ಇತ್ತ ಎಲ್ಲರೂ CDS ಬಿಪಿನ್ ರಾವತ್ ರವರಿಗೆ ಶೃದ್ಧಾಂಜಲಿ‌ ಅರ್ಪಿಸುತ್ತಿದ್ದರೆ ಅತ್ತ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ವಾಡ್ರಾ

in Kannada News/News 315 views

ಮಾಂಡ್ ಗ್ರಾಮ (ಗೋವಾ): 2008 ರಲ್ಲಿ ರಾಹುಲ್ ಗಾಂಧಿಯವರ ಆ ಒಂದು ಘಟನೆಯಿಂದಾಗಿ (ಮುಂಬೈ ಅಟ್ಯಾಕ್ ಆದಾಗ ಪಾರ್ಟಿ ಮಾಡ್ತಿದ್ದ ರಾಹುಲ್ ಗಾಂಧಿ) ಕಾಂಗ್ರೆಸ್ ಇಲ್ಲಿಯವರೆಗೂ ಜನರಿಂದ ಟೀಕೆಗೊಳಗಾಗುತ್ತಲೇ ಇದೆ. ಶುಕ್ರವಾರ ರಾಹುಲ್ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಇದೇ ರೀತಿಯ ತಪ್ಪು ಮಾಡಿದ್ದಾರೆ.

Advertisement

ಶುಕ್ರವಾರ, ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಯೋಧರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು, ಆದರೆ ಪ್ರಿಯಾಂಕಾ ಗಾಂಧಿ ಗೋವಾದಲ್ಲಿ ಮಹಿಳೆಯರೊಂದಿಗೆ ನಗುತ್ತಾ ಡ್ಯಾನ್ಸ್ ಮಾಡುತ್ತಿದ್ದರು. 2008ರಲ್ಲಿ ಮುಂಬೈ ಮೇಲೆ ಅತಿ ದೊಡ್ಡ ಭ ಯೋ ತ್ಪಾ ದಕ ದಾ ಳಿ ನಡೆದಾಗ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿದ್ದರು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಡ್ಯಾನ್ಸ್ ವೈರಲ್ ಆಗಿದೆ. ಇದನ್ನ ನೋಡಿದ ಬಳಿಕ ಜನ ಹಿಡಿಶಾಪ ಹಾಕತೊಡಗಿದರು. ಈ ವಿಡಿಯೋ ವೈರಲ್ ಆದ ಬಳಿಕ , ಬೆಳಿಗ್ಗೆ ಕುಣಿದು ಕುಪ್ಪಳಿಸಿದ್ದ ಪ್ರಿಯಾಂಕಾ ಗಾಂಧಿ ಅವರು ಅಗಲಿದ ಯೋಧರ ಸ್ಮರಣಾರ್ಥ ಮತ್ತೊಂದು ಕಾರ್ಯಕ್ರಮದಲ್ಲಿ ಸಂಜೆ ಎರಡು ನಿಮಿಷಗಳ ಬದಲಿಗೆ ಒಂದು ನಿಮಿಷ ಮೌನಾಚರಣೆ ಮಾಡಿದರು.

ಈಗ ನಿಮಗೆ ಪ್ರಿಯಾಂಕಾ ಗಾಂಧಿಗೆ ಸಂಬಂಧಿಸಿದ ಈ ಇಡೀ ಪ್ರಕರಣದ ಬಗ್ಗೆ ತಿಳಿಸುತ್ತೇವೆ‌. ವಾಸ್ತವವಾಗಿ, ಮುಂದಿನ ವರ್ಷ ಗೋವಾ ವಿಧಾನಸಭಾ ಚುನಾವಣೆ ಇದೆ. ಪ್ರಿಯಾಂಕಾ ಇಲ್ಲಿ ಪ್ರಚಾರಕ್ಕೆ ಬಂದಿದ್ದರು. ಮಾಂಡ್ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಕಾರ್ಯಕ್ರಮ ನಡೆಸಿದ್ದರು. ಇದೇ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಿಯಾಂಕಾ ಖುಷಿಗಾಗಿ ಮಹಿಳೆಯರನ್ನು ಕುಣಿಯುವಂತೆ ಮಾಡಿದರು. ಈ ನೃತ್ಯಕ್ಕೆ ಪ್ರಿಯಾಂಕಾ ಕೂಡ ಸೇರಿಕೊಂಡರು. ವಿಶಾಲವಾದ ನಗುವನ್ನು ನೀಡುತ್ತಾ, ಅವರು ಸಹ ಮಹಿಳೆಯರೊಂದಿಗೆ ನೃತ್ಯ ಮಾಡಲು ಪ್ರಾರಂಭಿಸಿದಳು. ಸೋಶಿಯಲ್ ಮೀಡಿಯಾ ಯುಗದಲ್ಲಿ ಇದೆಲ್ಲವನ್ನು ಹೇಗೆ ಮುಚ್ಚಿಡಬಹುದು?

