ಬಿಹಾರದ ಕತಿಹಾರ್‌ನಲ್ಲಿ ಪ್ರಭಾ ಭಾರತಿ ಎಂಬ ಮಹಿಳಾ ಪೇದೆಯನ್ನು ಕೊ ಲೆ ಮಾಡಲಾಗಿದೆ. ಮೊಹಮ್ಮದ್ ಛೋಟೆ ಹಸನ್ ಎಂಬ ವ್ಯಕ್ತಿ ತನ್ನ ಗುರುತನ್ನು ಬದಲಿಸಿ ಪ್ರಭಾ ಅವರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ ಎಂಬ ಮಾಹಿತಿ ಬಯಲಿಗೆ ಬಂದಿದೆ. ಆತ ಹಿಂದೂ ಅಲ್ಲ ಮು ಸ್ಲಿಂ ಎಂಬ ವಿಷಯ ಬಹಿರಂಗಗೊಂಡ ನಂತರ, ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಖಾಸಗಿ ಫೋಟೋ-ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಮತ್ತು ಕೊ ಲೆ ಬೆದರಿಕೆ ಹಾಕುತ್ತಿದ್ದ. ಛೋಟೆ ಹಸನ್ ಸೇರಿದಂತೆ 7 ಜನರ ವಿರುದ್ಧ ಪ್ರಭಾ ಕುಟುಂಬ ಸದಸ್ಯರು ಎಫ್‌ಐಆರ್ ದಾಖಲಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯು ಬುಧವಾರ (ಫೆಬ್ರವರಿ 8, 2023) ತಡರಾತ್ರಿ ಕೋಢಾ ಪೊಲೀಸ್ ಠಾಣೆ ವ್ಯಾಪ್ತಿಯ ಭಟ್ವಾರದಲ್ಲಿ ನಡೆದಿದೆ. 21 ವರ್ಷದ ಪ್ರಭಾ ಭಾರತಿ ಮುಂಗೇರ್ ನಿವಾಸಿಯಾಗಿದ್ದರು. ಕೆಲ ಸಮಯದ ಹಿಂದೆ ಮೊಹಮ್ಮದ್ ಛೋಟೆ ಹಸನ್ ಎಂಬಾತನು ಪ್ರಭಾರನ್ನ ತನ್ನ ಗುರುತನ್ನ ಮರೆಮಾಚಿ ಲವ್ ಜಿಹಾದ್ ಖೆಡ್ಡಾಗೆ ಬೀಳಿಸಿದ್ದ. ಹಸನ್ ಕಾಟಿಹಾರ್‌ನ ಮೋರ್ಸಂದಾ ಗ್ರಾಮದವನು. ಹಸನ್ ತನ್ನ ಗುರುತು ಮರೆಮಾಚಿ ಪ್ರಭಾ ಜೊತೆ ಸ್ನೇಹ ಬೆಳೆಸಿದ್ದ. ಇದಾದ ಬಳಿಕ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಮೊಹಮ್ಮದ್ ಛೋಟೆ ಹಸನ್‌ನ ನಿಜವಾದ ಗುರುತನ್ನು ಬಹಿರಂಗಗೊಂಡ ನಂತರ ಪ್ರಭಾ ಆತನಿಂದ ದೂರವಾಗಿದ್ದರು.
ಬ್ರೇಕಪ್ ಆದ ನಂತರ ಛೋಟೆ ಹಸನ್ ಪದೇ ಪದೇ ಕರೆ ಮಾಡಿ ಪ್ರಭಾ ತನ್ನನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ. ಹಸನ್ ಬಳಿ ಪ್ರಭಾ ಅವರ ಖಾಸಗಿ ಫೋಟೋ-ವೀಡಿಯೋ ಇದ್ದವು. ಈ ಫೋಟೋ ವಿಡಿಯೋಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಅಲ್ಲದೇ ಕೊ ಲೆ ಬೆದರಿಕೆ ಕೂಡ ಹಾಕುತ್ತಿದ್ದ.
कटिहार में महिला पुलिसकर्मी को गोली मारकर हत्या, मुंगेर के रहने वाली प्रभा भारती घर से कटिहार पुलिस लाइन लौट रही थी, इस दौरान महिला पुलिसकर्मी को गोली मारकर हत्या. #KatiharNews #BiharNews #Katihar pic.twitter.com/sTWbb5eCvO
— Parambir Singh (@ParambirBihar) February 9, 2023
ಮಹಿಳಾ ಪೇದೆ ಹ ತ್ಯೆ ಗೆ ಸಂಬಂಧಿಸಿದಂತೆ ಎಸ್‌ಪಿ ಜಿತೇಂದ್ರ ಕುಮಾರ್, ಹತ್ಯೆಯ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಛೋಟು ಅಲಿಯಾಸ್ ಹಸನ್ ಅರ್ಷದ್, ಮೊಹಮ್ಮದ್ ಖಾದಿರ್, ಪ್ರಿಯುಸ್, ಮೋನು, ಮೊಹಮ್ಮದ್ ದಾನಿಶ್, ಮೊಹಮ್ಮದ್ ಸಜ್ಜದ್, ಯೋಧ ಯಾದವ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೈಕಿ ಮೊಹಮ್ಮದ್ ಖಾದಿರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪ್ರಭಾ ಅವರ ಕುಟುಂಬ ಸದಸ್ಯರು ಹೇಳುವ ಪ್ರಕಾರ 2 ದಿನಗಳ ಹಿಂದೆ ಮುಂಗೇರ್ ಸಮಾಧಾನ್ ಯಾತ್ರೆಗೆ ಡ್ಯೂಟಿಗೆಂದು ಬಂದಿದ್ದರು ಮತ್ತು ನಂತರ ಮತ್ತೆ ಕತಿಹಾರ್ ಪೊಲೀಸ್ ಲೈನ್‌ಗೆ ಮರಳಿದರು, ಅಲ್ಲಿ ಅವರು ಡ್ಯೂಟಿಯಲ್ಲಿದ್ದರು. ಕಟಿಹಾರ್‌ಗೆ ಬರುವಾಗ ಹಸನ್‌ನನ್ನು ಭೇಟಿಯಾದರು, ನಂತರ ಹಸನ್ ಆಕೆಯನ್ನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಪ್ರಭಾ ಅವರ ತ ಲೆ ಗೆ ಎರಡು ಬಾರಿ ಗುಂ ಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಗುಂಡು ತಗುಲಿದ ತಕ್ಷಣ ಪ್ರಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಭಾ ಅವರ ಶ ವ ದ ಬಳಿಯಿಂದ ಎರಡು ಖಾಲಿ ಕಾಟ್ರಿಡ್ಜ್‌ಗಳು ಮತ್ತು ಒಂದು ಜೀವಂತ ಕಾರ್ಟ್ರಿಡ್ಜ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಲೇಡಿ ಕಾನ್‌ಸ್ಟೆಬಲ್ ಅವರ ಬ್ಯಾಗ್, ಮೊಬೈಲ್, ಇಯರ್ ಫೋನ್ ಕೂಡ ಪತ್ತೆಯಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಎಸ್‌ಐಟಿ ರಚಿಸಿ ಪೊಲೀಸರು ದಾಳಿ ನಡೆಸುತ್ತಿದ್ದಾರೆ.