ಮೊದಲು ಹರಿದು, ನಂತರ ಅದನ್ನ ಕಾಲಿನಿಂದ ತುಳಿದು ಬಳಿಕ ಪುಸ್ತಕಕ್ಕೆ ಬೆಂಕಿ: ಸ್ವೀಡನ್ ಆಯ್ತು ಇದೀಗ ಈ ದೇಶದಲ್ಲಿ ಬರ್ನ್ ಆಯ್ತು ಕುರಾನ್

in Uncategorized 170 views

ನೆದರ್ಲೆಂಡ್ಸ್ ನಲ್ಲಿ ಕುರಾನ್ ಸು-ಟ್ಟ ಘಟನೆಯ ಬಗ್ಗೆ ಮುಸ್ಲಿಂ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ಸೌದಿ ಅರೇಬಿಯಾ ಮತ್ತು ಯುಎಇ ವಿದೇಶಾಂಗ ಸಚಿವಾಲಯ ಇದನ್ನು ಖಂಡಿಸಿ ಹೇಳಿಕೆ ನೀಡಿದೆ. ಕತಾರ್, ಕುವೈತ್, ಜೋರ್ಡಾನ್, ಈಜಿಪ್ಟ್ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಕೂಡ ಡಚ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿವೆ. ಕೆಲ ದಿನಗಳ ಹಿಂದೆ ಸ್ವೀಡನ್ ನಲ್ಲೂ ಕುರಾನ್ ಸುಡಲಾಗಿತ್ತು.

Advertisement

ನೆದರ್ಲೆಂಡ್ಸ್‌ನಲ್ಲಿ ಸಂಸತ್ ಭವನದ ಮುಂದೆಯೇ ಈ ಘಟನೆ ನಡೆದಿದೆ. ಇಸ್ಲಾಂ ವಿರೋಧಿ ಗುಂಪು ಪೆಗಿಡಾದ (Pegida) ನಾಯಕ ಎಡ್ವಿನ್ ವ್ಯಾಗೆನ್ಸ್‌ಫೆಲ್ಡ್, ಡೆನ್ ಹಾಗ್‌ನಲ್ಲಿನ ಮೊದಲು ಕುರಾನ್‌ನಿಂದ ಪುಟಗಳನ್ನು ಹರಿದು ಹಾಕಿದರು. ನಂತರ ಅದನ್ನು ತಮ್ಮ ಪಾದಗಳಿಂದ ತುಳಿದು ಕುರಾನ್‌ಗೆ ಬೆಂಕಿ ಹಚ್ಚಿದರು. ಜನವರಿ 22, 2023 ರಂದು, ಅವರು ಅದರ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಎಡ್ವಿನ್ ವ್ಯಾಗೆನ್ಸ್‌ಫೆಲ್ಡ್ ಕುರಾನ್ ಜೊತೆ ಈ ರೀತಿಯಾಗಿ ಮಾಡುತ್ತಿರುವಾಗ ಕೆಲವು ಪೋಲೀಸರು ಸಹ ಸ್ಥಳದಲ್ಲೇ ಇದ್ದರು. ಈತನನ್ನು ಇನ್ನೂ ಬಂಧಿಸಿಲ್ಲ. ಅನೇಕ ಮುಸ್ಲಿಂ ರಾಷ್ಟ್ರಗಳ ಜೊತೆಗೆ, ಇಸ್ಲಾಮಿಕ್ ದೇಶಗಳ ಸಂಘಟನೆ (OIC) ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಕುರಾನ್ ಅನ್ನು ಹರಿದು ಸುಡುವುದನ್ನು ಅವರು ಇಸ್ಲಾಮೋಫೋಬಿಯಾ ಎಂದು ಕರೆದಿದ್ದಾರೆ.

