ನವದೆಹಲಿ:
ಭಾರತೀಯ ಸೇನೆಯಲ್ಲಿ ಈತ ಕೆಲಸ ಮಾಡುವಾಗ ಸಹೋದ್ಯೋಗಿಗಳು ಅಬ್ಬಾಸ್‌ನನ್ನ ಶೇರು ಎಂದು ಕರೆಯುತ್ತಿದ್ದರು. ಭಾರತೀಯ ಸೇನೆ ಆಫ್ಘಾನಿಸ್ತಾನದವರಿಗಾಗಿ ಬಾಗಿಲುಗಳನ್ನು ತೆರೆದಿಟ್ಟಾಗ 1982ರಲ್ಲಿ ಶೇರು ಸೇರ್ಪಡೆಯಾಗಿದ್ದನು. ಡೆಹರಾಡೂನ್‍ನ ತರಬೇತಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಾಲ ತರಬೇತಿ ಪಡೆದಿದ್ದನು. ಆಗ ಈತನಿಗೆ 20 ವರ್ಷ ವಯಸ್ಸಾಗಿತ್ತು.
ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಆಗಿ ನಿವೃತ್ತನಾದನು. ಆ ಸಂದರ್ಭದಲ್ಲಿ ಈತನೊಬ್ಬ ಉತ್ತಮ ವ್ಯಕ್ತಿಯಾಗಿದ್ದನು. ಇತರರಿಗಿಂತಲೂ ಹಿರಿಯನಾಗಿದ್ದನು. ಈಜು ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದನು. ಆ ವೇಳೆ ಅವರಲ್ಲಿ ತೀವ್ರವಾದದ ಯಾವ ಮನಸ್ಥಿತಿಗಳು ಇರಲಿಲ್ಲ ಎಂದು ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಡಿ.ಎ.ಚತುರ್ವೇದಿ ಹೇಳಿದ್ದಾರೆ.
ಮತ್ತೊಬ್ಬ ಸೇನಾಧಿಕಾರಿ ಖೇಹರ್‍ಸಿಂಗ್ ಶೇಖಾವತ್ ಕೂಡ ಶೇರು ಬಗ್ಗೆ ಮಾತನಾಡಿದ್ದು, ನನ್ನ ಬಳಿ ಈಗಲೂ ಆತನೊಂದಿಗಿನ ಫೋಟೋಗಳಿವೆ. ನೀರಿನಲ್ಲಿ ಮೀನಿಗಿಂತಲೂ ವೇಗವಾಗಿ ಈಜುತ್ತಿದ್ದ. ಉತ್ತಮ ಸ್ನೇಹಿತನಾಗಿದ್ದ ಎಂದು ಹೇಳಿದ್ದಾರೆ. ಭಾರತೀಯ ಸೇನೆ ಸೇರಿದ ಬಳಿಕ ಶೇರು ಆಫ್ಘಾನ್ ರಾಷ್ಟ್ರೀಯ ಸೇನೆಯ ಲೆಫ್ಟಿನೆಂಟ್ ಆಗಿ ಸೇರಿಕೊಂಡಿದ್ದನು. ಸೋವಿಯತ್ ಆಫ್ಘನ್ ಮಹಾ ಯು ದ್ಧ, ಇ ಸ್ಲಾ ಮಿ ಕ್ ಲಿಬರೇಷನ್ ಆಫ್ ಆಫ್ಘಾನಿಸ್ತಾನ್ ಯು ದ್ಧ ಗಳಲ್ಲಿ ಹೋ ರಾ ಟ ಮಾಡಿದ್ದನು.
ಈ ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಉಪಮಂತ್ರಿಯಾಗಿ ಕೆಲಸ ಮಾಡಿದ್ದನು. ಬಿಲ್‍ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಅಲ್ಲಿಗೆ ತೆರಳಿ ಮಾತುಕತೆ ನಡೆಸಿದ್ದನು. ತಾಲಿಬಾನ್‍ನ ಮುಖ್ಯಸ್ಥರಾಗಿ ನೇಮಕವಾದ ನಂತರ ಉ ಗ್ರ ವಾ ದ ವನ್ನು ಅಳವಡಿಸಿಕೊಂಡು ಈಗ ಬಂ ಡು ಕೋ ರ ರ ಗುಂಪಿನ ನಾಯಕನಾಗಿದ್ದಾನೆ.