ಮೋದಿ ಸರ್ಕಾರ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮ ಮತ್ತು ಮತಗಳ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದೆ. ಆಗಿನಿಂದ ಅದನ್ನು ವಿರೋಧಿಸಿ ಸಮಾಜವಾದಿ ಪಕ್ಷ ರಾಜಕೀಯ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಇದನ್ನು ಸದನದಲ್ಲಿ ವಿರೋಧಿಸುತ್ತೇವೆ ಎಂದು ಹೇಳಿದ ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರೆಹಮಾನ್ ಬುರ್ಕೆ ಮಾತನಾಡುತ್ತ, ಮದುವೆಯ ವಯಸ್ಸು 18 ರ ಬದಲು 17 ಆಗಿರಬೇಕು ಎಂದರು. ಇದೇ ವೇಳೆ ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಮಾತನಾಡಿ, ಫರ್ಟಿಲಿಟಿ ಏಜ್ ಆದ ನಂತರ ಮದುವೆಯಿಂದ ಏನು ಪ್ರಯೋಜನ? ತಡವಾಗಿ ಮದುವೆಯಾದರೆ ಮಕ್ಕಳಾಗುವುದು ಕಷ್ಟ ಎಂದಿದ್ದಾರೆ.
#WATCH | Girls should be married when they attain age of fertility. There is nothing wrong if a mature girl is married at 16. If she can vote at age of 18, why can't she marry?: Samajwadi Party MP ST Hasan on Govt's decision to raise legal age of marriage for women to 21 years pic.twitter.com/UZxHrMcjrh
— ANI (@ANI) December 17, 2021
ವಾಸ್ತವವಾಗಿ, ಈಗ ಸಮಾಜವಾದಿ ಪಕ್ಷದ ಇನ್ನೊಬ್ಬ ಸಂಸದ ಎಸ್ಟಿ ಹಸನ್ ಕೂಡ ಶಫೀಕ್ ಉರ್ ರೆಹಮಾನ್ ಅವರ ಹೇಳಿಕೆಯನ್ನು ಸಮರ್ಥಿಸುತ್ತ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ, “ಹುಡುಗಿಯರ ಮದುವೆಯ ವಯಸ್ಸನ್ನು 21 ಅಲ್ಲ 16-17 ಕ್ಕೆ ಬದಲಾಯಿಸಬೇಕು… ಮದುವೆ ವಿಳಂಬವಾದರೆ, ಹೆಣ್ಣುಮಕ್ಕಳು ಮಕ್ಕಳು ಇಂಟರ್ನೆಟ್ ನಲ್ಲಿ, ಕೊಳಕು (ಅಶ್ಲೀಲ) ವೀಡಿಯೊಗಳನ್ನು ನೋಡುತ್ತಾರೆ. ಅಶ್ಲೀಲ ವಿಡಿಯೋ ನೋಡಿ ಅಸಭ್ಯವಾಗಿ ವರ್ತಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ಹೆಣ್ಣು ಮಕ್ಕಳು ಅನುಚಿತ ವರ್ತನೆ ಮಾಡೋಕೆ ಶುರು ಮಾಡ್ತಾರೆ” ಎಂದಿದ್ದಾರೆ.