ವ್ಯಾಗೆನ್ಸ್‌ಫೆಲ್ಡ್ ಅವರ ವೀಡಿಯೊ ವೈರಲ್ ಆದ ನಂತರ ಮಂಗಳವಾರ (ಜನವರಿ 24, 2023) ಪಾಕಿಸ್ತಾನದ ಲಾಹೋರ್‌ನಲ್ಲಿ ನೂರಾರು ಮುಸ್ಲಿಮರು ಪ್ರತಿಭಟನಾ ರ‌್ಯಾಲಿಯನ್ನು ನಡೆಸಿದರು. ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ಬೆಂಬಲಿಗರು ಡಚ್ ನಾಯಕನ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ವೀಡನ್‌ನಲ್ಲಿ ಕುರಾನ್ ಸುಟ್ಟಿರುವುದನ್ನ ವಿರೋಧಿಸಿ ಮುಸ್ಲಿಮರು ಜನವರಿ 21 ರಂದು ಕರಾಚಿಯಲ್ಲಿ ರ‌್ಯಾಲಿಯನ್ನ ನಡೆಸಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಸ್ವೀಡನ್‌ನಲ್ಲಿ ಕುರಾನ್ ಸುಟ್ಟ ಘಟನೆಯನ್ನು ತೀವ್ರವಾಗಿ ಖಂಡಿಸಿದೆ, ಇಂತಹ ಕೃತ್ಯಗಳು ವಿಶ್ವದಾದ್ಯಂತದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದೆ.

ಗಮನಿಸುವ ಸಂಗತಿಯೆಂದರೆ, ಜನವರಿ 21, 2023 ರಂದು, ಸ್ವೀಡನ್‌ನ ಬಲಪಂಥೀಯ ಪಕ್ಷ ‘ಹಾರ್ಡ್ ಲೈನ್’ ನ ನಾಯಕ ರಾಸ್ಮಸ್ ಪಲುದಾನ್ (Hard Line Leader Rasmus Paludan), ಸ್ಟಾಹೋಮ್‌ನಲ್ಲಿರುವ ಟರ್ಕಿಶ್ ರಾಯಭಾರಿ ಕಚೇರಿಯ ಮುಂದೆ ಕುರಾನ್ ಅನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದ್ದರು. ಈ ಸಮಯದಲ್ಲಿ, ಪಲುದಾನ್ ಇಸ್ಲಾಂ ಮತ್ತು ವಲಸೆಯ ಬಗ್ಗೆ ಒಂದು ಗಂಟೆ ಭಾಷಣ ಮಾಡಿದ್ದರು. ಸುಮಾರು 100 ಜನರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪಲುದಾನ್, “ನೀವು (ಮುಸ್ಲಿಮರು) ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬಾರದು ಎಂದು ಭಾವಿಸಿದರೆ ಬದುಕೋಕೆ ಬೇರೆ ಸ್ಥಳವನ್ನು (ದೇಶವನ್ನ) ನೋಡಿಕೊಳ್ಳಿ” ಎಂದು ಹೇಳಿದ್ದರು.

ಸ್ವೀಡನ್‌ನಲ್ಲಿ ಕುರಾನ್ ಅನ್ನು ಸುಟ್ಟಿರುವುದನ್ನ ವಿರೋಧಿಸಿ ಯೆಮೆನ್, ಇರಾಕ್, ಜೋರ್ಡಾನ್ ಮತ್ತು ಟರ್ಕಿ ಸೇರಿದಂತೆ ಹಲವಾರು ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಈ ಕಾರಣದಿಂದಾಗಿ, ಪ್ರತಿಭಟನಾಕಾರರು ಟರ್ಕಿ ಮತ್ತು ಯೆಮೆನ್‌ನಲ್ಲಿರುವ ಸ್ವೀಡಿಷ್ ರಾಯಭಾರ ಕಚೇರಿಯ ಹೊರಗೆ ಸ್ವೀಡನ್ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ್ದರು ಮತ್ತು ಕುರಾನ್ ಸುಟ್ಟ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.

Advertisement
Share this on...