ನವದೆಹಲಿ:
ಈ ಮೂಲಕ ಅವರು ಜವಾಹರಲಾಲ್ ನೆಹರು ಮತ್ತು ಮನಮೋಹನ್ ಸಿಂಗ್ ಅವರತ್ತಲೇ ಬೆರಳು ತೋರಿಸಿದರು. ಈ ಹೇಳಿಕೆಯೊಂದಿಗೆ ರಾಹುಲ್ ಗಾಂಧಿ ಅವರು ಮನಮೋಹನ್ ಸಿಂಗ್ ಅವರನ್ನು ಒಂದು ರೀತಿಯಲ್ಲಿ ದುರ್ಬಲ ಪ್ರಧಾನಿ ಎಂದು ಕರೆದರು. ಅದೇ ಸಮಯದಲ್ಲಿ, 1962 ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ನೆಹರು ಸೋತರೂ, ನೆಹರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿಲ್ಲ ಮತ್ತು 1964 ರಲ್ಲಿ ಅವರು ಸಾಯುವವರೆಗೂ ಪ್ರಧಾನಿ ಹುದ್ದೆಯಲ್ಲಿಯೇ ಇದ್ದರು. ಇದಲ್ಲದೇ ಹಿಂದುತ್ವ ಮತ್ತು ಹಿಂದುತ್ವದ ವಿಚಾರವಾಗಿಯೂ ರಾಹುಲ್ ಮೋದಿ ಹಾಗೂ ಸಂಘವನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರಧಾನಿ ಮೋದಿಯವರ ತಪ್ಪು ನಿರ್ಧಾರಗಳ ಮುಂದೆ ತಲೆಬಾಗುವವರು ಹಿಂದುತ್ವವನ್ನು ಅನುಸರಿಸುತ್ತಾರೆ ಮತ್ತು ಸವಾಲುಗಳನ್ನು ಎದುರಿಸುವವರು ನಿಜವಾದ ಹಿಂದೂಗಳು ಎಂದು ಹೇಳಿದರು.
ನಿಮಗೆಲ್ಲಾ ಗೊತ್ತಿರುವಂತೆ ಇದಕ್ಕೂ ಮುನ್ನವೂ ರಾಹುಲ್ ಗಾಂಧಿ ತಮ್ಮ ವಿಚಿತ್ರ ಹೇಳಿಕೆಗಳಿಂದ ಸುದ್ದಿಯಾಗಿದ್ದರು. ರಫೇಲ್ ಫೈಟರ್ ಜೆಟ್‌ಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡ ಅವರು ಪ್ರತಿ ಸಾರ್ವಜನಿಕ ಸಭೆಯಲ್ಲೂ ಈ ವಿಮಾನದ ಬೇರೆ ಬೇರೆ ಬೆಲೆಗಳನ್ನು ಹೇಳುತ್ತಿದ್ದರು. ಇದಲ್ಲದೇ ಮೋದಿ ವಿರುದ್ಧ ಹೇಳಿಕೆ ನೀಡಿ ಸಂಸತ್ತಿನಲ್ಲಿಯೇ ಹೋಗಿ ಅಪ್ಪಿಕೊಂಡರು. ಇದಾದ ಬಳಿಕ ರಾಹುಲ್ ಕಣ್ಣು ಹೊಡೆಯುತ್ತಿರುವ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು. ಈಗ ಅವರು ಮನಮೋಹನ್ ಅವರನ್ನು ದುರ್ಬಲರು ಮತ್ತು ಜವಾಹರಲಾಲ್ ನೆಹರು ಅವರು ಚೀನಾದಿಂದ ಸೋತರೂ ಅಧಿಕಾರ ಬಿಟ್ಟು ಕೆಳಗಿಳಿಯಲಿಲ್ಲ ಎಂದು ಸೂಚಿಸುವಂತಹ ಹೇಳಿಕೆಯನ್ನ ನೀಡಿದ್ದಾರೆ.
ಚೀನಾಗೆ ಭಾರತದ ಭೂಮಿ ಕೊಟ್ಟಿದ್ದೆ ಆರೆಸ್ಸೆಸ್ ಎಂದಿದ್ದ ರಾಹುಲ್ ಗಾಂಧಿ
ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿರುವ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರ್‌ಎಸ್‌ಎಸ್ ಮತ್ತು ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು. ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಮತ್ತು ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್ ಮುಖ್ಯಸ್ಥರು ಮೌನವಾಗಿ ನೋಡುತ್ತಿದ್ದರು ಎಂದು ಅವರು ಹೇಳಿದ್ದರು. ಇಬ್ಬರ ಮೌನ ಒಪ್ಪಿಗೆಯೊಂದಿಗೆ, ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ, ಮತ್ತು ಈ ವಾಸ್ತವವನ್ನು ತಿಳಿದುಕೊಂಡರೆ, ಇದು ಗೊತ್ತಿದ್ದರೂ ಅದನ್ನ ಒಪ್ಪಿಕೊಳ್ಳುವ ಧೈರ್ಯ ಆರ್‌ಎಸ್‌ಎಸ್ ಮುಖ್ಯಸ್ಥರಲ್ಲಿಲ್ಲ ಎಂದಿದ್ದರು.
