“ಹಿಂದೂ ಧರ್ಮಗ್ರಂಥಗಳು ಒಂಥರಾ ಪಾರ್ನ್ (ಅಶ್ಲೀಲ) ಇದ್ದಂತೆ, ಅವುಗಳನ್ನ ಓದುವವರನ್ನ ಈ ದೇಶದಲ್ಲಿ….”: ಹಿಂದುಗಳ ಮಾರಣಹೋಮದ ಮಧ್ಯೆಯೇ ಮತ್ತೊಂದು ಅಸಹ್ಯಕರ ಹೇಳಿಕೆ ನೀಡಿದ #ತಾರೀಕ್_ರೆಹಮಾನ್

in Uncategorized 1,042 views

ಬಾಂಗ್ಲಾದೇಶದ 170 ಮಿಲಿಯನ್ ಜನಸಂಖ್ಯೆಯಲ್ಲಿ ಹಿಂದೂಗಳು 8.5% ರಷ್ಟಿದ್ದರೆ, ಮುಸ್ಲಿಮರು 90% ರಷ್ಟಿದ್ದಾರೆ.

Advertisement

ಢಾಕಾ: ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆ ಸಮೀಪಿಸುತ್ತಿರುವಂತೆಯೇ, ಉಗ್ರಗಾಮಿ ಸಂಘಟನೆ ಜಮಾತ್-ಎ-ಇಸ್ಲಾಮಿ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಬೆಂಬಲಿತ ಕಟ್ಟರ್ವಾದಿಗಳ ಗುಂಪು ಹಿಂದೂಗಳ ವಿರುದ್ಧ ವಿಷಕಕ್ಕಿದೆ.

ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಬಹುತೇಕ ಯುವಕರು, ಹಿಂದೂ ಧಾರ್ಮಿಕ ಗ್ರಂಥಗಳನ್ನ ಪಾರ್ನ್ ಗೆ ಹೋಲಿಸುವ ಮೂಲಕ ಅಲ್ಪಸಂಖ್ಯಾತರನ್ನ ಟಾರ್ಗೆಟ್ ಮಾಡುತ್ತ ವಿಷ ಕಕ್ಕಿದ್ದಾರೆ.

“ಹಿಂದೂ ಧರ್ಮದ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ನೀಡುವುದಿಲ್ಲ – ಎಲ್ಲಾ ಧಾರ್ಮಿಕ ಗ್ರಂಥಗಳು ಅಶ್ಲೀಲ ಧರ್ಮಗ್ರಂಥಗಳು” ಎಂದು ತಾರಿಕ್ ರೆಹಮಾನ್ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾನೆ.

ತಾರಿಕ್ ಬಾಂಗ್ಲಾದೇಶ ಗೊನೊ ಓಧಿಕಾರ್ ಪರಿಷತ್ತಿನ ಜಂಟಿ ಸಂಚಾಲಕನಾಗಿದ್ದು ಉಗ್ರಗಾಮಿ ಸಂಘಟನೆ ಜಮಾತ್-ಎ-ಇಸ್ಲಾಮಿ ಬೆಂಬಲಿತ ನೂರುಲ್ ಹಕ್ ನೂರ್‌ನ ಉನ್ನತ ಸಹಾಯಕನಾಗಿದ್ದಾನೆ.

ಹಿಂದೂಗಳ ಬಗ್ಗೆ ತೀವ್ರ ಅಸಹ್ಯಕರ ಮಾತುಗಳನ್ನಾಡಿದ ತಾರಿಕ್, ಹಿಂದೂ ಧರ್ಮದ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ನೀಡುವುದಿಲ್ಲ ಮತ್ತು ಅವು ಅಶ್ಲೀಲ ಪಠ್ಯಗಳಾಗಿವೆ ಎಂದು ಹೇಳಿದ್ದಾನೆ.

