“ಸೆ#ಕ್ಸ್ ದೀಪಿಕಾ ಪಡುಕೋಣೆ ಜೊತೆ, ಲವ್ ಕತ್ರಿನಾ ಕೈಫ್ ಜೊತೆ ಆದರೆ ಮದುವೆಯಾಗಿದ್ದು ಮಾತ್ರ ಆಲಿಯಾ ಭಟ್ ಜೊತೆ”: ಬ್ರಹ್ಮಾಸ್ತ್ರ ಚಿತ್ರದ ನಾಯಕ ರಣಬೀರ್ ಕಪೂರ್‌ನ ನವರಂಗಿ ಆಟಗಳು ಬಯಲು

in Uncategorized 273 views

ರಣಬೀರ್ ಕಪೂರ್ ಇತ್ತೀಚಿನ ದಿನಗಳಲ್ಲಿ ತಮ್ಮ ‘ಬ್ರಹ್ಮಾಸ್ತ್ರ’ ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಬಾಯ್‌ಕಾಟ್ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿತ್ತು. ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದರೆ ಚಿತ್ರ ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆಯಂತೆ. ಆದರೆ, ಕೆಲವರು ಖಾಲಿ ಇರುವ ಚಿತ್ರಮಂದಿರಗಳ ಚಿತ್ರಗಳನ್ನು ಶೇರ್ ಮಾಡುವ ಮೂಲಕ ಚಿತ್ರದ ಗಳಿಕೆಯನ್ನು ಸುಳ್ಳು ಎಂದು ಹೇಳುತ್ತಿದ್ದಾರೆ.

Advertisement

ಕತ್ರಿನಾ ಕೈಫ್ ಗಾಗಿ ದೀಪಿಕಾ ಪಡುಕೋಣೆಗೆ ಮೋಸ ಮಾಡಿದ ರಣಬೀರ್ ಕಪೂರ್

ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್ ಮೊದಲ ಬಾರಿಗೆ ಪತ್ನಿ ಆಲಿಯಾ ಭಟ್ ಜೊತೆ ಕಾಣಿಸಿಕೊಂಡಿದ್ದಾರೆ. ಆಲಿಯಾಗೂ ಮುನ್ನ ರಣಬೀರ್ ಹಲವು ನಾಯಕಿಯರೊಂದಿಗೆ ಅಫೇರ್ ಹೊಂದಿದ್ದರು. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರಂತಹ ದೊಡ್ಡ ನಟಿಯರೂ ಇದ್ದಾರೆ. ಮೊದಲಿಗೆ ರಣಬೀರ್ ದೀಪಿಕಾ ಜೊತೆ ರಿಲೇಶನ್ ಶಿಪ್ ನಲ್ಲಿದ್ದರು.

ರಣಬೀರ್ ಮತ್ತು ದೀಪಿಕಾ ಪಡುಕೋಣೆ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರ ರಣಬೀರ್ ಜೀವನದಲ್ಲಿ ಕತ್ರಿನಾ ಕೈಫ್ ಎಂಟ್ರಿ ಕೊಟ್ಟರು. ರಣಬೀರ್ ಮತ್ತು ಕತ್ರೀನಾ ಅವರ ನಿಕಟತೆಯನ್ನು ನೋಡಿದ ದೀಪಿಕಾ ಬ್ರೇಕಪ್ ಮಾಡಿಕೊಂಡರು. ನಂತರ ದೀಪಿಕಾ ಇಂಟರ್‌ವ್ಯೂ ಒಂದರಲ್ಲಿ ಮಾತನಾಡುತ್ತ, “ನನ್ನ ಪಾಲಿಗೆ ಸೆ#ಕ್ಸ್ ಅಷ್ಟೇ ಮುಖ್ಯವಲ್ಲ ಬದಲಾಗಿ ಸಂಬಂಧದಲ್ಲಿ ಭಾವನೆಗಳು ಕೂಡ ಮುಖ್ಯ. ರಣಬೀರ್ ನನ್ನೆಡೆ ನಿಷ್ಠನಾಗಿರಲಿಲ್ಲ. ಆದ್ದರಿಂದ ಬ್ರೇಕಪ್ ಮಾಡಿಕೊಂಡೆ” ಎಂದಿದ್ದರು.

