“ಶಾರುಖ್ ಖಾನ್ ನನ್ನ ಕೈಗೆ ಸಿಗಲಿಲ್ಲ ಸಿಕ್ಕಿದ್ದರೆ ಕಪಾಳಕ್ಕೆ ನಾಲ್ಕು ಬಿಗೀತಿದ್ದೆ, ಈತ ನನ್ನ ಸೊಸೆ ಐಶ್ವರ್ಯಾ ಜೊತೆ…”: ಜಯಾ ಬಚ್ಚನ್

in Uncategorized 55,491 views

ಬಾಲಿವುಡ್ ಚಿತ್ರಗಳಿಗೆ ಬಾಯ್‌ಕಾಟ್ ನ ಟ್ರೆಂಡ್ ಶುರುವಾಗಿದೆ. ಹೀಗಿರುವಾಗ ಬಿಡುಗಡೆಗೂ ಮುನ್ನವೇ ಯಾವುದೇ ಚಿತ್ರ ಬಂದರೂ ಅದನ್ನು ಬಹಿಷ್ಕರಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಶಾರುಖ್ ಅಭಿನಯದ ಪಠಾಣ್ ಚಿತ್ರದ ಹಾಡೊಂದು ಬಿಡುಗಡೆಯಾಗಿ ವಿವಾದಕ್ಕೂ ಕಾರಣವಾಗಿತ್ತು. ಚಿತ್ರದಲ್ಲಿನ ‘ಬೇಷರಂ ರಂಗ್’ ಹಾಡಿಗೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ನಟಿ ದೀಪಿಕಾ ಪಡುಕೋಣೆ ತೊಟ್ಟಿರುವ ಕೇಸರಿ ಬಿಕಿನಿಯಿಂದ ಎಲ್ಲರೂ ಕೆಂಡಾಮಂಡಲರಾಗಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್ ವಿವಾದಗಳಿಂದ ಸುತ್ತುವರೆದಿದ್ದಾರೆ.

Advertisement

ಕಿಂಗ್ ಖಾನ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಕಿಂಗ್ ಖಾನ್ ಬಾಲಿವುಡ್‌ನಲ್ಲಿ ಈವರೆಗೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ರೀತಿಯಾಗಿ, ಎಲ್ಲರೂ ಖಾನ್ ನೊಂದಿಗೆ ಉತ್ತಮವಾಗೇ ವ್ಯವಹರಿಸುತ್ತಾರೆ. ಆದರೆ ಒಮ್ಮೆ ಶಾರುಖ್ ಖಾನ್‌ನ್ನ ಕಪಾಳಮೋಕ್ಷ ಮಾಡಲು ಬಯಸಿದ್ದ ವ್ಯಕ್ತಿಯೊಬ್ಬರೂ ಇದ್ದಾರೆ. ಹೌದು ನಾವು ಇಲ್ಲಿ ಮಾತನಾಡುತ್ತಿರೋದು ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಅವರು ಶಾರುಖ್ ಅವರನ್ನು ಕಪಾಳಮೋಕ್ಷ ಮಾಡಲು ಬಯಸಿದ್ದೆ ಎಂದು ಹೇಳಿದ್ದರು. ಇದಕ್ಕೆ ಕಾರಣ ಅವರ ಸೊಸೆ ಐಶ್ವರ್ಯಾ ರೈ ಆಗಿದ್ದರು.

