1952 ರಲ್ಲಿ ಬಲವಂತವಾಗಿ (ಮೋಸದಿಂದ) JRD ಟಾಟಾ ರಿಂದ ‘ಏರ್ ಇಂಡಿಯಾ’ ಕಸಿದುಕೊಂಡಿದ್ದ ನೆಹರು… ನೆಹರುವನ್ನ ಹಿಗ್ಗಾಮುಗ್ಗಾ ಝಾಡಿಸಿದ್ದ ಟಾಟಾ

in Uncategorized 529 views

ಈ ವರ್ಷದ ಜನವರಿ ತಿಂಗಳಿನಲ್ಲಿ ‘ಟಾಟಾ ಗ್ರೂಪ್’ ‘ಏರ್ ಇಂಡಿಯಾ’ದ ಬಿಡ್ ಅನ್ನು ಗೆದ್ದಿ ಅದನ್ನು ಖರೀದಿಸಿತ್ತು. ಆದರೆ, ಇದೇ ನೆಪದಲ್ಲಿ ನಾವು ನಿಮಗೆ ‘ಏರ್ ಇಂಡಿಯಾ’ದ ಇತಿಹಾಸವನ್ನು ತಿಳಿಸುತ್ತೇವೆ. ಜೆಆರ್‌ಡಿ ಟಾಟಾ ಅವರಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಏರ್ ಇಂಡಿಯಾವನ್ನು ಹೇಗೆ ರಾಷ್ಟ್ರೀಕರಣಗೊಳಿಸಿದರು ಎಂಬುದನ್ನೂ ನೋಡೋಣ ಬನ್ನಿ.

Advertisement

ಈ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ನಾವು ನವೆಂಬರ್ 1952 ಕ್ಕೆ ಹೋಗಬೇಕು, ದೇಶದ ಅತಿದೊಡ್ಡ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಜೆಆರ್‌ಡಿ ಟಾಟಾ ಅವರು ಜವಾಹರಲಾಲ್ ನೆಹರು ಅವರನ್ನು ಭೇಟಿಯಾದರು. ದೇಶವು ಅಗಷ್ಟೇ ಸ್ವತಂತ್ರವಾಗಿ 5 ವರ್ಷ ಹಾಗು ಗಣರಾಜ್ಯವಾಗಿ ಕೇವಲ 2 ವರ್ಷವಾಗಿತ್ತು. ನೆಹರು ನಂತರ ಟಾಟಾಗೆ ಪತ್ರ ಬರೆದರು, ‘ಏರ್ ಇಂಡಿಯಾ’ (ಟಾಟಾ ಏರ್‌ಲೈನ್ಸ್, ಆಗ ವಿಶ್ವದ ಅಗ್ರ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿತ್ತು) ಮತ್ತು ‘ಇಂಡಿಯನ್ ಏರ್‌ಲೈನ್ಸ್’ (ದೇಶೀಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ) ಬಗ್ಗೆ ಅವರ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು.

ಆ ಪತ್ರದಲ್ಲಿ, ನೆಹರು ಟಾಟಾ ಅವರಿಗೆ ಬರೆದ ಪತ್ರದಲ್ಲಿ, ಲಂಚ್ ಸಮಯದಲ್ಲಿ ನೀವು ಅಸಮಾಧಾನಗೊಂಡಿದ್ದರಿಂದ ನಿಮ್ಮೆದುರು ವಿಷಯ ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದರು. ಆದರೆ ಆ ಸಮಯದಲ್ಲಿ ಟಾಟಾ ಅವರಿಗೆ ಕೇಂದ್ರ ಸರ್ಕಾರವು ತನ್ನ ವಿಮಾನಯಾನ ಸಂಸ್ಥೆಗಳನ್ನು ಹೇಗೆ ಅನ್ಯಾಯವಾಗಿ ನಡೆಸಿಕೊಂಡಿದೆ ಎಂದು ಹೇಳಿತು. ಸರ್ಕಾರವು ಉದ್ದೇಶಪೂರ್ವಕವಾಗಿಯೇ ಒಂದು ನೀತಿಯನ್ನು ರೂಪಿಸಿದ್ದು ಇದರಿಂದ ಅದು ಏರ್ ಇಂಡಿಯಾವನ್ನು ಅಗ್ಗವಾಗಿ ಖರೀದಿಸುವ ಮೂಲಕ ತಮ್ಮ ಕಂಪೆನಿಗೆ ಹಾನಿಯುಂಟು ಮಾಡುತ್ತಿದೆ ಮತ್ತು ಇದಕ್ಕಾಗಿ ಹಲವಾರು ತಿಂಗಳುಗಳಿಂದ ಪ್ಲ್ಯಾನ್ ಮಾಡಲಾಗಿತ್ತು ಎಂದು ಜೆಆರ್‌ಡಿ ಟಾಟಾಗೆ ತಿಳಿದಿತ್ತು.

