Shafiqur Rahman Barq on Hindu Rashtra: ಸನಾತನ ಧರ್ಮವನ್ನು ಅವಮಾನಿಸಲು ಸಮಾಜವಾದಿ ಪಕ್ಷದ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ. ಇಲ್ಲಿಯವರೆಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಮಚರಿತಮಾನದ ನೆಪದಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದರು. ಇದೀಗ ಸಂಭಲ್ ಜಿಲ್ಲೆಯ ವಿವಾದಾತ್ಮಕ ನಾಯಕ ಮತ್ತು ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್ (Shafiqur Rahman Barq) ಕೂಡ ಈಗ ಈ ಪೈಪೋಟಿಯಲ್ಲಿ ಧುಮುಕಿದ್ದಾನೆ. ಈತ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ, ಅಥವಾ ಅದು ಎಂದಿಗೂ ಹಿಂದೂ ರಾಷ್ಟ್ರವಾಗುವುದಿಲ್ಲ ಎಂದು ಹೇಳಿದ್ದಾನೆ. ಮುಸ್ಲಿಮರು ಮಾತ್ರವಲ್ಲ, ಭಾರತದಲ್ಲಿ ವಾಸಿಸುವ ಉಳಿದ ಜನರು ಹಿಂದೂ ರಾಷ್ಟ್ರವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಬರ್ಕ್ ಹೇಳಿದ್ದಾನೆ.
‘ಪ್ರಪಂಚದಲ್ಲಿ ಅಸಲಿ ಏಕೈಕ ಧರ್ಮವೆಂದರೆ ಅದು ಇಸ್ಲಾಂ’
ಸಮಾಜವಾದಿ ಪಕ್ಷದ ಸಂಸದ ಬರ್ಕ್ ವಿಷಕಾರಿ ಮಾತುಗಳು ಇಲ್ಲಿಗೆ ನಿಲ್ಲಲಿಲ್ಲ. ಅಲ್ಲಾ ಸೃಷ್ಟಿಸಿದ ಇಸ್ಲಾಂ ಧರ್ಮ ಮಾತ್ರ ಜಗತ್ತಿನ ನಿಜವಾದ ಧರ್ಮ. ಉಳಿದೆಲ್ಲವೂ ನಂತರ ಹುಟ್ಟಿದ ಆರಾಧನೆಗಳು. ಕುರಾನ್ ಷರೀಫ್ ಲೌಕಿಕವಲ್ಲ, ಸ್ವರ್ಗೀಯ ಗ್ರಂಥವಾಗಿದ್ದು, ಕೋಟ್ಯಂತರ ಜನರು ಇದರಿಂದ ಸ್ಫೂರ್ತಿ ಪಡೆದು ಮುನ್ನಡೆಯುತ್ತಾರೆ. ಈ ಪುಸ್ತಕದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಮತ್ತು ಹಾಗೆ ಮಾಡಲು ಯೋಚಿಸುವವರು ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಹೊರಬೇಕಾಗುತ್ತದೆ ಎಂದು ಶಫೀಕರ್ ರಹಮಾನ್ ಬರ್ಕ್ ಹೇಳಿದ್ದಾನೆ.
