ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರದಲ್ಲಿರುವ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಒಂದಲ್ಲ ಒಂದು ದಿನ ಕೊರಳ ಪಟ್ಟಿ ಹಿಡಿದು ಜೈಲಿಗೆ ಹಾಕೇ ತೋರಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಪ್ರತಿಪಕ್ಷ ನಾಯಕರೊಂದಿಗೆ ಗಾಂಧಿ ಪ್ರತಿಮೆಯಿಂದ ಸಂಸತ್ತಿನ ಸಂಕೀರ್ಣದ ವಿಜಯ್ ಚೌಕ್‌ವರೆಗೆ ಮೆರವಣಿಗೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಈ ವಿಷಯ ತಿಳಿಸಿದರು.
ಹಲವಾರು ವಿರೋಧ ಪಕ್ಷದ ನಾಯಕರೊಂದಿಗೆ ಮೆರವಣಿಗೆ ನಡೆಸಿದ ನಂತರ, ವಿಜಯ್ ಚೌಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಮತ್ತೊಮ್ಮೆ ವಿರೋಧ ಪಕ್ಷಗಳು ಅಜಯ್ ಮಿಶ್ರಾ ವಿಷಯವನ್ನು ಎತ್ತುತ್ತಿವೆ. ಸಚಿವರ ಮಗ ರೈತರನ್ನು ಕೊಂ ದಿ ದ್ದಾನೆ, ಜೀಪಿನಿಂದ ತುಳಿಸಿದಿದ್ದಾನೆ ಎಂದು ಪದೇ ಪದೇ ಹೇಳುತ್ತಿದ್ದೇವೆ. ಇದೊಂದು ಪಿತೂರಿ ಎಂಬ ವರದಿಗಳು ಬಂದಿವೆ. ಪ್ರಧಾನಿಯವರು ತಮ್ಮ ಈ ಸಚಿವರ ಬಗ್ಗೆ ಏನನ್ನೂ ಹೇಳುವುದಿಲ್ಲ” ಎಂದರು.
#WATCH | Congress leader Rahul Gandhi responds when asked about his today's tweet on 'lynching'. pic.twitter.com/UUxi3bpSOa
— ANI (@ANI) December 21, 2021
ಅವರು ಮುಂದೆ ಮಾತನಾಡುತ್ತ, ‘‘ಒಂದೆಡೆ ಪ್ರಧಾನಿ ರೈತರ ಕ್ಷಮೆ ಕೇಳುತ್ತಾರೆ. ಮತ್ತೊಂದೆಡೆ, ಅವರು ತಮ್ಮ ಮಂತ್ರಿ ಮಂಡಳಿಯಿಂದ ರೈತರ ಕೊ ಲೆ ಗಡುಕರನ್ನ ತೆಗೆದುಹಾಕುವುದಿಲ್ಲ. ರೈತರು ಮತ್ತು ಸಾಮಾನ್ಯ ಜನರ ವಿರುದ್ಧ ಮೋದಿ ಸರ್ಕಾರ ಯಾವ ರೀತಿಯಾಗಿ ದೌರ್ಜನ್ಯ ನಡೆಸುತ್ತಿದೆಯೋ ಅದನ್ನ ನಾವು ಒಪ್ಪುವುದಿಲ್ಲ” ಎಂದರು.
ಬಳಿಕ ಅವರು ಟ್ವೀಟ್ ಮಾಡಿ, ‘‘ಲಖಿಂಪುರ ಘಟನೆಯಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ನಿಜ ಹೇಳಬೇಕೆಂದರೆ ಆ ಹಂತಕನ ತಲೆಯ ಮೇಲೆ ಮೋದಿ ಸರ್ಕಾರದ ಆಶೀರ್ವಾದವಿದೆ, ಇಲ್ಲವಾದರೆ ಇಷ್ಟೊತ್ತಿಗಾಗಲೇ ಆತನ ಸಚಿವ ಸ್ಥಾನದಿಂದ ವಜಾ ಆಗುತ್ತಿತ್ತು. ಆದರೆ ನೆನಪಿಡಿ – ನಮ್ಮಿಂದ ನ್ಯಾಯ ಸಿಗುತ್ತದೆ!” ಎಂದು ಬರೆದಿದ್ದಾರೆ. ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಇಡೀ ಪ್ರತಿಪಕ್ಷವು ಒಟ್ಟುಗೂಡಿದೆ ಮತ್ತು ಸಂಸತ್ತಿನ ಅಧಿವೇಶನ ಮುಗಿಯಲು ಕೇವಲ 2-3 ದಿನಗಳು ಉಳಿದಿರುವ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ.