मैं समझता हूं कि अगर बच्ची समझदार है तो बच्ची की शादी 16 साल की उम्र में भी हो जाए तो उसमें कोई बुराई नहीं है। अगर लड़की 18 साल की उम्र में वोट दे सकती है तो शादी क्यों नहीं कर सकती है: महिलाओं की शादी की कानूनी उम्र 18 से 21 साल करने के प्रस्ताव पर एस.टी. हसन, समाजवादी पार्टी pic.twitter.com/76j1uT5wIj
— ANI_HindiNews (@AHindinews) December 17, 2021
ಎಸ್.ಟಿ ಹಸನ್ ಮುಂದೆ ಮಾತನಾಡುತ್ತ, “ಮದುವೆ ಬೇಗ ಆದರೆ ಮಕ್ಕಳೂ ಬೇಗ ಹುಟ್ಟುತ್ತಾರೆ, ಯಾಕಂದ್ರೆ ಮಹಿಳೆಯರ ಫರ್ಟಿಲಿಟಿಯ ವಯಸ್ಸು 15-30 ರವರೆಗೇ ಇರುತ್ತೆ. ಅಂಥದ್ರಲ್ಲು ಮದುವೆಯ ವಯಸ್ಸಿನಲ್ಲಿ ತಡವಾಗಬಾರದು. ನನ್ನ ಪ್ರಕಾರ ಯುವತಿ ತಿಳುವಳಿಕೆಯುಳ್ಳವಳಾಗಿದ್ದರೆ ಆಕೆಯನ್ನ 16 ನೆಯ ವಯಸ್ಸಿನಲ್ಲೇ ಮದುವೆಯಾದರೂ ತಪ್ಪಿಲ್ಲ. ಯುವತಿ 18 ನೆಯ ವಯಸ್ಸಿಗೆ ವೋಟ್ ಹಾಕಬಹುದು ಅಂತಾದ್ರೆ ಮದುವೆ ಮಾಡಿಕೊಳ್ಳೋದ್ರಲ್ಲಿ ತಪ್ಪೇನು?” ಎಂದಿದ್ದಾರೆ.
ಇದೇ ವೇಳೆ ಶಫೀಕ್ ಉರ್ ರೆಹಮಾನ್ ಬರ್ಕ್ ಹೇಳಿಕೆಗೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಟಾಹ್ನ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಮಾತನಾಡಿ, “ಇದು ಗುಲಾಮಗಿರಿಯ ಜನರ ಮನಸ್ಥಿತಿ, ಅವರು ಯಾವಾಗಲೂ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಇಡಲು ಬಯಸುತ್ತಾರೆ. ಮೋದಿ ಸರ್ಕಾರ ಸಂವಿಧಾನದ ನೆರವಿನಿಂದ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತಿದೆ” ಎಂದರು.
ಗಮನಾರ್ಹವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15, 2020 ರಂದು ಕೆಂಪು ಕೋಟೆಯಿಂದ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಘೋಷಿಸಿದ್ದರು. ಇದರ ಹಿಂದಿನ ಕಾರಣವನ್ನು ವಿವರಿಸಿದ ಪ್ರಧಾನಿ, “ಸರ್ಕಾರವು ಯಾವಾಗಲೂ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಹೆಣ್ಣು ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಅವರು ಸರಿಯಾದ ವಯಸ್ಸಿನಲ್ಲಿ ವಿವಾಹವಾಗುವುದು ಮುಖ್ಯ” ಎಂದಿದ್ದರು.
ಪ್ರಸ್ತುತ, ಭಾರತದಲ್ಲಿ ಮಹಿಳೆಯರಿಗೆ ಕನಿಷ್ಠ ವಿವಾಹ ವಯಸ್ಸು 18 ವರ್ಷ ಮತ್ತು ಪುರುಷರಿಗೆ 21 ವರ್ಷವಿದೆ ಕಾನೂನಿನ ಬದಲಾವಣೆಯ ನಂತರ, ಈಗ ಪುರುಷ ಮತ್ತು ಮಹಿಳೆ ಇಬ್ಬರಿಗೂ ಮದುವೆಯ ಕನಿಷ್ಠ ವಯಸ್ಸು 21 ವರ್ಷಗಳಾಗಲಿದೆ.
ಈ ಮತಾಂಧ ನಾಯಕರಿಗೆ ಮದುವೆಯ ವಯಸ್ಸಿನ ಬಗ್ಗೆ ತಕರಾರಲ್ಲ ಬದಲಾಗಿ ತಮ್ಮ ಜನಸಂಖ್ಯೆ ವೃದ್ಧಿ ಮಾಡಿ ಭಾರತವನ್ನ ಮುಸ್ಲಿಂ ಬಾಹುಳ್ಯ ದೇಶ ಮಾಡಬೇಕಿದೆ ಅಷ್ಟೇ. ಮೊನ್ನೆಯಷ್ಟೇ ಓವೈಸಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ಚೆಚ್ಚು ಮಕ್ಕಳನ್ನ ಹೆರುವ ಬಗ್ಗೆ ಹೇಳಿಕೆ ನೀಡಿದ್ದ. ಬನ್ನಿ ಅದನ್ನೂ ನಿಮಗೆ ತೋರಿಸುತ್ತೇವೆ.
