ಸನಾ (ಯೆಮೆನ್):
ಹೌದು, ಮೀನುಗಾರರ ಗುಂಪೊಂದು ಯೆಮೆನ್ನ ಸಮುದ್ರದಲ್ಲಿ ತೇಲುತ್ತಿದ್ದ ವೀರ್ಯ ತಿಮಿಂಗಿಲ (ಸ್ಪರ್ಮ್ ವೇಲ್) ದ ಕಳೇಬರದ ಒಳಗೆ ಬೆಲೆಬಾಳುವ ಮೀನಿನ ವಾಂತಿಯನ್ನು ಪತ್ತೆಹಚ್ಚಿದ್ದಾರೆ. ಅದರ ಬೆಲೆ ಎಷ್ಟೆಂದು ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ. ತಿಮಿಂಗಿಲ ವಾಂತಿ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತದೆ.
ಅತಿ ಬಡರಾಷ್ಟ್ರಗಳಲ್ಲಿ ಯೆಮೆನ್ ಸಹ ಒಂದು. ಜೀವನ ಸಾಗಿಸಲು ಇಲ್ಲಿ ಮೀನುಗಾರಿಕೆಯನ್ನೇ ಅವಲಂಬಿಸಲಾಗಿದೆ. ದಕ್ಷಿಣ ಯೆಮನ್ನ ಗಲ್ಫ್ ಆಫ್ ಅಡೆನ್ ನೀರಿನಲ್ಲಿ ದೋಣಿ ನಡೆಸುವಾಗ ದೈತ್ಯ ತಿಮಿಂಗಿಲವನ್ನು ಗುರುತಿಸಿದ 35 ಮೀನುಗಾರರಿಗೆ ಅಂಬರ್ಗ್ರೀಸ್ (ತಿಮಿಂಗಿಲ ವಾಂತಿ) ಪತ್ತೆಯಾಗಿದೆ.
ಸಿರಿಯಾದ ಮೀನುಗಾರನೊಬ್ಬ ಮೊದಲು ದೈತ್ಯ ತಿಮಿಂಗಿಲದ ಕಳೇಬರವನ್ನು ಗುರುತಿಸಿ, ಗಲ್ಫ್ ಆಫ್ ಅಡೆನ್ನಲ್ಲಿರುವ 35 ಮೀನುಗಾರರ ಗುಂಪಿಗೆ ಎಚ್ಚರಿಸಿದನು ಮತ್ತು ಅದರಲ್ಲಿ ಅಂಬರ್ಗ್ರಿಸ್ ಇರಬಹುದು ಎಂದು ಹೇಳಿದನು. ದೈತ್ಯ ಶವವನ್ನು ಸಮೀಪಿಸಿದ ಮೀನುಗಾರರು ಸಮುದ್ರ ಮಲ ವಾಸನೆಯನ್ನು ಗಮನಿಸಿದರು. ಕಂಡಿತ ಹೊಟ್ಟೆಯೊಳಗೆ ಏನಾದರೂ ಇದೆ ಎಂದು ಊಹಿಸಿದ ಬಳಿಕ ಮೀನುಗಾರರು ಸತ್ತ ತಿಮಿಂಗಿಲದ ಕಳೇಬರವನ್ನು ಸಮುದ್ರದ ದಡಕ್ಕೆ ಎಳೆದೊಯ್ದಿದ್ದಾರೆ.
ಇದಾದ ಬಳಿಕ ಮೀನುಗಾರರು ಕಳೇಬರವನ್ನು ಕತ್ತರಿಸಿ ನೋಡಿದಾ 127 ಕೆಜಿ ಉಂಡೆಯ ಕಪ್ಪು ಅಂಬರ್ಗ್ರಿಸ್ ಪತ್ತೆಯಗಿದೆ. ಇದನ್ನು ಕಂಡು ಎಲ್ಲರು ಆಶ್ಚರ್ಯಚಕಿತರಾದರು. ಸುಮಾರು 1.5 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ನಿಧಿಯನ್ನು ನಿಜಕ್ಕೂ ಕುಣಿದು ಕುಪ್ಪಳಿಸಿದರು.
