“ನನ್ನ ಕನಸಿನಲ್ಲಿ ಬಂದು ಸ್ವತಃ ಅಲ್ಲಾಹ್ ಸಂದೇಶ ನೀಡಿದ”: ಗ್ಲಾಮರಸ್ ಲೋಕ, ಅರೆನಗ್ನ‌ ಅಭಿನಯ, ಹಣ ಬಿಟ್ಟು ಹಿಜಾಬ್ ಧರಿಸಿ ಇದೀಗ ಕಣ್ಣೀರಿಟ್ಟ ನಟಿ ಸನಾ ಖಾನ್

in Uncategorized 46,444 views

ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ಮೂರು ವರ್ಷಗಳಾಗಿವೆ. ಸಿನಿಮಾರಂಗ ತೆರೆಯುವ ನಿರ್ಧಾರದ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಸನಾ ಖಾನ್ ಈ ಹಿಂದೆ ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟದ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದಾರೆ. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದಾರೆ.

Advertisement

ಶಾಂತಿ ಕಳೆದುಕೊಂಡಿದ್ದೆ

‘ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಯಾಕೆ? ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು’ ಎಂದು ಹೇಳಿದ್ದಾರೆ.

ನನ್ನ ಕನಸಿನಲ್ಲಿ ನನ್ನದೇ ಸಮಾಧಿ ನೋಡಿದ್ದೆ 

‘ನನಗಿನ್ನು ನೆನಪಿದೆ 2019 ರಂಜಾನ್ ನಲ್ಲಿ  ನಾನು ನನ್ನ ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತಿದ್ದೆ, ನಾನು ಸಮಾಧಿಯಲ್ಲಿ ನನ್ನನ್ನೇ ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಿದೆ, ನಾನು ಅಲ್ಲಿ ನನ್ನನ್ನು ನೋಡಿದೆ. ನಾನು ಬದಲಾಗದಿದ್ದರೆ, ನನ್ನ ಅಂತ್ಯ ಇದೇ ಆಗಲಿದೆ ಎಂಬುದಕ್ಕೆ ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು’ ಎಂದು ಹೇಳಿದ್ದಾರೆ.

ಹಿಜಾಬ್ ಧರಿಸಲು ನಿರ್ಧರಿಸಿದೆ 

‘ನಾನು ಎಲ್ಲಾ ಸ್ಪೂರ್ತಿದಾಯಕ ಭಾಷಣಗಳನ್ನು ಕೇಳುತ್ತಿದ್ದೆ ಎಂದು ಹೇಳಿದರು. ಹಿಬಾಜ್ ಧರಿಸುವುದನ್ನು ಎಂದಿಗೂ ಬಿಡುವುದಿಲ್ಲ ಎಂದು ಸನಾ ಹೇಳಿದ್ದಾರೆ. ‘ನಿಮ್ಮ ಕೊನೆಯ ದಿನವು ಹಿಜಾಬ್ ಧರಿಸಿದ ಮೊದಲ ದಿನವಾಗಿರಲು ನೀವು ಬಯಸುವುದಿಲ್ಲ ಎಂದು ಸಂದೇಶದಲ್ಲಿ ಕೇಳಿದೆ. ಅದು ನನ್ನನ್ನು ತುಂಬಾ ಆಳವಾಗಿ ಸ್ಪರ್ಶಿಸಿದ ವಿಷಯ. ಮರುದಿನದಿಂದನೇ ನಾನು ಹಿಜಾಬ್ ಧರಿಸಲು ಪ್ರಾರಂಭಿಸಿದೆ. ಇನ್ನು  ಯಾವುತ್ತು ತೆಗಿಯಲ್ಲ ಎಂದು ನಿರ್ಧಸಿದೆ’ ಎಂದು ಹೇಳುವ ಮೂಲಕ ಭಾವುಕರಾದರು.
ಸನಾ ಖಾನ್ 2020ರಲ್ಲಿ ಮುಫ್ತಿ ಅನಾಸ್ ಎಂಬವರ ಕೈಹಿಡಿದರು. ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ.