2014 ಕ್ಕಿಂತ ಮುಂಚೆ ‘ಲಿಂಚಿಂಗ್’ ಅನ್ನೊ ಶಬ್ದವೇ ಕೇಳುತ್ತಿರಲಿಲ್ಲ: ರಾಹುಲ್ ಗಾಂಧಿ
ಪಂಜಾಬ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ಇತ್ತೀಚೆಗೆ ನಡೆದ ಗುಂಪು ಹ ತ್ಯೆ ಯ (ಲಿಂಚಿಂಗ್) ಘಟನೆಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ನರೇಂದ್ರ ಮೋದಿ ಸರ್ಕಾರ ರಚನೆಗೂ ಮುನ್ನ ‘ಲಿಂಚಿಂಗ್’ ಎಂಬ ಪದವನ್ನು ಕೇಳುತ್ತಲೇ ಇರಲಿಲ್ಲ. 2014 ರಲ್ಲಿ ಆ ಪದವನ್ನ ರಚಿಸಲಾಯಿತು ಎಂದು ಆರೋಪಿಸಿದ್ದಾರೆ.
ಅವರು ‘ಥ್ಯಾಂಕ್ಯೂ ಮೋದಿ ಜೀ’ ಎಂಬ ಹ್ಯಾಶ್‌ಟ್ಯಾಗ್ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿ ಟ್ವೀಟ್ ಮಾಡುತ್ತ, “2014 ಕ್ಕೂ ಮೊದಲು, ‘ಲಿಂಚಿಂಗ್’ ಎಂಬ ಪದವು ಸಹ ಕೇಳಿಸಲಿಲ್ಲ” ಎಂದಿದ್ದಾರೆ. ‘ನಿಶಾನ್ ಸಾಹಿಬ್’ಗೆ ಅಗೌರವ ತೋರಿದ ಆರೋಪದ ಮೇಲೆ ಗುಂಪೊಂದು ಅಪರಿಚಿತ ವ್ಯಕ್ತಿಯನ್ನು ಹ ತ್ಯೆ ಮಾಡಿತ್ತು (ಶನಿವಾರ ಮುಂಜಾನೆ, ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ಆಪಾದನೆಯ ಮೇಲೆ ಗುಂಪೊಂದು ವ್ಯಕ್ತಿಯನ್ನು ಹೊ ಡೆ ದು ಕೊಂ ದಿತ್ತು)”
ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬಾಘೇಲ್, ಯುಪಿ ಚುನಾವಣೆ ಮತ್ತು ಸಂಪುಟ ಪುನಾರಚನೆ ಕುರಿತು ಚರ್ಚೆ
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಮಂಗಳವಾರ ಮಾಜಿ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿಯಾದರು, ಈ ಸಂದರ್ಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಛತ್ತೀಸ್‌ಗಢ ಸರ್ಕಾರದಲ್ಲಿ ಸಂಪುಟ ಪುನಾರಚನೆಯ ಸಾಧ್ಯತೆಯ ಕುರಿತು ಚರ್ಚೆಗಳು ನಡೆದವು. ಮೂಲಗಳು ಈ ಮಾಹಿತಿ ನೀಡಿವೆ. ರಾಹುಲ್ ಗಾಂಧಿ ಅವರೊಂದಿಗಿನ ಅರ್ಧ ಗಂಟೆಯ ಸಭೆಯಲ್ಲಿ ಬಘೇಲ್ ಅವರು ತಮ್ಮ ಸಂಪುಟ ಪುನಾರಚನೆಯ ಸಾಧ್ಯತೆಯ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
‘ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ. ಬಾಘೇಲ್ ಉತ್ತರ ಪ್ರದೇಶ ಚುನಾವಣೆಯ ಹಿರಿಯ ಕಾಂಗ್ರೆಸ್ ವೀಕ್ಷಕರಾಗಿದ್ದಾರೆ.