ಹೆಲಿಕಾಪ್ಟರ್ ಕ್ರ್ಯಾಶ್ ಆಗೋಕೂ ಕೆಲವೇ ನಿಮಿಷಗಳ ಹಿಂದೆ ಕುಟುಂಬಸ್ಥರಿಗೆ ಫೋನ್ ಮಾಡಿದ್ದ ಹುತಾತ್ಮ ಯೋಧ ಸಾಯಿತೇಜ: ಆಗ ಅವರು ಏನಂದಿದ್ರಂತೆ ಕೇಳಿ

in Uncategorized 522 views

ತಮಿಳುನಾಡಿನ ಕುನ್ನೂರಿನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಿಂದ ಇಡೀ ದೇಶ ಆ ಶಾಕ್ ನಿಂದ ಇನ್ನೂ ಹೊರಬಂದಿಲ್ಲ. ಈ ಅಪಘಾತದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಬಿಪಿನ್ ರಾವತ್ ಸೇರಿದಂತೆ ಒಟ್ಟು 13 ಜನರು ಹುತಾತ್ಮರಾಗಿದ್ದರು, ಈ 13 ಜನರಲ್ಲಿ ಅನೇಕ ಮಿಲಿಟರಿ ಅಧಿಕಾರಿಗಳಿದ್ದರು, ಅವರ ಕುಟುಂಬವು ಇದೀಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಅವರಲ್ಲಿ ಒಬ್ಬರು ಲ್ಯಾನ್ಸ್ ನಾಯಕ್ ಸಾಯಿ ತೇಜಾ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಸಾಯಿ ತೇಜ ಅವರ ಮನೆಯಲ್ಲಿ ಅವರ ತಂದೆ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ.

Advertisement

ಹೆಲಿಕಾಪ್ಟರ್ ಕ್ರ್ಯಾಶ್‌ಗೂ ಕೆಲವೇ ನಿಮಿಷಗಳ ಮುನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದ ಸಾಯಿತೇಜ

ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ ಅಪಘಾತ ಸಂಭವಿಸುವ ಸ್ವಲ್ಪ ಸಮಯದ ಮುನ್ನ ಸಾಯಿ ತೇಜಾ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದರು ಹಾಗು ಮಕ್ಕಳ ಹಾಗು ತಮ್ಮ ತಂದೆಯ ಯೋಗಕ್ಷೇಮ ವಿಚಾರಿಸಿದ್ದರು. ಸಾಯಿ ತೇಜ ಆತುರದಲ್ಲಿದ್ದುದರಿಂದ ಮನೆಯವರೊಂದಿಗೆ ಸರಿಯಾಗಿ ಮಾತುಕತೆ ನಡೆಸಲಾಗಲಿಲ್ಲ. ಸಾಯಿ ತೇಜಾ ಅವರನ್ನು ಜನರಲ್ ಬಿಪಿನ್ ರಾವತ್ ಅವರ ಭದ್ರತಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಹಾಗಾಗಿಯೇ ಹೆಲಿಕಾಪ್ಟರ್ ಪತನದ ವೇಳೆ ಬಿಪಿನ್ ರಾವತ್ ಜತೆ ಸಾಯಿ ತೇಜಾ ಕೂಡ ಇದ್ದರು.

ಚಿಕ್ಕವಯಸ್ಸಿನಿಂದಲೇ ಸೇನೆಗೆ ಸೇರುವ ಆಸೆ

ಸಾಯಿ ತೇಜಾ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿವಾಸಿ. ಮಗ 2012ರಲ್ಲಿ ಸೇನೆಗೆ ಸೇರಿದ್ದ ಎಂದು ತಂದೆ ಮೋಹನ್ ತಿಳಿಸಿದ್ದಾರೆ. ಹತ್ತನೇ ತರಗತಿಯನ್ನು ಮುಗಿಸಿದ ಕೂಡಲೇ ಸಾಯಿ ತೇಜಾ ಸೇನೆಯ ಉದ್ಯೋಗಕ್ಕಾಗಿ ಪ್ರಯತ್ನಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದರು. ಬಾಲ್ಯದಿಂದಲೂ ಸೈನ್ಯಕ್ಕೆ ಸೇರುವ ಆಸೆ ಸಾಯಿ ತೇಜ ರವರಿಗಿತ್ತು. 2016ರಲ್ಲಿ ಸಾಯಿ ತೇಜಾ ಅವರನ್ನು 11ನೇ ಪ್ಯಾರಾ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು. 7 ತಿಂಗಳ ಹಿಂದೆಯೇ ಲ್ಯಾನ್ಸ್ ನಾಯಕ್ ಸಾಯಿ ತೇಜಾ ಅವರನ್ನು ಜನರಲ್ ಬಿಪಿನ್ ರಾವತ್ ಅವರ ರಕ್ಷಣೆಯಲ್ಲಿ PSO ಆಗಿ ನಿಯೋಜಿಸಲಾಗಿತ್ತು.