ಎಐಎಂಐಎಂ ಪಕ್ಷದ ಉತ್ತಪ್ರದೇಶದ ಅಲಿಗಢ ಜಿಲ್ಲಾಧ್ಯಕ್ಷ ಮತ್ತು ಒವೈಸಿ ಆಪ್ತ ಗುಫ್ರಾನ್ ನೂರ್ನ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವವರನ್ನು ವಿರೋಧಿಸುವುದು ಮತ್ತು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವುದನ್ನ ಈತ ಪ್ರತಿಪಾದಿಸುತ್ತಿದ್ದಾನೆ. ನಾವು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸದಿದ್ದರೆ ನಾವು ಈ ಭಾರತದ ಮೇಲೆ ರಾಜ್ (ಅಧಿಕಾರ) ನಡೆಸಲು ಸಾಧ್ಯ? ಎಂದು ಗುಫ್ರಾನ್ ನೂರ್ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.
मुस्लिम अधिक बच्चे पैदा नहीं करेंगे तो कैसे हम राज करेंगे, #असदउद्दीन_ओवैसी कैसे प्रधानमंत्री बनेंगे #AIMIM के जिला अध्यक्ष जनसंख्या नियंत्रण कानून के विपरीत बच्चे पैदा करने का प्रचार कर रहे हैं – गुफरान नूर @myogiadityanath @asadowaisi @BJP4UP @aimim_national @BJP4India pic.twitter.com/y0sgmaw9bl
— Saurabh Bhadouria ( सौरभ सिंह ) (@Bhadourialive) December 15, 2021
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಗುಫ್ರಾನ್ ನೂರ್, “ನಮ್ಮ ಮುಖ್ಯಸ್ಥ ಓವೈಸ್ ಸಾಹಿಬ್ ಅಲ್ಲಾನ ಹೆಸರೇಳಿ ಮಾತ್ರ ಹೆದರಿಸುತ್ತಾರೆ. ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ನವರು ಭಾಷಣ ಆರಂಭಿಸಿದಾಗ ಬಿಜೆಪಿಯ ಹೆಸರಿನಿಂದ ಹೆದರಿಸುತ್ತಾರೆ. ಮನುಷ್ಯರಿಗೆ ಹೆದರಿಸುತ್ತಾರೆ. ಮೊದಲು ಇಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ. ಮುಸ್ಲಿಂ ಸಮುದಾಯವು ನಂಬಿಕೆಯಿಂದ ಮತ್ತು ಎಲ್ಲ ರೀತಿಯಲ್ಲೂ ಕೆಳಗಿಳಿದಿದೆ. ಜನ ಹೆಚ್ಚು ಮಕ್ಕಳನ್ನ ಹೆರಬೇಡಿ ಎನ್ನುತ್ತಾರೆ. 1 ಬೇಕು, 2 ಸಾಕು ಎನ್ನುತ್ತಾರೆ. ಅಯ್ಯೋ, ನಾವು ಹೆಚ್ಚೆಚ್ಚು ಮಕ್ಕಳನ್ನ ಹೆರದೇ ಭಾರತದ ಮೇಲೆ ಹೇಗೆ ರಾಜ್ (ಆಳ್ವಿಕೆ) ಮಾಡಬಹುದು? ನಮ್ಮ ಓವೈಸಿ ಸಾಹೇಬರು ಹೇಗೆ ಪ್ರಧಾನಿಯಾಗುತ್ತಾರೆ? ನಮ್ಮ ಶೌಕತ್ ಸಾಹೇಬರು ಹೇಗೆ ಮುಖ್ಯಮಂತ್ರಿಯಾಗುತ್ತಾರೆ? ಮಕ್ಕಳನ್ನು ಹೆಚ್ಚೆಚ್ಚು ಮಾಡದಂತೆ ದಲಿತರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ತಡೆಯಲು ಮುಸ್ಲಿಮರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ಯಾಕೆ ಬಂದ್ ಮಾಡಬೇಕು? ಇದು ನಮ್ಮ ಷರಿಯತ್ನ ವಿರುದ್ಧವಾಗಿದೆ. ನಮ್ಮ ಮಹಿಳೆಯರು ಮತ್ತು ಯುವತಿಯರು ಬುರ್ಖಾ ಹಾಕಿಕೊಳ್ಳಬೇಕು” ಎಂದು ಹೇಳೋದನ್ನ ನೀವು ಕೇಳಬಹುದು.
