ತಂಗಿಯ ಮದುವೆಯಲ್ಲಿ ಖುಷಿ ಖುಷಿ ಹೆಜ್ಜೆ ಹಾಕುತ್ತಲೇ ಮಸಣ ಸೇರಿದ ಅಣ್ಣ, ಸ್ಥಳದಲ್ಲಿದ್ದವರಿಗೆ ಶಾಕ್: ವಿಡಿಯೋ ನೋಡಿ

in Uncategorized 445 views

ತಂಗಿಯ ಮದುವೆಯ ಮನೆಯ ಸಂಭ್ರಮಾಚರಣೆಯಲ್ಲಿ ಖುಷಿಖುಚಿಯಿಂದ ಕುಣಿಯುತ್ತ ಕೆಳಕ್ಕೆ ಬಿದ್ದ ಅಣ್ಣ ಮತ್ತೆ ಮೇಲೇಳಲೇ ಇಲ್ಲ. ಸಂತಸದ ನಡುವೆಯೇ ನಡೆದ ಇಂತಹದೊಂದು ಮನಕಲಕುವ ಘಟನೆಯೊಂದು ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಿಂದ ವರದಿಯಾಗಿದೆ.

Advertisement

ಸಾವು ಯಾವಾಗ ಬರುತ್ತೆ, ಹೇಗೆ ಬರುತ್ತೆ, ಯಾವ ರೂಪದಲ್ಲಿ ಬರುತ್ತೆ ಅಂತ ಹೇಳೋಕೆ ಆಗಲ್ಲ ಅಂತ ಹೇಳ್ತಾರಲ್ಲ ಆ ಮಾತು ಈ ಘಟ‌ನೆಯನ್ನ ನೋಡಿದರೆ 100% ಸತ್ಯ ಅಂತ ಸಾಬೀತಾಗುತ್ತೆ ನೋಡಿ. ಖುಷಿ ಖುಷಿಯ ವಾತಾವರಣದ ಮಧ್ಯೆ ಇಡೀ ಕುಟುಬವೇ ಕಣ್ಣೀರಲ್ಲಿ ಕೈ ತೊಳೆಯುವಂತಾದ ಮನಕಲುಕುವ ಘಟನೆ ರಾಜಸ್ಥಾನದ ರಾಜಸಮಂದ್ ಜಿಲ್ಲೆಯಿಂದ ವರದಿಯಾಗಿದೆ. ಇಲ್ಲಿ ತಂಗಿಯ ಮದುವೆಯ ಸಂಭ್ರಮದಲ್ಲಿ ಖುಷಿ ಖುಷಿಯಿಂದ ಕುಣಿಯುತ್ತಿದ್ದ ಅಣ್ಣ ಇಹಲೋಕ ತ್ಯಜಿಸಿದ್ದಾನೆ. ಹೌದು ಆತ ಡ್ಯಾನ್ಸ್ ಮಾಡ್ತಾ ಮಾಡ್ತಾನೇ ಕುಸಿದು ಬೀಳುತ್ತಾನೆ, ಹೀಗೆ ಕುಸಿದುಬಿದ್ದ ಅಣ್ಣ ಮತ್ತೆ ಮೇಲೇಳಲೇ ಇಲ್ಲ. ಕೆಲವೇ ಕ್ಷಣಗಳಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಒಂದು ನಿಮಿಷದ ಹಿಂದೆ ಡ್ಯಾನ್ಸ್ ನಲ್ಲಿ ಆತ ಎಷ್ಟು ಮಗ್ನನಾಗಿದ್ದನೆಂದರೆ ಈ ರೀತಿಯ ದುರ್ಘಟನೆ ನಡೆಯಬಹುದಂತ ಅಲ್ಲಿದ್ದ ಯಾರೋಬ್ಬರೂ ಯೋಚಿಸಿರಲಿಲ್ಲ. ಮದುವೆ ಮನೆಯಲ್ಲಿ ಸೂತಕದ ಛಾಯೆ ಬರುತ್ತೆ ಅಂತ ಯಾರೂ ಊಹಿಸಿರಲಿಲ್ಲ.

ಮೇವಾಡಿ ಡ್ರೆಸ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಅಣ್ಣ, ಆದರೆ…

ವಾಸ್ತವವಾಗಿ, ಈ ಮನಕಲುಕುವ ಘಟನೆ ಕಳೆದ ವಾರ ಭಾನುವಾರ ರಾತ್ರಿ ರಾಜ್‌ಸಮಂದ್ ಜಿಲ್ಲೆಯ ಕಾರ್ತ್ವಾಸ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ನಾರಾಯಣ್ ಲಾಲ್ ಗುರ್ಜಾರ್ ಅವರ ಇಬ್ಬರು ಸಹೋದರಿಯರಾದ ಗಣೇಶಿ ಮತ್ತು ಶ್ಯಾಮು ಗುರ್ಜರ್ ಅವರ ಬಿಂದೋಲಿಯು ಬ್ಯಾಂಡ್‌ ಬಾಜಾಗಳೊಂದಿಗೆ ಹೊರಡುತ್ತಿದ್ದರು. ಇಬ್ಬರು ಸಹೋದರಿಯರ ಬಿಂದೋಲಿಯ ಸಮಯದಲ್ಲಿ, ನಾರಾಯಣ್ ಮೇವಾಡಿ ಡ್ರೆಸ್, ಧೋತಿ, ಕುರ್ತಾ ಧರಿಸಿ ತಮ್ಮ ಸ್ನೇಹಿತರೊಂದಿಗೆ ಖುಷಿ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ಬಿಂದೋಲಿ ಅವರ ಮನೆಯಿಂದ ಮಧ್ಯಾಹ್ನ 12.30ಕ್ಕೆ ಗ್ರಾಮದ ಕಡೆಗೆ ಬಂದಿತ್ತು. ಮನೆಯಿಂದ ಕೇವಲ 300 ಮೀಟರ್ ದೂರದಲ್ಲಿ ಡಿಜೆ ನಲ್ಲಿನ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ನಾರಾಯಣ್ ಹಠಾತ್ತನೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಮದುಮಗಳಾಗುವ ಮುನ್ನವೇ ಚೀರಾಡಿ ಅಳುತ ಕೂತ ಇಬ್ಬರೂ ಸಹೋದರಿಯರು

