ಬಾಂಬೆ ಹೈಕೋರ್ಟ್‌ನ ಜಡ್ಜ್ (ನ್ಯಾಯಮೂರ್ತಿ) ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಪದಚ್ಯುತಿ (demotion) ನಿರ್ಣಯ ಕೈಗೊಳ್ಳಲಾಗಿದೆ. ಅವರನ್ನು ಕಾಯಂ ನ್ಯಾಯಮೂರ್ತಿ ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ದೃಢಪಡಿಸಿಲ್ಲ. ಪ್ರಸ್ತುತ, ಅವರು ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿದ್ದಾರೆ. ಅವರ ಅವಧಿ ಫೆಬ್ರವರಿ 2022 ರಲ್ಲಿ ಕೊನೆಗೊಂಡಿತ್ತು. ಆದರೆ ಈಕೆಯನ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೀಗಿರುವಾಗ ಜಿಲ್ಲಾ ನ್ಯಾಯಾಧೀಶರಾಗಿ ಡಿಮೋಷನ್ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಇದೇ ಜಸ್ಟಿಸ್ ಗನೇದಿವಾಲಾ ರವರೇ ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ (Skin-to-Skin Contact)’ ನ ವಿವಾದಾತ್ಮಕ ತೀರ್ಪು ನೀಡಿದ್ದರು. ಈ ತೀರ್ಪನ್ನು ಬಳಿಕ ಸುಪ್ರೀಂಕೋರ್ಟ್ ಬದಲಿಸಿತ್ತು. ಜಸ್ಟಿಸ್ ಪುಷ್ಪಾ ವೀರೇಂದ್ರ ಗನೇದಿವಾಲಾ ನೀಡಿದ್ದ ತೀರ್ಪಿನಲ್ಲಿ, “12 ವರ್ಷದ ಬಾಲಕಿಯ ಸ್ತನ ಒತ್ತಲಾಗುತ್ತದೆ. ಆದರೆ ಆರೋಪಿ ಆಕೆಯ ಟಾಪ್ ಬಿಚ್ಚಿದ್ದನೋ ಇಲ್ಲವೋ? ಅಥವ ಅವನು ಟಾಪ್‌ನೊಳಗೆ ಕೈ ಹಾಕಿ ಸ್ತನಗಳನ್ನ ಒತ್ತಿದ್ದನೋ? ಇಂತಹ ಸೂಚನೆಗಳಲ ಅಭಾವದಿಂದ ಇದನ್ನ ಲೈಂ ಗಿ ಕ ಕಿ ರು ಕು ಳ ಅಂತ ಹೇಳಲು ಸಾಧ್ಯವಿಲ್ಲ. ಸ್ತ್ರೀಯರ ಲಜ್ಜೆಯ ಜೊತೆ ಆಟವಾಡೋ ಆರೋಪದ ಮೇಲೆ ಸಜೆಯಾಗುತ್ತೆ, ಇದು IPC ಸೆಕ್ಷನ್ 354 ರ ಅಡಿಯಲ್ಲೇ ಬರುತ್ತೆ” ಎಂದಿದ್ದರು.
ಸುಪ್ರೀಂ ಕೋರ್ಟ್ ಕೊಲಿಜಿಯಂನ ತೀರ್ಪಿನ ನಂತರ, ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅವಧಿಯನ್ನು ವಿಸ್ತರಿಸದಿದ್ದರೆ ಅಥವಾ ಅವರು ಖಾಯಂ ನ್ಯಾಯಾಧೀಶರು ಎಂದು ಖಚಿತಪಡಿಸದಿದ್ದರೆ, ಅವರು ಮತ್ತೆ ಜಿಲ್ಲಾ ನ್ಯಾಯಾಧೀಶರ ಹುದ್ದೆಯನ್ನೇ ವಹಿಸಿಕೊಳ್ಳಬೇಕಾಗುತ್ತದೆ. ಹೈಕೋರ್ಟ್‌ಗೆ ನೇಮಕಾತಿಗಳನ್ನು ನಿರ್ಧರಿಸಲು ಭಾರತದ ತ್ರಿಸದಸ್ಯ ಕೊಲಿಜಿಯಂ ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ್ಣ ಮತ್ತು ನ್ಯಾಯಮೂರ್ತಿಗಳಾದ ಯುಯು ಲಲಿತ್ ಮತ್ತು ಎಎಂ ಖಾನ್ವಿಲ್ಕರ್ ಇದ್ದಾರೆ.
ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಈ ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ (Skin-to-Skin Contact)’ ತೀರ್ಪನ ಬಳಿಕ ಪ್ರತಿಯೊಬ್ಬರೂ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಹ್ಮದಾಬಾದ್ ನಿವಾಸಿ ದೇವಶ್ರೀ ತ್ರಿವೇದಿ ಎಂಬ ಯುವತಿ ಜಸ್ಟಿಸ್ ಪುಷ್ಪಾ ವೀರೇಂದ್ರ ಗನೇಡಿವಾಲಾಗೆ ಬರೋಬ್ಬರಿ 150 ಕಾಂಡಮ್‌ಗಳನ್ನ ಕಳಿಸಿದ್ದಳು. ಈ ಬಗ್ಗೆ ಮಾತನಾಡಿ ಆಕೆ, “ಜಸ್ಟಿಸ್ ಪುಷ್ಪಾ ಅವರು ಹೇಳುವ ಪ್ರಕಾರ ಸ್ಕಿನ್‌ಗೆ ಮುಟ್ಟಲಿಲ್ಲವಾದರೆ ಅದು ಲೈಂ ಗಿ ಕ ಕಿ ರು ಕುಳ ಅಲ್ಲ, ನಾನು ಅವರಿಗೆ ಕಾಂಡೋಮ್‌ಗಳನ್ನ ಕಳಿಸಿ, ಇದನ್ನ ಬಳಸಿದರೂ ಸ್ಕಿನ್ ಟಚ್ ಆಗಲ್ಲ ಅಂತ ಹೇಳಿದ್ದೇನೆ. ಇದು ಸಾಧ್ಯವೇ?” ಎಂದಿದ್ದರು.
ಇದಾದ ನಂತರ ಜಸ್ಟಿಸ್ ಪುಷ್ಪಾ ಗನೇಡಿವಾಲಾ ಅವರ ಮತ್ತೊಂದು ತೀರ್ಪು ಬಂದಿತ್ತು. ಅವರ ನೇತೃತ್ವದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಏಕ ಪೀಠವು ಬಾಲಕಿಯ ಕೈ ಹಿಡಿದು ಆ ರೋ ಪಿಯ ಪ್ಯಾಂಟ್ ಅನ್ನು ಬಿಚ್ಚುವುದು ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಶುವಲ್ ಅಫೆನ್ಸಸ್ ಆ್ಯಕ್ಟ್, 2012 (POCSO) ಅಡಿಯಲ್ಲಿ ಲೈಂvಗಿಕ ದೌ ರ್ಜ ನ್ಯದ ಶ್ರೇಣಿಗೆ ಬರುವುದಿಲ್ಲ ಎಂದು ತೀರ್ಪು ನೀಡಿತ್ತು.