ತನ್ನ ಆಟೋ ರಿಕ್ಷಾ ಬಿಡಿಸಿಕೊಳ್ಳಲು ಮಗನ ಹುಂಡಿ ಹಣ ತೆಗೆದುಕೊಂಡು ಕೊಡಲು ಬಂದ ವ್ಯಕ್ತಿ: ಬಳಿಕ ಈ ಇನ್ಸ್ಪೆಕ್ಟರ್ ಮಾಡಿದ್ದೇನು ನೋಡಿ

in Kannada News/News 863 views

ಪೋಲಿಸರ ಹೆಸರು ಕೇಳಿದರೆ ಸಾಕು ನಮಗೆ ಥಟ್ಟನೆ ತಲೆಗೆ ಬರೋದೇ ಪೋಲಿಸರು ಭ್ರಷ್ಟರು ಎಂಬ ಅವರ ಕುರಿತಾದ ಪರಿಕಲ್ಪನೆ ಅಥವ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುವ ಪೋಲಿಸರ ಬಗ್ಗೆ ನೆನಪಾಗುತ್ತೆ. ಆದರೆ ಇಂತಹ ಪೂರ್ವಾಗ್ರಹ ಪೀಡಿತ ಯೋಚನೆಗಳಿಂದ ಪೋಲಿಸರ ಕರ್ತವ್ಯದ ಬಗ್ಗೆ ಯಾವಾಗಲೂ ಅನುಮಾನ ಪಡೋದು ತಪ್ಪು. ಕೆಲ ಪೋಲಿಸ್ ಅಧಿಕಾರಿಗಳು ಜನರ ಕಷ್ಟ ಅರ್ಥಮಾಡಿಕೊಳ್ಳುವ ಸಂವೇದನೆಯನ್ನೂ ಹೊಂದಿರುತ್ತಾರೆ. ಹೌದು ಅಂತಹುದೇ ಒಬ್ಬ ಪೋಲಿಸ್ ಆಫೀಸರ್ ಒಬ್ಬರ ಉದಾಹರಣೆ ನಿಮಗೆ ಹೇಳಲು ಹೊರಟಿದ್ದು ಇದು ಮಹಾರಾಷ್ಟ್ರದ ನಾಗಪುರದ ಘಟನೆಯಾಗಿದೆ.

Advertisement

ವಾಸ್ತವವಾಗಿ ಈ ಘಟನೆ ನಡೆದದ್ದು ಆಗಸ್ಟ್ 8 ರಂದು. ನಾಗಪುರದ ಸೀತಾಬರ್ಡಿ ಪ್ರದೇಶದಲ್ಲಿ ಸಂಚಾರಿ ವಲಯದ ಕಾನ್ಸ್ಟೇಬಲ್ ರೋಹಿತ್ ಖಡ್ಸೆ ಎಂಬ ಆಟೋ ರಿಕ್ಷಾ ಚಾಲಕನಿಗೆ ₹2000 ದಂಡ ವಿಧಿಸಿದರು. ರೋಹಿತ್ ಖಡ್ಸೆ ತನ್ನ ಆಟೋ ರಿಕ್ಷಾವನ್ನು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದನು, ಈ ಕಾರಣದಿಂದಾಗಿ ಆತನ ಮೇಲೆ 2000 ರೂ.ಗಳ ಚಲನ್ ವಿಧಿಸಲಾಗಿತ್ತು. ಇದಷ್ಟೇ ಅಲ್ಲ, ರೋಹಿತ್ ಖಡ್ಸೆ ಅವರ ಆಟೋ ರಿಕ್ಷಾವನ್ನು ಸಹ ಸೀಜ್ ಮಾಡಲಾಗಿತ್ತು.