ಈ ಬಗ್ಗೆ ಬಿಬಿಸಿ ಮಾಧ್ಯಮದೊಂದಿಗೆ ಮಾತನಾಡಿರುವ ಮೀನುಗಾರನೊಬ್ಬ “ನಿಜಕ್ಕೂ ಇದು ಊಹಿಸಲಾಗದ ಬೆಲೆ. ನಾವೆಲ್ಲರೂ ಬಡವರಾಗಿದ್ದೇವೆ “ಎಂದು ತಿಳಿಸಿದರು. ಈ ವಸ್ತುವು ನಮಗೆ ಇಷ್ಟು ದೊಡ್ಡ ಮೊತ್ತವನ್ನು ನೀಡುತ್ತದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ ಎಂದು ತಿಳಿಸಿದರು.
ಏನಿದರ ವಿಶೇಷ..?: ಸಾಮಾನ್ಯವಾಗಿ “ಸಮುದ್ರದ ನಿಧಿ” ಅಥವಾ “ತೇಲುವ ಚಿನ್ನ” ಎಂದು ಕರೆಯಲ್ಪಡುವ ಅಂಬರ್ಗ್ರೀಸ್ ಒಂದು ಘನ ಮೇಣದ ಸುಡುವ ವಸ್ತುವಾಗಿದೆ. ಸ್ಪರ್ಮ್ ವೇಲ್ ಅಥವಾ ಕ್ಯಾಚಲೋಟ್ ಹಲ್ಲಿನ ತಿಮಿಂಗಿಲಗಳಲ್ಲಿ ಇದು ಕಂಡುಬರುತ್ತವೆ. ಅವು ಕಪ್ಪೆ ಬೊಂಡಾಸ್, ಮಣಕಿ ಎಂದು ಕರೆಯುವ ಮೀನುಗಳನ್ನು ತಿಂದು ಬದುಕುತ್ತವೆ. ಅವು ತಿನ್ನುವ ಮೀನುಗಳಿಗೆ ಅತಿ ಗಟ್ಟಿಯಾದ ಮೂಳೆಗಳಿರುತ್ತವೆ. ಅವುಗಳನ್ನು ಕರಗಿಸಲು ಕಷ್ಟವಾದ್ದರಿಂದ ತಿಮಿಂಗಿಲ ಅದನ್ನು ಜಗಿದು, ಜಗಿದು ಉಗಿಯುತ್ತದೆ. ಉಗಿದ ತಕ್ಷಣ ವಾಂತಿಯು ವಿಪರೀತ ವಾಸನೆ ಬರುತ್ತದೆ. ಕೆಲ ದಿನಗಳ ನಂತರ ಅದು ಘಟ್ಟಿಯಾಗಿ ಸುವಾಸನೆ ಬೀರಲಾರಂಭಿಸುತ್ತದೆ. ಸುಗಂಧ ದ್ರವ್ಯಗಳನ್ನು ತಯಾರಿಸಲು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಅಂಬರ್ ಗ್ರೀಸ್ ಬಳಸಲಾಗುತ್ತದೆ. ಒಂದು ಕೆ.ಜಿ. ಅಂಬರ್ಗ್ರೀಸ್ಗೆ ಸುಮಾರು 1 ಕೋಟಿ ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: ಸಮುದ್ರದಲ್ಲಿ ಸಿಕ್ಕ ಮೀನಿನಿಂದ ರಾತ್ರೋರಾತ್ರಿ ಲಕ್ಷಾಧೀಶ್ವರನಾದ ಯುವಕ
ಜೀವನದಲ್ಲಿ ಅದೃಷ್ಟ ಅನ್ನೋದು ಯಾರಿಗೆ, ಹೇಗೆ ಬರುತ್ತೆ ಅಂತ ಊಹೆ ಮಾಡೋದು ಬಹಳ ಕಷ್ಟ. ಆದರೆ ಕೆಲವರಿಗೆ ಒಲಿದು ಬರುವ ಅದೃಷ್ಟ ಮಾತ್ರ ಅವರ ಇಡೀ ಜೀವನದ ದಿಕ್ಕನ್ನು ಬದಲಾಯಿಸಬಲ್ಲದು ಅನ್ನೋದಿಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಇವೆ. ಇಂತಹ ಘಟನೆಗಳನ್ನು ನೋಡಿದಾಗ ನಾವು ನಮ್ಮ ಮನಸ್ಸಿನಲ್ಲಿ ಸಹಾ ಇಂತದೊಂದು ಅದೃಷ್ಟ ನಮಗೆ ಏಕೆ ಒಲಿದು ಬರಲಿಲ್ಲ ಅಂತ ಅಂದುಕೊಳ್ಳುತ್ತೇವೆ. ಆದರೆ ಅದೃಷ್ಟ ಒಲಿದು ಬಂದರೆ ನಿನ್ನೆಯವರೆಗೆ ಭಿಕಾರಿಯಾಗಿದ್ದವನು ಇಂದು ಕೋಟ್ಯಾಧಿಪತಿ ಆಗಿ ಬಿಡಬಹುದು. ಈಗ ಇಂತಹ ಒಂದು ಅದೃಷ್ಟ ಪಾಕಿಸ್ತಾನದ ಮೀನುಗಾರನ ಬದುಕಿನಲ್ಲಿ ಕೂಡಾ ಬಂದಿದೆ. ಅವರ ಅದೃಷ್ಟದ ಕಥೆಯನ್ನು ಕೇಳಿದಾಗ ಆಶ್ಚರ್ಯ ಸಹಾ ಆಗುತ್ತದೆ.
