“ಯಾರ್ ಹೇಳ್ತಾರೆ ನಾವು ಅಲ್ಪಸಂಖ್ಯಾತರಂತ? ನೆನಪಿರಲಿ ದೇಶದಲ್ಲಿ 22 ಕೋಟಿ ಇದೀವಿ, ಸಮಯ ಬಂದ್ರೆ…” KPCC ಶಿಸ್ತುಸಮಿತಿ ಅಧ್ಯಕ್ಷ

in Kannada News/News 218 views

ಬೆಂಗಳೂರು: ‘ಮು-ಸ್ಲಿಮ-ರ ಕೈಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು. ನಮ್ಮದು ಜಾತ್ಯತೀತ ದೇಶ. ಕಾಂಗ್ರೆಸ್ ಕೂಡ ಜಾತ್ಯತೀತ ಪಕ್ಷ. ಹೀಗಾಗಿ, ಮು-ಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆಗಿದೆ. ಬಿಜೆಪಿ ಜಾತ್ಯತೀತವಾದರೆ ಮು-ಸ್ಲಿಮ-ರೂ ಪಕ್ಷದ ಜೊತೆಗಿರುತ್ತಾರೆ’ ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್‌ ಖಾನ್‌ ಹೇಳಿದರು.

Advertisement

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ದೇಶದಲ್ಲಿ ಮು-ಸ್ಲಿಂ ಸಮುದಾಯದವರು 22 ಕೋಟಿ ಇದ್ದಾರೆ. ಹೀಗಿರುವಾಗ ದೇಶದಲ್ಲಿ ಮು-ಸ್ಲಿಮ-ರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ‘ ಎಂದು ಪ್ರಶ್ನಿಸಿದರು.

ಸಿ.ಎಂ ಇಬ್ರಾಹಿಂ ಕಾಂಗ್ರೆಸ್‌ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಪಕ್ಷದ ಹಿರಿಯ ನಾಯಕ. ಅವರನ್ನು ವಿಧಾನ ಪರಿಷತ್‌ ನಾಯಕರನ್ನಾಗಿ ಮಾಡಬೇಕೋ ಬೇಡವೋ ಎಂಬುದಕ್ಕೆ ಸಮಾಜದ ಬಣ್ಣ ಕೊಡುವುದು ಬೇಡ. ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದಾಗ ಸಚಿವರನ್ನಾಗಿ ಮಾಡಲಾಗಿತ್ತು. ನನಗೆ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿಲ್ಲವೇ’ ಎಂದು ಮರು ಪ್ರಶ್ನಿಸಿದರು.

ನೀರಾವರಿ ಇಲಾಖೆಯಲ್ಲಿನ ‘ಪರ್ಸಂಟೇಜ್‌’ ಆ-ರೋ-ಪ-ದ ಬಗ್ಗೆ ಪ್ರತಿಕ್ರಿಯಿಸಿ, ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕುರಿತು ಎಂ.ಎ. ಸಲೀಂ ಮತ್ತು ಪಕ್ಷದ ನಾಯಕ ವಿ.ಎಸ್‌. ಉಗ್ರಪ್ಪನಡೆಸಿದ ಸಂಭಾಷಣೆ ಕುರಿತು ಮಾತನಾಡದ ಅವರು, ‘ಶಿಸ್ತು ಪಾಲನಾ ಸಮಿತಿ ನೀಡಿದ್ದ ನೋಟಿಸ್‌ಗೆ ಇಬ್ಬರೂ ಉತ್ತರ ನೀಡಿದ್ದಾರೆ. ನಾನಿನ್ನೂ ಅವರ ಉತ್ತರವನ್ನು ನೋಡಿಲ್ಲ. ಶಿಸ್ತು ಸಮಿತಿಯ ಸಭೆಯಲ್ಲಿ ಅವರ ಉತ್ತರ ನೋಡುತ್ತೇವೆ’ ಎಂದರು.

