“ನನಗೆ ಮುಸ್ಲಿಮರ ಜಾಲಿ ಟೋಪಿ ಅಂದ್ರೆ ಇಷ್ಟ ಈ ರುದ್ರಾಕ್ಷಿಯೆಲ್ಲಾ ಹಾಕಬೇಡಿ, ಇವೆಲ್ಲಾ ನಮಗೆ ಇಷ್ಟ ಇಲ್ಲ”: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಂಬಿತ್ ಪಾತ್ರಾ

in Kannada News/News 299 views

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಉತ್ತರಾಖಂಡ ಘಟಕವು ರಾಹುಲ್ ಗಾಂಧಿ ರುದ್ರಾಕ್ಷಿಯನ್ನು (ಹಿಂದೂಗಳು ಬಳಸುವ ಪವಿತ್ರ ರುದ್ರಾಕ್ಷಿ) ಧರಿಸಲು ನಿರಾಕರಿಸುತ್ತಿರುವ ವೀಡಿಯೊವನ್ನು ಟ್ವೀಟ್ ಮಾಡಿದೆ. ಬಿಜೆಪಿ ನಾಯಕರಾದ ಅಮಿತ್ ಮಾಳವೀಯ ಮತ್ತು ಸಂಬಿತ್ ಪಾತ್ರ ಸೇರಿದಂತೆ ಹಲವು ನಾಯಕರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಅಮಿತ್ ಮಾಳವಿಯಾ ಟ್ವೀಟ್ ಮಾಡಿ, “ಚುನಾವಣೆಗೂ ಮೊದಲು ದೇವಸ್ಥಾನಗಳಿಗೆ ಹೋಗುವ ಅದೇ ವ್ಯಕ್ತಿ (ರಾಹುಲ್ ಗಾಂಧಿ). ಒಬ್ಬ ಜನೇಧಾರಿ ಹಿಂದೂ ಎಂದು ಹೇಳಿಕೊಳ್ಳುತ್ತಾರೆ ಮತ್ತು ಹಿಂದೂ ಧರ್ಮದ ಭಾಷಣ ಮಾಡುತ್ತಾರೆ” ಎಂದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಹೀಗೇ ಮಾಡುತ್ತದೆ. 2022 ರ ಫೆಬ್ರವರಿಯಲ್ಲಿ ನಡೆಯಲಿರುವ ಉತ್ತರಾಖಂಡ ಚುನಾವಣೆಗೆ ಮುಂಚಿತವಾಗಿ ಮೊದಲು, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರ ಚುನಾವಣೆ ನಡೆಯಲಿವೆ. ಈಗಲೂ ಕಾಂಗ್ರಸ್ ತನ್ನ ಮನಸ್ಥಿತಿಯನ್ನ ತೋರಿಸುತ್ತಿದೆ ಎಂದರು.

Advertisement

“ಅವರಿಗೆ ಜಾಲಿದಾರ್ (ಮುಸ್ಲಿಂ ಟೋಪಿ) ಟೋಪಿ ಮೇಲೆ ಪ್ರೀತಿ ಇರೋರಿಗೆ…” ಎಂದ ಸಂಬಿತ್ ಪಾತ್ರಾ

ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. “ಜಾಲಿದಾರ್ ಟೋಪಿ ಮೇಲೆ ಪ್ರೀತಿ, ರುದ್ರಾಕ್ಷಿ ಮಾಲೆಯ ನಿರಾಕರಣೆ” ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.

‘ರಾಹುಲ್ ಗಾಂಧಿಗೆ ಹಿಂದೂ ಧರ್ಮ ಹಾಗು ಹಿಂದುತ್ವದ ಬಗ್ಗೆ ಬಹಳ ಕಡಿಮೆ ಜ್ಞಾನವಿದೆ’

ಹಿರಿಯ ಆರೆಸ್ಸೆಸ್ (ಸಂಘ) ನಾಯಕ ಇಂದ್ರೇಶ್ ಕುಮಾರ್ ಗುರುವಾರ (ಡಿಸೆಂಬರ್ 16) ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಹಿಂದೂಗಳು ಮತ್ತು ಹಿಂದುತ್ವವಾದಿಗಳ ಬಗ್ಗೆ ವಾಗ್ದಾಳಿ ನಡೆಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ, “ಈ ವಿಷಯದ ಬಗ್ಗೆ ಅವರ ಜ್ಞಾನವು ‘ತುಂಬಾ ಕಳಪೆ’ ಎಂದಿದ್ದಾರೆ. “ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಬಹಳ ಕಡಿಮೆ ಜ್ಞಾನವಿದೆ” ಎಂದು ಆರ್‌ಎಸ್‌ಎಸ್ ಹೇಳಿದೆ.

ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೊಬ್ಬರು, ಪ್ರಧಾನಿ ನರೇಂದ್ರ ಮೋದಿಯವರ ಕಾಶಿ ವಿಶ್ವನಾಥ್ ಕಾರಿಡಾರ್ ಭೇಟಿಯ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಹೇಳಿಕೆಯನ್ನು ಟೀಕಿಸಿದರು ಮತ್ತು ಅವರು (ಅಖಿಲೇಶ್ ಯಾದವ್) ದೇಶವನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು ಹೊರತು ಅಸಭ್ಯವಾಗಿ ಮಾತನಾಡಬಾರದು ಎಂದರು.

ಹಿಂದುತ್ವದ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ

ಕಳೆದ ವಾರ ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಆಗಮಿಸಿದ್ದರು. ಅಲ್ಲಿ ವೇದಿಕೆಯಿಂದಲೇ ಹಿಂದೂಗಳ ಬಗ್ಗೆ ಬಹಳ ಮಹತ್ವದ ಹೇಳಿಕೆಯೊಂದನ್ನ ರಾಹುಲ್ ಗಾಂಧಿ ನೀಡಿದ್ದರು. ಅಷ್ಟೇ ಅಲ್ಲ, ಭಾರತೀಯ ಜನತಾ ಪಕ್ಷವನ್ನೂ (ಬಿಜೆಪಿ) ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರು. 2014ರಿಂದ ನಮ್ಮ ದೇಶದಲ್ಲಿ ಹಿಂದುತ್ವವಾದಿಗಳ ಆಡಳಿತವಿದೆ ಆದರೆ ನಮ್ಮ ದೇಶದಲ್ಲಿ ಹಿಂದುಗಳ ಆಡಳಿತವನ್ನು ಮರಳಿ ತರಬೇಕಾಗಿದೆ ಎಂದರು. ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಈ ರೀತಿ ವಿಚಿತ್ರವಾಗಿ ಮಾತನಾಡಿದ ನಂತರವೇ ಅನೇಕರು ಅವರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಭಾರತ ಹಿಂದುತ್ವವಾದಿಗಳದ್ದಲ್ಲ ಬದಲಾಗಿ ಹಿಂದುಗಳ ದೇಶ

ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ವಿಭಿನ್ನವಾದ ಮಾತುಗಳನ್ನು ಹೇಳಿದ್ದಾರೆ. ಗಾಂಧೀಜಿ ಕುರಿತು ಮಾತನಾಡಿದ ಅವರು, ಗಾಂಧೀಜಿ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಗೋಡ್ಸೆ ಹಿಂದುತ್ವ ಚಿಂತನೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದ ಎಂದಿದ್ದಾರೆ. ಗೋಡ್ಸೆ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರು ಅನೇಕ ಬಾರಿ ಗೋಡ್ಸೆ ವಿಚಾರ, ಹಿಂದುತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಮಹಾತ್ಮ ಗಾಂಧಿಯವರು ತಮ್ಮ ಇಡೀ ಜೀವನವನ್ನು ಸತ್ಯದ ಹುಡುಕಾಟದಲ್ಲಿ ಕಳೆದರು ಮತ್ತು ಕೊನೆಯಲ್ಲಿ ಹಿಂದುತ್ವವಾದಿಯೊಬ್ಬ ಅವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿದ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾನೆ. ಅವರು ಕೇವಲ ಅಧಿಕಾರವನ್ನು ಬಯಸುತ್ತಾರೆ ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ….. ಅವರ ಮಾರ್ಗ ಸತ್ಯಾಗ್ರಹವಲ್ಲ, ಅವರ ಮಾರ್ಗ ‘ಸತ್ತಾ’ಗ್ರಹ (ಅಧಿಕಾರದ ಹಪಹಪಿ) ಎಂದರು.

