ಗ್ರಾಮಕ್ಕೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ಎರಡು ತಿಂಗಳ ಹಿಂದೆ ನನ್ನ ಮಗನ ಮದುವೆ ನಿಶ್ಚಯವಾದಾಗ ನಿನ್ನ ಸೊಸೆಯನ್ನ ಹೆಲಿಕಾಪ್ಟರ್ ನಿಂದ ಕರೆದುಕೊಂಡು ಬರ್ತೀಯ? ಅಂತ ಗ್ರಾಮಸ್ಥರು ಲೇವಡಿ ಮಾಡುತ್ತಿದ್ದರು, ಈಗಂತೂ ನನ್ನ ಸೊಸೆಯನ್ನ ಹೆಲಿಕಾಪ್ಟರ್ ಮೂಲಕವೇ ಕರೆದುಕೊಂಡು ಬರ್ತೀನಿ ಎಂದು ನಿರ್ಧರಿಸಿದೆ ಎಂದು ವರನ ತಂದೆ ರಾಧೇಶ್ಯಾಮ್ ಸೈನಿ ಹೇಳಿದ್ದಾರೆ.
ಹೆಲಿಕಾಪ್ಟರ್ ಮೂಲಕ ಮದುಮಗಳು ಅಥವಾ ಸೊಸೆಯನ್ನ ಕರೆತರುವ ಟ್ರೆಂಡ್. ಇದೇ ರೀತಿಯ ದೃಶ್ಯ ರಾಜಸ್ಥಾನದ ಭರತ್ಪುರದಲ್ಲೂ ಕಂಡುಬಂದಿದೆ. ಅಲ್ಲಿ ಬಡ ಕುಟುಂಬದ ಮಗಳನ್ನು ಸೊಸೆಯಾಗಿ ಹೆಲಿಕಾಪ್ಟರ್ ಮೂಲಕ ಅತ್ತೆಯ ಮನೆಗೆ ಕರೆತರಲಾಗಿದೆ. ವಧುವಿನ ಈ ಅದ್ಧೂರಿ ಬೀಳ್ಕೊಡುಗೆಯನ್ನು ನೋಡಲು ಗ್ರಾಮದ ಅನೇಕ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಹಸು, ಎಮ್ಮೆ, ಮೇಕೆ ಮೇಯುತ್ತಿದ್ದ ಗ್ರಾಮದಲ್ಲಿ ದಿಢೀರ್ ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ. ಇದನ್ನು ಕಂಡ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ. ಗ್ರಾಮಸ್ಥರು ಗಂಟೆಗಟ್ಟಲೆ ಹೆಲಿಕಾಪ್ಟರ್ ನೋಡುತ್ತಾ ನಿಂತಿದ್ದರು. ಭದ್ರತೆ ದೃಷ್ಟಿಯಿಂದ ಹೆಲಿಕಾಪ್ಟರ್ ಸುತ್ತ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಇದರೊಂದಿಗೆ ಕೆಲ ಪೊಲೀಸರನ್ನೂ ನಿಯೋಜಿಸಲಾಗಿತ್ತು.
ವೈರ್ ವಿಧಾನಸಭಾ ಗ್ರಾಮ ಪಂಚಾಯತ್ ಗಂಗ್ರೋಲಿಯ ಪ್ರೇಮನಗರ ಗ್ರಾಮದಲ್ಲಿ, ಸಾಮಾನ್ಯ ರೈತ ದಿನೇಶ್ ಚಂದ್ ಸೈನಿ ಅವರ ಪುತ್ರಿ ಖುಷ್ಬು ಅವರನ್ನು ಸವಾಯಿ ಮಾಧೋಪುರದ ನಡೌಟಿ ತಹಸಿಲ್ನ ಕ್ಯಾಮ್ರಿ ಗ್ರಾಮದ ನಿವಾಸಿ ವಿಜೇಂದ್ರ ಸೈನಿ ಅವರೊಂದಿಗೆ ವಿವಾಹವಾಗಿತ್ತು. ವಧುವನ್ನು ಕರೆದುಕೊಂಡು ಹೋಗಲು ಅವರು ಹೆಲಿಕಾಪ್ಟರ್ ಮೂಲಕ ಬಂದಿದ್ದರು. ವರ ಹೆಲಿಕಾಪ್ಟರ್ನಿಂದ ಇಳಿದು ನೇರವಾಗಿ ವಧುವಿನ ಮನೆಗೆ ಬಂದರು. ಅಲ್ಲಿ ಮದುವೆಯ ವಿಧಿವಿಧಾನಗಳು ನಡೆದವು, ನಂತರ ವರನು ತನ್ನ ವಧುವನ್ನು ಹೆಲಿಕಾಪ್ಟರ್ನಲ್ಲಿ ಕೂರಿಸಿ ತನ್ನ ಮನೆಗೆ ಕರೆದೊಯ್ದನು.