‘ಭಾರತವು ಹಿಂದೂ ರಾಷ್ಟ್ರವಾಗಿರಲಿಲ್ಲ ಅಥವಾ ಅದು ಎಂದಿಗೂ ಆಗುವುದಿಲ್ಲ’
ಇಸ್ಲಾಂ ಧರ್ಮದ ಬಗ್ಗೆ ಪ್ರತಿಕ್ರಿಯಿಸಲು ಅಥವ ಟಿಪ್ಪಣಿ ನೀಡಲು ಸಾಧು ಸಂತರಿಗೆ ಯಾವುದೇ ಹಕ್ಕಿಲ್ಲ ಎಂದು ಶಫೀಕರ್ ರಹಮಾನ್ ಬರ್ಕೆ ಹೇಳಿದರು. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಜುನಾ ಅಖಾರದ ಮಹಾಮಂಡಲೇಶ್ವರ ಯತೀಂದ್ರ ನಂದ ಗಿರಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಸ್‌ಪಿ ಸಂಸದ ಶಫೀಕರ್ ರಹಮಾನ್ ಬರ್ಕ್, ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ ಮತ್ತು ಮುಂದೆಯೂ ಹಿಂದೂ ರಾಷ್ಟ್ರ ಆಗುವುದೂ ಇಲ್ಲ. ದೇಶದ ಮುಸ್ಲಿಮರು ಮಾತ್ರವಲ್ಲದೆ ಭಾರತದಲ್ಲಿ ವಾಸಿಸುವ ಇತರ ಜನರು ಸಹ ಭಾರತವನ್ನು ಹಿಂದೂ ರಾಷ್ಟ್ರವೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
‘ಇಂಥಾ ಜನರು ಏನೂ ಮಾಡಿಕೊಳ್ಳೋಕಾಗಲ್ಲ’
ಬರ್ಕ್ ಹೇಳಿಕೆಗೆ ಉತ್ತರಾಖಂಡದ ರೂರ್ಕಿಯ ಜುನಾ ಅಖಾಡಾದ ಮಹಾಮಂಡಲೇಶ್ವರ ಯತೀಂದ್ರ ನಂದ ಗಿರಿ ಪ್ರತಿಕ್ರಿಯಿಸಿದ್ದಾರೆ. ಬರ್ಕ್ (ಶಫೀಕರ್ ರಹಮಾನ್ ಬರ್ಕ್) ಅವರಂತಹವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಬಹುದೇ ಹೊರತು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮಹಾಮಂಡಲೇಶ್ವರರು ಹೇಳಿದರು. ಈ ಜನರಲ್ಲಿ ಯಾವುದೇ ಶಕ್ತಿ ಇಲ್ಲ. ಅವರ ಮುಂದೆ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶ್ಮೀರದಿಂದ 370 ನೇ ವಿಧಿಯನ್ನು ಸಹ ತೆಗೆದುಹಾಕಲಾಗಿದೆ. ಈಗ ಭವಿಷ್ಯದಲ್ಲಿ ದೇಶವೂ ಹಿಂದೂ ರಾಷ್ಟ್ರವಾಗಲಿದೆ ಎಂದಿದ್ದಾರೆ.
ಭಾರತ ಮೊದಲಿನಿಂದಲೂ ಹಿಂದೂ ರಾಷ್ಟ್ರ: ಮನೋಜ್ ತಿವಾರಿ
ಮತ್ತೊಂದೆಡೆ, ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಭಾರತವು ಮೊದಲಿನಿಂದಲೂ ಮೂಲತಃ ಹಿಂದೂ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ನಮ್ಮ ಸಂಸ್ಕೃತಿ ಪೂರ್ವದಿಂದ ಪಶ್ಚಿಮಕ್ಕೆ ಒಂದು. ಭಾಷೆ ಮಾತ್ರ ಬೇರೆ. ಇದು ಅನೇಕ ಜನರ ಅಭಿಪ್ರಾಯವಾಗಿರಬಹುದು, ಅದನ್ನು ಒತ್ತಿಹೇಳುವ ಅಗತ್ಯವಿಲ್ಲ. ನಾವು ಸಂವಿಧಾನವನ್ನು ಅನುಸರಿಸುತ್ತೇವೆ ಮತ್ತು ಅದನ್ನು ನಮ್ಮ ಮಾರ್ಗದರ್ಶಿ ಎಂದು ಪರಿಗಣಿಸುತ್ತೇವೆ ಎಂದು ಹೇಳಿದರು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಹೇಳಿಕೆ ಕುರಿತು ಖಜುರಾಹೊ ಹೋಟೆಲ್‌ನಲ್ಲಿ ಆಯೋಜಿಸಲಾದ ಸಾಹಿತ್ಯೋತ್ಸವದಲ್ಲಿ ಮನೋಜ್ ತಿವಾರಿ ಈ ಹೇಳಿಕೆ ನೀಡಿದ್ದಾರೆ.