“ಅವನು ಹೇಳಿದ್ದಕ್ಕೇ ಇಸ್ಲಾಂಗೆ ಮತಾಂತರವಾಗಿದ್ದೆ, ಮೌಲ್ವಿ ನಿಕಾಹ್ ಮಾಡಿಸಿದ್ದ”: ಮೋಸ ಮಾಡಿದ #ಆದಿಲ್, ಮದುವೆ ಮುರಿದ ಬಳಿಕ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ರಾಖಿ ಸಾವಂತ್

in Uncategorized 10,728 views

ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬುಧವಾರ (ಜನವರಿ 11, 2023), ರಾಖಿ ಸಾವಂತ್ ಮತ್ತು ಆಕೆಯ ಬಾಯ್ ಫ್ರೆಂಡ್ ಆದಿಲ್ ಖಾನ್ ದುರಾನಿ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಆದಿಲ್ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮದುವೆಯ ಫೋಟೋವನ್ನು ವೈರಲ್ ಮಾಡಿದ್ದೇನೆ ಎಂದು ರಾಖಿ ನಂತರ ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಖಿ ಹರಾಂ ಮಾಡದೆ ಹಲಾಲ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದಿಲ್ ಏಕೆ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Advertisement

ವೀಡಿಯೋದಲ್ಲಿ ಆದಿಲ್ ತನ್ನನ್ನು ಮದುವೆಯಾಗಲು ನಿರಾಕರಿಸಿದ ಬಗ್ಗೆ ಕೇಳಿದಾಗ, ರಾಖಿ ಸಾವಂತ್ ಮಾತನಾಡುತ್ತ, “ಅವನೇನು ಹುಚ್ಚನೇ?. ಮದುವೆಯ ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದೇನೆ. ಮೌಲಾನಾ ನಿಕಾಹ್ ಮಾಡಿಸಿದ್ದ, ಆ ಪುರಾವೆಗಳನ್ನು ಸಹ ನೀಡಿದ್ದೇನೆ. ಇದಕ್ಕಿಂತ ಇನ್ನೇನು ಪುರಾವೆ ಕೊಡಲಿ. ಎಲ್ಲವನ್ನೂ ಬಿಟ್ಟು ಅವನನ್ನು ನಂಬಿ ಮದುವೆಯಾದೆ. ಮದುವೆಯ ಬಗ್ಗೆ ಒಂದು ವರ್ಷ ಸುಮ್ಮನಿರಲು ಆದಿಲ್ ನನ್ನನ್ನು ಕೇಳಿದನು. ನಾನು ಏಳು ತಿಂಗಳ ಕಾಲ ಮೌನವಾಗಿದ್ದೆ, ಆದರೆ ನಾನು ಬಿಗ್ ಬಾಸ್‌ನಿಂದ ಹೊರಬಂದ ನಂತರ ನನ್ನ ಸಹನೆಗೆ ಮೀರಿದ ಘಟನೆ ನಡೆದಿದೆ. ಅದಕ್ಕೇ ಫೋಟೋ ವೈರಲ್ ಮಾಡಿದ್ದೇನೆ. ನನಗೆ ತುಂಬಾ ಭಯವಾಯಿತು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ, ಆ ತರಹ ನಡೆಯುವುದು ನನಗೆ ಇಷ್ಟವಿರಲಿಲ್ಲ” ಎಂದಿದ್ದಾರೆ.

