ಅ-ಶ್ಲೀ-ಲ ಚಿತ್ರಗಳ ನಿರ್ಮಾಣ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಜನರಿಗೆ ತಲುಪುವಂತೆ ಮಾಡಿದ ಆರೋಪಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾರನ್ನು ಈಗಾಗಲೇ ಬಂ ಧಿ ಸ ಲಾಗಿದ್ದು, ಮುಂಬೈನ ನ್ಯಾ ಯಾ ಲ ಯ ವು ಅವರ ಪೊ ಲೀ ಸ್ ಕಸ್ಟಡಿಯನ್ನು ಜುಲೈ 27 ರವರೆಗೆ ವಿಸ್ತರಿಸಿದೆ. ಜುಲೈ 19 ರ ರಾತ್ರಿ ಮುಂಬೈ ನಗರ ಪೊ ಲೀ ಸ್ ಅ ಪ ರಾ ಧ ವಿಭಾಗವು ಭಾರತೀಯ ದಂ ಡ ಸಂ ಹಿ ತೆ ಮತ್ತು ಮಾಹಿತಿ ತಂತ್ರಜ್ಞಾನ ಕಾ ಯ್ದೆ ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರ ಕ ರ ಣ ದಾಖಲಿಸಿದ ನಂತರ ರಾಜ್ ಕುಂದ್ರಾರನ್ನು ಬಂ ಧಿ ಸ ಲಾಯಿತು. ಇಂಗ್ಲೆಂಡ್‌ನ ಲಂಡನ್‌ನಲ್ಲಿ ಜನಿಸಿದ ಬಸ್ ಕಂಡಕ್ಟರ್ ಪುತ್ರ ರಾಜ್ ಕುಂದ್ರಾ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು ಹೇಗೆ ಎಂಬ ಅನುಮಾನ ಹಲವರಲ್ಲಿ ಇರುತ್ತದೆ. ಇದಕ್ಕೆ ವಿವರ ಹೀಗಿದೆ ನೋಡಿ..
ಕುಂದ್ರಾ ಜೀವನ ಮತ್ತು ವ್ಯವಹಾರ ಉದ್ಯಮಿಯಾಗಿ ಅವರ ಹಾದಿ ಇಲ್ಲಿದೆ..
ರಾಜ್ ಕುಂದ್ರಾ ಜನಿಸಿದ್ದು ಲಂಡನ್‌ನಲ್ಲಿ. ಅವರ ತಂದೆ ಬಾಲ್ ಕ್ರಿಶನ್ ಕುಂದ್ರಾ ಮೊದಲು ಲಂಡನ್‌ನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದರು. ಅವರ ತಾಯಿ ಉಷಾ ರಾಣಿ ಕುಂದ್ರಾ ಅಂಗಡಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಬಾಲ್ ಕ್ರಿಶನ್ ಕುಂದ್ರಾ ಸಣ್ಣ ಉದ್ಯಮವನ್ನು ಪ್ರಾರಂಭಿಸಿದ್ದರು.
ಇನ್ನು, ರಾಜ್ ಕುಂದ್ರಾ ಫ್ಯಾಶನ್ ಚಿಲ್ಲರೆ ವ್ಯಾಪಾರಿಗಳಿಗೆ ಪಾಶ್ಮಿನಾ ಶಾಲು ಮಾರಾಟಗಾರನಾಗಿ ತನ್ನ ವ್ಯವಹಾರ ವೃತ್ತಿಜೀವನವನ್ನು ಬ್ರಿಟನ್‌ನಲ್ಲಿ ಪ್ರಾರಂಭಿಸಿದರು, ಮತ್ತು ಆ ವ್ಯಾಪಾರದಲ್ಲಿಯೇ ಮಿಲಿಯನ್‌ಗಟ್ಟಲೆ ಹಣ ಸಂಪಾದಿಸಿದರು. 2007ರಲ್ಲಿ, ದುಬೈಗೆ ತೆರಳಿ ಎಸೆನ್ಷಿಯಲ್ ಜನರಲ್ ಟ್ರೇಡಿಂಗ್ ಎಲ್ಎಲ್‌ಸಿಯನ್ನು ಸ್ಥಾಪಿಸಿದರು. ಈ ಕಂಪನಿ ಅಮೂಲ್ಯವಾದ ಲೋಹಗಳು, ನಿರ್ಮಾಣ, ಗಣಿಗಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ವ್ಯವಹಾರ ನಡೆಸುತ್ತದೆ. ಅದೇ ಸಮಯದಲ್ಲಿ, ರಾಜ್ ಕುಂದ್ರಾ ಬಾಲಿವುಡ್ ಚಿತ್ರಗಳಿಗೆ ಹಣಕಾಸು ನೆರವು ಮತ್ತು ನಿರ್ಮಾಣ ಪ್ರಾರಂಭಿಸಿದರು.