ಹಸು-ಎಮ್ಮೆ ಮೇಯುವ ಹಳ್ಳಿಯಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್
ಕರೌಲಿಯ ಕ್ಯಾಮ್ರಿ ಗ್ರಾಮದ ನಿವಾಸಿ ವರನ ತಂದೆ ರಾಧೇಶ್ಯಾಮ್ ಸೈನಿ ಗುತ್ತಿಗೆದಾರರಾಗಿದ್ದಾರೆ. ಅವರು ಮಾತನಾಡುತ್ತ ನಾವು ನಮ್ಮ ಕುಟುಂಬದ ಪುಟ್ಟ ಮಗುವಿಗೆ ಪ್ಲಾಸ್ಟಿಕ್ ಹೆಲಿಕಾಪ್ಟರ್ ತೋರಿಸುತ್ತ ಊಟ ಮಾಡಿಸುತ್ತಿದ್ದೆ. ಆಗ ಗ್ರಾಮದ ವ್ಯಕ್ತಿಯೊಬ್ಬರು ಅವರ ಬಳಿ ಬಂದು ರಾಧೇಶ್ಯಾಮ್ ಮಗುವಿಗೆ ಪ್ಲ್ಯಾಸ್ಟಿಕ್ ಹೆಲಿಕಾಪ್ಟರ್ ತೋರಿಸಿಯೇ ಊಟ ಮಾಡಿಸುತ್ತಲೇ ಇರ್ತೀಯೋ ಅಥವ ಸೊಸೆಯನ್ನ ಕರೆತರಲು ರಿಯಲ್ ಹೆಲಿಕಾಪ್ಟರ್ ಕಳುಹಿಸುತ್ತೀಯೋ? ಎಂದು ಮೂದಲಿಸಿದರು. ಮತ್ತಿನ್ನೇನು, ರಾಧೇಶ್ಯಾಮ್ ತನ್ನ ಸೊಸೆಯನ್ನ ಹೆಲಿಕಾಪ್ಟರ್ನಲ್ಲೇ ಕರೆತರುವುದಾಗಿ ನಿರ್ಧರಿಸಿದ್ದಾರೆ. ಮಾಹಿತಿ ಪ್ರಕಾರ ವಧು ಖುಷ್ಬು ಅವರ ತಂದೆ ದಿನೇಶ್ ಸೈನಿ ಕಡು ಬಡವರು. ಆದರೆ ಮಗಳು ಹೆಲಿಕಾಪ್ಟರ್ನಲ್ಲಿ ಗಂಡನ ಮನೆಗೆ ತಲುಪಿದಾಗ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಜೀವನದಲ್ಲಿ ಇಂಥದ್ದೊಂದು ದಿನ ಬರುತ್ತದೆ ಎಂದು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಈ ಮದುವೆಯಿಂದಾಗಿ ಭರತ್ಪುರ ಮತ್ತು ಕರೌಲಿ ಊರುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ವರ 12ನೇ ತರಗತಿಯಲ್ಲಿ ಓದುತ್ತಿದ್ದು, ಬಟ್ಟೆ ಅಂಗಡಿಯೂ ಇದೆ.