ರಾಖಿ ಸಾವಂತ್ ಮುಂದೆ ಮಾತನಾಡುತ್ತ, “ಆದಿಲ್ ನನ್ನನ್ನು ಪ್ರೀತಿಸುತ್ತಾನೆ ಆದರೆ ಅವನ ಫ್ಯಾಮಿಲಿಯಿಂದ ಆತನಿಗೆ ಅದೇನು ಒತ್ತಡ ಬರುತ್ತಿದೆಯೋ ಗೊತ್ತಿಲ್ಲ. ಆದರೆ ಇದರಲ್ಲಿ ನನ್ನ ತಪ್ಪೇನು? ನಾನು ನನ್ನ ಹೆಸರನ್ನು ಬದಲಾಯಿಸಿಕೊಂಡೆ. ನಾನು ಹರಾಂ ಮಾಡದೆ ಹಲಾಲ್ ಮಾಡಿದೆ. ಎಲ್ಲರೂ ಹರಾಮ್ ಮಾಡುತ್ತಾರೆ. ಯಾರು ಹರಾಮ್ ಮಾಡುತ್ತಾರೋ ಎಲ್ಲರನ್ನೂ ಬಿಟ್ಟು ಹೋಗಬಹುದೇ? ಆದರೆ ಹಲಾಲ್ ಮಾಡಿದರೆ ಅವರು ತಪ್ಪಿತಸ್ಥರೆ, ಪಾಪಿಗಳೇ? ನನ್ನ ಮನೆಯಲ್ಲಿ ಮದುವೆ ನಡೆದಿದ್ದು, ಭಾರತೀಯ ಕಾನೂನಿನ ಪ್ರಕಾರವೇ ಮದುವೆ ನಡೆದಿದೆ. ಬಿಎಂಸಿ ಅಧಿಕಾರಿಯೇ ಬಂದು ಪೇಪರ್‌ಗೆ ಸಹಿ ಹಾಕಿದರು” ಎಂದರು.

“ಒಂದು ಕಡೆ ನನ್ನ ತಾಯಿಗೆ ಬ್ರೇನ್ ಕ್ಯಾನ್ಸರ್ ಇದೆ ಮತ್ತು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಇನ್ನೊಂದು ಕಡೆ ಆದಿಲ್ ನನ್ನ ಜೊತೆ ಮದುವೆಯನ್ನು ನಿರಾಕರಿಸುತ್ತಿದ್ದಾನೆ” ಎಂದಿದ್ದಾರೆ. ರಾಖಿ ಪ್ರಕಾರ, ಆದಿಲ್‌ನ ಆಜ್ಞೆಯ ಮೇರೆಗೆ ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದಂತೆ. ಆದರೆ ಈಗ ಮದುವೆಯಾಗಲು ಆತ ನಿರಾಕರಿಸುತ್ತಿದ್ದಾರೆ. ಕಾಲ್ ಮಾಡಿದ ಆದಿಲ್ ಈ ಬಗ್ಗೆ ಏನನ್ನೂ ಮಾತನಾಡಲು ನಿರಾಕರಿಸುತ್ತಿದ್ದಾನೆ ಎಂದು ರಾಖಿ ಹೇಳಿದ್ದಾರೆ.

ಇದಕ್ಕೂ ಮೊದಲು ಬುಧವಾರ (ಜನವರಿ 11, 2023), ಬಾಲಿವುಡ್ ಛಾಯಾಗ್ರಾಹಕ ‘ವೈರಲ್ ಭಯಾನಿ’ ರಾಖಿ ಸಾವಂತ್ ಮತ್ತು ಆದಿಲ್ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು ಮತ್ತು ಅವರಿಬ್ಬರ ಮದುವೆಗೆ ಶುಭಾಶಯಗಳನ್ನು ತಿಳಿಸಿದ್ದರು. ಇದರೊಂದಿಗೆ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಟೈಟಲ್ ನಲ್ಲಿ ಬರೆದುಕೊಂಡಿದ್ದರು. ಆದರೆ, ಬುಧವಾರದಂದು ಈ ಫೋಟೋಗಳನ್ನು ರಾಖಿ ಸಾವಂತ್ ರವರೆಗೆ ವೈರಲ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಕಾಣಿಸುತ್ತಿದೆ, ಇದರಲ್ಲಿ ಇಬ್ಬರ ಮದುವೆಯ ದಿನಾಂಕ ಜುಲೈ 2, 2022 ಎಂಬುದನ್ನ ಕಾಣಬಹುದು. ಅಷ್ಟೇ ಅಲ್ಲ ಈ ಮ್ಯಾರೇಜ್ ಸರ್ಟಿಫಿಕೇಟ್ ನಲ್ಲಿ ರಾಖಿ ಸಾವಂತ್ ಹೆಸರು ‘ಫಾತಿಮಾ’ ಎಂದು ಬರೆಯಲಾಗಿದೆ.

Advertisement
Share this on...