ಬಾರದೂರಿಗೆ ಪಯಣಿಸಿದ ಸ್ವರ ಸಾಮ್ರಾಟ; ಎಸ್ ಪಿಬಿ ಕುರಿತು ಇಲ್ಲಿದೆ ಗೊತ್ತಿಲ್ಲದ ಹಲವು ಸಂಗತಿ

in ಮನರಂಜನೆ/ಸಿನಿಮಾ 589 views

ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಚೆನ್ನೈ ನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಆ.5ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಹಲೆ ಮೇರೆಗೆ ಆಸ್ಪತ್ರೆಗೆದಾಖಲಾಗಿದ್ದರು. ಆ.13ರ ಬಳಿಕ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ಗುಣಮುಖರಾಗಿ ಮನಗೆ ಮರಳಿದ್ದಾರೆ ಎಂದು ಹೇಳಲಾಗಿತ್ತು. ಆರೋಗ್ಯ ಸುಧಾರಿಸಿ ಬಂದು ಗಾನ ಕೋಗಿಲೆ ಎಸ್ ಪಿಬಿ ಮತ್ತೆ ಹಾಡು ಹಾಡಲಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾದಿದ್ದರು. ಆದರೆ ಸೆ.25ರಂದು ಮಧ್ಯಾಹ್ನ ಸ್ವರ ಮಾಂತ್ರಿಕನ ಧ್ವನಿ ಸ್ಥಬ್ಧವಾಗಿದೆ. ಎಸ್ ಪಿಬಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಭಾರತೀಯ ಚಿತ್ರರಂಗ ಎಸ್ ಪಿಬಿ ಅಗಲಿಕೆಗೆ ಕಂಬನಿ ಮಿಡಿದಿದೆ.ಪ್ರತಿಭೆಗಳ ಶಿಖರವೇ ಆಗಿದ್ದ ಅಜಾತಶತ್ರು, ಅಂದ್ಭುತ ಕಂಠಸಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಹಲವು ಸಂಗತಿಗಳಿವೆ. ಬಾಲಸುಬ್ರಹ್ಮಣ್ಯಂ ಅವರು ಭಾರತದ 16 ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡು ಹಾಡುವ ಮೂಲಕ ಗಿನ್ನೆಸ್​ ದಾಖಲೆ ಮಾಡಿದವರು. 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದವರು. ಹಲವು ಕಲಾವಿದರಿಗೆ ಕಂಠದಾನ ಮಾಡಿದವರು. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಸಾಧಕ. 1979, 1981,1983,1988, 1995,1996ಲ್ಲಿ ಅವರೈಗೆ ಒಟ್ಟು 6 ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

