“ಸರ್ ನನ್ನ ಹೆಸರು ಹರೀಶ್, ನನ್ನ ಗರ್ಲ್‌ಫ್ರೆಂಡ್ ಜೊತೆ ಮದುವೆ ಮಾಡಿಸಿ” ಅಂತ ವಕೀಲರ ಬಳಿ ಬಂದ #ಮುಸ್ಲಿಂ ಯುವಕ: ಆಧಾರ್ ಕಾರ್ಡ್ ನಲ್ಲಿ ಆತ ಮುಸ್ಲಿಂ ಅಂತ ತಿಳಿಯುತ್ತಲೇ ಸಿಟ್ಟಿಗೆದ್ದ ವಕೀಲರು ಮಾಡಿದ್ದೇನು ನೋಡಿ

in Uncategorized 25,921 views

ಆಗ್ರಾದಲ್ಲಿ, ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಮದುವೆಯಾಗಲು ಕೋರ್ಟ್ ಬಂದಿದ್ದ, ಆತನ ವಕೀಲರೇ ಆತನನ್ನ ಪೊಲೀಸರಿಗೆ ಒಪ್ಪಿಸಿದ ಘಟನೆ ಆಗ್ರಾ ಕೋರ್ಟ್ ನಲ್ಲಿ ನಡೆದಿದೆ. ಕಲೆಕ್ಟರೇಟ್ ಕ್ಯಾಂಪಸ್‌ಗೆ ಸಂಬಂಧಿಸಿದ ಈ ಪ್ರಕರಣ ನಿಜಕ್ಕೂ ತುಂಬಾ ಆಸಕ್ತಿದಾಯಕವಾಗಿದೆ. ವಕೀಲ ಅಮರ್ ಸಿಂಗ್ ವರ್ಮಾ ಎಸ್‌ಎಸ್‌ಪಿ ಕಚೇರಿಯ ಹೊರಗೆ ಕೂತಿರುತ್ತಾರೆ. ಮಧ್ಯಾಹ್ನ, ಹರೀಶ್ ಎಂಬ ಯುವಕ ತನ್ನ ಗೆಳತಿಯೊಂದಿಗೆ ವಕೀಲ ಅಮರ್ ಸಿಂಗ್ ವರ್ಮಾ ಅವರನ್ನು ಭೇಟಿಯಾದ.

Advertisement

ವಕೀಲರಿಗೆ ತನ್ನ ಗೆಳತಿಯ ಜೊತೆ ತನ್ನ ವಿವಾಹವನ್ನು ಮಾಡಿಸಲು ಹೇಳಿದ. ಯುವಕ ಹರೀಶ್ ತನ್ನ ಮತ್ತು ಹುಡುಗಿಯ ಆಧಾರ್ ಕಾರ್ಡ್ ಅನ್ನು ವಕೀಲರಿಗೆ ನೀಡಿದನು. ಆಧಾರ್ ಕಾರ್ಡ್‌ನಲ್ಲಿರುವ ಯುವಕನ ತಂದೆಯ ಹೆಸರು ಮೊಹಮ್ಮದ್ ದಿಲ್ಷಾದ್ ಎಂದು ವಕೀಲರು ಗಮನಿಸಿದರು. ವಕೀಲ ಅಮರ್ ಸಿಂಗ್ ವರ್ಮಾ ಇದನ್ನ ನೋಡಿದ ಕೂಡಲೇ ಕಾರ್ಯಪ್ರವೃತ್ತರಾದರು. ಇದು ಲವ್ ಜಿಹಾದ್‌ನ ವಿಷಯ ಎಂದು ಅವರಿಗೆ ಸ್ಪಷ್ಟವಾಗಿ ಅರ್ಥವಾಯಿತು.

ಸಾಂದರ್ಭಿಕ ಚಿತ್ರ

ಇದಾದ ನಂತರ, ವಕೀಲರು ಯುವಕ ಹರೀಶ್ ಮತ್ತು ಹುಡುಗಿಯನ್ನು ತಮ್ಮೊಂದಿಗೆ ಕೂರಿಸಿಕೊಂಡು ಲೋಹಾಮಂಡಿ ಪೊಲೀಸರಿಗೆ ಸದ್ದಿಲ್ಲದೆ ವಿಷಯ ತಿಳಿಸಿದರು. ಮಾಹಿತಿ ಪಡೆದ ತಕ್ಷಣ ಲೋಹಾಮಂಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪೊಲೀಸರು ತನಿಖೆ ನಡೆಸಿದಾಗ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂಬ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದರು. ನಿಯಮಗಳ ಪ್ರಕಾರ ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಸಿಟಿ ಆಗ್ರಾ ಹೇಳಿದರು.

