ಭಾರತದ ಸನಾತನ ಧರ್ಮವು ಸದೈವ ಇತರ ದೇಶಗಳಲ್ಲಿ ವಾಸಿಸುವ ಇತರೆ ಮತಗಳ ಜನರನ್ನು ಆಕರ್ಷಿಸುತ್ತಿದೆ. ಭಾರತದ ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕತೆಯಿಂದ ಪ್ರೇರಿತರಾಗಿ ಭಾರತಕ್ಕೆ ಅನೇಕ ವಿದೇಶಿಯರು ಬರುತ್ತಾರೆ. ಅವರಲ್ಲಿ ಒಬ್ಬರು ಬೆನ್ ಬಾಬಾ, ಇವರು ಸ್ವಿಟ್ಜರ್ಲೆಂಡ್ ಮೂಲದವರಾಗಿದ್ದು ವೃತ್ತಿಯಲ್ಲಿ ವೆಬ್ ಡೆವಲಪರ್ ಆಗಿದ್ದಾರೆ.
ಹರಿದ್ವಾರದ ಮಹಾಕುಂಭದಿಂದ ಬೆನ್ ಬಾಬಾ ವಿಡಿಯೋ ವೈರಲ್ ಆಗುತ್ತಿದೆ. ಬೆನ್ ಸ್ವಿಟ್ಜರ್ಲೆಂಡ್‌ನಿಂದ ಕಾಲ್ನಡಿಗೆಯಲ್ಲಿ ಭಾರತಕ್ಕೆ ಹೊರಟರು ಮತ್ತು 18 ದೇಶಗಳನ್ನು ದಾಟಿ 4 ವರ್ಷಗಳ ನಂತರ ಭಾರತವನ್ನು ತಲುಪಿದ್ದಾರೆ. ಪ್ರಸ್ತುತ ಬೆನ್ ಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ, ಅದರಲ್ಲಿ ಅವರು ತಮ್ಮ ಪ್ರಯಾಣದ ಬಗ್ಗೆ ಹೇಳುತ್ತಿದ್ದಾರೆ.
ವೆಬ್ ಡಿಸೈನರ್ ನಿಂದ ಬಾಬಾ ಆಗುವವರೆಗಿನ ಕಥೆ
33 ವರ್ಷದ ಬೆನ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವೆಬ್ ಡಿಸೈನರ್ ಆಗಿದ್ದು, ಅಲ್ಲಿ ಸಾಕಷ್ಟು ಹಣವನ್ನು ಸಂಪಾದಿಸಿದ್ದಾರೆ, ಆದರೆ ಅಲ್ಲಿ ಎಂದಿಗೂ ಮನಸ್ಸಿಗೆ ಶಾಂತಿ, ಖುಷಿ ಸಿಗಲಿಲ್ಲ ಎಂದು ಹೇಳುತ್ತಾರೆ. ಸಾಕಷ್ಟು ಭೌತಿಕ ಸಂತೋಷವೇನೋ ಇತ್ತು ಆದರೆ ಬೆನ್ ಆಧ್ಯಾತ್ಮಿಕ ಮತ್ತು ಆತ್ಮಿಕ ಸುಖವನ್ನ ಪಡೆಯಲು ಬಯಸಿದ್ದರು. ಅವರು ಬಯಸುತ್ತಿದ್ದ ಸುಖ, ಸಂತೋಷವು ಭಾರತೀಯ ಸಂಸ್ಕೃತಿ, ನಾಗರಿಕತೆ, ಯೋಗ ಮತ್ತು ಆಧ್ಯಾತ್ಮಿಕತೆಯ ಮೂಲಕವೇ ಸಿಗುತ್ತದೆ ಎಂದು ಅರಿತರು.
ಆಧ್ಯಾತ್ಮಿಕ ಹಾಗು ಆತ್ಮಿಕ ಸುಖವನ್ನು ಪ್ರಾಪ್ತಿ ಮಾಡಿಕೊಳ್ಳಲು, ಬೆನ್ ಸ್ವಿಟ್ಜರ್ಲೆಂಡ್‌ನ ಐಷಾರಾಮಿ ಜೀವನವನ್ನು ತೊರೆದು ಭಾರತದ ಕಡೆಗೆ ಹೊರಟರು. 4 ವರ್ಷಗಳ ಸುದೀರ್ಘ ಪ್ರಯಾಣದ ನಂತರ ಮತ್ತು 18 ದೇಶಗಳ ಗಡಿಗಳನ್ನು ದಾಟಿದ ನಂತರ ಬೆನ್ ಭಾರತವನ್ನು ತಲುಪಿದರು ಮತ್ತು ಇಲ್ಲಿ ಅವರು ಸನಾತನ ಧರ್ಮ ಮತ್ತು ಯೋಗವನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು ಮತ್ತು ವೆಬ್ ಡೆವಲರ್ ನಿಂದ ‘ಬೆನ್ ಬಾಬಾ’ ಆದರು.
