ಗ್ರ್ಯಾಂಡ್‌ಮಾ (ಅಜ್ಜಿ) ಭೇಟಿಯಾಗಲು ಈ ದೇಶಕ್ಕೆ ಹಾರಿದ ರಾಹುಲ್ ಗಾಂಧಿ: ಓಮಿಕ್ರಾನ್ ಇರಲಿ ಪಂಚರಾಜ್ಯ ಚುನಾವಣೆಗಳೇ ಇರಲಿ ಅವೆಲ್ಲಾ ಸಂಬಂಧವಿಲ್ಲ, ನ್ಯೂ ಇಯರ್ ಈಸ್ ಮೋಸ್ಟ್ ಇಂಪಾರ್ಟೆಂಟ್

in Kannada News/News 289 views

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಇಟಲಿಗೆ ತೆರಳಿ ತಮ್ಮ ಅಜ್ಜಿಯ ಮನೆಯಲ್ಲಿ ಹೊಸ ವರ್ಷ ಆಚರಿಸಲಿದ್ದಾರೆ. ಕಾಂಗ್ರೆಸ್ ಪ್ರಕಾರ ಇದು ಅವರ ವೈಯಕ್ತಿಕ ಭೇಟಿ. ಅನಗತ್ಯ ವದಂತಿಗಳನ್ನು ಹಬ್ಬಿಸಬೇಡಿ ಎಂದು ಬಿಜೆಪಿ ಮತ್ತು ಮಾಧ್ಯಮಗಳಿಗೆ ಕಾಂಗ್ರೆಸ್ ಕೇಳಿಕೊಂಡಿದೆ, ಆದರೆ ಬಿಜೆಪಿ ಈ ಬಗ್ಗೆ ಪ್ರಶ್ನೆಯೆತ್ತಿದೆ ಮತ್ತು ಯೂಸರ್ ಗಳೂ ಸೋಶಿಯಲ್ ಮೀಡಿಯಾಗಳಲ್ಲಿ ರಾಹುಲ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈ ಹಿಂದೆಯೂ ರಾಹುಲ್ ಗಾಂಧಿ ವಿದೇಶ ಪ್ರವಾಸದ ಕಾರಣ ಚರ್ಚೆಯಲ್ಲಿದ್ದರು. ಈ ಬಾರಿ, ಓಮಿಕ್ರಾನ್ ರೂಪಾಂತರದ ಭೀತಿಯ ನಡುವೆ ಗ್ರ್ಯಾಂಡ್‌ಮಾ (ಅಜ್ಜಿ) ಮನೆಗೆ ಹೋಗಿದ್ದರಿಂದ ರಾಹುಲ್ ಗಾಂಧಿಯನ್ನ ದೇಶದ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನ 137ನೇ ಸಂಸ್ಥಾಪನಾ ದಿನದ ನಂತರ ಈ ಬಾರಿ ರಾಹುಲ್‌ ವಿದೇಶ ಪ್ರವಾಸ ಕೈಗೊಂಡಿದ್ದಾರೆ. 2020 ರಲ್ಲಿ, ಅವರು ಸಂಸ್ಥಾಪನಾ ದಿನದ ಸಂದರ್ಭದಲ್ಲಿ ತಾಯಿ ಸೋನಿಯಾ ಗಾಂಧಿಯವರೊಂದಿಗೆ ವಿದೇಶದಲ್ಲಿದ್ದರು.