ನೆಹರು ಅವರು ಈ ಆರೋಪಗಳನ್ನು ನಿರಾಕರಿಸಿದರು ಮತ್ತು ಎಲ್ಲಾ ರೀತಿಯ ಸಾರಿಗೆ ಸೇವೆಗಳು ಸರ್ಕಾರದ ಕೈಯಲ್ಲಿರಬೇಕು ಎಂದು ಕಾಂಗ್ರೆಸ್ ತನ್ನ ನೀತಿಯನ್ನು 20 ವರ್ಷಗಳ ಹಿಂದಿನಿಂದಲೂ ಇಟ್ಟುಕೊಂಡಿದೆ ಎಂದು ಪತ್ರದಲ್ಲಿ ಬರೆದರು. ಇದು ಸರ್ಕಾರದ ದೊಡ್ಡ ಆದ್ಯತೆಯಲ್ಲ, ಆದರೆ ಅದರ ಬಗ್ಗೆ ಹಲವು ಬಾರಿ ನಿಧಾನಗತಿಯ ಚರ್ಚೆ ನಡೆಯಿತು ಎಂದು ನೆಹರು ಹೇಳಿದರು. ನೆಹರುವಿನ ಪ್ರಕಾರ, ಆರ್ಥಿಕ ಸಮಸ್ಯೆಗಳಿಂದ ಸರ್ಕಾರ ಈ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದಾಗಿತ್ತು. 1952 ರಲ್ಲಿ ಜಗಜೀವನ್ ರಾಮ್ ಸಂವಹನ ಸಚಿವರಾದ ನಂತರ, ವಿಮಾನಯಾನ ಸಂಸ್ಥೆಗಳ ಸಮಸ್ಯೆ ಕ್ಯಾಬಿನೆಟ್ ಮುಂದೆ ಬಂದಿತು ಮತ್ತು ವಿಮಾನಯಾನ‌ ಸಂಸ್ಥೆಗಳನ್ನ ಸರ್ಕಾರದ ಸೂರಿನಡಿ ಒಂದುಗೂಡಿಸಲು ಒಪ್ಪಲಾಯಿತು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ, ಜೆಆರ್‌ಡಿ ಟಾಟಾ ಭಾರತದಲ್ಲಿ ವಾಯುಯಾನ ಕ್ರಾಂತಿಯನ್ನು ತರಲು ಹೆಸರುವಾಸಿಯಾಗಿದ್ದರು ಮತ್ತು ಅವರು ದೇಶದ ಮೊದಲ ಪರವಾನಗಿ ಪಡೆದ ಪೈಲಟ್ ಆಗಿದ್ದರು. ಅವರು 1932 ರಲ್ಲಿ ‘ಟಾಟಾ ಏರ್‌ಲೈನ್ಸ್’ ಸ್ಥಾಪಿಸಿದರು. ಭಾರತದ ನಾಗರಿಕ ವಿಮಾನಯಾನವನ್ನು ಅದರಲ್ಲೂ ತಮ್ಮ ವಿಮಾನಯಾನವನ್ನು ನಿಗ್ರಹಿಸಲು ಸಂಚು ನಡೆಯುತ್ತಿದೆ ಎಂದು ಅವರು ನಂಬಿದ್ದರು. ನೆಹರು ಸರ್ಕಾರವು ಒಂದು ಸಮಿತಿಯನ್ನು ಸಹ ರಚಿಸಿತು, ಅದು ‘ಏರ್ ಇಂಡಿಯಾ ಇಂಟರ್‌ನ್ಯಾಷನಲ್’ ಸೇರಿದಂತೆ ಈ ಏರ್‌ಲೈನ್‌ಗಳ ಏಕೀಕರಣ ಮಾಡುವಂತೆ ಸೂಚಿಸಿತು.

