ತನ್ನನ್ನ ತಾನು ಬ್ಯಾಚುಲರ್ ಎಂದು ಹೇಳಿಕೊಳ್ಳುವ ಸಲ್ಮಾನ್ ಖಾನ್‌ಗೆ ದುಬೈನಲ್ಲಿದ್ದಾಳೆ ಹೆಂಡತಿ ಹಾಗು 17 ವರ್ಷದ ಮಗಳು? ಅರ್ಬಾಜ್‌ನ ಪ್ರಶ್ನೆಗೆ ಖುದ್ದು ಸಲ್ಮಾನ್ ಖಾನ್ ಹೇಳಿದ್ದೇನು ನೋಡಿ

in Uncategorized 18,824 views

ಬಾಲಿವುಡ್‌ನ ಸೂಪರ್‌ಸ್ಟಾರ್ ಎಂದು ಕರೆಯಲ್ಪಡುವ ಸಲ್ಮಾನ್ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ಚಲನಚಿತ್ರಗಳು ಅಥವಾ ನಟನೆಯ ಸಾಮರ್ಥ್ಯದ ಮೇಲೆ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಸಲ್ಮಾನ್ ಗೆ 55 ವರ್ಷವಾಗಿದ್ದರೂ ಈಗಲೂ ಬ್ಯಾಚುಲರ್ ಆಗಿದ್ದಾರೆ, ಅವರ ಮದುವೆಯ ಬಗ್ಗೆ ಅವರ ಅನೇಕ ಫ್ಯಾನ್ಸ್ ಗಳು ತುಂಬಾ ಚಿಂತಿತರಾಗಿದ್ದಾರೆ. ಮದುವೆ ಯಾವಾಗ ಎಂದು ಜನ ಕೇಳುತ್ತಲೇ ಇರುತ್ತಾರೆ. ಇಷ್ಟೇ ಅಲ್ಲ, ಸಲ್ಮಾನ್ ಯಾಕೆ ಮದುವೆಯಾಗುತ್ತಿಲ್ಲ? ಎಂದು ಜನ ಕೇಳುತ್ತಲೇ ಇರುತ್ತಾರೆ. ಜನರು ಈ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡುತ್ತಲೇ ಇದ್ದಾರೆ. ಇದೇ ಕಾರಣದಿಂದ ಸಲ್ಮಾನ್ ಖಾನ್ ಬಗ್ಗೆ ಪ್ರತಿ ಕ್ಷಣ ಆಶ್ಚರ್ಯಕರ ಸಂಗತಿಗಳು ಹೊರಬರುತ್ತಲೇ ಇರುತ್ತವೆ. ಹೌದು ಇತ್ತೀಚಿನ ದಿನಗಳಲ್ಲಿ ಇಂತಹದೊಂದು ವಿಷಯ ಬಹಿರಂಗವಾಗುತ್ತಿದೆ.

Advertisement

ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ, ಸಲ್ಮಾನ್ ಖಾನ್ ಮದುವೆಯಾಗಿದ್ದಾರೆ. ಸಲ್ಮಾನ್ ಹೆಂಡತಿ ದುಬೈನಲ್ಲಿ ವಾಸಿಸುತ್ತಿದ್ದಾರೆ, ಅಷ್ಟೇ ಅಲ್ಲ, ಸಲ್ಮಾನ್‌ಗೆ 17 ವರ್ಷದ ಮಗಳೂ ಇದ್ದಾಳೆ ಎಂದು ಹೇಳಲಾಗುತ್ತಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದನ್ನು ಕೇಳಿ ಭಾಯ್ ಜಾನ್ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಎಲ್ಲರೂ ಸುದ್ದಿಯನ್ನು ಖಚಿತಪಡಿಸಲು ಬಯಸಿದ್ದರು.

