ಈ ದೇಶದ ಮುಸ್ಲಿಂ ಮಹಿಳೆಯರು ಮಾಡುವ ಕೆಲಸದ ಬಗ್ಗೆ ತಿಳಿದರೆ ನೀವು ದಂಗಾಗ್ತೀರ

in Kannada News/News/ಕನ್ನಡ ಮಾಹಿತಿ 9,552 views

ಪ್ರಪಂಚದಲ್ಲಿ ಹಲವಾರು ಸಂಸ್ಕೃತಿ, ಆಚರಣೆ, ಸಭ್ಯತೆಗಳಿವೆ. ಅಷ್ಟೇ ಅಲ್ಲ ಈ ಎಲ್ಲ ಧರ್ಮ, ಜನಾಂಗಗಳು ಬೇರೆ ಬೇರೆ ರೀತಿಯ ಪರಂಪರೆಗಳನ್ನು ಆಚರಿಸುತ್ತವೆ. ಆದರೆ ಈ ಸಭ್ಯತೆಗಳ ಮಧ್ಯೆ ಪ್ರಪಂಚದಲ್ಲಿ ಒಂದು ಜನಾಂಗವಿದ್ದು ಅಲ್ಲಿನ ಕಾನೂನು ಪ್ರಪಂಚದ ಕಾನೂನಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಿನ್ನ ಅಂದರೆ ಒಂದು ರೀತಿಯ ವಿಚಿತ್ರವೆಂದೇ ಹೇಳಬಹುದು. ಮುಸ್ಲಿಂ ಪುರುಷರು ಬುರ್ಖಾದಲ್ಲಿ ಹಾಗು ಮಹಿಳೆಯರು ಸ್ವತಂತ್ರವಾಗಿ ಇರುವ ಬಗ್ಗೆ ಎಲ್ಲಾದರೂ ನೀವು ಕೇಳಿದ್ದೀರ?

Advertisement

ಇಂದು ನಾವು ನಿಮಗೆ ಅಂತಹ ಸಭ್ಯತೆಯೊಂದರ ಬಗ್ಗೆ ತಿಳಿಸಲು ಹೊರಟಿದ್ದೇವೆ. ಅಲ್ಲಿನ ಕಾನೂನಿನ ಬಗ್ಗೆ ತಿಳಿದರೆ ನೋವೊಮ್ಮೆ ದಂಗಾಗ್ತೀರ. ಈ ಜನಜಾತಿ ಆಫ್ರಿಕಾದ ನೈಜರ್ ಬಳಿ ವಾಸಿಸುತ್ತದೆ ಮತ್ತು ಇವರನ್ನ ತುಆರೇಕ್ ಜನಜಾತಿಯ ಜನ ಎಂದು ಕರೆಯಲಾಗುತ್ತದೆ. ಇವರನ್ನ ಮುಸ್ಲಿಂ ಜನಜಾತಿಯೆಂದೇ ಹೇಳಲಾಗುತ್ತದೆ ಆದರೆ ಇವರ ನಿಯಮ, ಕಾನೂನುಗಳು ಮಾತ್ರ ಇಸ್ಲಾಂ ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಒಂದು ಕಡೆ ಇಸ್ಲಾಂನಲ್ಲಿ ಅವರ ಪ್ರಾಮುಖ್ಯತೆ, ಗುರುತೇ ಅವರ ಧರಿಸುವ ಬಟ್ಟೆ ಆಚರೆಗಳು ಎಂದು ಹೇಳಲಾಗುತ್ತದೆ ಆದರೆ ತುಆರೇಕ್ ಜನಜಾತಿಯ ಜನರು ಹೆಸರಿಗೆ ಮಾತ್ರ ಇಸ್ಲಾಂ ಮತದವರಾಗಿದ್ದು ಇಲ್ಲಿನ ಮಹಿಳೆಯರು ಮದುವೆಗೂ ಮುನ್ನವೇ ಹಲವಾರು ಪುರುಷರ ಜೊತೆ ಸಂಬಂಧ ಬೆಳೆಸುವ ಪದ್ಧತಿ ಇವರಲ್ಲಿದೆ. ಇದಕ್ಕಾಗಿ ಇವರಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದು ತಮಗೆ ಇಷ್ಟವಾದವರನ್ನ ಮದುವೆಯಾಗುವ ಆಯ್ಕೆಯೂ ಇವರದ್ದೇ ಆಗಿರುತ್ತದೆ. ಇವರ ಕಾಯ್ದೆ ನಿಯಮದ ಪ್ರಕಾರ ಮದುವೆಯಾದ ಬಳಿಕವೂ ಈ ಮಹಿಳೆಯರು ಅನ್ಯ ಪುರುಷರೊಂದಿಗೆ  ಸಂಬಂಧ ಇಟ್ಟುಕೊಳ್ಳಬಹುದಾಗಿದೆ.

