ಪಂಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಲೇ ತನ್ನ ಕಠಿಣ ಪರಿಶ್ರಮದಿಂದ ಖಡಕ್ IAS ಅಧಿಕಾರಿಯಾದ ಯುವಕ

in Uncategorized 144 views

ಏನನ್ನಾದರೂ ಮಾಡುವ ಬಯಕೆ ಇದ್ದರೆ ಮತ್ತು ಅದಕ್ಕೆ ಅನುಗುಣವಾಗಿ ನಿರಂತರ ಪ್ರಯತ್ನಗಳನ್ನು ಮಾಡಿದರೆ ಎಂತಹ ಕಠಿಣ ಪರಿಸ್ಥಿತಿಯೂ ನಿಮ್ಮನ್ನು ಯಶಸ್ಸನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕಷ್ಟಗಳು ಕೆಲ ಸಮಯದವರೆಗೆ ನಿಮ್ಮ ಮಾರ್ಗವನ್ನು ನಿರ್ಬಂಧಿಸಬಹುದು ಆದರೆ ಅದು ನಿಮ್ಮ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ. ಇಂದಿನ ಪ್ರಸ್ತುತಿಯಲ್ಲಿ, ನಾವು ನಿಮಗೆ ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಎದುರಿಸಿದ ಐಎಎಸ್ ಅಧಿಕಾರಿಯ ಕಥೆಯನ್ನು ತಿಳಿಸಲಿದ್ದೇವೆ‌‌. ಅವರ ಧೈರ್ಯ ಮತ್ತು ಸಾಮರ್ಥ್ಯದಿಂದ ಅವರು ತಲುಪಿದ ಯಶಸ್ಸಿನ ಗಾಥೆಯನ್ನ ನಿಮ್ಮೆದುರು ಪ್ರಸ್ತುತ ಪಡಿಸಲಿದ್ದೇವೆ.

Advertisement

ಆರ್ಥಿಕ ಸಂಕಷ್ಟದ ನಡುವೆಯೂ ವಿದ್ಯಾಭ್ಯಾಸ ಮುಗಿಸಿದ ಯುವಕ

ವರುಣ್ ಬಾರ್ನ್ವಾಲ್ ಮಹಾರಾಷ್ಟ್ರದ ಬೋಯಿಸಾರ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಅವರ ಬಾಲ್ಯವು ಕಡು ಬಡತನದಲ್ಲಿ ಕಳೆಯಿತು. ವರುಣ್ ಬಾರ್ನ್ವಾಲ್ ಓದಿನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಆದರೆ ಅವರ ಬಳಿ ವಿದ್ಯಾಭ್ಯಾಸ ಮಾಡಲು ಹಣವಿರಲಿಲ್ಲ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಲು 10 ನೇ ತರಗತಿ ಮುಗಿಸಿದ ನಂತರ ವರುಣ್ ಬರ್ನ್ವಾಲ್ ಸೈಕಲ್ ಅಂಗಡಿಯಲ್ಲಿ ಪಂಕ್ಚರ್ ಕೆಲಸ ಮಾಡಲು ಆರಂಭಿಸಿದರು. 2006 ರಲ್ಲಿ ನಾನು 10 ನೇ ಪರೀಕ್ಷೆಯನ್ನು ಬರೆದಿದ್ದೆ ಮತ್ತು ಪರೀಕ್ಷೆ ನೀಡಿದ ಮೂರು ದಿನಗಳ ನಂತರ ನನ್ನ ತಂದೆ ನಿಧನರಾದರು ಎಂದು ವರುಣ್ ಬಾರ್ನ್ವಾಲ್ ಹೇಳುತ್ತಾರೆ.

