ಶಾರುಖ್ ಖಾನ್ ಅವರ ಹಳೆಯ ಇಂಟರ್ವ್ಯೂ ಒಂದು ವೈರಲ್ ಆಗುತ್ತಿದೆ. ಶಾರುಖ್ ಖಾನ್ ಸಿಮಿ ಗ್ರೆವಾಲ್ ಅವರಿಗೆ ಈ ಇಂಟರ್ವ್ಯೂ ನೀಡಿದ್ದರು. ಈ ಸಮಯದಲ್ಲಿ, ಶಾರುಖ್ ಆರ್ಯನ್ ತನ್ನ ಯೌವನದಲ್ಲಿ ಮಾಡಲಾಗದ ಎಲ್ಲಾ ತಪ್ಪು ಕೆಲಸಗಳನ್ನು ತನ್ನ ಮಗ ಆರ್ಯನ್ ಖಾನ್ ಮಾಡಬೇಕೆಂದು ಬಯಸುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದರು.
ಶಾರುಖ್ ಖಾನ್ 1997 ರಲ್ಲಿ ಸಿಮಿ ಗ್ರೆವಾಲ್ ಅವರ ಟಾಕ್ ಶೋ ನಲ್ಲಿ ಭಾಗವಹಿಸಿದ್ದರು. ಈ ಟಾಕ್ ಶೋನಲ್ಲಿ ಗೌರಿ ಖಾನ್ ಕೂಡ ಶಾರುಖ್ ಜೊತೆ ಬಂದಿದ್ದರು. ಈ ಟಾಕ್ ಶೋ ಗೂ ಕೆಲ ತಿಂಗಳ ಹಿಂದೆಯಷ್ಟೇ ಗೌರಿ ತನ್ನ ಮೊದಲ ಮಗ ಆರ್ಯನ್ಗೆ ಜನ್ಮ ನೀಡಿದಳು. ಈ ಸಂದರ್ಭದಲ್ಲಿ, ಸಿಮಿ ಗ್ರೆವಾಲ್ ಶಾರುಖ್ ಮತ್ತು ಗೌರಿ ಖಾನ್ ಜೊತೆ ಅವರ ಮಗನ ಬಗ್ಗೆ ಮಾತನಾಡಿದ್ದರು.
ಟಾಕ್ ಶೋನಲ್ಲಿ ಸಿಮಿ ಗ್ರೆವಾಲ್ ಅವರು ಶಾರುಖ್ ಅವರನ್ನು ಆರ್ಯನ್ ನ್ನ ಹೇಗೆ ಬೆಳೆಸುತ್ತೀರಿ ಎಂದು ಕೇಳಿದರು, ಅದಕ್ಕೆ ಅವರು ಉತ್ತರಿಸಿದ ಶಾರುಖ್, ಆರ್ಯನ್ ನಾನು ನನ್ನ ಹದಿಹರೆಯದಲ್ಲಿ ಮಾಡಲಾಗದ ಎಲ್ಲ ಕೆಲಸಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು. ಶಾರುಖ್ ಖಾನ್ಗೆ ತಾನು ಹದಿಹರೆಯದವನಾಗಿದ್ದಾಗ ಇಷ್ಟು ಆಸ್ತಿ, ಸೌಲಭ್ಯಗಳು ಹೊಂದಿರದ ಕಾರಣ ತಾನು ಬಯಸಿಯೂ ಮಾಡಲು ಸಾಧ್ಯವಾಗದ ಬಹಳಷ್ಟು ಕೆಲಸಗಳನ್ನು ಆರ್ಯನ್ ಮಾಡಬೇಕು ಎಂದು ಹೇಳಿದ್ದರು.
“ಆರ್ಯನ್ 3-4 ವರ್ಷ ವಯಸ್ಸಿನವನಾದಾಗ, ಅವನು ಹುಡುಗಿಯರನ್ನ ಫಾಲೋ ಮಾಡಬಹುದು, ಡ್ರಗ್ಸ್ ತೆಗೆದುಕೊಳ್ಳಬಹುದು, ಸೆಕ್ಸ್ ಮಾಡಬಹುದು ಎಂದು ನಾನು ಅವನಿಗೆ ಹೇಳುತ್ತೇನೆ. ನಾನು ಮಾಡಲಾಗದ ಎಲ್ಲವನ್ನೂ ಅವನು ಬೇಗನೆ ಆರಂಭಿಸುವುದು ಉತ್ತಮ. ಆರ್ಯನ್ ಮನೆಯಿಂದ ಹೊರಗೆ ಹೋದರೆ, ನನ್ನೊಂದಿಗೆ ಕೆಲಸ ಮಾಡುವ ಜನರ ಹೆಣ್ಣುಮಕ್ಕಳೊಂದಿಗೆ ಆತ ಫ್ಲರ್ಟ್ ಮಾಡಿದಾಗ ಅವರು ಬಂದು ನನಗೆ ದೂರು ನೀಡಬೇಕೆಂದು ನಾನು ಬಯಸುತ್ತೇನೆ” ಎಂದು ಶಾರುಖ್ ಖಾನ್ ಸಿಮಿ ಗ್ರೆವಾಲ್ಗೆ ಹೇಳಿದ್ದರು.
