“ಹಿಂದೂ ದೇವತೆಗಳು ರಾಕ್ಷಸರು, ಅವುಗಳನ್ನ ಪೂಜೆ ಮಾಡಬೇಡಿ.. ಒಳ್ಳೇ ಮಾರ್ಕ್ಸ್ ಬೇಕು, ಪಾಸ್ ಆಗಿ ಡಿಸ್ಟಿಂಕ್ಷನ್ ಬರಬೇಕಂದ್ರೆ ಜೀಸಸ್‌ನ ಪೂಜೆ ಮಾಡಿ ಇಲ್ಲಾಂದ್ರೆ…”: ವಿದ್ಯಾರ್ಥಿಗಳನ್ನ ಮತಾಂತರಿಸಲು ಯತ್ನಿಸಿದ ಮಿಷನರಿ ಶಾಲೆ

in Uncategorized 892 views

ದಕ್ಷಿಣ ಭಾರತದಿಂದ ಮತಾಂತರದ ಸುದ್ದಿ ಈಗ ಸರ್ವೇ ಸಾಮಾನ್ಯವಾಗಿದೆ. ಅಲ್ಲಿ ಕಾರ್ಯಾಚರಿಸುತ್ತಿರುವ ಮೂಲಭೂತವಾದಿ ಸಂಘಟನೆಗಳು ಮತ್ತು ಕ್ರೈಸ್ತ ಮಿಷನರಿಗಳು ಈ ಕಾರ್ಯವನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿವೆ. ಬಹಳಷ್ಟು ಜನ ಹಿಂದುಗಳು ಈ ಮಿಷನರಿಗಳಿಗೆ ಬಲಿಯಾಗಿದ್ದಾರೆ. ಅವರಲ್ಲಿ ಒಬ್ಬರು ತಮಿಳುನಾಡಿನ ತಿರುನೆಲ್ವೇಲಿಯ ರಂಜನ್ (ಹೆಸರು ಬದಲಾಯಿಸಲಾಗಿದೆ) ಅವರು ಇತ್ತೀಚೆಗೆ ಈ ಮತಾಂತರ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸುದ್ದಿವಾಹಿನಿಯೊಂದಿಗೆ ಸಂಪರ್ಕಕ್ಕೆ ಬಂದರು.

Advertisement

30 ವರ್ಷದ ರಂಜನ್ ತಂದೆ ತಮ್ಮ ಮಗುವಿನ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಯೇಸುವನ್ನು ಅನುಸರಿಸಲು ಹೇಗೆ ಸಲಹೆ ನೀಡಲಾಗುತ್ತದೆ ಎಂದು ಹೇಳಿದರು. ತಮಗೆ ಉತ್ತಮ ಅಂಕಗಳು ಬೇಕಾದರೆ ಮತ್ತು ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕಾದರೆ ಯೇಸುವನ್ನು ಹೊರತುಪಡಿಸಿ ಬೇರೆ ದೇವರುಗಳನ್ನೂ ಪೂಜಿಸಬಾರದು, ಇದರಿಂದ ಅವರ ದೇಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಅಥವಾ ಅವರು ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ವಿಫಲರಾಗುವುದಿಲ್ಲ ಎಂದು ಎಕ್ಸ್‌ಟ್ರಾ ಕ್ಸಾಸ್‌ಸ್ ಗಳಲ್ಲಿ ಹೇಳಲಾಗುತ್ತದೆ ಎಂದು ರಂಜನ್ ವಿವರಿಸುತ್ತಾರೆ.