ಮೌಲ್ವಿಯೊಬ್ಬನನ್ನ ಮದುವೆಯಾದ ಸನಾ ಖಾನ್

ಬಾಲಿವುಡ್ ಸ್ಪರ್ಧಿ, ಗ್ಲಾಮರಸ್ ನಟಿ ಸನಾ ಖಾನ್ ಸುದ್ದಿಯಲ್ಲಿದ್ದಾಳೆ. ಕೆಲ ದಿನಗಳ ಹಿಂದೆ ಸನಾ ಖಾನ್ ಸೂರತ್‌ನ ಮುಫ್ತಿ ಅನಸ್ ಸಯೀದ್‌ ಜೊತೆ ನಿಕಾಹ್ (ಮದುವೆ) ಮಾಡಿಕೊಂಡಿದ್ದಳು. ಈಗ ಆಕೆಯ ಫೋಟೋಸ್, ವಿಡಿಯೋಗಳು ಮತ್ತು ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿವೆ. ಇತ್ತೀಚೆಗೆ ಸನಾಳ ಪತಿ ಇನ್ಸ್ಟಾಗ್ರಾಮ್ನಲ್ಲಿ ಮೊದಲ ಸಂದೇಶವನ್ನು ಪೋಸ್ಟ್ ಮಾಡಿದ್ದಾನೆ‌. ಅದು ತನ್ನ ಬೀವಿ (ಹೆಂಡತಿ) ಸನಾ ಖಾನ್ ಗಾಗಿ ಇತ್ತು. ಈಗ ಸನಾ ಮದುವೆಯಾಗಿ ಒಂದು ವಾರ ಪೂರ್ಣಗೊಂಡಿದ್ದಕ್ಕೆ ಹಲವಾರು ಫೋಟೋಗಳನ್ನ ಪೋಸ್ಟ್ ಮಾಡಿದ್ದಾಳೆ.

ಏನು ಆ ಪೋಸ್ಟ್

ಸನಾ ತನ್ನ ಪೋಸ್ಟ್ ನಲ್ಲಿ, “ನಿಮ್ಮ‌ ಜೊತೆ‌ ಮದುವೆಯಾಗುವವರೆಗೂ ನಾನು ಹಲಾಲ್ ಪ್ಯಾರ್ ಇಷ್ಟು ಸುಂದರವಾಗಿರುತ್ತೆ ಅಂತ ಅಂದುಕೊಂಡಿರಲಿಲ್ಲ. ಪ್ರತಿ ಹಲಾಲ್ ಕೆಲಸಗಳಲ್ಲೂ ಬರಕತ್ ಇದೆ” ಎಂದು ಬರೆದಿದ್ದಾಳೆ.

ಮದುವೆಯಾಗಿ ಒಂದು ವಾಯವಾಯ್ತು. ಇದಕ್ಕೂ ಮೊದಲು ಸನಾ ತನ್ನ ಫ್ರಾನ್ಸ್ ಜೊತೆಗೆ ತನ್ನ ಮೆಹಂದಿಯ ಚಿತ್ರಗಳನ್ನ ಪೋಸ್ಟ್ ಮಾಡಿದ್ದಳು.

ಆ ಪೋಸ್ಟ್ ನಲ್ಲಿ ಆಕೆ, “ನನ್ನ ಪ್ರೀತಿ ಇಷ್ಟು ಗಟ್ಟಿಯಿರದಿದ್ದರೆ ನನ್ನ ಕೈ ಮೇಲಿರುವ ಮೆಹಂದಿ ಇಷ್ಟು ಗಾಢವಾಗಿ ಕಾಣುತ್ತಿರಲಿಲ್ಲ” ಎಂದಿದ್ದಾಳೆ. ಅತ್ತ ಆಕೆಯ ಗಂಡ ಮುಫ್ತಿ ಅನಸ್ ಸಯಿದ್ ತನ್ನ ಮದುವೆಯ ಫೋಟೋವೊಂದನ್ನ ಪೋಸ್ಟ್ ಮಾಡಿ ಸನಾ ತನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಶುಕ್ರಿಯಾ ಎಂದಿದ್ದಾನೆ.

2020 ರ ನವೆಂಬರ್ 20 ರಂದು ಸನಾ ಮದುವೆಯಾಗಿತ್ತು

ಸನಾ ಖಾನ್ ಮತ್ತು ಅನಸ್ ಸಯೀದ್ 2020 ರ ನವೆಂಬರ್ 20 ರಂದು ಮದುವೆಯಾಗಿದ್ದರು. ವಿಡಿಯೋ ಲೀಕ್ ಆದ ಬಳಿಕ ಇವರಿಬ್ಬರ ಮದುವೆಯ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಇದರ ನಂತರ, ಸನಾ ಸ್ವತಃ ಪೋಸ್ಟ್ ಮಾಡುವ ಮೂಲಕ ತನ್ನ ಮದುವೆಯ ವಿಚಾರವನ್ನ ದೃಢಪಡಿಸಿದ್ದಳು. ಸನಾ ಈ ಹಿಂದೆಯೆ ಗ್ಲಾಮರ್ ವರ್ಲ್ಡ್ ಗೆ ವಿದಾಯ ಹೇಳಿದ್ದಾಳೆ.

