ಅತ್ತ ಮಗಳಿಗೆ ಹೆರಿಗೆ ನೋವು, ಇತ್ತ ತಾಯಿಗೆ ಹೃದಯಾಘಾತ, ಸತ್ತು 45 ನಿಮಿಷಗಳ ಬಳಿಕ ಜೀವಂತವಾದ ಮಹಿಳೆ: ಪವಾಡ ಕಂಡು ಆಸ್ಪತ್ರೆಯ ವೈದ್ಯರೇ ಶಾಕ್

in Uncategorized 1,212 views

* ಸತ್ತು ಹೋದ 45 ನಿಮಿಷದ ಬಳಿಕ ಜೀವಂತವಾದ ಮಹಿಳೆ

Advertisement

* ಅತ್ತ ಮಗಳಿಗೆ ಹೆರಿಗೆ ನೋವು, ಇತ್ತ ತಾಯಿಗೆ ಹೃದಯಾಘಾತ

* ಪವಾಡ ಕಂಡು ವೈದ್ಯರಿಗೇ ಅಚ್ಚರಿ

ಮೇರಿಲ್ಯಾಂಡ್: ಯಾರು ಸಾವನ್ನಪ್ಪುತ್ತಾರೋ ಅವರು ಮತ್ತೆಂದೂ ಮರಳುವುದಿಲ್ಲ ಎಂಬುವುದನ್ನು ನಾವು ಬಾಲ್ಯದಂದಲೇ ಕೇಳಿ ಬಂದಿದ್ದೇವೆ. ಇದು ನಿಜ ಕೂಡಾ. ಆದರೀಗ ಅಚ್ಚರಿಯ ಘಟನೆಯೊಂದು ವರದಿಯಾಗಿದ್ದು, ಇದು ನಿಜವೆಂದು ಯಾರಿಗೂ ನಂಬಲಾಗುತ್ತಿಲ್ಲ. ಆದರೆ ನಂಬಲೇಬೇಕಾಗಿದೆ. ಹೌದು ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲೊಬ್ಬ ಮಹಿಳೆ ಸಾವನ್ನಪ್ಪಿದ್ದು, ಆಕೆ ಮೃ ತ ಪಟ್ಟಿರುವುದಾಗಿ ಖುದ್ದು ವೈದ್ಯರೇ ಪರಿಶೀಲಿಸಿ ಘೋಷಿಸಿದ್ದರು. ಆದರೆ ಇದಾದ ಬರೋಬ್ಬರಿ 45 ನಿಮಿಷಗಳ ಬಳಿಕ ಆ ಮಹಿಳೆ ಎದ್ದು ಕುಳಿತ್ತಿದ್ದಾಳೆ.

ದ ಸನ್ ಮಾಡಿದ ವರದಿಯನ್ವಯ ಅಮೆರಿಕದ ಕ್ಯಾಥಿ ಎನ್ನುವವರಿಗೆ ಹೊಸ ಜೀವನ ಸಿಕ್ಕಿದೆ. ಆಕೆ ಅಮೆರಿಕದ ಪೂರ್ವ ಕರಾವಳಿಯ ಮೇರಿಲ್ಯಾಂಡ್‌ ನಿವಾಸಿ. ವಾಸ್ತವವಾಗಿ ಕ್ಯಾಥಿಯ ಮಗಳು ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇನ್ನು ಕ್ಯಾಥಿ ಗಾಲ್ಫ್‌ ಕೋರ್ಸ್‌ನಲ್ಲಿದ್ದಾಗ ಈ ಮಾಹಿತಿ ಬಂದಿದೆ. ಕೂಡಲೇ ಆಕೆ ಅಲ್ಲಿಂದ ಆಸ್ಪತ್ರೆಗೆ ತೆರಳಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಆಕೆಗೆ ಹೃದಯಾಘಾತ ಕಾಣಿಸಿಕೊಂಡಿದೆ.

ಇಂತಹ ಪರಿಸ್ಥಿತಿಯಲ್ಲಿ, ಕ್ಯಾಥಿಯನ್ನು ತಕ್ಷಣವೇ ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲಾಯಿತು. ವೈದ್ಯರ ಪ್ರಕಾರ, ಕ್ಯಾಥಿಯ ನಾಡಿ ಸಿಕ್ಕಿಲ್ಲ. ಹೀಗಾಗಿ ಬಹಳ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಥಿಯ ಮೆದುಳಿಗೆ ಸುಮಾರು 45 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರು ಕ್ಯಾಥಿ ಮೃ ತ ಪಟ್ಟಿರುವುದಾಗಿ ಘೋಷಿಸಿದ್ದಾರೆ.