ಜೆಆರ್‌ಡಿ ಟಾಟಾ ಅವರಿಗೆ ಸರ್ಕಾರದ ನಿರ್ಧಾರದ ಬಗ್ಗೆ ಗೊಂದಲವಿದೆ, ಆದರೆ ತಾವು ಭಾರತದಲ್ಲಿ ಏರ್‌ಲೈನ್‌ಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತಿದ್ದೇವೆ ಎಂಬುದು ನೆಹರು ವಾದವಾಗಿತ್ತು. ಈ ಕಂಪನಿಗಳ ಮೌಲ್ಯ ಕಡಿಮೆಯಾದ ನಂತರ ಈ ಕಂಪನಿಗಳನ್ನು ಖರೀದಿಸುವುದು ಯಾವುದೇ ಪಿತೂರಿಯ ಭಾಗವಲ್ಲ ಎಂದು ನೆಹರು ಸ್ಪಷ್ಟಪಡಿಸಿದ್ದರು. ಅವರು ಇದನ್ನು ಪರಿಸ್ಥಿತಿಗೆ ಅನುಗುಣವಾದ ಕ್ರಮ ಎಂದು ಕರೆದರು. ಆದರೆ, ಜೆಆರ್‌ಡಿ ಟಾಟಾ ಏರ್‌ಲೈನ್ ಕಂಪನಿಗಳ ರಾಷ್ಟ್ರೀಕರಣವು ಒಳ್ಳೆಯ ನಿರ್ಧಾರವಲ್ಲ ಮತ್ತು ಇದರಿಂದ ಒಂದು ಸ್ಪಷ್ಟ ಏರ್ ಟ್ರಾನ್ಸಪೋರ್ಟ್ ಸಿಸ್ಟಮ್ ಸೃಷ್ಟಿಸಲು ಕಾರಣವಾಗುವುದಿಲ್ಲ ಎಂದು ನಂಬಿದ್ದರು.

ಸರ್ಕಾರವು ಮೊದಲೇ ತಮ್ಮ ಸಂಸ್ಥೆಯನ್ನ ವಶಪಡಿಸಿಕೊಳ್ಳಲು ಮನಸ್ಸು ಮಾಡಿತ್ತು ಆದರೆ ಅದಕ್ಕೂ ಮೊದಲು ಅದು ಚರ್ಚಿಸಬೇಕಿತ್ತು ಎಂದು ಜೆಆರ್‌ಡಿ ಟಾಟಾ ದುಃಖದಿಂದಲೇ ಹೇಳಿದರು. ಜಗಜೀವನ್ ರಾಮ್ ತಮಗೆ ಫೋನ್ ಮಾಡಿ ಸರ್ಕಾರದ ನಿರ್ಧಾರದ ಬಗ್ಗೆ ಮಾತ್ರ ತಿಳಿಸಿದದರು ಎಂದು ಅವರು ಹೇಳಿದ್ದರು. ಜೆಆರ್‌ಡಿ ಟಾಟಾ ಪರ್ಯಾಯ ವ್ಯವಸ್ಥೆಗಾಗಿ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು ಮತ್ತು ಸರ್ಕಾರವು ಅವರ ಮಾತನ್ನು ಕೇಳಬೇಕೆಂದು ಅವರು ಬಯಸಿದ್ದರು, ಹೀಗೆ ಮಾಡುವುದರಿಂದ ಟಾಟಾ ಸರ್ಕಾರದ ಗುರಿಯನ್ನು ಸಾಧಿಸಲು ಸಹಾಯ ಮಾಡಬಹುದು ಎಂಬುದಾಗಿತ್ತು.

