Times Now C Voter Survey: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವಿನೊಂದಿಗೆ ಬಿಜೆಪಿ‌ ಅಧಿಕಾರಕ್ಕೆ? ಕಂಗಾಲಾದ ಮಮತಾ ಬ್ಯಾನರ್ಜಿ

in Kannada News/News/ರಾಜಕೀಯ 3,617 views

ಮುಖ್ಯಮಂತ್ರಿ ರೂಪದಲ್ಲಿ ಜನರ ನೆಚ್ಚಿನ ಮುಖವಾಗಿ ಬಿಜೆಪಿಯ ದಿಲೀಪ್ ಘೋಷ್ ಎರಡನೇ ಸ್ಥಾನದಲ್ಲಿದ್ದಾರೆ.  ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನ ಕೇವಲ 22.6 ರಷ್ಟು ಜನರು ಇಷ್ಟಪಟ್ಟಿದ್ದಾರೆ, ಆದರೆ ರಾಜಕೀಯವಾಗಿ ಸಕ್ರಿಯವಾಗಿಲ್ಲದಿದ್ದರೂ ಗಂಗೂಲಿ ಅವರನ್ನ ಮುಖ್ಯಮಂತ್ರಿಯಾಗಿ ನೋಡಲು ಶೇಕಡಾ 4.5 ರಷ್ಟು ಜನರು ಬಯಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಈಗೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್-ಮೇ ಮಧ್ಯ ಭಾಗದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಟೈಮ್ಸ್ ನೌ ಮತ್ತು ಸಿ-ವೋಟರ್ ಬಂಗಾಳದ ಜನಪ್ರಿಯ ಪಕ್ಷಗಳು ಮತ್ತು ನಾಯಕರ ಬಗ್ಗೆ ಸಮೀಕ್ಷೆ ಮಾಡಿದೆ. ಇದರಲ್ಲಿ ಮೊದಲ ಬಾರಿಗೆ ಬಿಜೆಪಿ ತೃಣಮೂಲ ಕಾಂಗ್ರೆಸ್ ಗಿಂತ ಮುಂದಿದೆ ಎಂದು ವರದಿಯಾಗಿದೆ. ವಾಸ್ತವವಾಗಿ, ಸಮೀಕ್ಷೆಯಲ್ಲಿ 41.6 ರಷ್ಟು ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಆದರೆ ಟಿಎಂಸಿ ಪಕ್ಷವನ್ನ 36.9 ರಷ್ಟು ಸಾರ್ವಜನಿಕ ಬೆಂಬಲದೊಂದಿಗೆ ಎರಡನೇ ಸ್ಥಾನಕ್ಕೆ ಇಳಿಯುತ್ತಿದೆ.

Advertisement

ಸರ್ವೇಯ ಪೂರ್ಣ ರಿಸಲ್ಟ್ ಏನು?