ಕತ್ರಿನಾ ಹಾಗು ರಣಬೀರ್ ಭೇಟಿ

ನಟಿಯೊಬ್ಬರ ಬರ್ತ್‌ಡೇ ಪಾರ್ಟಿಯಲ್ಲಿ ರಣಬೀರ್ ಮತ್ತು ಕತ್ರಿನಾ ಮೊದಲ ಬಾರಿಗೆ ಭೇಟಿಯಾದರು. ದೀಪಿಕಾ ಜೊತೆ ರಣಬೀರ್ ಅಲ್ಲಿಗೆ ಬಂದಿದ್ದರು. ಇದಾದ ನಂತರ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ಗಾಗಿ ರಣಬೀರ್ ಮತ್ತು ಕತ್ರಿನಾರನ್ನ ಆಯ್ಕೆ ಮಾಡಿಕೊಂಡರು. ಇಲ್ಲಿಂದ ಇಬ್ಬರ ಲವ್ ಸ್ಟೋರಿ ಶುರುವಾಗಿದ್ದು, ದೀಪಿಕಾ ಬ್ರೇಕಪ್ ಮಾಡಿಕೊಂಡರು. ಕತ್ರಿನಾ ಮತ್ತು ರಣಬೀರ್ ಸೀರೀಯಸ್ ರಿಲೇಶನ್‌ಶಿಪ್ ನಲ್ಲಿದ್ದರು. ಇಬ್ಬರೂ 6 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್ ನಲ್ಲಿದ್ದರು.

ಕತ್ರಿನಾ ರಣಬೀರ್ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಅದು ಆಗಲಿಲ್ಲ. ಬ್ರೇಕಪ್ ನಂತರ ರಣಬೀರ್ ಕೂಡ ಕತ್ರಿನಾ ಬಗ್ಗೆ ಹೇಳಿಕೆ ನೀಡಿದ್ದರು. ಅವರು ಮಾತನಾಡುತ್ತ, “ನನ್ನ ಹೆತ್ತವರ ನಂತರ, ಯಾರಾದರೂ ನನಗೆ ಹೆಚ್ಚು ಸ್ಫೂರ್ತಿ ಮತ್ತು ಪ್ರೇರಣೆ ನೀಡಿದ್ದರೆ, ಅದು ಕತ್ರಿನಾ ಕೈಫ್. ನಾನು ಆಕೆತನ್ನ ತುಂಬಾ ಗೌರವಿಸುತ್ತೇನೆ. ಹಾಗಾಗಿ ಅವರೊಂದಿಗಿನ ಬ್ರೇಕಪ್ ಬಗ್ಗೆ ನಾನು ಯಾವುದೇ ವಿವರಣೆ ನೀಡುವುದಿಲ್ಲ” ಎಂದಿದ್ದರು.

ಎಲ್ಲ ಬ್ರೇಕಪ್ ಗಳ ನಂತರ ಇತ್ತೀಚೆಗಷ್ಟೇ ಆಲಿಯಾ ಭಟ್ ಜೊತೆ ಮದುವೆಯಾದ ರಣಬೀರ್

ರಣಬೀರ್ ಮತ್ತು ಕತ್ರಿನಾ ಒಟ್ಟಿಗೆ ಮೂರು ಚಿತ್ರಗಳನ್ನು ಮಾಡಿದ್ದಾರೆ. ಇವುಗಳಲ್ಲಿ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’, ‘ರಾಜನೀತಿ’ ಮತ್ತು ‘ಜಗ್ಗಾ ಜಾಸೂಸ್’ ಸೇರಿವೆ. ಆದರೆ, ಈ ಚಿತ್ರಗಳ ಪೈಕಿ ‘ರಾಜನೀತಿ’ ಮಾತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮತ್ತೊಂದೆಡೆ, ರಣಬೀರ್ ದೀಪಿಕಾ ಜೊತೆ ಬ್ರೇಕಪ್‌ನ ಹೊರತಾಗಿಯೂ ‘ಯೇ ಜವಾನಿ ಹೈ ದೀವಾನಿ’ಯಲ್ಲಿ ಕೆಲಸ ಮಾಡಿದರು. ಅಂದರೆ ರಣಬೀರ್ ತನ್ನ ಎಲ್ಲಾ ಎಕ್ಸ್ ಗರ್ಲ್ ಫ್ರೆಂಡ್ಸ್ ಗಳ ಜೊತೆಗೆ ಈಗಲೂ ಉತ್ತಮ ಸ್ನೇಹಿತರಾಗಿದ್ದಾರಂತೆ. ಆಲಿಯಾ ಭಟ್ ಕೂಡ ತನ್ನ ಪತಿ ರಣಬೀರ್ ಮಾಜಿ ಗೆಳತಿ ಕತ್ರಿನಾ ಕೈಫ್‌ನ ವಿಶೇಷ ಸ್ನೇಹಿತೆಯಾಗಿದ್ದಾರೆ.

ಆದಾಗ್ಯೂ, ರಣಬೀರ್ ಮತ್ತು ಆಲಿಯಾ ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ ಇಬ್ಬರೂ ಮಗುವಿಗೆ ಪೋಷಕರಾಗಲಿದ್ದಾರೆ. ಮತ್ತೊಂದೆಡೆ ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಜೊತೆ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಮತ್ತೊಂದೆಡೆ, ದೀಪಿಕಾ ಕೂಡ ತನ್ನ ಗಂಡ ರಣವೀರ್ ಸಿಂಗ್ ಜೊತೆ ಖುಷಿಯಾಗಿದ್ದಾರೆ.

Advertisement
Share this on...