Actress Mahalakshmi Christmas Celebration:
Advertisement
ದಕ್ಷಿಣದ ನಟಿ ಮಹಾಲಕ್ಷ್ಮಿ (Mahalakshmi) ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindra Chandrashekhar) ಅವರನ್ನು ಮದುವೆಯಾದಾಗಿನಿಂದ, ನಟಿ ಮಹಾಲಕ್ಷಿ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಹೀಗಿರುವಾಗ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದವರಿಗೆ ಹಾಗು ಮಾಡುತ್ತಿರುವವವರಿಗೆ ಉತ್ತರ ಕೊಟ್ಟಿರುವ ನಟಿ ‘ಜನರು ಏನೇ ಹೇಳಿದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.
ವಾಸ್ತವವಾಗಿ, ನಟಿ ಮಹಾಲಕ್ಷ್ಮಿ ಅವರು ಕ್ರಿಸ್ಮಸ್ ಸಂದರ್ಭದಲ್ಲಿ ರವೀಂದ್ರ ಚಂದ್ರಶೇಖರನ್ ಅವರೊಂದಿಗೆ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರ ನಡುವಿನ ಪ್ರೀತಿ ಕಂಡುಬರುತ್ತಿದೆ. ಮದುವೆಯಾದಾಗಿನಿಂದ, ಸೋಶಿಯಲ್ ಮೀಡಿಯಾ ಯೂಸರ್ ಗಳು ತಮ್ಮ ಈ ಮದುವೆ, ತಮ್ಮ ಪತಿಯನ್ನ ಗೇಲಿ ಮಾಡುತ್ತಲೇ ಇದ್ದಾರೆ. ಈ ಬಾರಿ ಟ್ರೋಲ್ ಮಾಡುವವರ ಬಾಯಿಯನ್ನ ಮುಚ್ಚಿದ್ದಾರೆ ನಟಿ ಮಹಾಲಕ್ಷ್ಮಿ.
ಕ್ರಿಸ್ಮಸ್ ಸಂದರ್ಭದಲ್ಲಿ ಮಹಾಲಕ್ಷ್ಮಿಗೆ ತಮ್ಮ ಪತಿಯಿಂದ ಸುಂದರವಾದ ಗಿಫ್ಟ್ ಸಿಕ್ಕಿದೆ. ನಟಿಗೆ ಪತಿ ರವೀಂದರ್ ಅವರಿಂದ ಬ್ಯೂಟಿಫುಲ್ ಕಸ್ಟಮೈಸ್ಡ್ ನ್ಯಾನೋ ಹ್ಯಾಂಗಿಂಗ್ ಬೋರ್ಡ್ ಗಿಫ್ಟಾಗಿ ಸಿಕ್ಕಿದೆ. ಇದರಿಂದ ತುಂಬಾ ಪ್ರಭಾವಿತರಾದ ನಟಿ ತಮ್ಮ ಸಂತಸವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇದರೊಂದಿಗೆ ರವಿಂದರ್ ತಮ್ಮ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇದನ್ನು ಪೋಸ್ಟ್ ಮಾಡುತ್ತ ಅವರು ತಮ್ಮ ಹೆಂಡತಿಯನ್ನ ತಮ್ಮ ಜೀವನದ ಅದ್ಭುತ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ, “ಜನರು ಏನೇ ಹೇಳಲಿ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ಹೊರತಾಗಿ ನಾನು ಏನೂ ಅಲ್ಲ. ನೀವೇ ನನ್ನ ಸರ್ವಸ್ವ” ಎಂದಿದ್ದಾರೆ.
ದಕ್ಷಿಣದ ಬ್ಯೂಟಿಫುಲ್ ನಟಿ ಮಹಾಲಕ್ಷ್ಮಿ ಅವರ ಈ ನಿರ್ಧಾರವನ್ನು ಜನ ಕೊಂಡಾಡುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಹೊಗಳುತ್ತಿದ್ದಾರೆ. ನಟಿ ಟ್ರೋಲ್ಗಳಿಗೆ ಈ ಉತ್ತರವನ್ನು ನೀಡಿದ್ದು, ತಮ್ಮ ಹೃದಯವನ್ನು ಮಾತನ್ನೂ ಸಹ ಹಂಚಿಕೊಂಡಿದ್ದಾರೆ. ಅವರ ಫೋಟೋಗಳಿಗೆ 28 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ರವೀಂದರ್ ಮತ್ತು ಮಹಾಲಕ್ಷ್ಮಿ ಈ ವರ್ಷದ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದರು. ನಿರ್ಮಾಪಕರ ದಢೂತಿನವನ್ನ ನೋಡಿ ಜನ ಮಹಾಲಕ್ಷ್ಮಿಯವರನ್ನ ತುಂಬಾ ಟ್ರೋಲ್ ಮಾಡಿದ್ದರು ಆದರೆ ನಟಿಯ ನಿರ್ಧಾರ ಅಚಲವಾಗಿದ್ದು ಅದಕ್ಕೂ ಮುನ್ನವೇ ಇಬ್ಬರ ನಡುವಿನ ಬಾಂಡಿಂಗ್ ನ್ನ ಶೇರ್ ಮಾಡಿಕೊಳ್ಳುತ್ತ ಉತ್ತರ ಕೊಟ್ಟಿದ್ದರು.
ನಟಿ ಮಹಾಲಕ್ಷ್ಮಿಗೆ ಇದು ಎರಡನೇ ಮದುವೆ. ಇದಕ್ಕೂ ಮೊದಲು ಅವರು ಈಗಾಗಲೇ ಮದುವೆಯಾಗಿದ್ದ ಅನಿಲ್ ನೆರೆದಿಮಿಲ್ಲಿ ಅವರನ್ನು ವಿವಾಹವಾಗಿದ್ದರು. ಅನಿಲ್ ಹಾಗು ಮಹಾಲಕ್ಷ್ಮಿಗೆ ಒಂದು ಮಗು ಕೂಡ ಇದೆ. ಇದೇ ವೇಳೆ ಮಹಾಲಕ್ಷ್ಮಿಯು ತನ್ನ ಪತಿ ಈಶ್ವರನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಮಹಾಲಕ್ಷ್ಮಿ ವಿರುದ್ಧ ನಟಿ ಜಯಶ್ರೀ ಗಂಭೀರ ಆರೋಪ ಮಾಡಿದ್ದರು.
ಈ ವಿವಾದಗಳ ನಡುವೆ ನಿರ್ಮಾಪಕ ರವೀಂದರ್ ನಟಿ ಮಹಾಲಕ್ಷ್ಮಿಗೆ ಸಾಕಷ್ಟು ಸಹಾಯ ಮಾಡಿದ್ದರು. ಇದೇ ಸಹಾಯದಿಂದ ಆಕೆ ತನ್ನ ವೈಯಕ್ತಿಕ ಬದುಕಿನ ತೊಂದರೆಗಳಿಂದ ಹೊರಬಂದು ನಂತರ ಇಬ್ಬರೂ ಮದುವೆಯಾಗಿ ಹೊಸ ಜೀವನ ಆರಂಭಿಸಿದರು.