“ದೆಹಲಿಯ ಕೆಂಪು ಕೋಟೆ ನನ್ನದು, ಅದು ನನಗೇ ಸೇರಬೇಕು, ಕೊಡಿ” ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಮೊಘಲ್ ವಂಶಜೆ: ಕೋರ್ಟ್ ಹೇಳಿದ್ದೇನು ಕೇಳಿ

in Kannada News/News 41,639 views

ಪಶ್ಚಿಮ ಬಂಗಾಳದ ಹೌರಾದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಸುಲ್ತಾನಾ ಬೇಗಂ ಅವರು ಕೆಂಪು ಕೋಟೆ ನನ್ನದು. ಇದನ್ನು ಭಾರತ ಸರ್ಕಾರವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement

ಸುಲ್ತಾನಾ ಬೇಗಂ ತನ್ನನ್ನು ಮೊಘಲ್ ಚಕ್ರವರ್ತಿ ಬಹದ್ದೂರ್ ಸಾಹ್ ಜಾಫರ್ ಅವರ ಮರಿ ಮೊಮ್ಮಗ ಮಿರ್ಜಾ ಮೊಹಮ್ಮದ್ ಬೇದಾರ್ ಬಖ್ತ್ ಅವರ ಹೆಂಡತಿ ಎಂದು ವಿವರಿಸುತ್ತಾರೆ. ಬೇದಾರ್ ಬಖ್ತ್ ರಂಗೂನ್‌ನಿಂದ ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದ. 68 ವರ್ಷದ ಸುಲ್ತಾನಾ ಬೇಗಂ ಅವರು ತಮ್ಮ ಅರ್ಜಿಯಲ್ಲಿ ಕೆಂಪು ಕೋಟೆಯನ್ನ ಕೇಂದ್ರ ಸರ್ಕಾರ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಕ್ಕೆ ಸರ್ಕಾರದಿಂದ ಪರಿಹಾರವನ್ನು ಕೋರಿದ್ದಾರೆ. ಬಹದ್ದೂರ್ ಷಾ II ರ ಉತ್ತರಾಧಿಕಾರಿಯಾಗಿ 1960 ರಲ್ಲಿ ಭಾರತ ಸರ್ಕಾರವು ಬಖ್ತ್ ಅವರನ್ನು ಗುರುತಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್ ಅವರ ವಂಶಸ್ಥೆ ಕೆಂಪು ಕೋಟೆ ನನ್ನ ಕುಟುಂಬಕ್ಕೆ ಸೇರಿದ್ದು, ಈಗ ಅದು ನಮಗೇ ಸೇರಬೇಕು ಎಂದು ಹಾಕಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ತನ್ನನ್ನು ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ II ರ ಕಾನೂನುಬದ್ಧ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ (ಅಸಲಿಗೆ ಈಕೆ ಬಹದ್ದೂರ್ ಷಾ ಜಾಫರ್ II ರವರ ಮರಿ‌‌ಮೊಮ್ಮಗಳ ಮಗಳೇ) ಮಹಿಳೆ ಕೆಂಪು ಕೋಟೆ ತನ್ನದು, ಅದು ತನ್ನ ಒಡೆತನದಲ್ಲಿರಬೇಕೆಂದು ಹೇಳಿದ್ದಳು. ಸುಲ್ತಾನಾ ಬೇಗಂ ಅವರು ವಕೀಲ ವಿವೇಕ್ ಮೋರೆ ಮೂಲಕ ಈ ಅರ್ಜಿ ಸಲ್ಲಿಸಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನ ಆಸ್ತಿಯನ್ನು ಕಸಿದುಕೊಂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ, ಬಹದ್ದೂರ್ ಷಾ ಜಾಫರ್ ಅವರನ್ನು ಬ್ರಿಟಿಷರು ಬಂಧಿಸಿ ಗಡಿಪಾರು ಮಾಡಿದ್ದರು. ಅವರನ್ನು ಮ್ಯಾನ್ಮಾರ್‌ನಲ್ಲಿ ಬಂಧಿಸಿಡಲಾಗಿತ್ತು, ಅಲ್ಲೇ ಅವರು ನಿಧನರಾದರು. ಇದಾದ ನಂತರ ಬ್ರಿಟಿಷರು ಕೆಂಪು ಕೋಟೆಯನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಬಹದ್ದೂರ್ ಷಾ ಜಾಫರ್ ಅವರ ವಂಶಸ್ಥರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸೋಕೆ 150 ವರ್ಷಗಳು ಹೇಗೆ ಬೇಕಾಯಿತು? ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಕೇಳಿದರು. ಈಕೆಯ ಇತಿಹಾಸ ಜ್ಞಾನವು ತುಂಬಾ ದುರ್ಬಲವಾಗಿದೆ. ಆದರೆ ನೀವು 1857 ರಲ್ಲಿ‌ಆದ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದೀರೆಂದರೆ 150 ವರ್ಷಗಳ ಕಾಲ ಏನ್ ಮಾಡ್ತಾ ಇದ್ರಿ? ಎಂದು ಹೇಳಿದರು.