‘ಸಲೀಂ ಮಾತನಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಹೀಗಾಗಿ, ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ಉಗ್ರಪ್ಪ ಅವರ ಮಾತು ಸ್ಪಷ್ಟವಾಗಿಲ್ಲ. ಅವರು ನಗೆಯಾಡಿದ್ದು ಕಾಣಿಸುತ್ತಿತ್ತು. ಕೆಪಿಸಿಸಿ ಅಧ್ಯಕ್ಷರನ್ನು ನಾವೇ ನೇಮಕ ಮಾಡಿದ್ದು ಎಂದಿದ್ದಾರೆ. ಅದೇನು ಮಹಾ ತಪ್ಪಲ್ಲ’ ಎಂದರು

ಜಾಫರ್ ಷರೀಫ್ ಮೊಮ್ಮಗನನ್ನ ಸೋ-ಲಿಸಿ-ದ್ದು ಸಿದ್ದರಾಮಯ್ಯ ಎಂಬ ಎಚ್‌.ಡಿ. ಕುಮಾರಸ್ವಾಮಿ ಆ-ರೋ-ಪ-ಕ್ಕೆ ಪ್ರತಿಕ್ರಿಯಿಸಿದ ರೆಹಮಾನ್‌ ಖಾನ್‌, ‘ಜಾಫರ್ ಷರೀಫ್ ಮೊಮ್ಮಗನಿಗೆ ಜೆಡಿಎಸ್‌ನಿಂದ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು’ ಎಂದು ಕುಟುಕಿದರು.

‘ಕುಮಾರಸ್ವಾಮಿ ಹೇಳಿಕೆ ಎಲ್ಲವೂ ಸತ್ಯವಲ್ಲ. ಜಾಫರ್ ಷರೀಫ್ ಮೊಮ್ಮಗನನ್ನು ಸಿದ್ದರಾಮಯ್ಯ ಸೋ-ಲಿಸಿ-ದ್ದು ಎಂದಿದ್ದಾರೆ. ಹಾಗಾದರೆ ಜಾಫರ್ ಷರೀಫ್ ಮೊಮ್ಮಗನಿಗೆ ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು. ಯಾಕೆ ಹಾಗೆ ಮಾಡಲಿಲ್ಲ. ಹೀಗೆ ಮಾತನಾಡುತ್ತಾ ಹೋದರೆ ನಾವೂ ಕೂಡ ಸಾಕಷ್ಟು ಮಾತನಾಡಬಹುದು’ ಎಂದರು.

ಇತ್ತ ಹೆಚ್‌ಡಿಕೆ ವಿ-ರು-ದ್ಧ ಗರಂ ಆಗಿ ಏಕವಚನ ಪ್ರಯೋಗಿಸಿದ ಜಮೀರ್

JDS ನಾಯಕ ಎಚ್​.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್​ ತೊರೆದು ಕಾಂಗ್ರೆಸ್​​ನಿಂದ ಶಾಸಕರಾಗಿರುವ ಜಮೀರ್​ ಅಹ್ಮದ್​ ಖಾನ್​ ಮಧ್ಯೆ ವಾ-ಕ್ಸಮ-ರ ಮುಂದುವರೆದಿದೆ. ಉಪ ಚುನವಣಾ ಪ್ರಚಾರದ ವೇಳೆ ಜಮೀರ್​ ವಿ-ರು-ದ್ಧ ಎಚ್​ಡಿಕೆ ವಾ-ಗ್ದಾ-ಳಿ ನಡೆಸಿದ್ದರು. ಬಸ್​ ಒರೆಸುತ್ತಿದ್ದ ಹುಡುಗನನ್ನು ಕರೆತಂದು ಶಾಸಕ ಮಾಡಿದೆ. ಆಗ ಸಿದ್ದರಾಮಯ್ಯ ಎಲ್ಲಿದ್ದರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಜಮೀರ್​ ತಿ-ರುಗೇ-ಟು ನೀಡಿದ್ದು, ಬಸ್​ ಒರೆಸುವವನು ಅಲ್ಲ, ನಾನೊಬ್ಬ ಬಸ್ ಆಪರೇಟರ್ ಆಗಿದ್ದೆ. ಕುಮಾರಸ್ವಾಮಿ ಅವರಿಗೆ ಕುಳಿತು ಕೊಳ್ಳಲು ಜಾಗ ಇರಲಿಲ್ಲ. ಇದೇ ಟ್ರಾನ್ಪೋರ್ಟ್ ಆಪರೇಟರ್ ಆಗ ಅವನಿಗೆ ಜಾಗ ಕೊಟ್ಟಿದ್ದು ಎಂದು ಏಕವಚನದಲ್ಲಿ ವಾ-ಗ್ದಾ-ಳಿ ನಡೆಸಿದರು.