ಈ ವಿಷಯ ತಿಳಿದ ರಂಜನ್‌ನ ತಂದೆ ಕೂಡಲೇ ತಮ್ಮ ಮಗುವನ್ನು ಆ ಶಾಲೆಯಿಂದ ತೆಗೆದು ಬೇರೆ ಶಾಲೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಮಾತನಾಡುತ್ತ- “ಶಾಲೆಯು ಒಂದು ಧರ್ಮವು ಇನ್ನೊಂದು ಧರ್ಮಕ್ಕಿಂತ ಹೇಗೆ ಉತ್ತಮವಾಗಿದೆ ಎಂಬುದನ್ನು ನಾವು ಕಲಿಯುವ ಸ್ಥಳವಲ್ಲ. ಇದು ದ್ವೇಷವನ್ನು ಹುಟ್ಟುಹಾಕುತ್ತದೆ. ಇದನ್ನು ತಿಳಿದು ಇತರ ಅನೇಕ ಪೋಷಕರು ಆಕ್ರೋಶಗೊಂಡರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ” ಎಂದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೆಲವು ದಿನಗಳ ಹಿಂದೆ ಕನ್ಯಾಕುಮಾರಿಯ ಶಾಲೆಯೊಂದರಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತನಗೆ ಮತ್ತು ಇತರ ಸಹಪಾಠಿಗಳಿಗೆ ಬೈಬಲ್ ಓದುವಂತೆ ಮತ್ತು ಇತರ ದೇವಾನುದೇವತೆಗಳ ವಿಗ್ರಹಗಳನ್ನು ದೆವ್ವ ಎಂದು ಕರೆಯುವಂತೆ ಹೇಳುತ್ತಿದ್ದಾರೆ ಎಂದು ಆಡಳಿತಕ್ಕೆ ದೂರು ನೀಡಿದ್ದಳು. ಈ ಘಟನೆ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದ ನಂತರ, ಶಾಲೆಯ ಶಿಕ್ಷಕನನ್ನು ಕೆಲಸದಿಂದ ಅಮಾನತುಗೊಳಿಸಲಾಯಿತು ಆದರೂ ಈ ವಿಷಯವು ತಣ್ಣಗಾಗಿರಲಿಲ್ಲ. ಕೆಲವು ತಿಂಗಳ ಹಿಂದೆ ಲಾವಣ್ಯ ಪ್ರಕರಣ ಮತ್ತು ಇತ್ತೀಚೆಗೆ ಕನ್ಯಾಕುಮಾರಿ ಪ್ರಕರಣ ರಾಜ್ಯದ ಶಾಲೆಗಳಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.

ನ್ಯೂಸ್ 18 ನ ಅದೇ ವರದಿಯಲ್ಲಿ, 14 ವರ್ಷದ ಹುಡುಗಿಯೊಬ್ಬಳು “ಹಿಂದೂಗಳು ದೆವ್ವಗಳು” ಎಂದು ಹೇಗೆ ವಿವರಿಸಲಾಗುತ್ತದೆ ಎಂದು ಹೇಳಿದ್ದಾಳೆ. ನೀವು ಯೇಸುವನ್ನು ಪ್ರಾರ್ಥಿಸದಿದ್ದರೆ, ನಿಮಗೆ ದುಃಖವೇ ಸಿಗುತ್ತೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಬೈಬಲ್ ಓದಿ. ಈ ವಿಷಯ ತಿಳಿದ ಬಳಿಕ ಬೇರೆ ಕೆಲವು ಮಕ್ಕಳ ಪೋಷಕರ ಬಳಿ ದೂರು ನೀಡಲು ಹೋಗಿದ್ದೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ಆದರೆ, ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿತ್ತು.

ಇತ್ತೀಚೆಗಷ್ಟೇ ತನ್ನ ಮಕ್ಕಳು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದರಿಂದ ತನ್ನಿಡೀ ಆಸ್ತಿಯನ್ನ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದ ತಮಿಳುನಾಡಿನ ವ್ಯಕ್ತಿ