“ಹೌದು, ನಾನು ಮೊಸಾದ್ ಸೇರಿದಂತೆ ವಿದೇಶಿ ಗುಪ್ತಚರ ಸಂಸ್ಥೆಗಳ ಜೊತೆಗೂಡಿ ಪಿತೂರಿ ನಡೆಸಿದ್ದೇನೆ. ಸರ್ಕಾರವನ್ನು ಪದಚ್ಯುತಗೊಳಿಸುವ ನನ್ನ ಪ್ರಯತ್ನದಲ್ಲಿ, ಈ ಸರ್ಕಾರವನ್ನು ಪದಚ್ಯುತಗೊಳಿಸುವ ಸಂಚು ರೂಪಿಸಲು ನಾನು ಮೊಸಾದ್ ಏಜೆಂಟ್ ಮೆಂಡಿ ಎನ್ ಸಫಾದಿಯೊಂದಿಗೆ ಸಭೆ ನಡೆಸಿದ್ದೇನೆ” ಎಂದು ನೂರು ವರದಿಯಲ್ಲಿ ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ಈತನ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕರು ಇದನ್ನು 1971 ರಲ್ಲಿ ಪಾಕಿಸ್ತಾನದಿಂದ ಈ ದೇಶದ ಹುಟ್ಟನ್ನು ತಡೆಯುವ ಪ್ರಯತ್ನದಲ್ಲಿ ಜಮಾತ್ ನಾಯಕರು ಹಿಂದೂಗಳನ್ನು “ಅಳಿಸಿ” ಹಾಕುವ ಇದೇ ರೀತಿಯ ಕರೆಯೊಂದಿಗೆ ಹೋಲಿಸಿದ್ದಾರೆ.

ಶೇಖ್ ಹಸೀನಾ ನೇತೃತ್ವದ ಜಾತ್ಯತೀತ ಧೋರಣೆಯನ್ನ ವಿರೋಧಿಸುತ್ತ ಹಿಂದೂಗಳು ಮತ್ತು ಭಾರತದ ವಿರುದ್ಧ ಸಂಘಟನೆಯು ನಿಂದೆಗಳ ಸುರಿಮಳೆಗೈದಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಹೊಸದೇನಲ್ಲ. 2022 ರಲ್ಲಿ ದೇಶದಲ್ಲಿ ಹಿಂದೂಗಳು ಸೇರಿದಂತೆ 154 ಕ್ಕೂ ಹೆಚ್ಚು ಧಾರ್ಮಿಕ ಅಲ್ಪಸಂಖ್ಯಾತರು ಕೊಲ್ಲಲ್ಪಟ್ಟಿದ್ದಾರೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 39 ಮಹಿಳೆಯರ ಮೇಲೆ ಅತ್ಯಾಚಾರ (ಅವರಲ್ಲಿ 27 ಮಂದಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ) ನಡೆದಿದೆ ಎಂದು ಬಾಂಗ್ಲಾದೇಶದ ನ್ಯಾಶನಲ್ ಹಿಂದೂ ಗ್ರ್ಯಾಂಡ್ ಅಲೈನ್ಸ್ ಬಹಿರಂಗಪಡಿಸಿದೆ. ಸುಮಾರು 14 ಬಲಿಪಶುಗಳು ಅತ್ಯಾಚಾರ ಎಸಗಿದ ನಂತರ ಕೊಲ್ಲಲ್ಪಟ್ಟರು ಮತ್ತು ಒಂದು ಲಕ್ಷದ 95,991 ಕುಟುಂಬಗಳು ಅಭದ್ರತೆಯನ್ನು ಹೊಂದಿವೆ ಎಂದೂ ತಿಳಿಸಿದೆ.

ಕಳೆದ ಒಂದು ವರ್ಷದಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯದ (ಹಿಂದುಗಳು) 424 ಜನರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ. 62 ಮಂದಿ ನಾಪತ್ತೆಯಾಗಿದ್ದಾರೆ. 849 ಜನರಿಗೆ ಜೀವ ಬೆದರಿಕೆಗಳು ಬಂದಿವೆ ಮತ್ತು 360 ಜನರು ಗಾಯಗೊಂಡಿದ್ದಾರೆ. 953 ಸಂಘಟಿತ ದಾಳಿಗಳು ನಡೆದಿವೆ ಮತ್ತು 127 ಜನರನ್ನು ಅಪಹರಿಸಲಾಯಿತು ಮತ್ತು 27 ಮಂದಿಗೆ ಪ್ರಯತ್ನಿಸಲಾಗಿದೆ ಎಂದು ಬಾಂಗ್ಲಾದೇಶದ ನ್ಯಾಶನಲ್ ಹಿಂದೂ ಗ್ರ್ಯಾಂಡ್ ಅಲೈನ್ಸ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.

ಬಾಂಗ್ಲಾದೇಶದ 170 ಮಿಲಿಯನ್ ಜನಸಂಖ್ಯೆಯಲ್ಲಿ ಹಿಂದೂಗಳು 8.5% ರಷ್ಟಿದ್ದರೆ, ಮುಸ್ಲಿಮರು 90% ರಷ್ಟಿದ್ದಾರೆ.

Advertisement
Share this on...