ಬಸ್​​ನ ಅವನಿಗೋಸ್ಕರ ಓಡಿಸಿದ್ದೇನೆ

ನಾನು ಇಲ್ಲ ಅಂದಿದ್ರೆ, ಕುಮಾರಸ್ವಾಮಿನೂ ಇಲ್ಲಿ ಇರುತ್ತಿರಲಿಲ್ಲ. ಬಸ್​​ನ ಅವನಿಗೋಸ್ಕರ ಓಡಿಸಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಎಂಎಲ್ ಎಗಳನ್ನು ರಾಜ್ಯಪಾಲರ ಬಳಿ ಕರೆದುಕೊಂಡು ಹೋದಾಗ ನಾನು ಬಸ್ಸು ಓಡಿಸಿದ್ದೆ. ಆದರೆ ಅದರ ಫಲವನ್ನು ಅವನು ಈಗಾಗಲೇ ನನಗೆ ಕೊಟ್ಟಿದ್ದಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೇ ಜಮ್ಮೀರ್ ಕಿ-ಡಿ-ಕಾ-ರಿ-ದರು. ಬೈ ಎಲೆಕ್ಷನ್​ನಲ್ಲಿ ಯಾಕೆ ಅಲ್ಪಸಂಖ್ಯಾತರ ಮೇಲೆ ಇವರಿಗೆ ಪ್ರೀತಿ‌? ಸಾರ್ವತ್ರಿಕ ಚುನಾವಣೆಯಲ್ಲಿ ಯಾಕೆ ಇವರಿಗೆ ಅಲ್ಪಸಂಖ್ಯಾತರು ನೆನಪು ಆಗಲ್ವಾ..? ರಾಮನಗರ ಬೈ ಎಲೆಕ್ಸನ್ ನಲ್ಲಿ ಯಾಕೆ ಅಲ್ಪಸಂಖ್ಯಾತರಿಗೆ ಬಿಟ್ಟು ಕೊಟ್ಡಿಲ್ಲ. ಯಾಕೆ ಅವರ ಧರ್ಮಪತ್ನಿ ಅನಿತಾಕ್ಕನ್ನ ನಿಲ್ಲಿಸಿದ್ರು..? ಅವರ ಭ-ದ್ರ ಕೋ-ಟೆ-ಯಲ್ಲಿ ಅಲ್ಪಸಂಖ್ಯಾತರಿಗೆ ಏಕೆ ಜಾಗವಿಲ್ಲ ಎಂದು ಪ್ರಶ್ನಿಸಿದರು.

ದಳಪತಿಗಳು ಸೂಟ್ಕೇಸ್​​​ ತಗೋತ್ತಾರೆ

ಆದರೆ ಎಲ್ಲಿ ಸೂಟ್ಕೇಸ್ ಸಿಗ್ತಾ ಇದೆ ಅಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಗಳು ನಿಲ್ಲಿಸುತ್ತಾರೆ. ಬಿಜೆಪಿಗೆ ಲಾಭ ಮಾಡಲು ದೇವೇಗೌಡರು, ಕುಮಾರಸ್ವಾಮಿ ಠಿಕಾಣಿ ಹಾಕಿದ್ದಾರೆ ಎಂದು ಜಮೀರ್​ ಆ-ರೋ-ಪಿ-ಸಿ-ದರು. ಇಲ್ಲಿ ಆಲ್ ರೆಡಿ ಸೂಟ್ಕೇಸ್ ಬಂದ್ಬಿಟ್ಡಿದೆ, ಆದರೆ ಹಾನಗಲ್ ಗೆ ಇನ್ನೂ ಸೂಟ್ಕೇಸ್ ರೀಚ್ ಆಗಿಲ್ಲ. ಇವಾಗ ಸಾಯಾಂಕಾಲ ರೀಚ್ ಆದರೆ, ನಾಳೆ ಅಲ್ಲಿಗೆ ಹೋಗ್ತಾರೆ ಎಂದರು.