Advertisement

ಇದನ್ನು ಕಾಂಟ್ರವರ್ಸಿ ಮಾಡಬೇಡಿ ಎಂದು ಕಾಂಗ್ರೆಸ್ ಮನವಿ ಮಾಡಿರಬಹುದು, ಆದರೆ ಈ ಸಮಯದಲ್ಲಿ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸವನ್ನು ಬಿಜೆಪಿ ಪ್ರಶ್ನಿಸಿದೆ. ಬಿಜೆಪಿಯ ಮಾಜಿ ಸಂಸದ ಗಯಾ ಹರಿ ಮಾಂಝಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ “ರಾಹುಲ್ ಗಾಂಧಿ ಕ್ರಿಶ್ಚಿಯನ್ ಹೊಸ ವರ್ಷವನ್ನು ಆಚರಿಸಲು ಇಟಲಿಯಲ್ಲಿರುವ ತನ್ನ ತಾಯಿಯ, ಅಜ್ಜಿಯ ಮನೆಗೆ ತೆರಳಿದ್ದಾರೆ. ಇಂಥಹವರು ಆ ಕರ್ಮಯೋಗಿ ನರೇಂದ್ರ ಮೋದಿ ಜಿ ಯಂಥವರ ಮೇಲೇ ಅದೂ ಪ್ರತಿ ಹೋಳಿ-ದೀಪಾವಳಿಯಂದು ಸೈನಿಕರ ಜೊತೆ ಆಚರಿಸುವವರ ಮೇಲೆ ಪ್ರಶ್ನೆಗಳನ್ನು ಎತ್ತುತ್ತಾರೆ” ಎಂದಿದ್ದಾರೆ‌. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪ್ರತಿ ಹೋಳಿ ಅಥವಾ ದೀಪಾವಳಿಯಂದು ಗಡಿಯಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ರಜಾದಿನವನ್ನು ಆಚರಿಸಲು ಪ್ರಾರಂಭಿಸಿದರು‌. ಕಾಶ್ಮೀರಿಗಳೊಂದಿಗೆ ಹಬ್ಬವನ್ನು ಆಚರಿಸಲು ಅವರು ಮೊದಲ ಬಾರಿಗೆ ಶ್ರೀನಗರಕ್ಕೆ ಹೋಗಿದ್ದರು. ಇದರ ಆಧಾರದ ಮೇಲೆ ಮಾಂಝಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಲ್ಲಾ ಸೋಶಿಯಲ್ ಮೀಡಿಯಾ ಯೂಸರ್ ಗಳೂ ರಾಹುಲ್ ಗಾಂಧಿ ಅವರ ಅಜ್ಜಿಯ ಮನೆಗೆ ಭೇಟಿಯನ್ನು ಆನಂದಿಸಿದ್ದಾರೆ. ಅದನ್ನ ನೀವು ಇಲ್ಲಿ ಓದಬಹುದು.

ನೆನ್ನೆಯಷ್ಟೇ ನರೇಂದ್ರ ಮೋದಿಯವರನ್ನು ಟಾರ್ಗೇಟ್ ಮಾಡಲು ಹೋಗಿ ಮಾಜಿ ಪ್ರಧಾನಿ ನೆಹರು ಹಾಗು ಮನಮೋಹನ್ ಸಿಂಗರನ್ನೇ ಪ್ರಶ್ನಿಸಿದ್ದ ರಾಹುಲ್ ಗಾಂಧಿ

ಟಾರ್ಗೇಟ್ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದರು, ಆದರೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮನಮೋಹನ್ ಸಿಂಗ್ ಅವರ ಮಾನಮರ್ಯದೆಯನ್ನೇ ಹರಾಜು ಹಾಕಿದ್ದಾರೆ. ಅದು ಕಾಂಗ್ರೆಸ್ ನ ಮೂರು ದಿನಗಳ ತರಬೇತಿ ಶಿಬಿರದ ಸಮಾರೋಪ ಸಂದರ್ಭವಾಗಿತ್ತು. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಈ ತರಬೇತಿ ಶಿಬಿರ ನಡೆಯುತ್ತಿತ್ತು. ಇದರ ಕೊನೆಯಲ್ಲಿ ರಾಹುಲ್ ಗಾಂಧಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್, ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಮನಮೋಹನ್ ಸಿಂಗ್ ಅಂತಹ ಸ್ಥಿತಿಯಲ್ಲಿದ್ದರೆ, ಅವರು ರಾಜೀನಾಮೆ ನೀಡುತ್ತಿದ್ದರು ಎಂದು ಹೇಳಿದರು. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೆ ಮತ್ತು ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು ಎಂದು ರಾಹುಲ್ ಹೇಳಿದರು.