ಈ ಜನ ಜಾತಿಯ ಮತ್ತೊಂದು ನಿಯಮ ನಿಮ್ಮನ್ನ ಅಚ್ಚರಿಗೆ ದೂಡುತ್ತದೆ, ಅದೇನಂದ್ರೆ ಇಲ್ಲಿನ ಪುರುಷರು ಮಹಿಳೆಯರನ್ನ ಗೌರವದಿಂದ ಕಾಣಬೇಕು. ಹದಿಹರೆಯದ ಯುವಕರು ತಮ್ಮ ಮುಖವನ್ನ ಸಮಾಜದ ಮುಂದೆ ತರದೆ ಮುಖ ಮುಚ್ಚಿಕೊಂಡು ಇರಬೇಕಾಗುತ್ತದೆ. ಇಲ್ಲಿನ ಜನರಲ್ಲಿ ಮದುವೆ ಹಾಗು ತಲಾಕ್ ಸರ್ವೇ ಸಾಮಾನ್ಯವಾಗಿದೆ. ಇಲ್ಲಿನ ಮಹಿಳೆಯರು ತಮಗೆ ಇಷ್ಟ ಬಂದಂತೆ ಬದುಕುತ್ತಾರೆ, ಅಷ್ಟೇ ಮಜಾ ಕೂಡ ಮಾಡುತ್ತಾರೆ ಹಾಗು ಯಾವಾಗ ಬೇಕಾದರೂ ಅವರು ತಮ್ಮ ಪತಿಯನ್ನ ಬಿಟ್ಟುಬಿಡಬಹುದಾಗಿದೆ. ಗಂಡನಿಗೆ ತಲಾಕ್ ಕೊಟ್ಟ ಬಳಿಕ ಇಲ್ಲಿನ ಮಹಿಳೆಯರ ಮನೆಯಲ್ಲಿ ಸಂಭ್ರಮಾಚರಣೆ ಕೂಡ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ ತಲಾಕ್ ಕೊಟ್ಟ ಗಂಡನಿಗೆ ಮಹಿಳೆ ಕಡಿಮೆ ಪ್ರಾಮುಖ್ಯತೆ ನೀಡುತ್ತಾಳೆ.

ತುಆರೇಕ್ ಜನಜಾತಿಯಲ್ಲಿ ತಲಾಕ್ ಪಡೆದ ಬಳಿಕ ಮಹಿಳೆಯರಿಗೆ ಲಾಭವೆಂದೇ ಹೇಳಲಾಗುತ್ತದೆ. ಇಲ್ಲಿ ಮಹಿಳೆಯರು ತಮಗೇನು ಬೇಕೋ ಅದನ್ನ ಮಾಡುವ ಸ್ವಾತಂತ್ರ್ಯ ಹೊಂದಿದ್ದರೆ ಪುರುಷರಿಗೆ ಮಾತ್ರ ಈ ಸ್ವಾತಂತ್ರ್ಯವಿಲ್ಲ. ಸಣ್ಣ ಅಥವ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಪುರುಷರು ಮಹಿಳೆಯರ ಅನುಮತಿ ಪಡೆಯಬೇಕಾಗುತ್ತದೆ. ಇಲ್ಲಿ ಯುವಕರ ಜೊತೆ ಯುವತಿಯರು ಚುಡಾಯಿಸುತ್ತಾರೆ ಹಾಗು ತಮಗಿಷ್ಟವಾದರೆ ಅದೇ ಯುವಕನನ್ನ ಆ ಯುವತಿ ಮದುವೆಯಾಗಬೇಕಾಗುತ್ತದೆ ಹಾಗು ಇದಕ್ಕೆ ಯುವಕ ನಿರಾಕರಿಸುವಂತಿಲ್ಲ.

Advertisement
Share this on...