ಜಗಜೀವನ್ ರಾಮ್ ಕೇವಲ ಪರಿಹಾರದ ಬಗ್ಗೆ ಮಾತ್ರ ಟಾಟಾ ರವರ ಅಭಿಪ್ರಾಯ ಕೇಳಿದರು. ಆದರೆ ಇದಕ್ಕೆ ಉತ್ತರಿಸಿದ್ದ ಟಾಟಾ, “ತನ್ನ ಮುಖ್ಯ ಕಾಳಜಿ ಉದ್ಯೋಗಿಗಳು ಮತ್ತು ಹೂಡಿಕೆದಾರರದ್ದು, ತಮ್ಮ ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಬೃಹತ್ ಏರ್ ಟ್ರಾನ್ಸಪೋರ್ಟ್ ಸಿಸ್ಟಮ್ ನ್ನ ನಿರ್ಮಿಸಿದ್ದೇನೆ” ಎಂದು ಅವರು ಹೇಳಿದ್ದರು. ಆದಾಗ್ಯೂ, ನೆಹರು ಸರ್ಕಾರವು ಅವರ ಮಾತನ್ನು ಕೇಳಲಿಲ್ಲ ಮತ್ತು 1953 ರಲ್ಲಿ ಎಲ್ಲಾ ಏರ್‌ಲೈನ್‌ಗಳನ್ನು ‘ಏರ್ ಇಂಡಿಯಾ’ ಮತ್ತು ‘ಏರ್ ಇಂಡಿಯಾ ಇಂಟರ್‌ನ್ಯಾಷನಲ್’ ನಲ್ಲಿ ವಿಲೀನಗೊಳಿಸಲಾಯಿತು, ಇದನ್ನೇ ನಂತರದಲ್ಲಿ ‘ಏರ್ ಇಂಡಿಯಾ’ ಎಂದು ಕರೆಯಲಾಯಿತು.

ಇತಿಹಾಸದ ಬಗ್ಗೆ ಮಾತನಾಡುವುದಾದರೆ, ದೇಶದ ಮೊದಲ ವಾಣಿಜ್ಯ ವಿಮಾನವು (ಕಮರ್ಷಿಯಲ್ ಫ್ಲೈಟ್) 1932 ರಲ್ಲಿ ಕರಾಚಿಯ ದೃಘ್ ರೋಡ್ ಏರೋಡ್ರೋಮ್ (ಈಗ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದಿಂದ ಬಾಂಬೆಯ ಜುಹು ಏರೋಡ್ರೋಮ್ (ಮುಂಬೈ-ಜುಹು ವಿಮಾನ ನಿಲ್ದಾಣ) ವರೆಗೂ ಹಾರಾಟ ನಡೆಸಿತ್ತು. ಇದು ಜೆಆರ್‌ಡಿ ಟಾಟಾ ಅವರದ್ದೇ ಸಾಧನೆಯಾಗಿತ್ತು. ಎರಡನೇ ಮಹಾಯುದ್ಧ ಮುಗಿದ ನಂತರ ಇದು ‘ಏರ್ ಇಂಡಿಯಾ’ ಆಯಿತು. 2006 ರ ನಂತರ, ಇದನ್ನು ‘ಇಂಡಿಯಾ ಏರ್‌ಲೈನ್ಸ್‌’ನೊಂದಿಗೆ ವಿಲೀನಗೊಳಿಸಲಾಯಿತು, ನಂತರ ಅದರ ನಷ್ಟವು ಹೆಚ್ಚುತ್ತಲೇ ಹೋಯಿತು.

ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ 70,000 ಕೋಟಿಗೂ ಹೆಚ್ಚು ನಷ್ಟದಲ್ಲಿತ್ತು ಮತ್ತು ಜೆಆರ್‌ಡಿ ಟಾಟಾ ಅವರ ಮಾತುಗಳು ಈಗ ನಿಜವೆಂದು ಸಾಬೀತಾಗಿತ್ತು. ನೆಹರೂ ಅವರ ದೂರದೃಷ್ಟಿಯಿಲ್ಲದ ನೀತಿಯ ಭಾರವನ್ನು ದೇಶವು ಇಲ್ಲಿಯೂ ಸಹಿಸಿಕೊಳ್ಳಬೇಕಾಗಿತ್ತು. ಇದು ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಪೈಪೋಟಿ ಮತ್ತು ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳ ತಪ್ಪು ನಿರ್ವಹಣೆಯೆಂದೇ ಹೇಳಬಹುದು‌. ‘ಏರ್ ಇಂಡಿಯಾ’ ಮತ್ತೆ ಟಾಟಾಕ್ಕೆ ಮರಳಿದೆ ಅಂದರೆ, ಅದು ಅತ್ತ ಇತ್ತ ಸುತ್ತಾಡಿ ಮತ್ತೆ ಅದರ ಸ್ಥಾಪಕ ಗುಂಪಿನ (ಟಾಟಾ ಸಮೂಹ) ಕೈಗೇ ಬಂದಿದೆ.

ಜೆಆರ್‌ಡಿ ಟಾಟಾ ಅವರ ಪ್ರಕಾರ ಭಾರತ ಸರ್ಕಾರವು ಹೊಸದು ಮತ್ತು ವಿಮಾನ ಹಾರಾಟ ಅಥವಾ ವಿಮಾನಯಾನ ಕಂಪನಿಯನ್ನು ನಡೆಸುವಲ್ಲಿ ಯಾವುದೇ ಅನುಭವವನ್ನು ಹೊಂದಿಲ್ಲ ಎಂದು ನಂಬಿದ್ದರು, ಆದ್ದರಿಂದ ಏರ್ ಟ್ರಾನ್ಸಪೋರ್ಟ್ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವುದರಿಂದ ಅವುಗಳು ಬ್ಯೂರೋಕ್ರಸಿಯ ನಿಷ್ಕ್ರಿಯತೆಯಲ್ಲಿ ಮುಳುಗಿ ಹೋಗುತ್ತೆ ಅಂತಲೇ ಅರ್ಥ. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತೊಂದರೆ ಉಂಟುಮಾಡುತ್ತದೆ ಎಂಬುದು ಜೆಆರ್‌ಡಿ ಟಾಟಾ ವಾದವಾಗಿತ್ತು. ಆದರೆ ಈ ರಾಷ್ಟ್ರೀಕರಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಕಾಂಗ್ರೆಸ್ ಹೇಳುತ್ತಲೇ ಇತ್ತು. ನಂತರ ಸರ್ಕಾರವು ಟಾಟಾ ರವರನ್ನ ಖುಷಿಪಡಿಸಲು ಮತ್ತು ಅವರ ಅನುಭವದ ಲಾಭವನ್ನು ಪಡೆಯಲು ಅವರನ್ನು ‘ಏರ್ ಇಂಡಿಯಾ’ ಮತ್ತು ‘ಇಂಡಿಯನ್ ಏರ್‌ಲೈನ್ಸ್’ ನ ಅಧ್ಯಕ್ಷರನ್ನಾಗಿ ಮಾಡಿತು.

ವಿಮಾನದ ಸಿಬ್ಬಂದಿಯ ತರಬೇತಿ ಮತ್ತು ಶಿಸ್ತಿಗೆ ಒತ್ತು ನೀಡಿದರೆ ಮಾತ್ರ ಭಾರತವು ವಿಮಾನಯಾನ ಸೇವೆಯಲ್ಲಿ ತನ್ನ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಮುಂದಿನ 25 ವರ್ಷಗಳಲ್ಲಿ, ಜೆಆರ್‌ಡಿ ಟಾಟಾ ರವರ ಮೇಲ್ವಿಚಾರಣೆಯಲ್ಲೇ ಕೆಲಸಗಳು ನಡೆದವು, ಸರ್ಕಾರದೊಂದಿಗಿನ ಅಸಮಾಧಾನದ ಹೊರತಾಗಿಯೂ, ಅವರು ಎಲ್ಲವನ್ನೂ ನಿಭಾಯಿಸಿದರು ಮತ್ತು ದೇಶ ಮತ್ತು ಪ್ರಪಂಚದಲ್ಲಿ ಭಾರತೀಯ ವಾಯು ಸಾರಿಗೆ ಸೇವೆಯ ಹೆಸರನ್ನು ಉಜ್ವಲಗೊಳಿಸಿದರು. ಈ ಸಮಯದಲ್ಲಿ ಅವರು ಸ್ವತಃ ವಿಮಾನಗಳಲ್ಲಿ ಪ್ರಯಾಣಿಸಿ ಸಣ್ಣ ಸಣ್ಣ ವಿವರಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದರು.