18 ದೇಶಗಳು ಹಾಗು 6000 ಕಿಲೋಮೀಟರ್ ಪ್ರವಾಸ
ಸ್ವಿಟ್ಜರ್ಲೆಂಡ್‌ನಿಂದ ಭಾರತವನ್ನು ತಲುಪಲು ಕಾಲ್ನಡಿಗೆಯಲ್ಲಿ 6 ಸಾವಿರ ಕಿ.ಮೀ ಗಿಂತ ಹೆಚ್ಚು ಪ್ರಯಾಣಿಸಿದ್ದೇನೆ ಎಂದು ಬೆನ್ ಬಾಬಾ ಹೇಳುತ್ತಾರೆ. ಅವರು ತಮ್ಮ ಪ್ರಯಾಣದಲ್ಲಿ ಟರ್ಕಿ, ಇರಾನ್, ಅರ್ಮೇನಿಯಾ, ಜಾರ್ಜಿಯಾ, ರಷ್ಯಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 18 ದೇಶಗಳ ಗಡಿಗಳನ್ನು ದಾಟಿದ ಬಳಿಕ ಭಾರತ ತಲುಪಿದ್ದಾರೆ.
Switzerland का यह नौजवान 18 देश होता हुआ पैदल भारत आ गया! यह है भारतीय संस्कृति का जादू ! पैदल भारत पहुँचने में इन्हें 4 साल का समय लगा ! इनकी हिंदी सुनकर कोई बोल नही सकता कि यह विदेशी होंगे ! इनका नाम है BEN BABA pic.twitter.com/FVnGlHNkfE
— Gautam Khattar (@GautamKhattar) October 18, 2022
ಭಾರತೀಯ ಸಂಸ್ಕೃತಿ, ಯೋಗ ಮತ್ತು ಧ್ಯಾನದಿಂದ ಪ್ರಭಾವಿತ
ಭಾರತೀಯ ಸಂಸ್ಕೃತಿ, ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸ್ವಿಟ್ಜರ್ಲೆಂಡ್ ನಲ್ಲೇ ಅಧ್ಯಯನ ಮಾಡಲು ಪ್ರಾರಂಭಿಸಿದೆ ಎಂದು ಬೆನ್ ಬಾಬಾ ಹೇಳುತ್ತಾರೆ. ಇದರಲ್ಲಿ ಅವರು ಅನುಭವಿಸಿದ ಆನಂದದಿಂದಾಗಿ, ಅವರು ಸ್ವಿಟ್ಜರ್ಲೆಂಡ್ ಮತ್ತು ಅಲ್ಲಿನ ಐಷಾರಾಮಿ ಜೀವನವನ್ನು ತೊರೆದರು. ದೇವಾಲಯಗಳು, ಮಠಗಳು ಮತ್ತು ಪೂಜಾ ಸ್ಥಳಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮವನ್ನು ಅಧ್ಯಯನ ಮಾಡಲು ಬೆನ್ ಬಾಬಾ ಭಾರತಕ್ಕೆ ಪ್ರಯಾಣಿಸುತ್ತಾರೆ. ಬೆನ್ ಪತಂಜಲಿ ಸಂಸ್ಥೆಯಿಂದ ಯೋಗ ಕಲಿಯುತ್ತಿದ್ದಾರೆ. ಬೆನ್ ನಿರರ್ಗಳವಾಗಿ ಹಿಂದಿ ಮಾತನಾಡುವುದಲ್ಲದೆ ಗಂಗಾ ಆರತಿಯನ್ನು ಮಾಡುವುದನ್ನೂ ಸಹ ಕಾಣಬಹುದು.
ಸನ್ಯಾಸಿಗಳಂತೆ ಜೀವನ ನಡೆಸುತ್ತಿರುವ ಬೆನ್ ಬಾಬಾ
ಬೆನ್ ಬಾಬಾ ಅವರಿಗೆ ಮನೆ ಮಠ ಎಂಬುದಿಲ್ಲ. ಅವರು ಎಲ್ಲಿ ಆಯಾಸಗೊಂಡರೂ ಅಲ್ಲೇ ತಮ್ಮ ಟೆಂಟ್ ಹಾಕಿಬಿಡುತ್ತಾರೆ. ಅವರು ಕಾಡು, ಫುಟ್‌ಪಾತ್ ಮತ್ತು ಜನವಸತಿ ಇಲ್ಲದ ಸ್ಥಳಗಳಲ್ಲಿಯೂ ರಾತ್ರಿ ಕಳೆದಿದ್ದಾರೆ. ಕಾಲ್ನಡಿಗೆಯಲ್ಲೇ ಭಿಕ್ಷೆ ಬೇಡುವ ಮೂಲಕ ಬಾಬಾ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಹರಿದ್ವಾರದಲ್ಲೂ ಅವರು ಗಂಗಾ ತೀರದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂತು.
ಪುಸ್ತಕಗಳನ್ನು ಬಳಸಿಕೊಂಡು ಹಿಂದಿ ಕಲಿತ ಬೆನ್ ಬಾಬಾ ಭಾರತದಲ್ಲಿ ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಅವರ ಜೀವನದ ಉದ್ದೇಶ ಸನಾತನ ಧರ್ಮ ಮತ್ತು ಯೋಗವನ್ನು ಪ್ರಚಾರ ಮಾಡುವುದಾಗಿದೆ. ಭವಿಷ್ಯದಲ್ಲಿ ಅವರು ತಮ್ಮ ದೇಶ ಸ್ವಿಟ್ಜರ್‌ಲ್ಯಾಂಡ್‌ಗೆ ಮರಳಲು ಮತ್ತು ತಮ್ಮ ಜನರನ್ನು ಧರ್ಮ ಮತ್ತು ಆಧ್ಯಾತ್ಮಿಕತೆಯ ಹಾದಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳುತ್ತಾರೆ.