2004ರಲ್ಲೇ ಬ್ರಿಟಿಷ್ ಏಷಿಯನ್ ಬೈ ಸಕ್ಸಸ್ ಎಂಬ ಬ್ಯುಸಿನೆಸ್ ಮ್ಯಾಗಜೀನ್‌ನಲ್ಲಿ ರಾಜ್ ಕುಂದ್ರಾ 198ನೇ ಶ್ರೀಮಂತ ಬ್ರಿಟಿಷ್ ಏಷ್ಯನ್ ಸ್ಥಾನ ಪಡೆದರು.
ರಾಜ್ ಕುಂದ್ರಾ ಈವರೆಗೆ ಎರಡು ಬಾರಿ ಮದುವೆಯಾಗಿದ್ದಾರೆ. ಕವಿತಾ ಕುಂದ್ರಾ ಮೊದಲ ಪತ್ನಿಯಾಗಿದ್ದು, ಅವರಿಗೆ ಒಬ್ಬಳು ಮಗಳಿದ್ದಾಳೆ. ನಂತರ ಕವಿತಾರಿಂದ ವಿ ಚ್ಛೇ ದ ನ ಪಡೆದ ರಾಜ್ ಕುಂದ್ರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ನವೆಂಬರ್ 22, 2009ರಂದು ವಿವಾಹವಾದರು. ಅವರಿಗೆ ಮಗ ಮತ್ತು ಮಗಳು ಸೇರಿ ಇಬ್ಬರು ಮಕ್ಕಳಿದ್ದಾರೆ.
ರಾಜ್ ಕುಂದ್ರಾ ಎಸೆನ್ಷಿಯಲ್ ಸ್ಪೋರ್ಟ್ಸ್ ಮತ್ತು ಮೀಡಿಯಾದೊಂದಿಗೆ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಸತ್ಯುಗ್ ಗೋಲ್ಡ್, ಸೂಪರ್ ಫೈಟ್ ಲೀಗ್ ಹಾಗೂ ಮುಂಬೈನ ರೆಸ್ಟೋರೆಂಟ್ ಸರಪಳಿಯಾದ ಬಾಸ್ಟಿಯನ್ ಹಾಸ್ಪಿಟಾಲಿಟಿ ಉದ್ಯಮದೊಂದಿಗೂ ಸಂಬಂಧ ಹೊಂದಿದ್ದಾರೆ.
2009ರಲ್ಲಿ ಕುಂದ್ರಾ ಮತ್ತು ಪತ್ನಿ ಶಿಲ್ಪಾ ಶೆಟ್ಟಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಜಸ್ಥಾನ್ ರಾಯಲ್ಸ್‌ನಲ್ಲಿ ಹೂಡಿಕೆ ಮಾಡಿದರು. ಆದರೆ, ಐಪಿಎಲ್ ಸ್ಪಾ ಟ್ ಫಿ ಕ್ಸಿಂ ಗ್ ಹ ಗ ರ ಣ ಬೆಳಕಿಗೆ ಬಂದ ಬೆನ್ನಲ್ಲೇ ಜುಲೈ 2015ರಲ್ಲಿ ಭಾರತದ ಸು ಪ್ರೀಂ ಕೋ ರ್ಟ್ ನೇಮಿಸಿದ ಸಮಿತಿಯು ರಾಜ್ ಕುಂದ್ರಾರಿಗೆ ಕ್ರಿಕೆಟ್ ಸಂಬಂಧಿತ ಚಟುವಟಿಕೆಯಿಂದ ಜೀ ವಾ ವ ಧಿ ನಿ ಷೇ ಧ ವಿ ಧಿ ಸಿ ತು.
ಇನ್ನು, ರಾಜ್ ಕುಂದ್ರಾ ಅಕ್ಟೋಬರ್ 14, 2013 ರಂದು ಪ್ರಕಟವಾದ ‘ಹೌ ನಾಟ್ ಟು ಮೇಕ್ ಮನಿ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.