ಆರೆಸ್ಸೆಸ್ ಪ್ರಮುಖರು ವಿಜಯಶಮಿಯ ಸಂದರ್ಭದಲ್ಲಿ ನಾಗಪುರದಲ್ಲಿ ನೀಡಿದ ಭಾಷಣದ ಸಂದರ್ಭದ ಬಗ್ಗೆ ಸುದ್ದಿ ಸಂಸ್ಥೆಯೊಂದು ಮಾಡಿದ ಟ್ವೀಟ್ ಉಲ್ಲೇಖಿಸಿ ಭಾರತದ ಭೂಮಿಯನ್ನ ಚೀನಾ ವಶಪಡಿಸಿಕೊಂಡ ಅಸಲಿ ಸತ್ಯ ಏನು ಎಂಬುದು ಆರೆಸ್ಸೆಸ್ ಪ್ರಮುಖ್ ಮೋಹನ್ ಭಾಗವತ್ ಅವರಿಗೂ ಗೊತ್ತಿದೆ. ಆದರೆ ಈ ಅಸಲಿ ಸತ್ಯವನ್ನ ಒಪ್ಪಿಕೊಳ್ಳಲು ಇವರಲ್ಲಿ ತಾಕತ್ತಿಲ್ಲ. ಸತ್ಯವೆಂದರೆ ಚೀನಾವು ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಮತ್ತು ಭಾರತ ಸರ್ಕಾರ ಮತ್ತು ಆರ್‌ಎಸ್‌ಎಸ್ ಅದನ್ನು ಒಪ್ಪಿಕೊಂಡು ಅದನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡಿವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಯಾರ‌್ಯಾರು ಎಣ್ಣೆ ಹೊಡೀತೀರ ಕೈ ಎತ್ತಿ ಎಂದಿದ್ದ ರಾಹುಲ್ ಗಾಂಧಿ
“ನಮ್ಮ ಪಕ್ಷದಲ್ಲಿ ಮದ್ಯಪಾನ ಮಾಡುವವರು ಯಾರಿದ್ದೀರಿ?” ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆಯಲ್ಲಿ ಸಂಸದ ರಾಹುಲ್ ಗಾಂಧಿ ಕೇಳಿದ ಈ ತೀಕ್ಷ್ಣ ಪ್ರಶ್ನೆಯು ಹಲವರ ಮುಖವನ್ನು ಕೆಂಪಾಗಿಸಿತು ಎಂದು ತಿಳಿದು ಬಂದಿದೆ.
ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ರಾಜ್ಯಾಧ್ಯಕ್ಷರ ಸಭೆ ನಡೆಸಲಾಗಿತ್ತು. ಮದ್ಯಪಾನ ವ್ಯಸನದಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಖಾದಿ ಬಳಕೆಯಂತಹ ಹಳೆಯ ನಿಯಮಗಳು ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿವೆ ಎಂದು ಪ್ರಶ್ನಿಸಲಾಗಿತ್ತು.
“ಈ ಸಭೆಗೆ ಹಾಜರಾದವರಲ್ಲಿ ಯಾರೆಲ್ಲ ಕುಡಿಯುತ್ತೀರಾ” ಎಂದು ಸಂಸದ ರಾಹುಲ್ ಗಾಂಧಿ ಕೇಳಿದ ನೇರ ಪ್ರಶ್ನೆ ನಾಯಕರ ಮುಖವನ್ನು ಕೆಂಪಾಗಿಸಿತ್ತು. ಕಳೆದ 2007ರಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಲು ಕರೆದ ಕಾರ್ಯಕರ್ತರ ಸಭೆಯಲ್ಲೂ ರಾಹುಲ್ ಗಾಂಧಿ ಇದೇ ರೀತಿಯಾದ ವಿಷಯವನ್ನು ಪ್ರಸ್ತಾಪಿಸಿದ್ದರು.
