋಗೆ ಕರೆ: ತಕ್ಷಣವೇ ಗಂಭೀರ ಸ್ಥಿತಿಯಲ್ಲಿದ್ದ ಮಗುವಿಗೆ ಬರೋಬ್ಬರಿ 6 ಕೋಟಿ….

in Kannada News/News 374 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಗಾಧ ವ್ಯಕ್ತಿತ್ವದ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ, ಆದರೆ ಇಂದು ನಡೆದ ಒಂದು ಘಟನೆಯಿಂದ ಇಡೀ ಪ್ರಪಂಚದ ಮುಂದೆ ಅವರ ಅಪಾರ ಔದಾರ್ಯವನ್ನು ಮತ್ತೆ ಪ್ರತಿಫಲಿಸುವಂತೆ ಮಾಡಿದೆ. ಪ್ರಧಾನಿ ಮೋದಿಯವರ ವಿಶೇಷತೆಯೇನೆಂದರೆ ಅವರು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಚಟುವಟಿಕೆಗಳನ್ನು ಬಹಳ ಗಂಭೀರವಾಗಿ ಗಮನಿಸುತ್ತಾರೆ. ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಲು ಅವರಿಗೆ ಮನಸ್ಸಿಲ್ಲ.

ಈ ನಡುವೆ ಕ್ಯಾನ್ಸರ್ ಪೀಡಿತರೊಬ್ಬರು ಅವರಿಗೆ ಪತ್ರ ಬರೆದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ತಮ್ಮ ಕ್ರಿಯಾಶೀಲತೆಯನ್ನು ತೋರಿದರು. ನಿಸ್ಸಂದೇಹವಾಗಿ, ಈ ಕ್ರಿಯಾಶೀಲತೆಯ ಮೂಲಕ, ನಾವೆಲ್ಲರೂ ಅವರ ಅಗಾಧ ವ್ಯಕ್ತಿತ್ವದ ಜೊತೆಗೆ ಅವರ ಔದಾರ್ಯವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಬನ್ನಿ ಈ ಬಗ್ಗೆ ನಿಮಗೆ ವಿಸ್ತೃತವಾಗಿ ತಿಳಿಸುತ್ತೇವೆ.

Advertisement

ಸಹಾಯಕ್ಕಾಗಿ ಮೊರೆಯಿಟ್ಟ 2016 ರ ಸರ್ಜಿಕಲ್ ಸ್ಟ್ರೈಕ್ ಹೀರೋ, ತಕ್ಷಣವೇ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಲೆಫ್ಟಿನೆಂಟ್ ಜನರಲ್ ದೇವೇಂದ್ರ ಸಿಂಗ್ ಹುಡ್ಡಾ ಅವರು ಈಗ ನಿವೃತ್ತರಾಗಿದ್ದಾರೆ. ಅವರ ಸಹೋದರಿ ಸುಷ್ಮಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಹೊಸ ಕ್ಯಾನ್ಸರ್ ಔಷಧಕ್ಕೆ ಅನುಮೋದನೆ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದರು.

ನಿವೃತ್ತ ಜನರಲ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಪಿಎಂಒಗೆ ಟ್ಯಾಗ್ ಮಾಡಿದ್ದರು ಮತ್ತು ಕೇವಲ 3 ಗಂಟೆಗಳ ಅವಧಿಯಲ್ಲೇ ಪಿಎಂ ಮೋದಿ ಅವರು ನಿವೃತ್ತ ಜನರಲ್‌ಗೆ ಕರೆ ಮಾಡಿದರು. ಇದಕ್ಕಾಗಿ ಪ್ರಧಾನಿ ಮೋದಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಲಾಗುತ್ತಿದೆ. ಫೆಬ್ರವರಿ 2021 ರಲ್ಲಿ, ತಿರಾ ಕಾಮತ್ ಎಂಬ 5 ತಿಂಗಳ ಹೆಣ್ಣು ಮಗುವಿಗಾಗಿ ಬರೋಬ್ಬರಿ 6 ಕೋಟಿ ರೂಪಾಯಿಗಳ ತೆರಿಗೆಯನ್ನು ಪ್ರಧಾನಿ ಮೋದಿ ಮನ್ನಾ ಮಾಡಿದ್ದರು.

2016 ರ ಸರ್ಜಿಕಲ್ ಸ್ಟ್ರೈಕ್‌ಗೆ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ದೇವೇಂದ್ರ ಸಿಂಗ್ ಹೂಡಾ ಅವರ ಸಹೋದರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. 2021 ರ ಏಪ್ರಿಲ್‌ನಲ್ಲಿ ಹೊಸ ಕ್ಯಾನ್ಸರ್ ಔಷಧ ಸಸಿಟುಜುಮಾಬ್ ಗೋವಿಟೆಕಾನ್ (Sacituzumab Govitecan) ಅನ್ನು ಯುಎಸ್ ಅನುಮೋದಿಸಿದೆ ಮತ್ತು ಯುರೋಪಿಯನ್ ಏಜೆನ್ಸಿ ಕೂಡ ಅದನ್ನು ಅನುಮೋದಿಸಿದೆ ಆದರೆ ಭಾರತದಲ್ಲಿ ಅದನ್ನು ಇನ್ನೂ ಅನುಮೋದನೆ ಪಡೆದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದಲ್ಲಿ ಅವರು ಕೇಳಿಕೊಂಡಿದ್ದೇನು?