ವೈದ್ಯರ ಭಾಷೆಯಲ್ಲಿ ಹೇಳುವುದಾದರೆ ಕ್ಯಾಥಿಯನ್ನು ಕ್ಲಿನಿಕಲಿ ಡೆಡ್ ಎಂದು ಘೋಷಿಸಲಾಗಿದೆ. ಅತ್ತ, ಕ್ಯಾಥಿಯ ಮಗಳಿಗೆ 36 ಗಂಟೆಯ ಹೆರಿಗೆ ನೋವಿನ ಬಳಿಕ ಸಿಸೇರಿಯನ್ ಮೂಲಕ ಹೆರಿಗೆ ನಡೆದಿದೆ. ಈ ಆತಂಕದ ಸನ್ನಿವೇಶದಲ್ಲಿ ಇತ್ತ ಕ್ಯಾಥಿ ಸತ್ತ ಕೇವಲ 45 ನಿಮಿಷಗಳ ಬಳಿಕ ಮತ್ತೆ ಎದ್ದು ಕುಳಿತ್ತಿದ್ದಾರೆ. ಪವಾಡದಂತೆ ನಡೆದ ಈ ಘಟನೆ ಬಗ್ಗೆ ಕೇಳಿದವರೆಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಇದೇ ರೀತಿಯ ಘಟನೆ ಅನುಭವಿಸಿದ್ದ ವ್ಯಕ್ತಿ

ವ್ಯಕ್ತಿಯೊಬ್ಬ ತಾನು 23 ನಿಮಿಷಗಳ ಕಾಲ ಸತ್ತು ಬಳಿಕ ಬದುಕಿ ಬಂದಿದ್ದಾಗಿ ಹೇಳಿಕೊಂಡಿದ್ದಾನೆ. ಆ ಸಮಯದಲ್ಲಿ ಅವನನ್ನು ನರಕದ ಆಳಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಅವನು ಹಳ್ಳದಲ್ಲಿ ಸುಡುವ ದೇಹಗಳನ್ನು ನೋಡಿದನು. ತನ್ನ ‘ಭಯಾನಕ ಅಗ್ನಿ ಪರೀಕ್ಷೆ’ಯನ್ನು ವಿವರಿಸಿದ ಬಿಲ್ ವೈಸ್, ಆ ಭಯಾನಕ ಪ್ರಯಾಣದಲ್ಲಿ ತನ್ನ ದೇಹದಿಂದ ಮಾಂಸವನ್ನು ಕಸಿದುಕೊಂಡ ಇಬ್ಬರು ‘ಕ್ರೂರ’ ರಾಕ್ಷಸರನ್ನೂ ಭೇಟಿಯಾದನೆಂದು ಹೇಳಿಕೊಂಡಿದ್ದಾನೆ.

ಹೀಗಿತ್ತಂತೆ ನರಕ

ದಿ‌ ಸನ್ ವರದಿಯ ಪ್ರಕಾರ, ಬಿಲ್ ವೈಸ್ ಎಂಬ ವ್ಯಕ್ತಿ ಕ್ರಿಶ್ಚಿಯನ್ ಬ್ರಾಡ್‌ಕಾಸ್ಟರ್ ಟಿಸಿಟಿ ನೆಟ್‌ವರ್ಕ್‌ಗೆ ನೀಡಿದ ಇಂಟರ್‌ವ್ಯೂ ನಲ್ಲಿ, “ಮಧ್ಯರಾತ್ರಿಯಲ್ಲಿ ಡ್ರಿಂಕ್ ತೆಗೆದುಕೊಳ್ಳಲೆಂದು ಎದ್ದಾಗ ನಾನು ದೇಹದಿಂದ ಹೊರಬಂದಂತೆ ಭಾಸವಾಯಿತು. ಯಾರೋ ನನ್ನ ಆತ್ಮವನ್ನು ದೇಹದಿಂದ ಎಳೆದು ನಂತರ ದೀರ್ಘವಾದ, ಕತ್ತಲೆಯಾದ ಸುರಂಗದ ಮೂಲಕ ನರಕಕ್ಕೆ ಕೊಂಡೊಯ್ದರು” ಎಂದು ಹೇಳಿದ್ದಾನೆ‌. ಆತ ಮುಂದೆ ಮಾತನಾಡುತ್ತ, “ಅದು ಅತ್ಯಂತ ಬಿಸಿಯಾದ ಸ್ಥಳವಾಗಿತ್ತು ಮತ್ತು ನಾನು ನರಕದ ಸೆರೆ ಮನೆಯ ಕಲ್ಲಿನ ನೆಲದ ಮೇಲೆ ಇಳಿದೆ. ಸೆರೆ ಮನೆಯ ಗೋಡೆಗಳು ಕತ್ತಲಕೋಣೆಯಂತೆ ಕಲ್ಲಿನಿಂದ ಕೂಡಿದ್ದವು”.