ಪಾಕಿಸ್ತಾನದ ಮೂಲದ ಮೀನುಗಾರನೊಬ್ಬ ತನ್ನ ಬಲೆಗೆ ಬಿದ್ದಂತಹ ಅಟ್ಲಾಂಟಿಕ್ ಕ್ರೋಕರ್ ಎನ್ನುವ ಅತಿ ವಿರಳವಾದ ಮೀನಿನ ಪ್ರಬೇಧದ ಮೀನನ್ನು ಹಿಡಿದಿದ್ದಾನೆ. ಈ ಮೀನಿನ ತೂಕ ಸುಮಾರು 48 ಕೆಜಿಗಳಷ್ಟು ತೂಕವನ್ನು ಹೊಂದಿತ್ತು ಎನ್ನಲಾಗಿದ್ದು, ಆತ ಈ ಮೀನನ್ನು ಬರೋಬ್ಬರಿ 72 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಮೀನಿನ ಮಾರಾಟವು ಪಾಕಿಸ್ತಾನದಲ್ಲೇ ಅತಿ ದುಬಾರಿಯಾದ ಸಮುದ್ರ ಆಹಾರ ವ್ಯವಹಾರ ಎನ್ನುವ ಹೆಗ್ಗಳಿಕೆಯನ್ನು ಈ ಮೀನಿನ ವ್ಯವಹಾರ ಪಡೆದುಕೊಂಡಿದೆ.
ಸಾಜಿದ್ ಹಜಿ ಅಬೂಬ್ಕರ್ ಎನ್ನುವ ಮೀನುಗಾರನ ಬಲೆಗೆ ಬಲೂಚಿಸ್ತಾನದ ಕರಾವಳಿ ಪ್ರದೇಶದಲ್ಲಿ ಈ ಮೀನು ಬಿದ್ದಿತ್ತು. ಈ ವಿಶೇಷವಾದ ಮೀನಿನ ಬೆಲೆ ಅದರ ಹರಾಜಿನಲ್ಲಿ 82 ಲಕ್ಷಗಳವರೆಗೆ ತಲುಪಿತ್ತು.. ಆದೇ ಅಬೂಬ್ಕರ್ ಸಂಪ್ರದಾಯದ ಪ್ರಕಾರ ಸಾಂಪ್ರದಾಯಿಕ ಬೆಲೆಗೆ ಅಂದರೆ 72 ಲಕ್ಷ ರೂಗಳನ್ನು ಸಾಜಿದ್ ಪಡೆದುಕೊಂಡಿದ್ದಾರೆ. ಅಟ್ಲಾಂಟಿಕ್ ಕ್ರೋಕರ್ ಸಿಕ್ಕಿರುವುದು ಇದೇ ಮೊದಲಲ್ಲ. ಕಳೆದ ವಾರ ಕೂಡಾ ಒಂದು ಮೀನು ಸಿದ್ದರು, ಅದು 7.8 ಲಕ್ಷ ಕ್ಕೆ ಮಾರಾಟವಾಗಿತ್ತು. ಸಾಮಾನ್ಯವಾಗಿ ಈ ಮೀನು 1.2 ಕೆಜಿ ತೂಕವಿರುತ್ತದೆ ಎನ್ನಲಾಗಿದೆ.