ಶಾರುಖ್ ಖಾನ್ ಐಶ್ವರ್ಯ ರೈ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರ ಜೋಡಿಯು ಕೂಡ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಲ್ಮಾನ್ ಖಾನ್ ಐಶ್ವರ್ಯಾ ರೈ ಅವರನ್ನು ಇಷ್ಟಪಡುತ್ತಿದ್ದ ಸಂದರ್ಭದಲ್ಲಿ, ಐಶ್ವರ್ಯಾ ರೈ ಶಾರುಖ್ ಜೊತೆ ಕೆಲಸ ಮಾಡುವುದನ್ನು ಸಲ್ಮಾನ್ ಇಷ್ಟಪಡಲಿಲ್ಲ, ಈ ಕಾರಣದಿಂದಾಗಿ, ಶಾರುಖ್ ಮತ್ತು ಐಶ್ವರ್ಯಾ ಚಿತ್ರದ ಚಿತ್ರೀಕರಣದಲ್ಲಿದ್ದಾಗ, ಸಲ್ಮಾನ್ ಚಿತ್ರದ ಸೆಟ್‌ಗೆ ಬಂದು ಶಾರುಖ್ ಖಾನ್‌ಗೆ ಹಿಗ್ಗಾಮುಗ್ಗಾ ಬೈದಿದ್ದರು. ಆ ಕಾರಣದಿಂದಾಗಿ ಐಶ್ವರ್ಯಾ ರೈ ಆ ಚಿತ್ರವನ್ನೇ ಕೈಬಿಡಬೇಕಾಯಿತು‌. ಐಶ್ವರ್ಯ ರೈ ರವರ ಈ ನಿರ್ಣಯದಿಂದ ಶಾರುಖ್ ಕೂಡ ಐಶ್ವರ್ಯ ರೈ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಹಾಗೆ ನೋಡಿದರೆ ಇದಕ್ಕೂ‌ ಮುಂಚೆ ಶಾರುಖ್ ಮತ್ತು ಐಶ್ವರ್ಯಾ ರೂ ಜೋಡಿ ಜೋಶ್, ಮೊಹಬ್ಬತೇ ಮತ್ತು ದೇವದಾಸ್ ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಐಶ್ವರ್ಯ ರೈ ಬಗ್ಗೆ ಶಾರುಖ್ ಆಡಿದ ಮಾತನ್ನು ಕೇಳಿ ಜಯ ಬಚ್ಚನ್ ಕೋಪಗೊಂಡಿದ್ದರು. ಆಕೆ ಶಾರುಖ್ ಮೇಲೆ ತುಂಬಾ ಎಷ್ಟು ಕೋಪಗೊಂಡಿದ್ದರೆಂದರೆ ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡಬೇಕೆಂದಿದ್ದೆ ಎಂದು ಅವರು ಇಂಟರ್‌ವ್ಯೂ ಒಂದರಲ್ಲಿ ಹೇಳಿದ್ದರು. ಆ ಸಮಯದಲ್ಲಿ ಜಯ ಬಚ್ಚನ್‌ ಮಾತನಾಡುತ್ತ, “ಹೌದು, ನಾನು ಶಾರುಖ್‌ಗೆ ಕಪಾಳಮೋಕ್ಷ ಮಾಡುತ್ತಿದ್ದೆ. ಆದರೆ, ಶಾರುಖ್ ನೊಂದಿಗೆ ಮಾತನಾಡಲು ನನಗೆ ಇನ್ನೂ ಅವಕಾಶ ಸಿಕ್ಕಿಲ್ಲ. ನಾನು ಶೀಘ್ರದಲ್ಲೇ ಶಾರುಖ್ ನೊಂದಿಗೆ ಮಾತನಾಡುತ್ತೇನೆ” ಎಂದಿದ್ದರು. ಅಷ್ಟೇ ಅಲ್ಲ ಜಯ ಬಚ್ಚನ್ ಮುಂದೆ ಮಾತನಾಡುವ ಸಂದರ್ಶನದಲ್ಲಿ “ನಾನು ನನ್ನ ಮಗನನ್ನ ಹೇಗೆ ಹೊಡೆಯುತ್ತೇ-ನೋ ಅದ ರೀತಿ ಶಾರುಖ್ ಖಾನ್‌ನಿಗೂ ಹೊಡೀತಿನಿ… ನನ್ನ ಹಾಗು ಶಾರುಖ್ ಸಂಬಂಧ ಅಷ್ಟು ಗಟ್ಟಿಯಾಗಿದೆ” ಎಂದು ಹೇಳಿದ್ದರು.

ಅಂದಹಾಗೆ, ಜಯ ಬಚ್ಚನ್ ಶಾರುಖ್ ಅವರ ‘ಹ್ಯಾಪಿ ನ್ಯೂ ಇಯರ್’ ಚಿತ್ರ ಬಿಡುಗಡೆಯಾದ ನಂತರ ಆ ಚಿತ್ರವನ್ನು ಟೀಕಿಸಿದ್ದರು. ಜಯ ಬಚ್ಚನ್ ಮಾತನಾಡುತ್ತ, ‘ಇದು ತುಂಬಾ ಅಸಂಬದ್ಧ ಚಿತ್ರ ಮತ್ತು ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಇಲ್ಲದಿದ್ದರೆ, ನಾನು ಚಿತ್ರವನ್ನು ಎಂದಿಗೂ ನೋಡುತ್ತಿರಲಿಲ್ಲ’ ಎಂದಿದ್ದರು. ಜಯ ಅವರ ಹೇಳಿಕೆಗೆ ಶಾರುಖ್ ಖಾನ್ ಕೂಡ ಪ್ರತಿಕ್ರಿಯಿಸಿ, “ಅಮಿತಾಬ್ ಬಚ್ಚನ್ ಅವರ ಅಮರ್-ಅಕ್ಬರ್-ಆಂಥೋನಿ ಚಿತ್ರ ಕೂಡ ಕಸದ ರಾಶಿಯಾಗಿತ್ತು. ಆದರೆ ಇಂದಿಗೂ ಇದು ಅತ್ಯಂತ ಎಂಟರ್‌ಟೇನಿಂಗ್ ಚಿತ್ರವೆಂದು ಪರಿಗಣಿಸಲಾಗಿದೆ” ಎಂದು ಟಾಂಗ್ ಕೊಟ್ಟಿದ್ದರು.

Advertisement
Share this on...