12 ನೆಯ ತರಗತಿಯಲ್ಲಿ ಓದುತ್ತಿರುವ ವರ
ಈ ಬಗ್ಗೆ ಮಾತನಾಡಿದ ಭರತ್ಪುರ್ ಇನ್ಸ್ಪೆಕ್ಟರ್ ಸುಮೇರ್ ಸಿಂಗ್, “ಗ್ರಾಮದಲ್ಲಿ ಒಬ್ಬ ಯುವತಿಯ ಮದುವೆಯಾಗಿದೆ, ವರ ವಧುವನ್ನ ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಹೋಗಿದ್ದಾನೆ. ಭದ್ರತೆಗಾಗಿ ಹೆಲಿಕಾಪ್ಟರ್ ನ ಸುತ್ತಮುತ್ತ ನಾಲ್ಕೂ ಕಡೆ ಬ್ಯಾರಿಕೇಡ್ ಹಾಕಿದ್ದೆವು” ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅದೇ ಗ್ರಾಮದ ಲಕ್ಷಣ, “ನಮ್ಮ ಗ್ರಾಮದ ಮಗಳೊಬ್ಬಳು ಹೆಲಿಕಾಪ್ಟರ್ ಮೂಲಕ ಗಂಡನ ಮನೆಗೆ ಹೋಗಿದ್ದಾಳೆ. ಇಂದು ಹಳ್ಳಿಯಲ್ಲಿ ತುಂಬಾ ಖುಷಿಯ ವಾತಾವರಣವಿದೆ” ಎಂದರು. ಗ್ರಾಮಸ್ಥರೂ ಇಬ್ಬರನ್ನೂ ಪ್ರೀತಿಯಿಂದ ಬೀಳ್ಕೊಟ್ಟರು.
ರಾಧೇಶ್ಯಾಮ್ ಸೈನಿ ವೃತ್ತಿಯಲ್ಲಿ ರೈತರು
ವರನ ತಂದೆ ರಾಧೇಶ್ಯಾಮ್ ಸೈನಿ ಮಾತನಾಡುತ್ತ, ತಮಗೆ ಇಬ್ಬರು ಮಕ್ಕಳು, ಒಬ್ಬನು ಗಂಡುಮಗ ಮತ್ತೊಬ್ಬಳು ಹೆಣ್ಣುಮಗಳು. ಮಗಳ ಮದುವೆ ಮಾಡಿಕೊಟ್ಟಿದ್ದೇವೆ. ಹೆಲಿಕಾಪ್ಟರ್ ಮೂಲಕ ಕರೆತಂದು ಸೊಸೆಯನ್ನ ಮನೆ ತುಂಬಿಕೊಳ್ಳುತ್ತೀಯ? ಎಂದು ಗ್ರಾಮಸ್ಥರು ಲೇವಡಿ ಮಾಡಿದ್ದರು. ನಮ್ಮ ಗ್ರಾಮದ ರಸ್ತೆ ತೀರಾ ಹದಗೆಟ್ಟಿದೆ, 2 ತಿಂಗಳ ಹಿಂದೆಯೇ ಮಗನ ಮದುವೆ ನಿಶ್ಚಯವಾಗಿತ್ತು, ಆಗ ನನ್ನ ಪತ್ನಿಗೆ ಗ್ರಾಮಸ್ಥರು ರಸ್ತೆ ಇಷ್ಟು ಹದಗೆಟ್ಟಿದೆ ಅಥವ ರಸ್ತೆಯೇ ಇಲ್ಲ ಅನ್ನೋ ಪರಿಸ್ಥಿತಿಯಿದೆ ಎಂದಿದ್ದರು” ಎಂದರು.
ಯಾವ ಹಳ್ಳಿಯಲ್ಲಿ ರಸ್ತೆಯೇ ಇಲ್ಲಾಂದ್ರೆ ಸೊಸೆಯನ್ನ ಹೆಲಿಕಾಪ್ಟರ್ ನಿಂದ ಕರೆತನ್ನಿ? ಅಂತ ಗ್ರಾಮದ ಮಹಿಳೆಯರು ಲೇವಡಿ ಮಾಡಿದ್ದರು. ಗ್ರಾಮಸ್ಥರ ಈ ಮಾತುಗಳನ್ನ ಕೇಳಿ ಎಷ್ಟೇ ಖರ್ಚಾದರೂ ಪರವಾಗಿಲ್ಲ ತಮ್ಮ ಸೊಸೆಯನ್ನ ಹೆಲಿಕಾಪ್ಟರ್ ಮೂಲಕವೇ ಕರೆತರುತ್ತೇವೆ ಎಂದು ನಿರ್ಧರಿಸಿದೆವು. ನಾವು 7 ಲಕ್ಷ ಖರ್ಚು ಮಾಡಿ ಸೊಸೆಯನ್ನ ಹೆಲಿಕಾಪ್ಟರ್ ಮೂಲಕ ಕರೆತಂದಿದ್ದೇವೆ ಎಂದು ರಾಧೇಶ್ಯಾಮ್ ತಿಳಿಸಿದ್ದಾರೆ.