ಸಾಮಾನ್ಯ ಜನರು ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಾನ್ ಜನರು ಆ ಅವಮಾನವನ್ನ ತಮ್ಮ ಯಶಸ್ಸಿನ ಏಣಿಯನ್ನಾಗಿ ಬದಲಿಸಿಕೊಳ್ಳುತ್ತಾರೆ. ಟಾಟಾ ಕಂಪನಿಯನ್ನು ಈ ಮಟ್ಟದ ಎತ್ತರಕ್ಕೆ ತಂದು ನಿಲ್ಲಿಸಿದ ರತನ್ ಟಾಟಾ ರವರಿಗೆ ಈ ಮಾತನ್ನು ಸೂಟ್ ಆಗುತ್ತದೆ. ಟಾಟಾ ಸನ್ಸ್ 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಈ ಕಂಪನಿಗಳಲ್ಲಿ ಸೂಜಿಯಿಂದ ಹಿಡಿದು ಸ್ಟೀಲ್, ಚಹಾದಿಂದ ಹಿಡಿದು 5 ಸ್ಟಾರ್ ಹೋಟೆಲ್‌ಗಳವರೆಗೆ ಮತ್ತು ನ್ಯಾನೊದಿಂದ ಹಿಡಿದು ವಿಮಾನಗಳವರೆಗೆ ಎಲ್ಲವೂ ಲಭ್ಯವವಿವೆ. ಎಲ್ಲರಿಗೂ ಸ್ಪೂರ್ತಿದಾಯಕವಾಗಿರುವ ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರ ಜೀವನದ ಕಥೆಯನ್ನು ಇಲ್ಲಿ ನಾವು ಹೇಳಲಿದ್ದೇವೆ.
ಅವರ ಸ್ಟೋರಿಯನ್ನ ತಿಳಿದುಕೊಳ್ಳುವ ಮೊದಲು ನಾವು ರತನ್ ಟಾಟಾ ಬಗ್ಗೆ ತಿಳಿದುಕೊಂಡರೆ, ಈ ಕಥೆಯನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ರತನ್ ಟಾಟಾ ಅವರ ಜೀವನವು ಏರಿಳಿತಗಳಿಂದ ಕೂಡಿದೆ. ಅವರು ಡಿಸೆಂಬರ್ 28, 1937 ರಂದು ಜನಿಸಿದರು. ಅವರು ಟಾಟಾ ಸಮೂಹದ ಸಂಸ್ಥಾಪಕ ಜಮಶೇಡ್‌ಜಿ ಟಾಟಾ ದತ್ತು ಮೊಮ್ಮಗ ನವಲ್ ಟಾಟಾ ಅವರ ಮಗನಾಗಿದ್ದಾರೆ. ರತನ್ ಟಾಟಾ 1961 ರಲ್ಲಿ ಐಬಿಎಂ ನಲ್ಲಿ ಸಿಕ್ಕ ಪ್ರತಿಷ್ಠಿತ ಕೆಲಸವನ್ನು ತಿರಸ್ಕರಿಸುವ ಮೂಲಕ ಟಾಟಾ ಗ್ರೂಪ್ ನಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ 1991 ರ ಹೊತ್ತಿಗೆ ಅವರು ಟಾಟಾ ಗ್ರೂಪ್‌ನ ಚೇರ್ಮನ್ ಆದರು. 2012 ರಲ್ಲಿ ಅವರು ನಿವೃತ್ತರಾದರು. ರತನ್ ಟಾಟಾ ಅವರು ತಮ್ಮ 21 ವರ್ಷಗಳ ಆಡಳಿತದಲ್ಲಿ ಕಂಪನಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು. ಅವರು ಕಂಪನಿಯ ವ್ಯಾಲ್ಯೂ ಅನ್ನು 50 ಪಟ್ಟು ಹೆಚ್ಚಿಸಿದರು. ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತ ಹೋದರು ಹಾಗು ಅವು ಯಶಸ್ಸಿನ ಇತಿಹಾಸವನ್ನೇ ಸೃಷ್ಟಿಸಿದವು.