ನನ್ನ ತಂದೆಯ ನಿಧನ ನನಗೆ ನನ್ನ ವಿದ್ಯಾಭ್ಯಾಸವನ್ನ ಬಿಡಬೇಕು ಎಂದು ಯೋಚಿಸುವಂತೆ ಮಾಡಿದೆ. ಆದರೆ 10 ನೇ ತರಗತಿಯ ಫಲಿತಾಂಶ ಬಂದಾಗ, ನಾನು ಶಾಲೆಯಲ್ಲಿ ರ‌್ಯಾಂಕ್ ಪಡೆದಿದ್ದೆ. ನಮ್ಮ ಕುಟುಂಬ ಸದಸ್ಯರು ನನಗೆ ಸಾಕಷ್ಟು ಬೆಂಬಲ ನೀಡಿದರು. ನನ್ನ ತಾಯಿ ನನಗೆ ನೀನು ನಿನ್ನ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ನಾನು 11-12ನೇ ತರಗತಿಯಲ್ಲಿದ್ದಾಗ, ಆ ವರ್ಷ ನನಗೆ ತುಂಬಾ ಕಷ್ಟಕರವಾಗಿತ್ತು. ನಾನು ಬೆಳಿಗ್ಗೆ 6 ಗಂಟೆಗೆ ಎದ್ದು ಶಾಲೆಗೆ ಹೋಗುತ್ತಿದ್ದೆ ಮತ್ತು ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಟ್ಯೂಷನ್ ಹೇಳಿಕೊಡುತ್ತಿದ್ದೆ. ನಂತರ ಅಂಗಡಿಯ ಲೆಕ್ಕವನ್ನೂ ಕೊಡುವ ಕೆಲಸ ಮಾಡುತ್ತಿದ್ದೆ ಎಂದು ಹೇಳುತ್ತಾರೆ ವರುಣ್.

ವರುಣ್ ವಿದ್ಯಾಭ್ಯಾಸಕ್ಕಾಗಿ ಹಲವು ಜನ ಸಹಾಯ ಮಾಡಿದರು

ಈ ಬಗ್ಗೆ ವರುಣ್ ಬಾರ್ನ್ವಾಲ್ ಮಾತನಾಡುತ್ತ, 10 ನೇ ತರಗತಿಗೆ ಪ್ರವೇಶಕ್ಕಾಗಿ ಮನೆಯ ಹತ್ತಿರ ಒಂದು ಒಳ್ಳೆಯ ಶಾಲೆ ಇತ್ತು. ಆದರೆ ಆ ಶಾಲೆಯಲ್ಲಿ ಪ್ರವೇಶ ಪಡೆಯಲು, 10 ಸಾವಿರ ರೂಪಾಯಿ ಫೀಸ್ ಇತ್ತು. ನಮ್ಮ ಹತ್ತಿರ ಅಷ್ಟು ಹಣವಿಲ್ಲ‌ ಮುಂದಿನ ವರ್ಷ ನಾನು ಶಾಲೆ ಸೇರುತ್ತೇನೆ ಎಂದು ನನ್ನ ತಾಯಿಗೆ ಹೇಳಿದೆ. ಆದರೆ ನನ್ನ ತಂದೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನಾನು ಕೆಲಸ ಮಾಡುತ್ತಿದ್ದ ಅಂಗಡಿಯ ಬಳಿ ಹೋಗುತ್ತಿದ್ದರು. ನಾನು ಎಲ್ಲಾ ವಿಷಯಗಳನ್ನು ಅವರಿಗೆ ಹೇಳಿದೆ ಮತ್ತು ಆ ವೈದ್ಯರು 10 ಸಾವಿರ ರೂಪಾಯಿಗಳನ್ನು ನನಗೆ ಕೊಟ್ಟು ನೀನು ಶಾಲೆಗೆ ಅಡ್ಮಿಟ್ ಆಗು ಎಂದರು ಎನ್ನುತ್ತಾರೆ ವರುಣ್.

ಬಳಿಕ ಆ ಹಣ ತಗೊಂಡು ವರುಣ್ ಶಾಲೆಯಲ್ಲಿ ಅಡ್ಮಿಷನ್ ಪಡೆದರು. ಶಾಲೆಗೇನೋ ದಾಖಲಾತಿ ಪಡೆದರು ಆದರೆ ಪ್ರತಿ ತಿಂಗಳ ಶಾಲಾ ಫೀಸ್ ಹೇಗೆ ಹೊಂದಿಸೋದು ಅಂತ ವರುಣ್ ಚಿಂತಿಸತೊಡಗಿದರು. ಬಳಿಕ ವರುಣ್ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿದರು. ಓದಿನಲ್ಲಿ ಚುರುಕಾಗಿದ್ದ ವರುಣ್‌ ಪರಿಸ್ಥಿತಿ ನೋಡಿ ಪ್ರಾಂಶುಪಾಲರು ವರುಣ್‌ನ ಒಂದು ವರ್ಷಗಳ ಅಂದರ ಪ್ರತಿ ತಿಂಗಳ ಶಾಲಾ ಶುಲ್ಕವನ್ನ ಮನ್ನಾ ಮಾಡಿದರು. 10 ನೆಯ ತರಗತಿ ಮುಗಿಯಿತು, ಈಗ ಕಾಲೇಜು ಸೇರಬೇಕಿತ್ತು.