ಗಮನಿಸುವ ಸಂಗತಿಯೇನೆಂದರೆ, ಸಲ್ಮಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ಅವರು ತಮ್ಮ ಟಾಕ್ ಶೋನ ಎರಡನೇ ಸೀಸನ್‌ನೊಂದಿಗೆ ಇತ್ತೀಚೆಗೆ ಪ್ರೇಕ್ಷಕರ ಮಧ್ಯೆ ಬರುತ್ತಿದ್ದಾರೆ. ಈ ಹೊಸ ಸೀಸನ್ ಕೂಡ ಬಹಳಷ್ಟು ಸದ್ದು ಮಾಡುತ್ತಿದೆ. ಇದರ ಪ್ರೋಮೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅರ್ಬಾಜ್ ಖಾನ್ ತಮ್ಮ ಸೂಪರ್ ಸ್ಟಾರ್ ಸಹೋದರ ಸಲ್ಮಾನ್ ಖಾನ್ ಅವರೊಂದಿಗೆ ತಮ್ಮ ಮೊದಲ ಸೀಸನ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ, ಅರ್ಬಾಜ್ ಖಾನ್ ತಮ್ಮ ಅತಿಥಿಗಳಿಗೆ ಜನರ ಟ್ವೀಟ್‌ಗಳನ್ನು ಓದುತ್ತಾರೆ ಮತ್ತು ಅತಿಥಿಗಳು ಅವರಿಗೆ ಉತ್ತರಿಸಬೇಕು. ಈ ಮಧ್ಯೆ, ಯೂಸರ್ ಒಬ್ಬರ ಇಂತಹ ಟ್ವೀಟ್ ಸಲ್ಮಾನ್ ಮತ್ತು ಅರ್ಬಾಜ್ ಅವರ ಮುಂದೆ ಬಂದಿತು, ಅದನ್ನು ಓದಿದ ನಂತರ ಅವರಿಬ್ಬರಿಗೂ ಒಮ್ಮೆಲೇ ಶಾಕ್ ಆಗಿತ್ತು. ಈ ಟ್ವೀಟ್‌ಗೆ ಸಲ್ಮಾನ್ ಕೂಡ ಪ್ರತ್ಯುತ್ತರ ನೀಡಿದ್ದಾರೆ.

ತನ್ನ ಶೋನಲ್ಲಿ, ಅರ್ಬಾಜ್ ಖಾನ್ ಬಾಲಿವುಡ್‌ನ ಭಾಯಿಜಾನ್‌ಗೆ ಯೂಸರ್ ಒಬ್ಬರ ಟ್ವೀಟ್ ಅನ್ನು ಓದಿದರು. “ನೀವು ನಿಮ್ಮ ಪತ್ನಿ ನೂರ್ ಮತ್ತು 17 ವರ್ಷದ ಮಗಳೊಂದಿಗೆ ದುಬೈನಲ್ಲಿದ್ದೀರಿ ಎಂಬುದು ಭಾರತದ ಎಲ್ಲರಿಗೂ ತಿಳಿದಿದೆ. ಇನ್ನು ಎಷ್ಟು ದಿನ ಭಾರತದ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ” ಎಂಬುದನ್ನ ಓದುತ್ತಾರೆ. ಈ ಟ್ವೀಟ್ ಓದಿದ ಸಲ್ಮಾನ್ ಮತ್ತು ಅರ್ಬಾಜ್ ಒಂದು ಕ್ಷಣ ದಂಗಾದರು. ಆಗ ಸಲ್ಮಾನ್, “ಇದು ಯಾರ ಬಗ್ಗೆ?” ಎಂದು ಕೇಳಿದರು. ಆಗ ಅರ್ಬಾಜ್, “ಇದು ನಿನಗೇ, ಅಂದರೆ ಸಲ್ಮಾನ್ ಖಾನ್‌ಗೆ” ಎಂದು ಹೇಳುತ್ತಾರೆ.