“ರಾಹುಲ್ ಗಾಂಧಿಗೆ ಯಾವ ಲೀಡರ್‌ಶಿಪ್ ಕ್ವಾಲಿಟಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ” ಎಂದು ಹೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕ
ಅಸ್ಸಾಂನ ಕಾಂಗ್ರೆಸ್ ಶಾಸಕರೊಬ್ಬರು ಜೂನ್ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಹುಲ್ ಗಾಂಧಿಗೆ ನಾಯಕತ್ವ ನಿಭಾಯಿಸುವ ಸಾಮರ್ಥ್ಯ ಇಲ್ಲ ಮತ್ತು ಪಕ್ಷದಲ್ಲಿ ವಯಸ್ಸಾದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ನಾಲ್ಕು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದ ಜೋರ್ತ್ ಜಿಲ್ಲೆ ಮರೈಣಿ ಕ್ಷೇತ್ರದ ರುಪ್ ಜ್ಯೋತಿ ಕುರ್ಮಿ ಅವರು ವಿಧಾನಸಭೆಯ ಅಧ್ಯಕ್ಷರಾದ ಬಿಶ್ವಜಿತ್ ಡೈಮರಿ ಅವರಿಗೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ವಿರುದ್ಧವೇ ಕೆಂಡಕಾರುತ್ತಿರುವ ಕಾಂಗ್ರೆಸ್ ನಾಯಕರು
ಮನೀಶ್ ತಿವಾರಿ ತಮ್ಮ ಟ್ವೀಟ್‌ನಲ್ಲಿ, “ಮೊದಲು ಅಸ್ಸಾಂ, ನಂತರ ಪಂಜಾಬ್ ಮತ್ತು ಈಗ ಉತ್ತರಾಖಂಡ…” ಎಂದು ಬರೆದಿದ್ದರು. ಮನೀಶ್ ತಿವಾರಿ ಅವರು ತಮ್ಮ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಪಂಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅವರು ಪಕ್ಷದ ಹೈಕಮಾಂಡ್ ಮೇಲೆ ಬಹಿರಂಗವಾಗೇ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು.
ಈ ಜನ್ಮದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲ್ಲ ಎಂದಿದ್ದ ಗುಲಾಂ ನಬಿ ಆಜಾದ್
ಇತ್ತೀಚೆಗಷ್ಟೇ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಕುರಿತಾಗಿ ನಿರಾಶಾದಾಯಕ ಹೇಳಿಕೆ ನೀಡಿದ್ದರು. “ಈಗಿನ ಪರಿಸ್ಥಿತಿ ಮುಂದುವರಿದರೆ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳಿದ್ದರು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅವರು ಹೀಗೆ ಹೇಳಿದ್ದರು.
ಅವರು ಮಾತನಾಡುತ್ತ, “ನಾನು ಜನರನ್ನು ಮೆಚ್ಚಿಸಲು ಮಾತನಾಡುವುದಿಲ್ಲ. ಅದು ನಮ್ಮ ಕೈಯಲ್ಲಿಲ್ಲ. ನಾನು ನಿಮಗೆ ಸುಳ್ಳು ಭರವಸೆಗಳನ್ನು ನೀಡಿ 370 ನೇ ವಿಧಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಸರ್ಕಾರದಿಂದ ಮಾತ್ರ 370 ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯ. ಸರ್ಕಾರ ರಚಿಸಲು 300 ಸಂಸದರ ಅಗತ್ಯವಿದೆ. ನಮ್ಮ ಬಳಿ ಸರ್ಕಾರ ರಚಿಸಲು 300 ಸಂಸದರು ಗೆದ್ದು ಬರೋದಾದರೂ ಯಾವಾಗ? ಆದ್ದರಿಂದ, 2024 ರಲ್ಲಿ ನಾವು 300 ಸ್ಥಾನಗಳಲ್ಲಿ ಗೆದ್ದು ಆರ್ಟಿಕಲ್ 370 ಪುನಃಸ್ಥಾಪಿಸಲು ನಾನು ಭರವಸೆ ನೀಡುವುದಿಲ್ಲ. ಅಲ್ಲಾಹ್‌ನ ದಯೆಯಿಂದ 300 ಸೀಟು ಬಂದು ಅವಕಾಶ ನೀಡಲಿ ಆದರೆ ನಾನು ಯಾವುದೇ ಸುಳ್ಳು ಭರವಸೆ ನೀಡುವುದಿಲ್ಲ. ಅದಕ್ಕಾಗಿಯೇ ನಾನು 370 ನೇ ವಿಧಿಯ ಬಗ್ಗೆ ಮಾತನಾಡುವುದಿಲ್ಲ” ಎಂದಿದ್ದರು.