ಅದೇ ಸಮಯದಲ್ಲಿ, ಅರ್ಜಿದಾರರು ಬಹದ್ದೂರ್ ಶಾ ಜಾಫರ್ ಅವರ ವಂಶಸ್ಥರು ಎಂದು ಸಾಬೀತುಪಡಿಸಲು ಯಾವುದಾದರೂ ದಾಖಲೆ ಇದೆ ಎಂದು ದೆಹಲಿ ಹೈಕೋರ್ಟ್ ಕೇಳಿತು. ಈ ಬಗ್ಗೆ ದೆಹಲಿ ಹೈಕೋರ್ಟ್, “ನೀವು ಉತ್ತರಾಧಿಕಾರದ ವಂಶಾವಳಿಯನ್ನು ತೋರಿಸಲು ಯಾವುದೇ ಚಾರ್ಟ್ ಅನ್ನು ತಯಾರಿಸಿಲ್ಲ” ಎಂದು ಟೀಕಿಸಿದರು. ಮುಂದೆ ಮಾತನಾಡಿದ ನ್ಯಾಯಮೂರ್ತಿ ರೇಖಾ ಪಾಲಿ ಅವರು, “1857 ರ ಯುದ್ಧದ ನಂತರ ಬಹದ್ದೂರ್ ಶಾ ಜಾಫರ್ ಅವರನ್ನು ಜೈಲಿನಲ್ಲಿಟ್ಟು ದೇಶದಿಂದ ಹೊರಹಾಕಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರ ಉತ್ತರಾಧಿಕಾರಿಗಳು ಯಾರೂ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿಲ್ಲ ಅಂತಾದರೆ, ನೀವು ಹೇಗೆ ಮಾಡಲು ಸಾಧ್ಯ?” ಎಂದರು.

ಆದರೆ, ಅರ್ಜಿದಾರರ ಪರ ವಕೀಲರು ಸುಲ್ತಾನಾ ಬೇಗಂ ಅನಕ್ಷರಸ್ಥ ಮಹಿಳೆ ಎಂದು ತಿಳಿಸಿದ್ದು, ಕೆಂಪು ಕೋಟೆಯ ಮಾಲೀಕತ್ವದ ಅರ್ಜಿ ವಿಳಂಬದ ಹಿಂದಿನ ಕಾರಣವನ್ನು ತಿಳಿಸಿದರು. ನೀವು ಸರಿಯಾದ ಸಮಯಕ್ಕೆ ಕ್ರಮಕೈಗೊಳ್ಳದೆ (ಅರ್ಜಿ ಹಾಕದೇ ಇರೋದು) ಇರುವುದಕ್ಕೆ ಇದು ಸಮಂಜಸ ಕಾರಣವಲ್ಲ ಎಂದು ನ್ಯಾಯಾಲಯ ಹೇಳಿದೆ. ‘ಅತಿಯಾದ ವಿಳಂಬ’ದ ಆಧಾರದ ಮೇಲೆ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಂಗಕ್ಕೆ ಕೃತಜ್ಞತೆ ಸಲ್ಲಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ಕೆಂಪು ಕೋಟೆಯನ್ನು ಕೇಂದ್ರ ಸರ್ಕಾರದಿಂದ ವಾಪಸ್ ತೆಗೆದುಕೊಳ್ಳಲಾಗಿಲ್ಲ, ಅದಕ್ಕೆ ಧನ್ಯವಾದಗಳು ಎಂದು ಹೇಳಿದರು.

Advertisement
Share this on...