2016 ರಲ್ಲಿ ಚೆನ್ನೈನ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕ್ರಿಶ್ಚಿಯನ್ ಮತದ ಬೆಳವಣಿಗೆಗೆ ಭಾರತದ ತಮಿಳುನಾಡು ರಾಜ್ಯದಲ್ಲಿ ಅತ್ಯಂತ ಅನುಕೂಲಕರ ರಾಜ್ಯವಾಗಿದೆ ಎಂದು ಬಹಿರಂಗಪಡಿಸಿದೆ. ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಬಹಳ ಹಿಂದಿನಿಂದಲೂ ನಾಟಕೀಯವಾಗಿ ಹೆಚ್ಚುತ್ತಿವೆ. ಆದರೆ, ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರು ಎಂತಹುದೇ ಕಷ್ಟ ಬಂದರೂ ಅದನ್ನ ಎದುರಿಸುತ್ತಿದ್ದಾರೆ. ಆದರೆ, ಆ ಒಬ್ಬ ಹಿಂದೂ ವ್ಯಕ್ತಿ ಧೈರ್ಯದ ಹೆಜ್ಜೆಯನ್ನಿಡುತ್ತ, ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ತನ್ನ ಸ್ವಂತ ಮಕ್ಕಳನ್ನೂ ಕಡೆಗಣಿಸಲು ನಿರ್ಧರಿಸಿದನು.

ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನೇ ಹಿಂದೂ ಧರ್ಮಕ್ಕಾಗಿ ಬದಿಗಿಟ್ಟರು

ತಮಿಳುನಾಡಿನ ಕಾಂಚೀಪುರಂ ನಿವಾಸಿಯಾಗಿರುವ 85 ವರ್ಷದ ದಿನಮಲರ್ ವೇಲಾಯುಧಂ ಅವರು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಕ್ಕಾಗಿ ತಮ್ಮ ಮಕ್ಕಳ ನಿರ್ಧಾರಕ್ಕೆ ಸಿಟ್ಟಾಗಿದ್ದರು. ಹಿಂದೂ ಸಂಪ್ರದಾಯದಂತೆ ತನ್ನ ಮಕ್ಕಳು ತನ್ನ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಹೇಳಿದಾಗ ಮನನೊಂದ ಅವರು ತಮ್ಮ 2 ಕೋಟಿ ಮೌಲ್ಯದ ಮನೆಯನ್ನು ಮುರುಗನ್ ದೇವಸ್ಥಾನವೊಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ವೇಲಾಯುಧಂ ಅವರು ತಮಿಳುನಾಡು ಸರ್ಕಾರದ ಆರೋಗ್ಯ ನಿರೀಕ್ಷಕರಾಗಿ (Health Inspector) ಕೆಲಸ ಮಾಡಿದ್ದರು. ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಕ್ರಿಶ್ಚಿಯನ್ನರನ್ನು ಮದುವೆಯಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಾರೆ. ಹೀಗಾಗಿ, ಮಕ್ಕಳ ಈ ನಿರ್ಧಾರದಿಂದ ಮನನೊಂದು ಅವರು ತಮ್ಮ ಮನೆಯ ಆಸ್ತಿ ಪಾಸ್ತಿಯನ್ನ ದೇವಸ್ಥಾನಕ್ಕೆ ನೀಡಲು ನಿರ್ಧರಿಸಿದರು. ದೇವಸ್ಥಾನವು ಸರ್ಕಾರದ ನಿಯಂತ್ರಿತ ಆಸ್ತಿಗಳ ಅಡಿಯಲ್ಲಿ ಬರುವುದರಿಂದ ವೇಲಾಯುಧಂ ರವರು HRCE ಸಚಿವರಿಗೆ ಮನೆಯ ಕಾಗದಪತ್ರಗಳನ್ನ ಹಸ್ತಾಂತರಿಸಿದರು.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವೇಲಾಯುಧಂ, “ಹಿಂದೂ ಧರ್ಮದ ಅನುಯಾಯಿಯಾಗಿ ನನ್ನ ಮಕ್ಕಳು ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಬೇಕೆಂದು ನಾನು ಬಯಸಿದ್ದೆ. ನನ್ನ ಇಬ್ಬರು ಹೆಣ್ಣುಮಕ್ಕಳು ಕ್ರಿಶ್ಚಿಯನ್ ಪುರುಷರನ್ನು ಮದುವೆಯಾಗಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ನನ್ನ ಮಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವನೂ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾನೆ. ಈಗ ಮೂವರೂ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದಾರೆ. ಹಾಗಾಗಿ ಅವರು ಹಿಂದೂ ಸಂಪ್ರದಾಯದಂತೆ ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಲ್ಲ” ಎಂದರು.