ಸಂಕ್ರಾಂತಿಗೆ ಮನೆಗೆ ಬರುತ್ತೇನೆ ಎಂದಿದ್ದ ಸಾಯಿತೇಜ

ಕಳೆದ ಸೆಪ್ಟೆಂಬರ್‌ನಲ್ಲಿ ರಜೆಯ ಮೇಲೆ ಸಾಯಿ ತೇಜಾ ಮನೆಗೆ ಬಂದಿದ್ದರು ಮತ್ತು ಆ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಸಾಕಷ್ಟು ಖುಷಿ ಹಾಗು ಸಂತೋಷದಿಂದ ಸಮಯ ಕಳೆದರು ಎಂದು ಲ್ಯಾನ್ಸ್ ನಾಯಕ್ ಸಾಯಿ ತೇಜಾ ಅವರ ತಂದೆ ಮೋಹನ್ ಹೇಳಿದ್ದಾರೆ. ಮುಂಬರುವ (ಜನವರ  ತಿಂಗಳಿನಲ್ಲಿ) ಸಂಕ್ರಾಂತಿಯಂದು ಮತ್ತೆ ರಜೆ ಹಾಕಿ ಮನೆಗೆ ಬರುವುದಾಗಿ ಸಾಯಿ ತೇಜ ಹೇಳಿದ್ದ ಎಂದು ಅವರ ತಂದೆ ಹೇಳಿದರು. ಆದರೆ ಲ್ಯಾನ್ಸ್ ನಾಯಕ್ ಸಾಯಿ ತೇಜಾ ಮತ್ತೆ ವಾಪಸ್ ಬರುವುದಿಲ್ಲ ಎಂದು ಯಾರಿಗೂ ತಿಳಿದಿರಲಿಲ್ಲ. ಅವರ ನಿಧನಕ್ಕೆ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದ್ದು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ಲ್ಯಾನ್ಸ್ ನಾಯಕ್ ಸಾಯಿ ತೇಜಾ ಅವರು ಅರುಣಾಚಲದಲ್ಲಿ ಚೀನಾ-ಭಾರತದ ಗಡಿಯಲ್ಲಿ high altitude (ಅತಿ ಎತ್ತರದ) ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ counter terro-rist operation ಕಾರ್ಯಾಚರಣೆಯ ಭಾಗವಾಗಿದ್ದಾರೆ.

ಇದಲ್ಲದೆ, ಅವರು mixed martial arts (ಮಿಶ್ರ ಸಮರ ಕಲೆಗಳು), unarmed combat (ನಿರಾಯುಧ ಯುದ್ಧ), ಕಮ್ಯೂನಿಕೇಷನ್ & ಎಲೆಕ್ಟ್ರಾನಿಕ್ ವಾರ್‌ಫೇರ್ ನಲ್ಲಿ ಪರಿಣತರಾಗಿದ್ದರು.

ಲ್ಯಾನ್ಸ್ ಸಾಯಿ ತೇಜಾ ಅವರು ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಹತ್ತುವ ಮೊದಲು ಪತ್ನಿ ಶ್ಯಾಮಲಾ, ಮೂರು ವರ್ಷದ ಮಗ ಮತ್ತು ಎರಡು ವರ್ಷದ ಮಗಳೊಂದಿಗೆ ಕೊನೆಯದಾಗಿ ಮಾತನಾಡಿದ್ದರು.

ಸಾಯಿ ತೇಜಾ ಸಾವಿನಿಂದ ಈಗುವರೆಗಡಿಪಲ್ಲಿ ಗ್ರಾಮಸ್ಥರು ಕೂಡ ದುಃಖ ತೋಡಿಕೊಂಡಿದ್ದಾರೆ. ಅವರ ಸ್ನೇಹಪರ ಸ್ವಭಾವವನ್ನು ಅವರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.

ಸಾಯಿ ತೇಜಾ ಅವರ ಅಂತಿಮ ವಿಧಿವಿಧಾನಗಳ ಕುರಿತು ಮಾತನಾಡಿದ ಅವರ ಕಿರಿಯ ಸಹೋದರ ಮಹೇಶ್, “ಮೃತ ದೇಹಗಳು ಯಾರದ್ದು ಎಂದು ಪತ್ತೆಹಚ್ಚಲೂ ಸಾಧ್ಯವಾಗುತ್ತಿಲ್ಲ ಎಂದು ಕೇಳೋಕೇ ಹೃದಯ ವಿದ್ರಾವಕವಾಗಿದೆ. ವೈದ್ಯಕೀಯ ತಂಡಗಳು ನಮ್ಮ ಪೋಷಕರ ರಕ್ತದ ಮಾದರಿಗಳನ್ನು ಡಿಎನ್ಎ ಹೊಂದಾಣಿಕೆಗಾಗಿ ಸಂಗ್ರಹಿಸಿವೆ. ಕಾರ್ಯವಿಧಾನ ಪೂರ್ಣಗೊಂಡ ನಂತರ, ಶುಕ್ರವಾರ ಸಂಜೆಯೊಳಗೆ ಸಾಯಿ ತೇಜಾ ಶವವನ್ನ ಅವರನ್ನು ಗ್ರಾಮಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ” ಎಂದರು.

Advertisement
Share this on...