ಕಂಪೆನಿ, ವೈನ್ ಗ್ಲಾಸ್ ಗಳಿಂದ ಹಿಡಿದು ಗಗನಸಖಿಯ ಕೇಶವಿನ್ಯಾಸದವರೆಗೆ, ಅವಳು ಎಲ್ಲದರ ಮೇಲೂ ಕಣ್ಣಿಟ್ಟಿದ್ದರು. ಟಾಯ್ಲೆಟ್ ಅಥವಾ ಕೌಂಟರ್ ಕೊಳಕಾಗಿದ್ದರೆ, ತಾವೇ ಅದನ್ನು ಸ್ವಚ್ಛಗೊಳಿಸಲು ಕುಳಿತುಕೊಂಡುಬಿಡುತ್ತಿದ್ದರು. ಜಾಹೀರಾತು ಫಲಕಗಳಿಂದ ಹಿಡಿದು ಗಗನಸಖಿಯ ಸೀರೆಯವರೆಗೆ, ರೆಸ್ಟ್ ರೂಂನಿಂದ ಹಿಡಿದು ಜಾಹೀರಾತುಗಳವರೆಗೆ ಅವರು ಎಲ್ಲದರ ಮೇಲೂ ನಿಗಾ ಇಟ್ಟಿದ್ದರು. ನಂತರ 70 ರ ದಶಕದಲ್ಲಿ, ಸಿಂಗಾಪುರದ ವಿಮಾನಯಾನ ಸಂಸ್ಥೆಗಳು ‘ಏರ್ ಇಂಡಿಯಾ’ದೊಂದಿಗೆ ಒಪ್ಪಂದ ಮಾಡಿಕೊಂಡವು. ಇದು ಜೆಟ್ (ಗೌರಿ ಶಂಕರ್) ಅನ್ನು ತನ್ನ ಫ್ಲೀಟ್ ನಲ್ಲಿ ಶಾಮೀಲು ಮಾಡಿಕೊಂಡ ದೇಶದ ಮೊದಲ ವಿಮಾನಯಾನ ಸಂಸ್ಥೆಯಾಯಿತು.

ಜನವರಿ 1978 ರಲ್ಲಿ, ಏರ್ ಇಂಡಿಯಾ ವಿಮಾನವು ಒಂದು ದೊಡ್ಡ ಅಪಘಾತಕ್ಕೆ ತುತ್ತಾಗಿ ಎಲ್ಲಾ 213 ಪ್ರಯಾಣಿಕರು ಸಾವನ್ನಪ್ಪಿದರು. ಇದಾದ ನಂತರ ಸರ್ಕಾರ ಟಾಟಾ ರವರನ್ನ ಹುದ್ದೆಯಿಂದ ತೆಗೆದುಹಾಕಿತು. 25 ವರ್ಷಗಳ ಕಾಲ ಅವರು ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ದೇಶಕ್ಕಾಗಿ ಸೇವೆ ಸಲ್ಲಿಸಿದರೂ ಅವರನ್ನ ಆ ಹುದ್ದೆಯಿಂದ ತೆಗೆದುಹಾಕಿದ್ದು ನೌಕರರ ಮೇಲೆ ತೀವ್ರ ಪರಿಣಾಮ ಬೀರಿತು. ಕೆಲವರು ರಾಜೀನಾಮೆ ನೀಡಿದರು ಮತ್ತು ಕೆಲವರು ಪ್ರತಿಭಟಿಸಿದರು. ಇದಕ್ಕಾಗಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರನ್ನು ಸಾಕಷ್ಟು ಟೀಕಿಸಲಾಯಿತು.