ಸನಾ ಮುಫ್ತಿ ಜೊತೆ ಮದುವೆಯಾಗಿರುವ ಸುದ್ದಿ ತಿಳಿಯುತ್ತಲೇ ಆಕೆಯ ಹಳೆಯ ಗ್ಲಾಮರಸ್ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಅವುಗಳನ್ನು ಪೋಸ್ಟ್ ಮಾಡಿ ಜನ “ಇಷ್ಟು‌ ದಿನ ನಿನಿಗಿಷ್ಟ ಬಂದಂತೆ ಬದುಕಿದ್ದೆ, ಗ್ಲಾಮರಸ್ ಆಗಿ ಕಾಣುತ್ತಿದ್ದೆ,‌ ಈಗ ನೀನು‌ ಮದುವೆಯಾಗಿದೀಯ ಅದೂ ಒಬ್ಬ ಇ-ಸ್ಲಾಮಿ-ಕ್ ಮುಫ್ತಿಯ ಜೊತೆ. ಅವನಂತೂ ಇ-ಸ್ಲಾಂ ಕಟ್ಟಳೆಗಳನ್ನ ನಿನ್ನ ಮೇಲೆ ಹೇ-ರುತ್ತಾ-ನೆ, ನಿನ್ನ ಜೀವನ ಮು-ಗೀ-ತು. ಇನ್ನುಮುಂದೆ ನೀನು ಗ್ಲಾಮರಸ್ ಅಲ್ಲ ಬು-ರ್ಖಾ-ದೊಳಗೇ ಇರಬೇಕು. ನಿನಗೆ ಬೇರೆ ಯಾವನೂ ಸಿಗಲಿಲ್ಲವಾ? ಆ ಮುಫ್ತಿಯ ಮುಖವಾದರೂ ನೋಡಿದೀಯ? ಹೇಗಿದಾನೆ ನೋಡು, ನಿನಗೂ ಅವನಿಗೂ ಮ್ಯಾಚ್ ಆಗೋದೇ ಇಲ್ಲ” ಎಂದು ಆಕೆಯನ್ನ ಕಿಚಾಯಿಸಿದ್ದರು.

15 ವರ್ಷಗಳ ಹಿಂದೆ ಗ್ಲಾಮರಸ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ಸನಾ

ಸನಾ ಖಾನ್ 15 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಳು. ಆಕೆಯ ಮೊದಲ ಚಿತ್ರ 2005 ರಲ್ಲಿ ‘ಯೆ ಹೈ ಹೈಸೊಸೈಟಿ’ ಎಂಬುದಾಗಿತ್ತು. ಇದು ಲೋ ಬಜೆಟ್ ಅಡಲ್ಟ್ ಫಿಲಂ ಆಗಿದ್ದು, ಇದು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲೇ ಇಲ್ಲ. ಇದರ ನಂತರ, ಸನಾ ಟಿವಿ ಕಮರ್ಷಿಯಲ್ ಮತ್ತು‌ ಜಾಹೀರಾತುಗಳಲ್ಲಿಯೂ ನಟಿಸಿದ್ದಳು. ಟಿವಿಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲೂ ಸನಾ ಖಾನ್ ಸ್ಪರ್ಧಿಯಾಗಿ ಭಾಗವಹಿಸಿದ್ದಳು. ಆದರೆ, ಈಗ ಆಕ ಫಿಲಂ‌ ಇಂಡಸ್ಟ್ರಿ ಜೊತೆ ಸಂಬಂಧವನ್ನು ಸಂಪೂರ್ಣವಾಗಿ ಮುರಿದಿದ್ದಾಳೆ. ಈ ಹಿಂದೆ ಅವರು ಇಂಡಸ್ಟ್ರಿಗೆ ವಿದಾಯ ಹೇಳಿದ್ದ ಆಕೆ ತಾನು ಧರ್ಮದ ಮಾರ್ಗವನ್ನು ಅನುಸರಿಸಲು ಬಯಸುತ್ತೇನೆ ಎಂದು ಹೇಳಿದ್ದಳು.

Advertisement
Share this on...