ಈ ವೀಡಿಯೊ ನೆನ್ನೆಯ ಅಂದರೆ ಡಿಸೆಂಬರ್ 14 ರದ್ದು ಎಂದು (ಮಂಗಳವಾರ) ಹೇಳಲಾಗುತ್ತಿದೆ. ಗುಫ್ರಾನ್ ನೂರ್ ಅವರೇ ತಮ್ಮ ಪ್ರೊಫೈಲ್ನಲ್ಲಿ ವೀಡಿಯೊದಲ್ಲಿ ಸ್ಥಳ ಮತ್ತು ಜನರಿರುವ ಚಿತ್ರವನ್ನು ಹಂಚಿಕೊಂಡಿದ್ದಾನೆ. ಇದರಲ್ಲಿ ಅವರು, ‘ಎಐಎಂಐಎಂ ಅಲಿಘರ್ ತಂಡವು ಬ್ಲಾಕ್ ಅಧ್ಯಕ್ಷರ ಬಳಿ ಹೋಗಿ ಗ್ರಾಮಾಧ್ಯಕ್ಷರನ್ನು ನೇಮಕ ಮಾಡಿದೆ’ ಎಂದು ಬರೆಯಲಾಗಿದೆ.
ಈ ವಿಷಯದಲ್ಲಿ OpIndia ಗುಫ್ರಾನ್ ನೂರ್ ಅವರನ್ನು ಸಂಪರ್ಕಿಸಿದಾಗ, “ನಿನ್ನೆ ನಾವು ಅಲಿಘರ್ನ ಅದೇ ಸ್ಥಳದಲ್ಲಿ ಕೋಣೆಯಲ್ಲಿ ಕುಳಿತು ನಮ್ಮ ನಡುವೆ ದೀನ್ ಬಗ್ಗೆ ಚರ್ಚಿಸುತ್ತಿದ್ದೆವು” ಎಂದು ಗುಫ್ರಾನ್ ನೂರ್ ಹೇಳಿದ್ದಾನೆ. ಆದರೆ ಈ ವಿಡಿಯೋ ಮಾಡಿ ವೈರಲ್ ಮಾಡಿದ್ದು ಯಾರೋ ಗೊತ್ತಿಲ್ಲ. ಇದರೊಂದಿಗೆ ವಿಡಿಯೋವನ್ನು ಕ್ರಾಪ್ ಮಾಡಿ ಎಡಿಟ್ ಮಾಡಲಾಗಿದೆ ಎಂದು ಹೇಳಿದ್ದಾನೆ.
ಎಐಎಂಐಎಂಗೂ ಮುನ್ನ ಗುಫ್ರಾನ್ ನೂರ್ ಆಮ್ ಆದ್ಮಿ ಪಕ್ಷದ ನಾಯಕರಿಗೆ ಆಪ್ತನಾಗಿದ್ದನು. ಈ ಹಿಂದೆ ಈತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದನು. ಎಎಪಿಯ ಹಲವು ದೊಡ್ಡ ನಾಯಕರ ಜೊತೆ ಈತನಿರುವ ಚಿತ್ರಗಳೂ ಇವೆ.