ಕ್ಯಾನ್ಸರ್ ನಿಂದ ಬಳಲುತ್ತಿರುವ ಸರ್ಜಿಕಲ್ ಸ್ಟ್ರೈಕ್ ಹೀರೋ ಬ್ರಿಗೇಡಿಯರ್ ಡಿಎಸ್ ಹೂಡಾ ಅವರ ಸಹೋದರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಒಂದೇ ಒಂದು ಹೆಜ್ಜೆ ತನ್ನಂತಹ ಕ್ಯಾನ್ಸರ್ ಪೀಡಿತರಿಗೆ ಬದುಕನ್ನು ನೀಡಬಹುದು ಎಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ. ಬ್ರಿಗೇಡಿಯರ್ ಸಹೋದರಿ ಪ್ರಧಾನಿ ಮೋದಿಯವರಿಗೆ ಮಾಡಿದ ಬೇಡಿಕೆ ಅಂತ ತಿಳಿದರೆ ನೀವು ಆಶ್ಚರ್ಯ ಪಡುತ್ತೀರ. ಹೌದು ಅವರ ಈ ಒಂದು ಬೇಡಿಕೆ ಇದು ಅನೇಕ ಕ್ಯಾನ್ಸರ್ ಪೀಡಿತರಿಗೆ ಹೊಸ ಜೀವನವನ್ನು ನೀಡಲು ಸಹಾಯ ಮಾಡುತ್ತದೆ.

ವಾಸ್ತವವಾಗಿ, ಅವರು ಏಪ್ರಿಲ್ 2021 ರಲ್ಲಿ US ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಅನುಮೋದಿಸಿದ ಸಸಿತುಜುಮಾಬ್ ಗೋವಿಟೆಕಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿಯೂ ಅನುಮೋದಿಸುವಂತೆ ಪ್ರಧಾನಿ ಮೋದಿಯವರನ್ನು ವಿನಂತಿಸಿದ್ದರು. ಇದನ್ನು ಯುರೋಪಿಯನ್ ಔಷಧಿಗಳ ಸಂಸ್ಥೆ ಕೂಡ ಅನುಮೋದಿಸಿದೆ. ಈಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬ್ರಿಗೇಡಿಯರ್ ಡಿಎಸ್ ಹೂಡಾ ಅವರ ಸಹೋದರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಕ್ಯಾನ್ಸರ್‌ನಿಂದ ಬಳಲುತ್ತಿರುವ ನನ್ನಂತಹ ಸಾವಿರಾರು ಜನರಿಗೆ ಹೊಸ ಜೀವನವನ್ನು ಪಡೆಯಲು ಭಾರತೀಯ ಮಾರುಕಟ್ಟೆಯಲ್ಲಿ ಈ ಔಷಧಿಯನ್ನ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಬ್ರಿಗೇಡಿಯರ್‌ ಹೂಡಾ ರವರ 68 ವರ್ಷದ ಸಹೋದರಿಗೆ ಟ್ರಿಪಲ್ ನೆಗೆಟಿವ್ ಬ್ರೆಸ್ಟ್ (ಸ್ತನ) ಕ್ಯಾನ್ಸರ್ ಇದೆ.

ಶನಿವಾರ ಸಂಜೆ ಈ ಬಗ್ಗೆ ನಿವೃತ್ತ ಜನರಲ್ ಟ್ವೀಟ್ ಮಾಡಿದ್ದಾರೆ, ಸ್ವಲ್ಪ ಸಮಯದ ನಂತರ ಪಿಎಂಒ ಹುಡ್ಡಾ ಅವರಿಗೆ ಕರೆ ಮಾಡಿ ಸಹೋದರಿಯ ಅನಾರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪ್ರಧಾನಿಯವರಿಂದ ತಕ್ಷಣವ  ಸಿಕ್ಕ ಪ್ರತಿಕ್ರಿಯೆಗೆ ಹೆಮ್ಮೆಯಾಗುತ್ತಿದೆ ಎಂದು ಹುಡ್ಡಾ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಷಕರೊಬ್ಬರು ಮನವಿ ಮಾಡಿದ್ದರು. ಆಗ 5 ತಿಂಗಳ ಮಗುವಾಗಿದ್ದ ತೀರಾ ಕಾಮತ್ ಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್ ಎಂಎ) ಎಂಬ ಕಾಯಿಲೆ ಇತ್ತು. ಆತನ ಚಿಕಿತ್ಸೆಗೆ ಬೇಕಾದ ಇಂಜೆಕ್ಷನ್ ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿದೆ. ಚಿಕಿತ್ಸೆಯ ವೆಚ್ಚ ಸುಮಾರು 16 ಕೋಟಿ ರೂ. ಆಗಿತ್ತು. ಪೋಷಕರು ಕ್ರೌಡ್ ಫಂಡಿಂಗ್ ಮೂಲಕ ಅಗತ್ಯ ಮೊತ್ತವನ್ನು ಸಂಗ್ರಹಿಸಿದರು, ಆದರೆ ತೆರಿಗೆಗಾಗಿ ಹೆಚ್ಚಿನ ಹಣದ ಅಗತ್ಯವಿದಮತ್ತು, ಈ ಬಗ್ಗೆ ಪೋಷಕರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು. ಮನವಿಯನ್ನು ಆಲಿಸಿದ ಪ್ರಧಾನಿ ಮೋದಿ ಅವರು ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಮನ್ನಾ ಮಾಡಲು ಆದೇಶಿಸಿದ್ದರು.

Advertisement
Share this on...