Advertisement

2001ರಲ್ಲಿ ಪದ್ಮಶ್ರೀ ಹಾಗೂ 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂದಿತ್ತು. ಮಾತ್ರವಲ್ಲ 25 ಬಾರಿ ಆಂದ್ರಪ್ರದೇಶ ಸರ್ಕಾರ ಎಸ್ ಪಿಬಿ ಅವರಿಗೆ ನಂದಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ಯಾಂಡಲ್​ವುಡ್​ನ ಸಂಯೋಜಕ ಉಪೇಂದ್ರ ಕುಮಾರ್​ ಅವರಿಗಾಗಿ 12 ಗಂಟೆಗಳಲ್ಲಿ 21 ಹಾಡು ಹಾಡಿ ದಾಖಲೆ ಮಾಡಿದ್ದರು ಎಸ್​ಪಿಬಿ. ಒಂದೇ ದಿನ ಎಸ್ ಪಿ ಬಾಲಸುಬ್ರಹ್ಮಣ್ಯಂ ಕನ್ನಡದಲ್ಲಿ 17 ಹಾಡುಗಳ ಧ್ವನಿಮುದ್ರಿಸಿದ್ದರು. ಹಿಂದಿಯಲ್ಲಿ 16 ಹಾಡುಗಳನ್ನು ಹಾಗೂ ತಮಿಳು ತೆಲುಗಿನಲ್ಲಿ ಒಂದೇ ದಿನ 19 ಹಾಡುಗಳನ್ನು ಧ್ವನಿ ಮುದ್ರಿಸಿದ್ದರು. ಇದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಬಾಲಸುಬ್ರಹ್ಮಣ್ಯಂ ಗಾಯಕನಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಹೆಸರು ಮಾಡಿದ್ದರು. 2012ರಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ದೇಹದ ತೂಕ ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಬಾಲಸುಬ್ರಹ್ಮಣ್ಯಂ 135 ಕೆಜಿ ತೂಕ ಇದ್ದರಂತೆ. ಆಗ ದೇಹದ ತೂಕ ಇಳಿಸಿಕೊಳ್ಳಲು ಅವರು ಪಟ್ಟ ಪ್ರಯತ್ನ ಅಷ್ಟಿಟ್ಟಲ್ಲ. ಡಯಟ್​ ಹಾಗೂ ವ್ಯಾಯಾಮದಿಂದ ತೂಕ ಕಡಿಮೆಯಾಗದಿದ್ದಾಗ ಶಸ್ತ್ರ ಚಿಕಿತ್ಸೆ ಮೊರೆ ಹೋಗಿದ್ದರು.

ಬ್ಯಾರಿಯಾಟ್ರಿಕ್​ ಸರ್ಜರಿ ಮಾಡಿಸಿಕೊಂಡ ಬಳಿಕ 135 ಕೆ.ಜಿ ಇದ್ದವರು 96 ಕೆ.ಜಿ.ಗೆ ಇಳಿದಿದ್ದರು. ಈ ಸರ್ಜರಿಯನ್ನು ನಾನು ನನ್ನ ಮಗ ಇಬ್ಬರೂ ಮಾಡಿಸಿಕೊಂಡಿದ್ದೇವೆ. ಅತಿಯಾದ ತೂಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಹಜ ಪದ್ಧತಿಗಳಿಂದ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಬ್ಯಾರಿಯಾಟ್ರಿಕ್ ಸರ್ಜರಿ ಉತ್ತಮ. ಇದು ಕಾಸ್ಮೆಟಿಕ್ ಸರ್ಜರಿಯಲ್ಲ. ಈಗ ನನ್ನ ದೇಹದ ತೂಕ 96 ಕೆ.ಜಿ ಇದೆ. ಇದು ಕಡಿಮೆಯಲ್ಲ ಆದರೂ ನನ್ನ ವಯಸ್ಸಿಗೆ ಸರಿಯಾಗಿದೆ ಎಂದುಕೊಳ್ಳುತ್ತೇನೆ ಎಂದು ತಮ್ಮ ಸರ್ಜರಿ ಬಗ್ಗೆ ಎಸ್ ಪಿಬಿ ಹೇಳಿದ್ದರು.

ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದ ಎಸ್ ಪಿಬಿ ಅವರ ಮಾತುಗಳನ್ನು ಕೇಳುವುದೇ ಚಂದ, ಶಬ್ಧಗಳ ಮೇಲಿನ ಹಿಡಿತ ಅಗಾಧವಾದ ಜ್ನಾನ ಭಂಡಾರ ಎಲ್ಲವೂ ಅವರ ಮಾತುಗಳಲ್ಲಿ ಹೊರಹೊಮ್ಮುತ್ತಿದ್ದವು. ಗಾಯಕ, ಸ್ವರ ಸಮ್ಮೋಹಕನನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ ನಿಜಕ್ಕೂ ಬಡವಾಗಿದೆ. ಸಂಗೀತವಿರುವವರೆಗೂ ಅಭಿಮಾನಿಗಳ ಹೃದಯದಲ್ಲಿ ಎಸ್ ಪಿಬಿ ಚಿರಸ್ಥಾಯಿಯಾಗಿರಲಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...