ವಿಪರೀತ ಬಿಸಿ ಹಾಗು ದುರ್ವಾಸನೆಯಿಂದ ಕೂಡಿದ್ದ ಕತ್ತಲಕೋಣೆ

ಈ ಬಗ್ಗೆ ಮಾತನಾಡಿದ ಬಿಲ್ ವೆಸೆ, “ಅದು ಒಂದು ಕೊಳಕು, ದುರ್ವಾಸನೆ, ಹೊಗೆಯಿಂದ ಕೂಡಿದ್ದ ಕತ್ತಲ ಕೋಣೆಯಾಗಿತ್ತು” ಎಂದು ಹೇಳುತ್ತಾರೆ. ಈ ಘಟನೆ ನಡೆದದ್ದು 1998 ರ ನವೆಂಬರ್ ತಿಂಗಳದ್ದಾಗಿದೆ. ಬಳಿಕ ಈ ಘಟನೆಯ ಬಗ್ಗೆ ಬಿಲ್ ವೆಸೆ ಪುಸ್ತಕವೊಂದನ್ನ ಬರೆದರು. ಈ ಪುಸ್ತಕದ ಒಂದು ಮಿಲಿಯನ್ ಗೂ ಅಧಿಕ ಪ್ರತಿಗಳು ಈಗಾಗಲೇ ಮಾರಾಟವಾಗಿವೆ.

ಬಿಲ್ ವೆಸೆ ತನ್ನ ಜೊತೆ ನಡೆದ ಆ ಘಟನೆಯನ್ನ ನೆನಪಿಸಿಕೊಳ್ಳುತ್ತ, “ನರಕದಲ್ಲಿನ ಆ ಬಿಸಿ ಶಾಖ ನಿಜಕ್ಕೂ ಅಸಹನೀಯವಾಗಿತ್ತು, ಇಲ್ಲಿ ನಾನ್ಹೇಗೆ ಜೀವಂತವಾಗಿರೋಕೆ ಸಾಧ್ಯ? ನಾನು ಇಲ್ಲಿಗೆ ಬಂದಿದ್ದಾದರೂ ಹೇಗೆ? ಅಂತ ಯೋಚಿಸುತ್ತಿದ್ದೆ”

ರಾಕ್ಷಸರು ತನ್ನ ಪಂಜಾ (ಉದ್ದ ಉಗುರು) ಗಳಿಂದ ಎದೆ ಬಗೆದರು

ಬಿಲ್ ಅಲ್ಲಿ ಒಬ್ಬನೇ ಇರಲಿಲ್ಲ, ಆ ಜೈಲಿನಲ್ಲಿ ಬಿಲ್ ಜೊತೆ ಇಬ್ಬರು ವಿಶಾಲ ಕಾಯದ ರಾಕ್ಷಸರ ಭೇಟಿಯಾಯಿತು. ಅವರಿಬ್ಬರೂ ಬಿಲ್ ಜೊತೆ ಕ್ರೂರವಾಗಿ ವರ್ತಿಸಿದರು. ಅವರು ಅತ್ತಿತ್ತ ಓಡಾಡುತ್ತ ನನ್ನ ಜೊತೆ ದುರ್ವ್ಯವಹಾರ ನಡೆಸುತ್ತಿದ್ದರು ಅಂತ ಬಿಲ್ ಹೇಳಿಕೊಂಡಿದ್ದಾರೆ.

“ಒಬ್ಬ ರಾಕ್ಷಸನಂತೂ ನನ್ನನ್ನ ಎತ್ತಿ ಜೈಲಿನ ಗೊಡೆಗೆ ಎಸೆದುಬಿಟ್ಟ. ನನ್ನ ಮೂಳೆಗಳೆಲ್ಲಾ ಮುರಿದುಹೋದಂತೆ ಭಾಸವಾಯಿತು. ಮತ್ತೊಬ್ಬ ರಾಕ್ಷಸ ತನ್ನ ಪಂಜಾ ಗಳಿಂದ ನನ್ನ ಎದೆ ಸೀಳಿಬಿಟ್ಟ”

ಬಿಲ್ ಹೇಳುವ ಪ್ರಕಾರ ಅಲ್ಲಿನ ಆಳವಾದ ಸ್ಥಳವೊಂದರಲ್ಲಿ ಸಾವಿರಾರು ಜನ ಚೀರುತ್ತ, ಸುಡುತ್ತ ಒದ್ದಾಡುತ್ತಿದ್ದರು. ಅದಾದ ಬಳಿಕ ನಾನು ಕಣ್ಣು ತೆರೆದಾಗ ಡಾಕ್ಟರ್ ಒಬ್ಬರು ಈತನನ್ನ ಬದುಕಿಸಿಕೊಂಡೆವು ಎಂದು ಹೇಳೋದನ್ನ ಕೇಳಿದೆ ಎಂದು ಹೇಳಿದ್ದಾರೆ.

Advertisement
Share this on...