ಅವರು ಮುಂದೆ ಮಾತನಾಡುತ್ತ, “ನರೇಂದ್ರ ಮೋದಿ ಮತ್ತು ಅವರ ಮೂರ್ನಾಲಕ್ಕು ಉದ್ಯೋಗಪತಿಗಳು, ಹಿಂದುತ್ವವಾದಿಗಳು ಏಳು ವರ್ಷಗಳಲ್ಲಿ ಈ ದೇಶವನ್ನು ಹಾಳು ಮಾಡಿದ್ದಾರೆ, ಎಲ್ಲವನ್ನೂ ಮುಗಿಸಿದ್ದಾರೆ. ರೈತರ ಆತ್ಮ, ರೈತರ ಎದೆ, ಮೋದಿ ಅವರ ಎದೆಗೆ ಚೂರಿ ಹಾಕಿದ್ದಾರೆ ಎಂದರು. ಮುಂದಿನಿಂದಲ್ಲ ಹಿಂದಿನಿಂದ. ಯಾಕೆ? ಯಾಕಂದ್ರೆ ಹಿಂದುತ್ವವಾದಿಗಳಾಗಿದ್ದರೆ ಅವರು ಹಿಂದಿನಿಂದಲೇ ಕೊಲ್ಲುತ್ತಾರೆ” ಎಂದರು.

ಹಿಂದುಗಳು ಸದಾ ಸತ್ಯದ ಪರವಾಗಿರುತ್ತಾರೆ

ನಾಥೂರಾಮ್ ಗೋಡ್ಸೆ ಬಗ್ಗೆ ಯೋಚಿಸುವ ಜನರು ಯಾವಾಗಲೂ ಅಧಿಕಾರವನ್ನು ಬಯಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಜನರಿಗೂ ಸತ್ಯದೊಂದಿಗೂ ಯಾವುದೇ ಸಂಬಂಧವಿಲ್ಲ. ಅಷ್ಟೇ ಅಲ್ಲ, ಹಿಂದೂ ಯಾವಾಗಲೂ ಸತ್ಯದೊಂದಿಗೆ ಬದುಕುತ್ತಾನೆ ಎಂದೂ ಹೇಳಿದ್ದಾರೆ. ಸತ್ಯದ ಕಾರಣದಿಂದ ಹಿಂದೂ ಸಮುದಾಯದ ಜನರು ಇಂದಿಗೂ ನಮ್ಮ ದೇಶದಲ್ಲಿ ಮುಕ್ತವಾಗಿ ಬದುಕಲು ಸಾಧ್ಯವಾಗಿದೆ. ಹಿಂದೂ ಎಂದಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ದೊಡ್ಡ ಪ್ಲ್ಯಾಟ್‌ಫಾರಂ‌ನ್ನ ಕಳೆದುಕೊಂಡ ರಾಹುಲ್ ಗಾಂಧಿ

ಹಿಂದುತ್ವ ಮತ್ತು ಹಿಂದುತ್ವವಾದಿಗಳ ಬಗ್ಗೆ ರಾಹುಲ್ ನೀಡಿದ ಹೇಳಿಕೆ ಅಪ್ರಸ್ತುತವಾಗಿತ್ತು. ಬೆಲೆಯೇರಿಕೆಗೆ ಸಂಬಂಧಿಸಿದಂತೆ ಈ ರ‌್ಯಾಲಿಯನ್ನ ಆಯೋಜಿಸಲಾಗಿತ್ತು. ಜೈಪುರದ ವಿದ್ಯಾನಗರ ಸ್ಟೇಡಿಯಂನಲ್ಲಿ ನಡೆದ ಈ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ರಾಜಸ್ಥಾನದ ಜೊತೆಗೆ ನೆರೆಯ ಹರಿಯಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ದೆಹಲಿಯಿಂದಲೂ ಜನರು ಆಗಮಿಸಿದ್ದರು. ದೇಶಾದ್ಯಂತದ ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಆದರೆ, ಈ ದೊಡ್ಡ ರ್ಯಾಲಿ ಮೂಲಕ ಸರ್ಕಾರವನ್ನು ಸುತ್ತುವರಿಯುವ ಅವಕಾಶವನ್ನು ರಾಹುಲ್ ಕಳೆದುಕೊಂಡರು. ಭಾಷಣದ ಹೆಚ್ಚಿನ ಭಾಗವನ್ನು ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಲು ರಾಹುಲ್ ಗಾಂಧಿ ಹೆಣಗಾಡುತ್ತ ತಮಗೆ ಸಿಕ್ಕಿದ್ದ ಅದ್ಭುತ ವೇದಿಕೆಯನ್ನ ಕಳೆದುಕೊಂಡರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

Advertisement
Share this on...