ಈ ರೀತಿಯಾಗಿ ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದ ರತನ್ ಟಾಟಾ
ಇದು 1998 ಕಥೆ, ಆಗ ಟಾಟಾ ಮೋಟಾರ್ಸ್ ತನ್ನ ಮೊದಲ ಪ್ಯಾಸೆಂಜರ್ ಕಾರ್ ‘ಇಂಡಿಕಾ’ವನ್ನು ಮಾರುಕಟ್ಟೆಗೆ ತಂದಿತು. ವಾಸ್ತವವಾಗಿ ಇದು ರತನ್ ಟಾಟಾ ಅವರ ಡ್ರೀಮ್ ಪ್ರಾಜೆಕ್ಟ್ ಆಗಿತ್ತು ಹಾಗು ಅದಕ್ಕಾಗಿ ಅವರು ಬಹಳ ಶ್ರಮಿಸಿದ್ದರು. ಆದರೆ ಈ ಕಾರು ಟಾಟಾ ರವರು ಅಂದುಕೊಂಡಷ್ಟು ಉತ್ತಮ ಪ್ರತಿಕ್ರಿಯೆ ಮಾರ್ಕೆಟ್ ನಲ್ಲಿ ಸಿಗಲಿಲ್ಲ. ಈ ಕಾರಣದಿಂದ ಟಾಟಾ ಮೋಟಾರ್ಸ್‌ಗೆ ನಷ್ಟ ಎದುರಿಸುವಂತಾಯ್ತು. ಕಂಪನಿ ಜೊತೆ ನಿಕಟ ಸಂಪರ್ಕ ಹೊಂದಿದ್ದ ಜನರು ಅದನ್ನು ಮಾರಾಟ ಮಾಡಲು ರತನ್ ಟಾಟಾಗೆ ಸೂಚಿಸಿದರು. ಆದರೆ ರತನ್ ಟಾಟಾ ಅವರು ಒಲ್ಲದ ಮನಸ್ಸಿನಿಂದಲೇ ಈ ನಿರ್ಧಾರಕ್ಕೆ ಒಪ್ಪಿಕೊಳ್ಳಬೇಕಾಯಿತು. ನಂತರ ಅವರು ತಮ್ಮ ಕಂಪನಿಯನ್ನು ಮಾರಾಟ ಮಾಡಲು ಅಮೇರಿಕಾದ ಫೋರ್ಡ್ ಕಂಪೆನಿಯ ಬಳಿ ಹೋದರು.
ರತನ್ ಟಾಟಾ ಹಾಗು ಫೋರ್ಡ್ ಕಂಪೆನಿಯ ಮಾಲೀಕ ಬಿಲ್ ಫೋರ್ಡ್ ರವರ ನಡುವೆ ಹಲವು ಗಂಟೆಗಳ ಕಾಲ ಮೀಟಿಂಗ್ ನಡೆಯಿತು. ಈ ಸಂದರ್ಭದಲ್ಲಿ ಬಿಲ್ ಫೋರ್ಡ್ ರತನ್ ಟಾಟಾ ರವರ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ನಿಮಗೆ ಈ ಉದ್ಯಮದ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ ಅಂತಾದರೆ ಈ ಪ್ರಾಜೆಕ್ಟ್‌ಗಾಗಿ ಇಷ್ಟೊಂದು ಹಣ ಸುರಿಯುವ ಅವಶ್ಯಕತೆಯಾದರೂ ಏನಿತ್ತು? ಸರಿ ನಿಮ್ಮ ಮೇಲೆ ಕರುಣೆ ತೋರಿ ಈ ಕಂಪೆನಿಯನ್ನ ನಾವು ಖರೀದಿಸುತ್ತೇವೆ ಎಂದು ಬಿಲ್ ಫೋರ್ಡ್ ರತನ್ ಟಾಟಾ ರವರಿಗೆ ಹೇಳಿದರು.
ಆದರೆ ಬಿಲ್ ಫೋರ್ಡ್ ರವರ ಈ ಮಾತುಗಳು ರತನ್ ಟಾಟಾ ರವರ ಮನಸ್ಸಿನಲ್ಲೇ ಉಳಿದುಬಿಟ್ಟವು. ತಮಗಾದ ಆ ಅವಮಾನದಿಂದ ರತನ್ ಟಾಟಾ ಆ ಡೀಲ್‌ನ್ನ ತಿರಸ್ಕರಿಸಿ ಅಲ್ಲಿಂದ ಹೊರಟು ಬಂದರು. ಬಿಲ್ ಫೋರ್ಡ್‌ನ ಆ ಶಬ್ದಗಳನ್ನ ಹಾಗು ತಮಗಾದ ಅಪಮಾನದ ಬಗ್ಗೆ ರತನ್ ಟಾಟಾ ಸದಾ ಯೋಚನೆ ಮಾಡುತ್ತಲೇ ಇರುತ್ತಿದ್ದರು. ಅವರಿಗೆ ರಾತ್ರಿ ನಿದ್ದೆ ಮಾಡೋಕೂ ಸಾಧ್ಯವಾಗುತ್ತಿರಲಿಲ್ಲ. ಆಗ ರತನ್ ಟಾಟಾ ಈ ಕಂಪೆನಿಯನ್ನ ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಿ ತಮ್ಮ ಕಂಪೆನಿಯ ಏಳಿಗೆಗಾಗಿ ದೃಢಸಂಕಲ್ಪ ಮಾಡಿದರು.
