ನವದೆಹಲಿ: ಕಾಂಗ್ರೆಸ್‌ಗೆ ಬಹಳ ದಿನಗಳಿಂದ ಟೈಂ ಖರಾಬ್ ಆಗಿ ನಡೀತಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳಿಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಂದು ಅಶುಭ ಘಟನೆಯೊಂದು ನಡೆದಿದೆ. ಇಂದು ಕಾಂಗ್ರೆಸ್ ನ 137ನೇ ಸಂಸ್ಥಾಪನಾ ದಿನವಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡಲು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದರು. ಧ್ವಜ ಮೇಲಿತ್ತು. ಅದಕ್ಕೆ ಜೋಡಿಸಿದ್ದ ಹಗ್ಗವನ್ನು ಸೋನಿಯಾ ಹಲವು ಬಾರಿ ಎಳೆದರು. ಧ್ವಜ ಹಾರಲಿಲ್ಲ, ಧೊಪ್ಪನೆ ಕೆಳಗೆ ಬಿದ್ದಿತು.
ಈ ಸುದ್ದಿ ಬಂದ ನಂತರ, ಸೋಶಿಯಲ್ ಮೀಡಿಯಾ ಯೂಸರ್ ಗಳು ಟ್ರೋಲ್ ಮಾಡಲಾರಂಭಿಸಿದರು. ಕಾಂಗ್ರೆಸ್ ತನ್ನ ಗಂಟು ಮೂಟೆ ಕಟ್ಟಬೇಕು ಎಂಬುದನ್ನು ಇದು ತೋರಿಸುತ್ತದೆ ಎಂದು ಹಲವರು ಹೇಳಿದರು. ಅದೇ ಸಮಯದಲ್ಲಿ, ಒಬ್ಬ ಯೂಸರ್, ತನ್ನ ಕೈಯಿಂದ ಹೇಗೆ ಧ್ವಜ ಬಿದ್ದಿದೆಯೋ ಅದೇ ರೀತಿಯಲ್ಲಿ ಅವನು ತನ್ನ ಸರ್ಕಾರವನ್ನು ಅದೇ ರೀತಿ ಬೀಳಿಸಿಕೊಳ್ಳುತ್ತಾರೆ ಎಂದು ಬರೆದಿದ್ದಾನೆ. ಅದೇ ಸಮಯದಲ್ಲಿ, ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತದೆ ಎಂದು ಕಾಂಗ್ರೆಸ್ ಧ್ವಜವೇ ಹೇಳುತ್ತಿದೆ ಎಂದು ಯೂಸರ್ ಒಬ್ಬರು ಅಮಿತ್ ಶಾ ಮತ್ತು ಮೋದಿ ಅವರ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
#WATCH | Congress flag falls off while being hoisted by party's interim president Sonia Gandhi on the party's 137th Foundation Day#Delhi pic.twitter.com/A03JkKS5aC
— ANI (@ANI) December 28, 2021
ನಂತರ ಸೋನಿಯಾ ಗಾಂಧಿ ಅವರು ಮತ್ತೆ ಧ್ವಜಾರೋಹಣ ಮಾಡಿದರು. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನ ಸ್ಥಿತಿ ನೋಡಿದರೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಜ್ಯೋತಿರಾದಿತ್ಯ ಸಿಂಧ್ಯಾ ನಂತಹ ದೊಡ್ಡ ದೊಡ್ಡ ನಾಯಕರು ಪಕ್ಷ ತೊರೆದಿದ್ದಾರೆ. ಪಕ್ಷ ತೊರೆದ ಬಹುತೇಕ ನಾಯಕರು ಯುವಕರೇ ಆಗಿದ್ದಾರೆ. ಇದರೊಂದಿಗೆ ಪಕ್ಷದ ಎಲ್ಲ ಸಂಸದರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ. ಪಂಜಾಬ್‌ನಲ್ಲಿ ಚನ್ನಿ ವರ್ಸಸ್ ಸಿದ್ದು ಕದನವೂ ಹೈಕಮಾಂಡ್‌ನ ಮುಂದಿದೆ. ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಈ ವಿಚಾರವಾಗಿಯೂ ಸಂಸದ ಮನೀಶ್ ತಿವಾರಿ ಹೈಕಮಾಂಡ್‌ನ್ನ ಟಾರ್ಗೆಟ್ ಮಾಡುತ್ತಿದ್ದಾರೆ.
Even the flag wants Congress mukt bharat 😂🤣🤣 pic.twitter.com/fgV145mwOV
— rae (@ChillamChilli_) December 28, 2021
ಅದೇ ಸಮಯದಲ್ಲಿ, ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಪಕ್ಷದ ರಾಜ್ಯ ಘಟಕದ ಕೋಪವನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನನ್ನ ಮಾತನ್ನ ಯಾರೂ ಕೇಳಲ್ಲ ಎಂದು ತರೂರ್ ಇತ್ತೀಚೆಗೆ ಹೇಳಿದ್ದರು. ಕಾಂಗ್ರೆಸ್‌ನಲ್ಲಿ ಅವರ ಸ್ಥಿತಿ ಅಲ್ಪಸಂಖ್ಯಾತರಂತಾಗಿದೆ ಎಂದು ಲೇಖನವೊಂದರಲ್ಲಿ ಹೇಳಿದ್ದರು. ಇದಾದ ನಂತರ, ಕೇರಳ ಕಾಂಗ್ರೆಸ್ ಅಧ್ಯಕ್ಷ ತರೂರ್ ಅವರು ತಮ್ಮ ವಿಧಾನಗಳನ್ನು ಸುಧಾರಿಸದಿದ್ದರೆ, ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಬಹುದು ಎಂದು ಎಚ್ಚರಿಸಿದ್ದರು. ಕಾಂಗ್ರೆಸ್ ನಡೆಸುತ್ತಿರುವ ಗಾಂಧಿ-ನೆಹರೂ ಕುಟುಂಬದಲ್ಲಿ ಮನೀಶ್ ತಿವಾರಿ ಮತ್ತು ಶಶಿ ತರೂರ್ ಅವರನ್ನು ಆ ಕುಟುಂಬದ ಅತ್ಯಾಪ್ತ ಹಾಗು ವಿಶೇಷ ವ್ಯಕ್ತಿಗಳೆಂದು ಪರಿಗಣಿಸಲಾಗಿದೆ.