ಇದರಿಂದಾಗಿ ತಕ್ಷಣವೇ ಪ್ರಿಯಾಂಕಾ ಡ್ಯಾನ್ಸ್ ವೈರಲ್ ಆಗಿದೆ. ಜನರು ಪ್ರಯಾಂಕಾ ಗಾಂಧಿಗೆ ಹಿಡಿ ಶಾಪ ಹಾಕಲು ಪ್ರಾರಂಭಿಸಿದರು. ಎಲ್ಲಾ ಕಾಂಗ್ರೆಸ್ಸಿಗರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಗಳ ಮೂಲಕ ಪ್ರಿಯಾಂಕಾ ಅವರ ಡ್ಯಾನ್ಸ್‌ನ್ನ ಹಂಚಿಕೊಂಡಿದ್ದರು, ಆದರೆ ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದನ್ನು ಕಂಡು ತಕ್ಷಣವೇ ಅವರು ತಮ್ಮ ತಮ್ಮ ಟ್ವೀಟ್ ಗಳನ್ನ ಡಿಲೀಟ್ ಮಾಡಿದ್ದಾರೆ.

ಸಂಜೆ ಗೋವಾದ ಆಕೇಮ್ ನಲ್ಲಿರುವ ಕೋಸ್ಟಾ ಮೈದಾನದಲ್ಲಿ ಪ್ರಿಯದರ್ಶಿನಿ ಎಂಬ ಮಹಿಳೆಯೊಂದಿಗೆ ಪ್ರಿಯಾಂಕಾ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ, ಪ್ರಿಯಾಂಕಾ ಅವರು ಅಗಲಿದ ಸೈನಿಕರು ಮತ್ತು ಜನರಲ್ ರಾವತ್ ಅವರ ಬಗ್ಗೆ ಕಾಟಾಚಾರಕ್ಕೆ ಎಂಬಂತೆ ಎರಡು ಸಹಾನುಭೂತಿಯ ಮಾತುಗಳನ್ನೂ ಹೇಳಿದರು ಮತ್ತು ಆ ದಿನ ವೈರಲ್ ಆದ ಅವರ ಡ್ಯಾನ್ಸ್ ಹಾಗು ಜನ ಉಗಿದಿದ್ದನ್ನ ಕಂಡು ಒಂದು ನಿಮಿಷ ಮೌನಾಚರಣೆಗೆ ಘೋಷಿಸಿದರು. ಸೈನಿಕರ ಜತೆಗಿನ ಅಪಘಾತ ಪ್ರಿಯಾಂಕಾ ಅವರಿಗೆ ತಿಳಿದಿರಲಿಲ್ಲವೇ ಅಥವಾ ಅವರಿಗೆ ಈ ಸೈನಿಕರಿಗಿಂತ ಚುನಾವಣೆಯೇ ಮುಖ್ಯವೇ ಎಂಬುದನ್ನ ಜನ ಪ್ರಶ್ನಿಸಲಾರಂಭಿಸಿದು. ಇಂತಹ ಪ್ರಶ್ನೆಗಳಿಗೆ ಕಾಂಗ್ರೆಸ್ ಈ ಹಿಂದೆಯೂ ಉತ್ತರ ನೀಡಿಲ್ಲ ಮತ್ತು ಈಗಲಾದರೂ ಉತ್ತರ ಕೊಡ್ತಾರೆ ಅನ್ನೋ ನಿರೀಕ್ಷೆಯೂ ಇಲ್ಲ ಬಿಡಿ.

Advertisement
Share this on...