ಈ ಮೂಲಕ ಅವರು ಜವಾಹರಲಾಲ್ ನೆಹರು ಮತ್ತು ಮನಮೋಹನ್ ಸಿಂಗ್ ಅವರತ್ತಲೇ ಬೆರಳು ತೋರಿಸಿದರು. ಈ ಹೇಳಿಕೆಯೊಂದಿಗೆ ರಾಹುಲ್ ಗಾಂಧಿ ಅವರು ಮನಮೋಹನ್ ಸಿಂಗ್ ಅವರನ್ನು ಒಂದು ರೀತಿಯಲ್ಲಿ ದುರ್ಬಲ ಪ್ರಧಾನಿ ಎಂದು ಕರೆದರು. ಅದೇ ಸಮಯದಲ್ಲಿ, 1962 ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ನೆಹರು ಸೋತರೂ, ನೆಹರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿಲ್ಲ ಮತ್ತು 1964 ರಲ್ಲಿ ಅವರು ಸಾಯುವವರೆಗೂ ಪ್ರಧಾನಿ ಹುದ್ದೆಯಲ್ಲಿಯೇ ಇದ್ದರು. ಇದಲ್ಲದೇ ಹಿಂದುತ್ವ ಮತ್ತು ಹಿಂದುತ್ವದ ವಿಚಾರವಾಗಿಯೂ ರಾಹುಲ್ ಮೋದಿ ಹಾಗೂ ಸಂಘವನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರಧಾನಿ ಮೋದಿಯವರ ತಪ್ಪು ನಿರ್ಧಾರಗಳ ಮುಂದೆ ತಲೆಬಾಗುವವರು ಹಿಂದುತ್ವವನ್ನು ಅನುಸರಿಸುತ್ತಾರೆ ಮತ್ತು ಸವಾಲುಗಳನ್ನು ಎದುರಿಸುವವರು ನಿಜವಾದ ಹಿಂದೂಗಳು ಎಂದು ಹೇಳಿದರು.

ನಿಮಗೆಲ್ಲಾ ಗೊತ್ತಿರುವಂತೆ ಇದಕ್ಕೂ ಮುನ್ನವೂ ರಾಹುಲ್ ಗಾಂಧಿ ತಮ್ಮ ವಿಚಿತ್ರ ಹೇಳಿಕೆಗಳಿಂದ ಸುದ್ದಿಯಾಗಿದ್ದರು. ರಫೇಲ್ ಫೈಟರ್ ಜೆಟ್‌ಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡ ಅವರು ಪ್ರತಿ ಸಾರ್ವಜನಿಕ ಸಭೆಯಲ್ಲೂ ಈ ವಿಮಾನದ ಬೇರೆ ಬೇರೆ ಬೆಲೆಗಳನ್ನು ಹೇಳುತ್ತಿದ್ದರು. ಇದಲ್ಲದೇ ಮೋದಿ ವಿರುದ್ಧ ಹೇಳಿಕೆ ನೀಡಿ ಸಂಸತ್ತಿನಲ್ಲಿಯೇ ಹೋಗಿ ಅಪ್ಪಿಕೊಂಡರು. ಇದಾದ ಬಳಿಕ ರಾಹುಲ್ ಕಣ್ಣು ಹೊಡೆಯುತ್ತಿರುವ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು. ಈಗ ಅವರು ಮನಮೋಹನ್ ಅವರನ್ನು ದುರ್ಬಲರು ಮತ್ತು ಜವಾಹರಲಾಲ್ ನೆಹರು ಅವರು ಚೀನಾದಿಂದ ಸೋತರೂ ಅಧಿಕಾರ ಬಿಟ್ಟು ಕೆಳಗಿಳಿಯಲಿಲ್ಲ ಎಂದು ಸೂಚಿಸುವಂತಹ ಹೇಳಿಕೆಯನ್ನ ನೀಡಿದ್ದಾರೆ.

Advertisement
Share this on...