ಈ ಕಾಲೇಜಿನ ಶುಲ್ಕ 1 ಲಕ್ಷ ರೂ. ಇತ್ತು. ಹಾಗಾಗಿ ತಾಯಿ ಹೇಗೋ ಅದನ್ನ ಹೊಂದಿಸಿ ಶುಲ್ಕವನ್ನು ಪಾವತಿಸಿದರು. ಆದರೆ ಈ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿದ್ದರಿಂದ ಅವರ ಸಮಸ್ಯೆ ಇನ್ನೂ ಮುಗಿದಿರಲಿಲ್ಲ. ನಂತರ ವರುಣ್ ಸ್ನೇಹಿತರು ಆತನಿಗೆ ಸಹಾಯ ಮಾಡಿದರು, ಎಲ್ಲಾ ಸ್ನೇಹಿತರು ಒಟ್ಟಾಗಿ ಸೇರಿ ತಾವು ಜಮಾ ಮಾಡಿದ್ದ ಹಣವನ್ನ ವರುಣ್ ಶುಲ್ಕವನ್ನು ಪಾವತಿಸುತ್ತಿದ್ದರು. ವರುಣ್ ಹಾಗು ಆತನ ಸ್ನೇಹಿತರು ಅಣ್ಣಾ ಹಜಾರೆಯವರ ಜನ ಲೋಕಪಾಲ ಮಸೂದೆಯ ಚಳವಳಿಯಲ್ಲೂ ಭಾಗವಹಿಸಿದ್ದರು.

ಕಠಿಣ ಪರಿಶ್ರಮದಿಂದ IAS ಆಫೀಸರ್ ಆದ ವರುಣ್

ವರುಣ್ ಬಾರ್ನ್‌ವಾಲ್‌ಗೆ ಇಂಜಿನಿಯರಿಂಗ್ ಮಾಡಿದ ನಂತರ, ಉತ್ತಮ ಕಂಪನಿಯಿಂದ ಉದ್ಯೋಗದ ಆಫರ್‌ಗಳು ಬರಲಾರಂಭಿಸಿದವು. ಆದರೆ ವರುಣ್ ಸಿವಿಲ್ ಸರ್ವಿಸಸ್ ಗಳಿಗೆ ತಯಾರಾಗಬೇಕು ಎಂದು ಮನಸ್ಸು ಮಾಡಿದ್ದರು. ಆದರೆ ಅವರಿಗೆ ಹೇಗೆ ತಯಾರಿ ಮಾಡಬೇಕೆಂದು ಅರ್ಥವಾಗಲಿಲ್ಲ. ಈ ಮಧ್ಯೆ, ವರುಣ್ ಸಹೋದರರು ಅವನಿಗೆ ಸಾಕಷ್ಟು ಸಹಾಯ ಮಾಡಿದರು ಮತ್ತು ವರುಣ್ ಬಾರ್ನ್ವಾಲ್ ತನ್ನ ಕಠಿಣ ಪರಿಶ್ರಮದಿಂದ ಯುಪಿಎಸ್‌ಸಿಗೆ ಸಿದ್ಧತೆ ನಡೆಸಿದರು.

2013 ರಲ್ಲಿ, ಅವರು ಯುಪಿಎಸ್‌ಸಿ ಪರೀಕ್ಷೆ ಬರೆದರು, ಅದರಲ್ಲಿ ಅವರು 26 ನೇ ರ‌್ಯಾಂಕ್ ಪಡೆದರು. ಅವರನ್ನು ಗುಜರಾತಿನಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಿಸಲಾಯಿತು. ವರುಣ್ ಬಾರ್ನ್ವಾಲ್ ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ನಂತರವೂ ಎಂದಿಗೂ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ ಮತ್ತು ಅವನು ಹಿಂತಿರುಗಿ ನೋಡಲೇ ಇಲ್ಲ. ಅದಕ್ಕಾಗಿಯೇ ಇಂದು ಅವರು ಯಶಸ್ವಿ ವ್ಯಕ್ತಿಯಾಗಿದ್ದಾರೆ.

Advertisement
Share this on...