ಉತ್ತರಪ್ರದೇಶದಲ್ಲಿ ಈ ಹಿಂದೆಯೂ ಹಲವಾರು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ, ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ, ಒಬ್ಬ ಮುಸ್ಲಿಮನು ತಾನು ಭೇಟಿಯಾಗುವ ಯುವತಿಗೆ ಫೋನ್ ಮಾಡಿದನು. ಮುಸ್ಲಿಂ ಯುವಕ ಯುವತಿಯ ಧ್ವನಿಯನ್ನು ತುಂಬಾ ಇಷ್ಟಪಟ್ಟನು, ಆಕೆಯೊಂದಿಗೆ ಫೋನಿನಲ್ಲಿ ಮಾತನಾಡುತ್ತಲೇ ಆಕೆಯನ್ನು ಪ್ರೀತಿಸಲಾರಂಭಿಸಿದ. ಅವರ ಸ್ನೇಹ ಪ್ರೀತಿಗೆ ತಿರುಗಿತು. ಆ ವ್ಯಕ್ತಿ ಯುವತಿಯನ್ನ ಮದುವೆಯಾಗಲು ಬಯಸುವುದಾಗಿ ಹೇಳಿದನು. ಆತ ಒಳ್ಳೆಯ ವ್ಯಕ್ತಿ ಎಂದು ಭಾವಿಸಿ ಯುವತಿಯೂ ಒಪ್ಪಿಕೊಂಡಳು.

ಆದರೆ ಗಮನಿಸುವ ಅಂಶವೇನೆಂದರೆ ಆ ಮುಸ್ಲಿಂ ಯುವಕ ಫೋನಿನಲ್ಲಿ ತಾನು ಹಿಂದೂ ಎಂದು ಹೇಳಿಕೊಂಡು ಯುವತಿಯನ್ನ ಪ್ರೀತಿಯ ಬಲೆಗೆ ಸಿಲುಕಿಸಿದ್ದ. ಆತ ತನ್ನ ಹೆಸರು ಮಹಾರಾಜ್ ಖುರೇಶಿ ಉರ್ಫ್ ರಾಹುಲ್ ಅಂತ ಯುವತಿಗೆ ಹೇಳಿದ್ದ. ಆದರೆ ಅಸಲಿಗೆ ಅವನ ಹೆಸರು ಕತ್ರಾ ಬಜೀರ್ ಖಾನ್ ಆಗಿತ್ತು. 2019 ರಲ್ಲಿ ಆತ ಒಂದು ಫೋನ್ ನಂಬರ್‌ಗೆ ಕಾಲ್ ಮಾಡಿದ್ದ, ಫೋನ್ ನಂಬರ್ ನಲ್ಲಿ ಒಂದು ಡಿಜಿಟ್ ತಪ್ಪಾಗಿತ್ತು ಕ್ಷಮಿಸಿ ಅಂತ ಯುವತಿಯ ಜೊತೆ ಮಾತುಕತೆ ಆರಂಭಿಸಿದ್ದ. ಬಜೀರ್ ಖಾನ್‌ಗೆ ಯುವತಿಯ ಧ್ವನಿಯನ್ನು ತುಂಬಾ ಇಷ್ಟವಾಯಿತು, ಆತ ಪ್ರತಿದಿನ ಯುವತಗೆ ಕರೆ ಮಾಡಲು ಪ್ರಾರಂಭಿಸಿದನು ಮತ್ತು ಹೀಗೆ ಅವರಿಬ್ಬರ ಫೋನ್ ಸಂಭಾಷಣೆ ಪ್ರೀತಿಗೆ ತಿರುಗಿತು (ಆಕೆಯನ್ನ ಟ್ರ್ಯಾಪ್ ಮಾಡಲಾಗಿತ್ತು).ಆ ಮಹಿಳೆ ಹಿಂದೂ ಆಗಿದ್ದರಿಂದ ತಾನೂ ಒಬ್ಬ ಹಿಂದೂ ಅಂತಲೇ ಹೇಳಿಕೊಂಡ, ತಾನೊಬ್ಬ ಮುಸ್ಲಿಂ ಅನ್ನೋದನ್ನಷ್ಟೇ ಅಲ್ಲದೆ ತಾನು ಈ ಹಿಂದೆಯೂ ಮದುವೆಯಾಗಿದ್ದರ ಬಗ್ಗೆಯೂ ಆಕೆಯಿಂದ ಮುಚ್ಚಿಟ್ಟಿದ್ದ.

ಅದೇ ಸಮಯದಲ್ಲಿ, ಯುವತಿಗೆ ಈತ ಮುಸ್ಲಿಂ ಅಂತ ಗೊತ್ತಾದಾಗ ಯುವತಿಯು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಳು. ಪೊಲೀಸರು ಆರೋಪಿಯನ್ನು ಹಿಡಿದು ಜೈಲಿಗೆ ಕಳುಹಿಸಿದ್ದರು.

Advertisement
Share this on...