ಮದುವೆಯ ಖುಷಿಯ ನಡುವೆಯೇ ದಿಢೀರನೆ ನಡೆದ ಈ ದುರ್ಘಟನೆಯಿಂದ ಜನರಿಗೆ ಇದೇನಾಯ್ತು ಅಂತ ಅರ್ಥವೇ ಆಗಲಿಲ್ಲ. ಅಷ್ಟರಲ್ಲಾಗಲೇ ಅಲ್ಲಿ ಡಿಜೆ ಹಾಡುಗಳ ಬದಲು ಜನರೆಲ್ಲಾ ಗೋಳಾಡಿ ಅಳುತ್ತಿರುವ ಕಿರುಚಾಟ ಕೇಳಿಸಲಾರಂಭಿಸಿರು. ಮದುಮಗಳಾಗಬೇಕಿದ್ದ ಇಬ್ಬರೂ ತಂಗಿಯರು ತಮ್ಮ ಅಣ್ಣನ ಮೃತ ದೇಹವನ್ನು ಮಡಿಲಲ್ಲಿಟ್ಟುಕೊಂಡು ಅಳುತ್ತಾ ಕೂತರು. ಇಬ್ಬರ ಮದುವೆ ಡಿಸೆಂಬರ್ 11 ರಂದು ನಡೆಯಲಿತ್ತು. ಇಬ್ಬರು ಹೆಣ್ಣು ಮಕ್ಕಳ ಮದುವೆಯಲ್ಲಿ ಇಡೀ ಕುಟುಂಬವೇ ಸಂತಸಗೊಂಡಿದ್ದು, ಈ ಘಟನೆಯಿಂದಾಗಿ ಇದೀಗ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ವೀಡಿಯೋ ನೋಡಿ

 

ಖುಷಿಯ ವಾತಾವರಣದಲ್ಲಿ ಅಪ್ಪಳಿಸಿದ ಶೋಕದ ಅಲೆ

ಮೃತ ನಾರಾಯಣ್ ಲಾಲ್ 4 ವರ್ಷದ ಮಗಳು ಮತ್ತು 7 ತಿಂಗಳ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಘಟನೆಯ ನಂತರ ಅವರ ಪತ್ನಿ ಮತ್ತು ತಾಯಿ ಭನ್ವಾರಿ ದೇವಿ ಸ್ಥಿತಿ ಚಿಂತಾಜನಕವಾಗಿದೆ. ನಾರಾಯಣ್ ಲಾಲ್ ಕಳೆದ 10 ವರ್ಷಗಳಿಂದ ಗುಜರಾತ್‌ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ತನ್ನ ಸಹೋದರಿಯರ ಮದುವೆಗೆಂದು ರಾಜಸಮಂದ್‌ಗೆ ಬಂದಿದ್ದರು. ಅವರ ಕಿರಿಯ ಸಹೋದರನ ಮದುವೆಯೂ ಇದೇ ತಿಂಗಳು ನಡೆಯಬೇಕಿತ್ತು. ಕುಟುಂಬದಲ್ಲಿ ಮೂರು ಮದುವೆ ನಡೆಯಬೇಕಿತ್ತ.. ಆದರೆ ಈಗ ಏನಾಗುತ್ತೋ ಗೊತ್ತಿಲ್ಲ.

ಸಾವಿನ ಕಾರಣ ತಿಳಿಸಿದ ವೈದ್ಯರು

ಘಟನೆ ನಡೆದ ಕೂಡಲೇ ಮನೆಯವರು ನಾರಾಯಣ್ ಲಾಲ್ ಅವರನ್ನ ತರಾತುರಿಯಲ್ಲಿ ವೈದ್ಯರ ಬಳಿ ಕರೆದೊಯ್ದರೂ ಅವರ ಉಸಿರು ನಿಂತಿತ್ತು. ಸಮಾರಂಭಗಳಲ್ಲಿ ನಿರಂತರ ನೃತ್ಯ ಮಾಡುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಹೃದಯಾಘಾತವಾಗುವ ಸಂಭವವಿದೆ. ನಾರಾಯಣ್ ವಿಷಯದಲ್ಲೂ ಅದೇ ಆಯಿತು ಎಂದು ಹಿರಿಯ ವೈದ್ಯ ಎಚ್.ಸಿ.ಸೋನಿ ತಿಳಿಸಿದ್ದಾರೆ.

Advertisement
Share this on...