ಅವರು ಮುಂದೆ ಮಾತನಾಡುತ್ತ, “ನಾನು 2,680 ಚದರ ಅಡಿ ಆಸ್ತಿಯಲ್ಲಿ ಮನೆ ಹೊಂದಿದ್ದೇನೆ, ಅದು ಈಗ ಸುಮಾರು 2 ಕೋಟಿ ರೂ. ಬೆಲೆ ಬಾಳುತ್ತದೆ‌. ಧರ್ಮ ಬದಲಿಸಿದವರಿಗೆ ನನ್ನ ಮನೆ ಕೊಡಲು ನನಗೆ ಇಷ್ಟವಿಲ್ಲ. ಹಾಗಾಗಿ ಅದನ್ನು ನನ್ನ ಕುಲದೈವವಾದ ಕುಮಾರಕ್ಕೊಟ್ಟಂ ಮುರುಗನ್ ದೇವಸ್ಥಾನಕ್ಕೆ ದಾನ ಮಾಡಿದ್ದೇನೆ. ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡವರು ನಾನು ಸತ್ತರೂ ಯಾವುದೇ ವಿಧಿವಿಧಾನಗಳ ಮೂಲಕ ನನ್ನ ಅಂತ್ಯಸಂಸ್ಕಾರ ಮಾಡುವುದಿಲ್ಲ. ಹಾಗಾಗಿ ನನ್ನ ಆಸ್ತಿಯನ್ನು ಅವರಿಗೆ ನೀಡಲು ಬಯಸುವುದಿಲ್ಲ. ನನ್ನ ಎರಡನೇ ಮಗ ಮತ್ತು ಮಗಳು ಮನೆಯ ಒಂದು ಭಾಗದಲ್ಲಿ ವಾಸವಾಗಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಇರುವವರೆಗೂ ಅವರು ಇಲ್ಲಿ ವಾಸಿಸಬಹುದು. ಆದರೆ ನಾನು ಸತ್ತ ತಕ್ಷಣ ದೇವಾಲಯವು ಮನೆಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ” ಎಂದರು.

ಡೆಮಾಗ್ರಾಫಿ ಬದಲಾವಣೆಗೆ ಕಾರಣವಾಗುತ್ತಿವೆ ಕ್ರಿಶ್ಚಿಯನ್ ಮಿಷನರಿಗಳು

ವೇಲಾಯುಧಂ ರವರು ತಮ್ಮ ಆಸ್ತಿಯನ್ನ ದೇವಾಲಯಕ್ಕೆ ನೀಡಿದ್ದರೂ, ಕ್ರಿಶ್ಚಿಯನ್ ಮಿಷನರಿಗಳು ಕ್ರಿಪ್ಟೋ ಎಕ್ಸ್ಚೇಂಜಸ್ ಮೂಲಕ HRCE ಯನ್ನೂ ನುಸುಳಿದ್ದಾರೆ ಎಂಬುದನ್ನು ಗಮನಿಸಬೇಕು. ಈ ಮಿಷನರಿಗಳು ದೇವಾಲಯದ ಆಸ್ತಿಗಳನ್ನು ಅತಿಕ್ರಮಿಸಿ ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿವೆ. ಈ ಮಿಷನರಿಗಳು ಯುವಕರು ಮತ್ತು ದಲಿತರನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳಿಸುವಂತೆ ಒತ್ತಡ ಹೇರುತ್ತಾರೆ ಮತ್ತು ಇದರ ಪರಿಣಾಮವಾಗಿ ತೀವ್ರ ಜನಸಂಖ್ಯಾ (severe demographic) ಬದಲಾವಣೆಗೆ ಕಾರಣವಾಗುತ್ತಿದೆ.