ಇದಕ್ಕೆ ಸಲ್ಮಾನ್ ಖಾನ್ ಉತ್ತರಿಸುತ್ತ, “ಈ ಜನರಿಗೆ ನನ್ನ ಬಗ್ಗೆ ಬಹಳಷ್ಟು ತಿಳಿದಿದೆ. ಇದೆಲ್ಲ ಅಸಂಬದ್ಧ. ಇವರು ಯಾರ ಬಗ್ಗೆ ಮಾತನಾಡಿದ್ದಾರೆ, ಎಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದನ್ನು ಯಾರು ಯೋಚಿಸುತ್ತಾರೋ ಅವರಿಗೆ ನಾನು ಉತ್ತರಿಸಲು ಬಯಸುತ್ತೇನೆ. ಸಹೋದರ ನನಗೆ ಯಾವುದೇ ಹೆಂಡತಿ ಇಲ್ಲ, ನಾನು ಭಾರತದಲ್ಲಿ ವಾಸಿಸುತ್ತಿದ್ದೇನೆ, 9 ವರ್ಷದಿಂದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೇನೆ. ನಾನು ಈ ವ್ಯಕ್ತಿಗೆ ಉತ್ತರಿಸಲು ಹೋಗುವುದಿಲ್ಲ, ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂದು ಇಡೀ ಜಗತ್ತಿಗೆ ತಿಳಿದಿದೆ” ಎಂದು ಹೇಳುತ್ತಾರೆ.

ಇದನ್ನೂ ಓದಿ:

ಐಶ್ವರ್ಯ ರೈ ನಿಂದ ಹಿಡಿದು ಕತ್ರಿನಾ ಕೈಫ್ ವರೆಗೆ ಎಲ್ಲ ಗರ್ಲ್ ಫ್ರೆಂಡ್ ಸಲ್ಮಾನ್ ಖಾನ್‌ನ್ನ ಬಿಟ್ಟು ಓಡಿ ಹೋಗಿದ್ಯಾಕೆ? ಸಲ್ಮಾನ್‌ನ ಅಬ್ಬು(ತಂದೆ) ಬಿಚ್ಚಿಟ್ಟರು ಸಲ್ಮಾನ್ ಗಿರುವ ಒಳಸಮಸ್ಯೆ

ಕತ್ರಿನಾ ಕೈಫ್ ಮದುವೆಯ ನಂತರ, ಜನರು ಸಲ್ಮಾನ್ ಖಾನ್‌ನ ಮೇಲೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ಗಮನಿಸುವ ಸಂಗತಿಯೇನೆಂದರೆ, ಕತ್ರಿನಾ ಕೈಫ್ ಈಗಾಗಲೇ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದರು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಸಲ್ಮಾನ್‌ನ ಪ್ರತಿಯೊಂದು ಗರ್ಲ್ ಫ್ರೆಂಡ್ ನಂತೆ ಕತ್ರಿನಾ ಕೈಫ್ ಕೂಡ ಸಲ್ಮಾನ್ ಖಾನ್‌ನ್ನ ಬಿಟ್ಟು ಹೋದಳು.

ಸಲ್ಮಾನ್ ಖಾನ್ ಗಿದ್ದರು ಹಲವಾರು ಗರ್ಲ್ ಫ್ರೆಂಡ್ಸ್

ಸಲ್ಮಾನ್ ಖಾನ್‌ಗೆ ಈಗ 55 ವರ್ಷ ಆದರೆ ಇಲ್ಲಿಯವರೆಗೂ ಸಲ್ಮಾನಗ ಖಾನ್ ಮದುವೆಯಾಗಿಲ್ಲ. ಇದರರ್ಥ ಸಲ್ಮಾನ್ ಖಾನ್ ಜೀವನದಲ್ಲಿ ಯಾವ ಹುಡುಗಿಯೂ ಬರಲಿಲ್ಲವೆಂದಲ್ಲ. ಬಾಲಿವುಡ್‌ನ ಅನೇಕ ನಟಿಯರೊಂದಿಗೆ ಅಫೇರ ಹೊಂದಿದ್ದರು. ಸಲ್ಮಾನ್ ಖಾನ್ ವೃತ್ತಿಜೀವನದ ಆರಂಭದಲ್ಲಿ, ಸಲ್ಮಾನ್ ಹೆಸರು ನಟಿ ಸಂಗೀತಾ ಬಿಜಲಾನಿ ಜೊತೆಗೂ ಕೇಳಿಬಂದಿತ್ತು.