ಜನವರಿ 24 ರಿಂದ ಫೆಬ್ರವರಿ 4 ರವರೆಗೆ ಟೈಮ್ಸ್ ನೌ ಮತ್ತು ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅತಿ ಹೆಚ್ಚು ಜನ ಸಮರ್ಥನೆ ನೀಡಿದ್ದರೆ, ಟಿಎಂಸಿ ಈ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. ಈ ಎರಡು ಪಕ್ಷಗಳನ್ನು ಹೊರತುಪಡಿಸಿ, ಯಾವುದೇ ಪಕ್ಷವು ಸಾರ್ವಜನಿಕರ ಬೆಂಬಲದ ದೃಷ್ಟಿಯಿಂದ ಎರಡು ಅಂಕಿಗಳನ್ನೂ ತಲುಪಿಲ್ಲ. ನಾಲ್ಕನೇ ಸಂಖ್ಯೆ ಕಾಂಗ್ರೆಸ್ ಆಗಿದೆ, ಇದನ್ನು ಕೇವಲ 8.4 ಪ್ರತಿಶತದಷ್ಟು ಜನರ ಆಯ್ಕೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅತಿ ಕೆಟ್ಟ ಸ್ಥಿತಿಯಂತೂ ಲೆಫ್ಟ್ ನದ್ದಾಗಿದೆ. ಲೆಫ್ಟ್ ಪಕ್ಷಕ್ಕೆ ಕೇವಲ 4.4% ಜನರು ಇಷ್ಟಪಟ್ಟಿದ್ದಾರೆ. ಗಮನಿಸುವ ಅಂಶವೇನೆಂದರೆ, ಟಿಎಂಸಿ ಅಧಿಕಾರಕ್ಕೆ ಬರೋಕೂ ಮುಂಚೆ ಎಡ ಪಕ್ಷಗಳು ಮೂರು ದಶಕಗಳಿಗಿಂತ ಹೆಚ್ಚು ಕಾಲ (1977-2011) ಪಶ್ಚಿಮ ಬಂಗಾಳವನ್ನು ಆಳಿದ್ದವು, ಆದರೂ ಬಂಗಾಳದಲ್ಲಿ ಈಗ ಎಡ ಪಕ್ಷಗಳ ಮತಗಳ ಶೇಕಡಾವಾರು ಪ್ರಮಾಣವು 2011 ಕ್ಕಿಂತ ಕಡಿಮೆಯಾಗಿದೆ. 2015 ರ ಚುನಾವಣೆಯಲ್ಲಿ ಎಡಪಕ್ಷಗಳು ಕೇವಲ 19 ಸ್ಥಾನಗಳನ್ನು ಗೆದ್ದಿದ್ದವು.

ಸಿಎಂ ಮುಖ ಇಲ್ಲದ ಕಾರಣ ಬಿಜೆಪಿಗೆ ನಷ್ಟ ಆಗಬಹುದು

ಮತ್ತೊಂದೆಡೆ, ಬಿಜೆಪಿಯ ಎಲ್ಲಾ ಆರೋಪಗಳ ಹೊರತಾಗಿಯೂ, ಮಮತಾ ಬ್ಯಾನರ್ಜಿ ಇನ್ನೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿದ್ದಾರೆ. ಸುಮಾರು 54.3 ರಷ್ಟು ಜನರು ಮಮತಾ ಬ್ಯಾನರ್ಜಿ ಸಿಎಂ ಆಗುವುದನ್ನು ನೋಡಲು ಬಯಸುತ್ತಾರೆ. ಮುಖ್ಯಮಂತ್ರಿಯಾಗಿ ಅವರ ಕೆಲಸವನ್ನು ಶ್ಲಾಘಿಸಿದ ಜನರಲ್ಲಿ ಶೇಕಡಾ 49.7 ಜನರಿದ್ದರೆ, 31 ಪ್ರತಿಶತ ಅವರ ಕೆಲಸವನ್ನು ಕಳಪೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಅವರ ನೆಚ್ಚಿನ ಮುಖವಾಗಿ ಬಿಜೆಪಿಯ ದಿಲೀಪ್ ಘೋಷ್ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಕೇವಲ 22.6 ರಷ್ಟು ಜನರು ಮಾತ್ರ ಅವರನ್ನು ಇಷ್ಟಪಟ್ಟಿದ್ದಾರೆ. ಮೂರನೆಯ ಸ್ಥಾನದಲ್ಲಿ ಟಿಎಂಸಿಯಿಂದ ಬಿಜೆಪಿಗೆ ಬಂದ ಮುಕುಲ್ ರಾಯ್ ಅವರ ಹೆಸರು ಇದ್ದರೆ, ಇದುವರೆಗೂ ರಾಜಕೀಯ ಪ್ರವೇಶಿಸದ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 4.5% ಜನರ ಬೆಂಬಲದೊಂದಿಗೆ ನಾಲ್ಕನೇ ಹೆಚ್ಚು ಆದ್ಯತೆಯ ಸಿಎಂ ಅಭ್ಯರ್ಥಿಯಾಗಿದ್ದಾರೆ. ವಿಶೇಷವೆಂದರೆ, ಸಿಎಂ ಮುಖವನ್ನು ಹೊಂದಿರದ ನಷ್ಟವನ್ನು ಬಿಜೆಪಿ ಅನುಭವಿಸುತ್ತಿದೆ.

Advertisement
Share this on...