ಇದಕ್ಕಾಗಿ ಅವರು ಒಂದು ರಿಸರ್ಚ್ ಟೀಮ್‌ನ್ನ ರಚಿಸಿ ಮಾರ್ಕೆಟ್ ನಲ್ಲಿ ಜನರ ಟೇಸ್ಟ್ ಹೇಗಿದೆ ಎಂಬುದನ್ನ ತಿಳಿದುಕೊಂಡರು. ಇದರ ನಂತರ ಕಥೆಯಂತೂ ಅಂದರೆ ಭಾರತದ ಮಾರುಕಟ್ಟೆಯಲ್ಲಿ ಟಾಟಾ ಇಂಡಿಕಾ ಯಾವ ಮಟ್ಟದ ಯಶಸ್ಸಿಗೆ ತಲುಪಿದು ಎಂಬುದು ಎಲ್ಲರಿಗೂ ತಿಳಿದೇ ಇದೆ. ಭಾರತದಲ್ಲಿ ಟಾಟಾ ಇಂಡಿಕಾ ಉತ್ತುಂಗಕ್ಕೆ ಏರುತ್ತಿರುವಾಗಲೇ ಫೋರ್ಡ್ ಕಂಪೆನಿಯ ಪತನಶುರುವಾಗಿತ್ತು. 2008 ರಲ್ಲಿ ಫೋರ್ಡ್ ಕಂಪೆನಿ ದಿವಾಳಿಯಾಗುವ ಹಂತಕ್ಕೆ ತಲುಪಿತು. ಈ ವಿಷಯ ತಿಳಿಯುತ್ತಲೇ ರತನ್ ಟಾಟಾ ರವರು ಫೋರ್ಡ್ ಕಂಪೆನಿಯ ಲಗ್ಸರಿ ಕಾರ್ ಲ್ಯಾಂಡ್ ರೋವರ್ ಹಾಗು ಜಾಗುವಾರ್ ತಯಾರಿಸುವ ಕಂಪೆನಿಯಾದ ಜೆಎಲ್‌ಆರ್ ಖರೀದಿಸುವ ಪ್ರಸ್ತಾಪವನ್ನು ಮುಂದಿಟ್ಟರು.
ಅದನ್ನ ಫೋರ್ಡ್ ಒಪ್ಪಿಕೊಂಡಿತು. ಇದಾದ ಬಳಿಕ ಮೀಟಿಂಗ್ ಗಾಗಿ ಫೋರ್ಡ್‌ನ ಅಧಿಕಾರಿಗಳು ಭಾರತಕ್ಕೆ ಬಂದರು ಹಾಗು ಬಾಂಬೇ ಹೌಸ್ ನಲ್ಲಿ ಮೀಟಿಂಗ್ ಫಿಕ್ಸ್ ಆಯಿತು. ಮೀಟಿಂಗ್ ನಲ್ಲಿ ಈ ಡೀಲ್ 2.3 ಬಿಲಿಯನ್ ಡಾಲರ್ ಗೆ ಫೈನಲ್ ಆಯ್ತು. ಆಗ ಒಂದು ಕಾಲದಲ್ಲಿ ಬಿಲ್ ಫೋರ್ಡ್ ರತನ್ ಟಾಟಾ ರವರುಗೆ ಹೇಳಿದ್ದ ಮಾತುಗಳನ್ನೇ ಪುನರುಚ್ಛರಿಸಿದರು. ಆದರೆ ಆ ಶಬ್ದಗಳಲ್ಲಿ ಸ್ವಲ್ಪ ಬದಲಾವಣೆಯಿತ್ತು.
“ನೀವು ನಮ್ಮ ಕಂಪೆನಿಯನ್ನ ಖರೀದಿಸಿ ನಮ್ಮ ಮೇಲೆ ಕರುಣೆ ತೋರಿಸುತ್ತಿದ್ದೀರ” ಎಂದು ಅದೇ ಬಿಲ್ ಫೋರ್ಡ್ ರತನ್ ಟಾಟಾಗೆ ಹೇಳುತ್ತಾರೆ.
ಇಂದು ಜೆಎಲ್‌ಆರ್ ಟಾಟಾ ಗ್ರೂಪ್‌ನ ಭಾಗವಾಗಿದ್ದು ಮಾರುಕಟ್ಟೆಯಲ್ಲಿ ಭಾರೀ ಲಾಭ ಗಳಿಸುತ್ತದೆ. ರತನ್ ಟಾಟಾ ಬಯಸಿದ್ದರೆ ಅಂದು ಬಿಲ್ ಫೋರ್ಡ್ ಆಡಿದ್ದ ಮಾತುಗಳಿಗೆ ಉತ್ತರ ಕೊಡಬಹುದಿತ್ತು ಆದರೆ ಮಹಾನ್ ವ್ಯಕ್ತಿಗಳು ತಮ್ಮ ಮಾತಿನಿಂದಲ್ಲ ಬದಲಾಗಿ ತಮ್ಮ ಯಶಸ್ಸಿನ ಮೂಲಕ ಉತ್ತರ ಕೊಡುತ್ತಾರೆ ಅನ್ನೋದನ್ನ ರತನ್ ಟಾಟಾ ಸಾಬೀತು ಮಾಡಿ ತೋರಿಸಿದ್ದರು.
– Vinod Hindu Nationalist