ಮುಖದ ಚರ್ಮದ ಸುಕ್ಕು ಅಥವಾ ನೆರಿಗೆ ಕಡಿಮೆ ಮಾಡಲು ಏನು ಮಾಡಬೇಕು? ಇಲ್ಲಿದೆ ಉಪಾಯ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 595 views

ಸೌಂದರ್ಯ, ಅದರಲ್ಲಿಯೂ ಮುಖದ ಸೌಂದರ್ಯದ ಬಗ್ಗೆ ಯಾರಿಗೆ ತಾನೆ ಕಾಳಜಿ ಇರಲ್ಲ ಹೇಳಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಖದಲ್ಲಿ ಹೆಚ್ಚಾಗಿ ಸುಕ್ಕು ಅಥವಾ ನೆರಿಗೆಗಳು ಕಂಡುಬರುತ್ತವೆ. ನಮ್ಮ ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಇಂದು 30 ವರ್ಷದವರೂ ಕೂಡ 40 ವರ್ಷದವರಂತೆ ಕಾಣುವಂತಾಗಿದೆ. ಈ ನೆರಿಗೆ ಅಥವಾ ಸುಕ್ಕನ್ನು ಕಡಿಮೆ ಮಾಡಲು ಯಾವುದೋ ಥೆರಪಿ ಅಥವಾ ಬೊಟೊಕ್ಸ್ ಮೊರೆ ಹೋಗಬೇಕಿಲ್ಲ. ನಮ್ಮ ಆಹಾರ ಪದ್ಧತಿಯ ಜತೆಗೆ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಹೆಚ್ಚು ನೀರು ಸೇವನೆ, ಹೆಚ್ಚು ಹೆಚ್ಚು ಹಣ್ಣುಗಳ ಸೇವನೆ, ಗುಡ್ ಫ್ಯಾಟ್ ಅಥವಾ ಉತ್ತಮ ಕೊಬ್ಬು, ವಿಟಮಿನ್ ಸಿ ಇವು ನಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.ಹಾಗಾದರೆ ಮುಖದ ಮೇಲಿನ ಸುಕ್ಕು ಅಥವಾ ನೆರಿಗೆ ಕಡಿಮೆ ಮಾಡಲು ಇಲ್ಲಿದೆ ಕೆಲ ಉಪಾಯ. ಒಂದು ತಿಂಗಳ ಕಾಲ ಈ ಕ್ರಮವನ್ನು ಅನುಸರಿಸಿ. ನಿಮ್ಮ ಮುಖದಲ್ಲಿ ಆಗುವ ಬದಲಾವಣೆಯನ್ನು ನೀವೆ ಗಮನಿಸಿ.

Advertisement

ಮುಖದಲ್ಲಿ ಸುಕ್ಕು ಅಥವಾ ನೆರಿಗೆಯುಳ್ಳವರು ರಾತ್ರಿ ಮಲಗುವಾಗ ಎಕ್ಸ್ಟ್ರಾ ಒರ್ಜಿನ್ ಕೋಲ್ಡ್ ಪ್ರೆಶ್ ಆಲಿವ್ ಆಯಿಲ್ ನನ್ನು ಸ್ವಲ್ಪ ನಿಮ್ಮ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ ಮಲಗಿ. ಹೀಗೆ ಒಂದು ತಿಂಗಳ ಕಾಲ ರಾತ್ರಿ ಮಲಗುವಾಗ ಮುಖಕ್ಕೆ ಮಸಾಜ್ ಮಾಡಿ ಮಲಗುವುದರಿಂದ ನಿಮ್ಮ ಮುಖದಲ್ಲಿನ ಸುಕ್ಕು ಕಡಿಮೆಯಾಗುತ್ತದೆ.ಇನ್ನೊಂದು ವಿಧಾನವೆಂದರೆ ಕ್ಯಾರೆಟ್. ಬಿಟಾ ಕ್ಯಾರೋಟಿನ್ ಎಂಬ ಉತ್ತಮ ಅಂಶ ಕ್ಯಾರೆಟ್ ನಲ್ಲಿದೆ. ೨-೩ ಕ್ಯಾರೆಟ್ ನ್ನ್ನು ಕುಕ್ಕರಿನಲ್ಲಿ ಬೇಸಿಕೊಳ್ಳಿ. ಬಳಿಕ ಆ ಕ್ಯಾರೇಟ್ ನ್ನು ಚೆನ್ನಾಗಿ ಸ್ನ್ಯಾಶ್ ಮಾಡಿ ಅದಕ್ಕೆ ಸ್ವಲ್ಪ ಶುದ್ಧ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳಿ. ಹೀಗೆ ಲೇಪಿಸಿಕೊಂಡು ಸುಮಾರು 20 ನಿಮಿಷ ಹಾಗೇಯೇ ಬಿಡಿ. 20 ನಿಮಿಷದ ಬಳಿಕ ಉಗುರು ಬೆಚ್ಚನೆ ನೀರಿನಿಂದ ತೊಳೆದುಕೊಳ್ಳಿ. ಇದು ಕೂಡ ಮುಖದ ಸುಕ್ಕು ಕಡಿಮೆ ಮಾಡಲು ಪರಿಣಾಮಕಾರಿ ವಿಧಾನವಾಗಿದೆ.