ಈ ವರ್ಷದ ಆರಂಭದಲ್ಲಿ, 18 ವರ್ಷ ವಯಸ್ಸಿನ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ, ಕಾರಣ ಅವನ ಕುಟುಂಬವು ತನ್ನ ಹಳ್ಳಿಯಲ್ಲಿ ಮಿಷನರಿಗಳ ಪ್ರಭಾವದಿಂದ ಅವನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿತ್ತು. 2017 ರಲ್ಲಿ, ಕರ್ನಾಟಕದಲ್ಲಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳ್ಳಲಿಲ್ಲ ಎಂಬ ಕಾರಣಕ್ಕೆ ಒಬ್ಬ ಯುವಕನನ್ನ ಅವನ ಸ್ವಂತ ತಂದೆಯೇ ಥಳಿಸಿದ್ದರು.

ಭಾರತವು ಚೀನಾದ ವೈರಸ್‌ನೊಂದಿಗೆ ಹೋರಾಡುತ್ತಿರುವಾಗ, ಇಂತಹ ಮಿಷನರಿಗಳು ಭಾರತದಲ್ಲಿ ಹಿಂದೆಂದೂ ಕೇಳಿರದ ಮತಾಂತರದ ಅಲೆಯನ್ನು ಪ್ರಾರಂಭಿಸಿವೆ. ಕಳೆದ ವರ್ಷ ಲಾಕ್‌ಡೌನ್‌ನ ಮಧ್ಯೆ ಮಿಷನರಿಗಳು 1,00,000 ಜನರನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಲು ಪರಿವರ್ತಿಸಲು ಸಾಧ್ಯವಾಯಿತು ಎಂದು ವರದಿಗಳು ಸೂಚಿಸುತ್ತವೆ. ಇದಲ್ಲದೆ, ಮಿಷನರಿಗಳು ಭಾರತದಾದ್ಯಂತ ಹಲವಾರು ಚರ್ಚುಗಳನ್ನು ಕಟ್ಟಿ, ಅವುಗಳನ್ನು ತಮ್ಮ ಪರಭಕ್ಷಕ ಮತಾಂತರಕ್ಕೆ ಒಂದು ಆಯುಧದಂತೆ ಬಳಸಿಕೊಂಡವು.

ಹಿಂದಿ ಭಾಷಿಕರ ಹೃದಯಭಾಗ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಮತಾಂತರ ದೊಡ್ಡ ಸಮಸ್ಯೆಯಾಗಿದೆ. ಚರ್ಚ್ ಮತ್ತು ಮಿಷನರಿಗಳು ಮತಾಂತರದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸುವುದನ್ನು ಮುಂದುವರೆಸುತ್ತಿರುವಾಗ, ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು “ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಲು, ಕೆಲವು ಮಿಷನರಿಗಳು ಮತಾಂತರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಪ್ರಚೋದನೆಯ ಮೂಲಕ ಮತಾಂತರವನ್ನು ನಿಲ್ಲಿಸಲು ಸರ್ಕಾರವು ಹಲವಾರು ಆಯ್ಕೆಗಳನ್ನು ಚರ್ಚಿಸುತ್ತಿದೆ” ಎಂದು ಹೇಳಿದ್ದರು (ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವ ಮುನ್ನ).

ಇಸ್ಲಾಮಿಸ್ಟ್‌ಗಳ ನಂತರ ಮಿಷನರಿಗಳು ಮತಾಂತರ ದಂಧೆಯಲ್ಲಿ ಮುಂಚೂಣಿಯಲ್ಲಿವೆ ಮತ್ತು ದೇಶದಲ್ಲಿ ಮತಾಂತರವನ್ನು ತಡೆಯಲು ಮತಾಂತರ ನಿಷೇಧ ಕಾನೂನು ತಂದು ಈ ಮಿಷನರಿಗಳ ಆಟಾಟೋಪ ನಿಲ್ಲಿಸಲು ಇದು ಉತ್ತಮ ಸಮಯವಾಗಿದೆ‌.

Advertisement
Share this on...