ಈ ಸುದ್ದಿ ರೇಡಿಯೋದಲ್ಲಿ ಬಂದಿತು. ಜೆಆರ್‌ಡಿ ಟಾಟಾ ತನ್ನ ಪ್ರೀತಿಯ ಮಗುವನ್ನು ಯಾರೋ ಹೊತ್ತೊಯ್ಯುತ್ತಿದ್ದಾರೆ ಎಹೋದಂತ ಭಾಸವಾಗುತ್ತಿದೆ ಎಂದು ಹೇಳಿದ್ದರು. ‘ಟಾಟಾ ಏರ್‌ಲೈನ್ಸ್’ ಅನ್ನು 1946 ರಲ್ಲಿಯೇ ಸಾರ್ವಜನಿಕ ಕಂಪನಿಯಾಗಿ ‘ಏರ್ ಇಂಡಿಯಾ’ ಆಗಿ ಪರಿವರ್ತಿಸಲಾಯಿತು. ಆದರೆ, ನೆಹರು ಉದ್ಯಮದೊಂದಿಗೆ ಮಾತನಾಡದೆ ರಾಷ್ಟ್ರೀಕರಣದ ನಿರ್ಧಾರವನ್ನು ತೆಗೆದುಕೊಂಡ ರೀತಿ, ದೇಶವು ಇಂದು ಅದರ ಸಾಲದ ಭಾರವನ್ನು ಎದುರಿಸುತ್ತಿದೆ. ಆಗ ಜೆಆರ್‌ಡಿ ಟಾಟಾ ಅಧಿಕಾರಿಯೊಬ್ಬರಿಗೆ “ನಾವು ರಾಜಕೀಯ ಮತ್ತು ಅಧಿಕಾರಶಾಹಿ ಆಡಳಿತದಲ್ಲಿ ವಾಸಿಸುತ್ತಿದ್ದೇವೆ, ಇಲ್ಲಿ ನಮ್ಮ ಮಾತನ್ನು ಕೇಳೋಕೆ ಯಾರೂ ಇಲ್ಲ” ಟಾಟಾ ದುಃಖದಿಂದಲೇ ಹೇಳಿದ್ದರು.

1987 ರ ಸಂದರ್ಶನದಲ್ಲಿ, ಜೆಆರ್‌ಡಿ ಟಾಟಾ ನಾನು ಕೆಲವೊಮ್ಮೆ ನಾನು ವ್ಯಾಪಾರವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿಬಿಡಲೇ? ಅಂತ ಯೋಚಿಸುವಷ್ಟು ಮೂರ್ಖನಾಗಿಬಿಟ್ಟಿದ್ದೆ ಎಂದು ಹೇಳಿದ್ದರು. “ಜವಾಹರ್ ಲಾಲ್ ನೆಹರು ಅನೇಕ ದೊಡ್ಡ ರಾಜಕೀಯ ತಪ್ಪುಗಳನ್ನು ಮಾಡಿದ್ದಾರೆ. ನಾನು ಅರ್ಥಮಾಡಿಕೊಂಡಂತೆ ನೆಹರು ರವರ ಸಮಾಜವಾದವು ಸಮಾಜವಾದದ ನಿಜವಾದ ರೂಪವಲ್ಲ ಅದು ಅಧಿಕಾರಶಾಹಿ. ನೆಹರು ಜಾಗದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ವಿಧಿ ಆಯ್ಕೆ ಮಾಡಿದ್ದರೆ, ಭಾರತ ಇಂದು ಬೇರೆ ಹಂತದಲ್ಲಿರುತ್ತಿತ್ತು ಮತ್ತು ಭಾರತದ ಆರ್ಥಿಕ ಸ್ಥಿತಿ ತುಂಬಾ ಬಲವಾಗಿರುತ್ತಿತ್ತು” ಎಂದೂ ಜೆಆರ್‌ಡಿ ಟಾಟಾ ಹೇಳಿದ್ದರು.

– Vinod Hindu Nationalist 

Advertisement
Share this on...