ಮುಖದ ಸೌಂದರ್ಯಕ್ಕೆ ಇನ್ನೊಂದು ವಿಧಾನವೆಂದರೆ ನಿಂಬೆ ರಸ ಅಥವಾ ಲೆಮನ್ ಜ್ಯೂಸ್. ಅರ್ಧ ನಿಂಬೆರಸ ಹಾಗೂ 2 ಚಮಚ ನೀರಿನಲ್ಲಿ ಬೆರಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದು. ಇದು ಕೂಡ ಸುಕ್ಕು ಕಡಿಮೆ ಮಾಡಲು ಸಹಕಾರಿಯಾಗಿದೆ.ಆಲವೆರಾ ಪ್ರಮುಖವಾಗಿ ಚರ್ಮದ ಸುಕ್ಕು ಕಡಿಮೆಮಾಡುತ್ತದೆ. ಆಲವೆರಾದ ಜೆಲ್ ನ್ನು ತೆಗೆದು ರಾತ್ರಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಬಳಿಕ 2 ಗಂಟೆ ಬಿಟ್ಟು ಮುಖವನ್ನು ತೊಳೆಯಬಹುದು ಇಲ್ಲವೇ ಬೆಳಿಗ್ಗೆ ವರೆಗೂ ಹಾಗೇ ಇದ್ದರು ಯಾವುದೇ ತೊಂದರೆಯಿಲ್ಲ. ಇದು ಚರ್ಮದ ಸುಕ್ಕು ಕಡಿಮೆ ಮಾಡುತ್ತದೆ ಹಾಗೂ ಚರ್ಮದ ಕಲರ್ ಕೂಡ ಬದಲಾಗುತ್ತದೆ.

ಇನ್ನು ಆಹಾರದಲ್ಲಿ ಬದಲಾವಣೆ ಅತಿ ಮುಖ್ಯವಾಗಿರುತ್ತದೆ. ಒಮೆಗಾ 3, ತುಪ್ಪ, ಬೆಣ್ಣೆ, ಹಾಲು, ಮೊಸರಿನಂತಹ ಉತ್ತಮ ಕೊಬ್ಬನ್ನು ವಿಟಮಿನ್ ಸಿ ಇರುವ ನಿಂಬು, ಸೀಬೆ ಹಣ್ಣು, ಆರೆಂಜ್, ಜಿಂಕ್ ಸಿಗುವ ಗೋಡಂಬಿ ಬಾದಾಮಿ, ಪಿಸ್ತಾ, ಕುಂಬಳಕಾಯಿ ಬೀಜ ಇವುಗಳನ್ನು ಹೆಚ್ಚಾಗಿ ಸೇವಿಸಬೇಕು. ಚರ್ಮಕ್ಕೆ ಪ್ರಿಯವಾದ ವಸ್ತುವೆಂದರೆ ನೀರು. ಕನಿಷ್ಟ ನಾಲ್ಕು ಲೀಟರ್ ನೀರನ್ನು ಪ್ರತಿ ದಿನ ಸೇವಿಸುವುದರಿಂದ ನಮ್ಮ ಚರ್ಮದ ಸೌಂದರ್ಯ ವೃದ್ಧಿಸಬಹುದಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...