ಇಬ್ಬರ ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿತ್ತು ಆದರೆ ಕೊನೆ ಕ್ಷಣದಲ್ಲಿ ಇವರಿಬ್ಬರ ಸಂಬಂಧ ಮುರಿದು ಬಿದ್ದಿತು ಎಂಬ ಸುದ್ದಿಗಳೂ ಬಂದಿದ್ದವ. ಇದರ ಬೆನ್ನಲ್ಲೇ ಸಲ್ಮಾನ್ ಜೀವನದಲ್ಲಿ ಪಾಕಿಸ್ತಾನಿ ನಟಿ ಸೋಮಿ ಅಲಿ ಖಾನ್ ಎಂಟ್ರಿ ಆಯಿತು. ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡಿದ ನಂತರ ಈ ಸಂಬಂಧವೂ ಕೊನೆಗೊಂಡಿತು.

ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆಗಿನ ಸಂಬಂಧದ ಬಗ್ಗೆ ಸಲ್ಮಾನ್ ತುಂಬಾ ಸೀರಿಯಸ್ ಆಗಿದ್ದರು. ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದ ಮೂಲಕ ಇಬ್ಬರ ಲವ್ ಸ್ಟೋರಿ ಆರಂಭವಾಯಿತು. ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಆದರೆ ನಂತರ ಐಶ್ವರ್ಯಾ ಸಲ್ಮಾನ್ ವಿರುದ್ಧ ಹಿಂ ಸಾ ಚಾ ರದ ಆರೋಪ ಹೊರಿಸಿ ಈ ಸಂಬಂಧವನ್ನು ಕೊನೆಗೊಳಿಸಿದರು. ಇದರ ನಂತರ ಅವರು ಕತ್ರಿನಾ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಆದರೆ ಸಲ್ಮಾನ್‌ನ ಎಲ್ಲಾ ಲವ್ ಸ್ಟೋರಿ ಗಳಂತೆ ಇದು ಕೂಡ ಫ್ಲಾಪ್ ಸ್ಟೋರಿಯಾಗೇ ಉಳಿಯಿತು.

ಯಾವ ಕಾರಣಕ್ಕಾಗಿ ಬ್ರೇಕಪ್ ಆಗುತ್ತಲೇ ಬಂತು?

ಯಾಕೆ ಯಾವ ಗರ್ಲ್ ಫ್ರೆಂಡ್ ಕೂಡ ಸಲ್ಮಾನ್ ಜೊತೆ ಹೆಚ್ಚು ದಿನ ಇರಲು ಸಾಧ್ಯವಾಗಲಿಲ್ಲ ಎಂದು ಅವರ ತಂದೆ ಸಲೀಂ ಖಾನ್ ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಅವರ ಲವ್ ಸ್ಟೋರಿಗಳ ಬ್ರೇಕಪ್ ಗೆ ಕಾರಣ ಅವರ ತಾಯಿ ಸಲ್ಮಾ ಖಾನ್ ಎಂದು ಅವರು ಹೇಳಿದ್ದಾರೆ. ಕೆಲ ಸಮಯದ ಹಿಂದೆ ಫರಾ ಖಾನ್ ಅವರ ‘ಮೇರೆ ಬೀಚ್’ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ತಮ್ಮ ತಂದೆ ತಾಯಿಯೊಂದಿದೆ ಬಂದಿದ್ದರು. ಈ ಶೋ ನಲ್ಲ ಸಲೀಂ ಖಾನ್ ಅವರು ಸಲ್ಮಾನ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದರು.