ಕ-ಣ್ಣೀ-ರು ಹಾಕಿ ಕರೆದಿದ್ದಕ್ಕೆ ಪ್ರಚಾರಕ್ಕೆ ಬಂದಿದ್ದೀನಿ

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರ ನಿರ್ಲಕ್ಷ್ಯ ಮಾಡಿರೋ ಪಟ್ಟಿ ಪ್ರದರ್ಶಿಸಿ ಜಮೀರ್​ ಆ-ಕ್ರೋ-ಶ ವ್ಯಕ್ತಪಡಿಸಿದರು. ಕೆಲವರಿಗೆ ಟಿಕೆಟ್ ಕೊಡಿಸಿ, ಅವರನ್ನು ಬೀದಿಯಲ್ಲಿ ನಿಲ್ಲಸಿದ್ದಾರೆ. ಆದ್ರೆ ಇದೇ ಕುಮಾರಸ್ವಾಮಿ ಇದೀಗ ಅವರ ಪುತ್ರನನ್ನು ಸೋ-ಲಿಸ-ಲು ಮುಂದಾಗಿದ್ದಾರೆ. ಅದಕ್ಕಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ಯನ್ನು ಹಾಕಿದ್ದಾರೆ. ಇಡಿ ದಾ-ಳಿ-ಯಿಂದ ನಾನು ಪ್ರಚಾರದಿಂದ ದೂರ ಉಳಿದಿದ್ದೆ. ಆದ್ರೆ ಸಿದ್ದರಾಮಯ್ಯ ಸೇರಿದಂತೆ ಅನೇಕರು ಮನವಿ ಮಾಡಿದ್ದರು. ಜಮೀರ್ ಅಹ್ಮದ್ ಬರದೇ ಇದ್ರೆ ಕಷ್ಟವಾಗುತ್ತೆ ಅಂತ ಅಶೋಕ ಮನಗೂಳಿ ಕ-ಣ್ಣೀ-ರು ಹಾಕಿದ್ರು. ಅದಕ್ಕಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಉದ್ಘಾಟನೆಗೆ ಬಾರದ ಮೊದಲ ಸಿಎಂ ಕುಮಾರಸ್ವಾಮಿ

ಕರ್ನಾಟಕದಲ್ಲಿ ಹಜ್ ಯಾತ್ರಿಗಳ ಉದ್ಘಾಟನೆಗೆ ಬಾರದ ಮೊದಲ ಸಿಎಂ ಕುಮಾರಸ್ವಾಮಿ ಎಂದು ಆ-ರೋ-ಪಿ-ಸಿದರು. ಬಿಜೆಪಿಯ ಸಿಎಂಗಳು ಕೂಡಾ ಹಜ್ ಉದ್ಘಾಟನೆಗೆ ಬಂದಿದ್ದರು. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ರು. ಆದರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಬ್ಯಾಂಕ್ವೇಟ್ ಹಾಲ್ ನಲ್ಲಿ ಮಾಡಬಾರದು ಅಂತ ಆದೇಶ ಹೊರಡಿಸಿದ್ದರು. ಟಿಪ್ಪು ಜಯಂತಿಗೆ ಬರ್ತೇನೆ ಅಂತ ಹೇಳಿ ಕುಮಾರಸ್ವಾಮಿ ಬರಲಿಲ್ಲ. ಕಾಂಗ್ರೆಸ್ ಗಿಂತ ಹೆಚ್ಚಾಗಿ ಜನರು ನನ್ನ ಬೆಳೆಸಿದ್ದಾರೆ. ಜನರು ನನ್ನ ಮಂತ್ರಿಯಾಗಿ ನೋಡಬೇಕು ಅಂತ ಬಯಸಿದ್ದರು. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡೆಸಿದ ಸರ್ವೆಯಲ್ಲಿ ಜನರು ಭಯಸಿದ್ದರು. ಜನರ ಆಸೆಯಿಂದ ನಾನು ಮಂತ್ರಿಯಾದೆ ಎಂದರು.

ಈಗ ಬೊಮ್ಮಾಯಿ ಅವರು ರಕ್ಷಣೆ ಮಾಡಲಿ

ಸಿಎಂ ಬಸವರಾಜ ಬೊಮ್ಮಾಯಿ ವಿ-ರು-ದ್ಧ-ವೂ ವಾ-ಗ್ದಾ-ಳಿ ನಡೆಸಿದ ಜಮೀರ್​, ಅಲ್ಪಸಂಖ್ಯಾತ ರನ್ನು ರಕ್ಷಣೆ ಮಾಡೋದು ಸಿದ್ದರಾಮಯ್ಯರ ಕೆಲಸ ಅಲ್ಲ. ಅದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರದ್ದು‌. ಯಡಿಯೂರಪ್ಪ ಅಲ್ಪಸಂಖ್ಯಾತ ವಿ-ರೋ-ಧಿ ಅಲ್ಲ ಅಂದಿದ್ದಾರೆ. ಯಾವುದೇ ಮುಖ್ಯಮಂತ್ರಿ ಆದರೂ ಎಲ್ಲ ಸಮುದಾಯದ ರಕ್ಷಣೆ ಮಾಡೋದು ಅವರ ಕರ್ತವ್ಯ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವ್ರು ಅಲ್ಪಸಂಖ್ಯಾತ ರಿಗೆ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ಇವಾಗ ಮುಖ್ಯಮಂತ್ರಿ ಆಗಿರುವ ಬೊಮ್ಮಾಯಿ ಅವ್ರು ನಮ್ಮ ರಕ್ಷಣೆ ಮಾಡಲಿ ಎಂದು ಸವಾಲೆಸೆದರು.

Advertisement
Share this on...