ರೋಹಿತ್ ಖಡ್ಸೆ ತನ್ನ ಆಟೋ ರಿಕ್ಷಾವನ್ನು ಬಿಡಿಸಿಕೊಳ್ಳೋಕೆ ಪೊಲೀಸ್ ಠಾಣೆಗೆ ಬಂದಾಗ, ಪೋಲಿಸರು ಆತನನ್ನು ಆಟೋ ಬಿಡಿಸಿಕೊಳ್ಳಬೇಕೆಂದರೆ ಹಿಂದಿನ ಮತ್ತು ಪ್ರಸ್ತುತ ದಂಡವನ್ನು ಪಾವತಿಸುವಂತೆ ಕೇಳಿದರು. ರೋಹಿತ್ ಖಡ್ಸೆ ಬಳಿ ವಿಧಿಸಲಾದ ದಂಡದ ಹಣ ಇರದ ಕಾರಣ ರೋಹಿತ್ ಖಡ್ಸೆ ಮನೆಗೆ ಬಂದು ತನ್ನ ಮಗನ ಪಿಗ್ಗಿ ಬ್ಯಾಂಕ್ (ಮಕ್ಕಳ ಹುಂಡಿ) ಅನ್ನು ತಂದು ಪೊಲೀಸರ ಮುಂದೆ ತಂದಿಟ್ಟನು. ಟ್ರಾಫಿಕ್ ವಲಯದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಜಯ್ ಮಾಳವೀಯ ರಿಕ್ಷಾ ಚಾಲಕ ರೋಹಿತ್ ಖಡ್ಸೆಯ ಈ ಸ್ಥಿತಿಯನ್ನು ನೋಡಿ ಅವರಿಗೆ ರೋಹಿತ್ ಖಡ್ಸೆ ಹಾಗು ಆತನ ಕುಟುಂಬದ ಮೇಲೆ ಕರುಣೆ ತೋರಿದರು ಮತ್ತು ಅವರು ತಮ್ಮ ಸ್ವಂತ ಜೇಬಿನಿಂದ ಸಂಪೂರ್ಣ ಚಲನ್ ಹಣವನ್ನ ತುಂಬಿದರು ಮತ್ತು ರಿಕ್ಷಾ ಚಾಲಕನಿಗೆ ಆತನ ಆಟೋ ರಿಕ್ಷಾವನ್ನು ಕೊಟ್ಟು ಕಳಿಸಿದರು.

ಇನ್ಸ್‌ಪೆಕ್ಟರ್ ಅಜಯ್ ಮಾಳವೀಯ ಮಾಡಿದ ಈ ದಯನೀಯ ಕೆಲಸವನ್ನ ನೋಡಿ ಅವರ ಜೊತೆ ಕೆಲಸ ಮಾಡಿವ ಸಹ ಪೋಲೀಸರು ತುಂಬಾ ಭಾವುಕರಾದರು ಮತ್ತು ಇನ್ಸ್‌ಪೆಕ್ಟರ್ ಅಜಯ್ ಮಾಳವೀಯ ಅವರನ್ನು ಶ್ಲಾಘಿಸಿದರು. ಅಜಯ್ ಮಾಳವೀಯ ಮತ್ತು ರಿಕ್ಷಾ ಚಾಲಕ ರೋಹಿತ್ ಖಡ್ಸೆ ಅವರ ಫೋಟೋಗಳನ್ನು ನಾಗ್ಪುರ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡ್ಲರ್‌ಗಳಿಂದ ಹಂಚಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿತು. ದೇಶಕ್ಕೆ ಅಜಯ್ ಮಾಳವೀಯರಂತಹ ಪೋಲಿಸ್ ಅಧಿಕಾರಿಗಳ ಅಗತ್ಯವಿದೆ. ಸಾರ್ವಜನಿಕ ಸೇವಕರಾಗಿರುವುದರಿಂದ ಪ್ರತಿಯೊಬ್ಬ ಪೋಲಿಸರು ಜನರ ಬಗ್ಗೆ ಸಹಾನುಭೂತಿ ಮತ್ತು ಒಲವು ಹೊಂದಿರಬೇಕು. ಅದಕ್ಕೆ ಅಜಯ್ ಮಾಳವೀಯ ಉತ್ತಮ ಉದಾಹರಣೆಯೆಂದೇ ಹೇಳಬಹುದು.

Advertisement
Share this on...