ಫರಾ ಖಾನ್ ಜೊತೆ ಮಾತನಾಡುವಾಗ ಸಲ್ಮಾನ್ ತಾಯಿ ಸಲ್ಮಾ ಅವರು “ಸಲ್ಮಾನ್‌ಗೆ ಎಷ್ಟು ಜನ ಗರ್ಲ್ ಫ್ರೆಂಡ್ ಗಳಿದ್ದರೋ ಅವರೆಲ್ಲರ ಜೊತೆಗೂ ಸಲ್ಮಾನ್ ಸಂಬಂಧ ತುಂಬಾ ಚೆನ್ನಾಗಿತ್ತು” ಎಂದು ಹೇಳಿದ್ದರು. ಇದೇ ವೇಳೆ ಸಲ್ಮಾನ್ ತಂದೆ, ‘“ಸಲ್ಮಾನ್ ಗೆ ಹೆಚ್ಚು ಹಾನಿ ಮಾಡಿದ್ದು ಅವರ ತಾಯಿ” ಎಂದು ತಮಾಷೆಯಾಗಿ ಹೇಳಿದ್ದಾರೆ.

ಸಲೀಂ ಖಾನ್ ಮಾತನಾಡುತ್ತ, “ಸಲ್ಮಾನ್‌ನ ತಾಯಿಯೇ ಆತನಿಗೆ ಹೆಚ್ಚು ಹಾನಿ ಮಾಡಿದ್ದಾರೆ‌. ಇದಕ್ಕೆ ಕಾರಣ ಏನೆಂದರೆ ಸಲ್ಮಾನ್ ಗರ್ಲ್ ಫ್ರೆಂಡ್ ಆಗಿ ಯಾವ ಹುಡುಗಿಯನ್ನ ಇಷ್ಟ ಪಡುತ್ತಾನೋ ಆನಂತರ ಅವಳಲ್ಲಿ ತನ್ನ ತಾಯಿಯನ್ನು ಹುಡುಕತೊಡಗುತ್ತಾನೆ. ಇದರಿಂದಾಗಿ ಆತನ ಗರ್ಲ್ ಫ್ರೆಂಡ್ ಗಳು ಅವನನ್ನು ಬಿಟ್ಟು ಹೋಗುತ್ತಾರೆ” ಎಂದಿದ್ದರು. ಇದಾದ ನಂತರ ಸಲೀಂ ನಗುತ್ತಾ, ಸಲ್ಮಾನ್‌ನ ತಾಯಿಯಂತೆ ಯಾವುದೇ ಗೆಳತಿ ಕೂಡ ಅವನಿಗೆ ಪ್ರೀತಿಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.

“ಅವನು ತನ್ನ ಗರ್ಲ್ ಫ್ರೆಂಡ್ ನಲ್ಲಿ ತನ್ನ ತಾಯಿಯನ್ನ ತುರುಕಿದರೆ ಹುಡುಗಿ ಓಡಿಹೋಗುತ್ತಾಳೆ” ಎಂದಿದ್ದರು. ಸಲ್ಮಾನ್ ತನ್ನ ಹೆತ್ತವರನ್ನು ತುಂಬಾ ಪ್ರೀತಿಸುತ್ತಾನೆ ಎಂದು ಅವರ ತಂದೆ ಹೇಳಿದರು. ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಬಿಟ್ಟು ಹೊಸ ಮನೆಗೆ ಶಿಫ್ಟ್ ಆಗುವುದಿಲ್ಲ. ಅವರು ಯಾವಾಗಲೂ ತಮ್ಮ ಹೆತ್ತವರೊಂದಿಗೆ ಇರಲು ಇಷ್ಟಪಡುತ್ತಾರೆ ಎಂದು ಶೋ ನಲ್ಲಿ ಫರಾ ಖಾನ್ ಹೇಳಿದ್ದರು.

Advertisement
Share this on...