ಇದನ್ನೋ ಓದಿ:
“ಬರ್ಲಿನ್ ಏರ್ಪೋರ್ಟ್ ನಲ್ಲಿ ರೆಡ್ಹ್ಯಾಂಡ್ ಆಗಿ ಗಾಂಜಾ ಜೊತೆ ಸಿಕ್ಕಿಬಿದ್ದಿದ್ದ ಗೌರಿ ಖಾನ್.. ಮಗನಿಗಿಂತ ದೊಡ್ಡ ಡ್ರಗ್ ಅಡಿಕ್ಟ್”
ಬಾಲಿವುಡ್ ನಲ್ಲಿ 30 ವರ್ಷಗಳಿಂದ ಸಕ್ರಿಯರಾಗಿರುವ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬರ್ಲಿನ್ನಲ್ಲಿ ರೆಡ್ ಹ್ಯಾಂಡ್ ಆಗಿ ಗಾಂಜಾದ ಜೊತೆ ಸಿಕ್ಕಿಬಿದ್ದಿದ್ದರು ಎಂಬ ಸುದ್ದಿ ವೈರಲ್ ಆಗುತ್ತಿದೆ.
ಗೌರಿ ಖಾನ್ ವೃತ್ತಿಯಲ್ಲಿ ಇಂಟಿರಿಯರ್ ಡಿಸೈನರ್ ಆಗಿದ್ದಾರೆ. ಗೌರಿ ಖಾನ್ ಶಾರುಖ್ ಖಾನ್ ಪತ್ನಿ ಹಾಗು ಆರ್ಯನ್ ಖಾನ್ ತಾಯಿ. 2021 ರಲ್ಲಿ ಆರ್ಯನ್ ಖಾನ್ ಸೇರಿದಂತೆ ಇತರ ಆರೋಪಿಗಳಿಂದ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಲ್ಲಿ ‘Koimoi’ ಹೆಸರಿನ ಮನರಂಜನಾ ವೆಬ್ಸೈಟ್ ಗೌರಿ ಖಾನ್ ಪ್ರಕರಣದ ಕುರಿತು ಮತ್ತೊಮ್ಮೆ ವರದಿಯನ್ನು ಪ್ರಕಟಿಸಿದೆ. ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಗಾಂಜಾ ಜೊತೆ ಗೌರಿ ಖಾನ್ ಸಿಕ್ಕಿಬಿದ್ದಿದ್ದಳು ಎಂದು ಬರೆಯಲಾಗಿದೆ.
ಈ ಲೇಖನದಲ್ಲಿ ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಗೌರಿ ಖಾನ್ ಬಂಧನದ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಇರಲಿಲ್ಲ. ಆದರೆ, ಆಕೆಯಿಂದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ಆಧರಿಸಿ ಮಾಧ್ಯಮ ವರದಿಗಳು ಪ್ರಕಟವಾಗಿದ್ದವು. ಅನೇಕ ಮಾಧ್ಯಮ ವರದಿಗಳಲ್ಲಿ ಆಕೆಯನ್ನು ‘ಡ್ರಗ್ ಅಡಿಕ್ಟ್’ ಎಂದೂ ಕರೆಯಲಾಗಿತ್ತು, ಆದರೆ ಒಂದು ಲೈಫ್ಸ್ಟೈಲ್ ಮ್ಯಾಗಜೀನ್ ಗೆ ಸಂದರ್ಶನ ನೀಡುವಾಗ ಗೌರಿ ಖಾನ್ ಈ ಆರೋಪಗಳನ್ನು ನಿರಾಕರಿಸಿದ್ದಳು. ಇಂತಹ ಸುದ್ದಿಗಳಿಂದ ನನಗೇನೂ ವ್ಯತ್ಯಾಸ ಆಗಲ್ಲ, ನಾನು ತಲೆಕೆಡಿಸಿಕೊಂಡಿಲ್ಲ ಎಂದು ಗೌರಿ ಖಾನ್ ಹೇಳಿದ್ದಳು.
#ShahRukhKhan 's wife Gauri Khan was detained at the Berlin Airport
His son #AryanKhan also has been detained in Mumbai by #ncbraid for using #DRUGS in a #raveparty
The whole family is Drug addicts. pic.twitter.com/jh462yujqA
— Nationalist Views (@ntnlstviews) January 4, 2023
ಸುದ್ದಿ ಮೂಲಗಳ ಪ್ರಕಾರ ಗೌರಿ ಖಾನ್ ಬಳಿ ಕೇವಲ ಒಬ್ಬ ವ್ಯಕ್ತಿ ಬಳಸಬಹುದಾದಷ್ಟು ಮಾತ್ರ ಗಾಂಜಾ ಇದ್ದದ್ದರಿಂದ ಆಕೆಯನ್ನ ಬಂಧಿಸದೆ ಬಿಟ್ಟು ಬಿಡಲಾಯಿತು ಎಂದು ವರದಿಯಗಾಗಿತ್ತು. ಬರ್ಲಿನ್ ಅಥವಾ ಭಾರತದ ವಿಮಾನ ನಿಲ್ದಾಣ ಆಡಳಿತವು ಆಕೆಯ ಹೆಸರನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಆಕೆ ಬರ್ಲಿನ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬ ಸುದ್ದಿ ಮಾತ್ರ ಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರವೂ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಡ್ರಗ್ ಪ್ರಕರಣದಲ್ಲಿ ಎನ್ಸಿಬಿಯ ರೇಡಾರ್ನಲ್ಲಿ ಬಂದಿದ್ದರು.