ಆ್ಯಕ್ಸಿಡೆಂಟ್ ಆಗೋಕೂ ಸ್ವಲ್ಪ ಮುಂಚೆ ಡೆತ್ ಸರ್ಟಿಫಿಕೇಟ್ ಕೇಳಿದ್ದ ಸಂಚಾರಿ ವಿಜಯ್: ಕಾರಣವೇನಿತ್ತು ನೋಡಿ

in FILM NEWS/Kannada News/News 267 views

ರಾಷ್ಟ್ರಪತಿ ವಿಜೇತ, ಕನ್ನಡದ ಸ್ಪುರದ್ರೂಪಿ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಸಂಚಾರಿ ವಿಜಯ್ ಬದುಕಿದ್ದಾಗ ಜನರಿಗೆ ಎಷ್ಟು ಸಹಾಯ ಮಾಡಿದ್ದರೋ ಅವರು ಇಹಲೋಕ ತ್ಯಜಿಸಿದ ಬಳಿಕವೂ ಮಹತ್ವದ, ಪುಣ್ಯದ ಕೆಲಸ ಮಾಡಿ ಅಂದರೆ ತಮ್ಮ ದೇಹದ ಅಂಗಾಗಗಳನ್ನ ದಾನ ಮಾಡಿ ಹೋಗಿದ್ದಾರೆ.

Advertisement

ಇದೀಗ ಸಂಚಾರಿ ವಿಜಯ್ ಅವರ ಬಗ್ಗೆ ಅಂದರೆ ಅವರ ಆ್ಯಕ್ಸಿಡೆಂಟ್ ಆಗುವ ಕೆಲ ಗಂಟೆಗಳ ಮುನ್ನ ಅವರು ‘ಉಸಿರು’ ತಂಡದ ಸದಸ್ಯರೊಬ್ಬರಿಗೆ ಮೆಸೇಜ್ ಮಾಡಿದ್ದರ ಬಗ್ಗೆ ಇದೀಗ ಮಹತ್ವದ ವಿಷಯವೊಂದು ಬಹಿರಂಗವಾಗಿದೆ. ಹೌದು ಕೋವಿಡ್ ನ ಈ ಸಂಕಟದ ಸ್ಥಿತಿಯಲ್ಲಿ ಸಂಚಾರಿ ವಿಜಯ್ ಕೊರೋನಾ ಸೋಂಕಿತರು, ಕಷ್ಟದಲ್ಲಿರುವವರಿಗೆ, ಹಸಿವಿನಿಂದ ಬಳಲುತ್ತಿರುವ ಅನೇಕ ಜನರಿಗೆ ಖುದ್ದು ಸಹಾಯ ಮಾಡಿದ್ದರು.

ಸಂಚಾರಿ ವಿಜಯ್ ಅವರು ‘ಉಸಿರು’ ಎಂಬ ಸಮಾಜಸೇವಿ ಸಂಘಟನೆಯ ಜೊತೆ ಸೇರಿಯೂ ನಿರ್ಗತಿಕರು, ಅಸಹಾಯಕರು, ಕೋವಿಡ್ ಪೀಡಿತರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಆದರೆ ಸಂಚಾರಿ ವಿಜಯ್ ಆ್ಯಕ್ಸಿಡೆಂಟ್ ಆಗೋಕು ಮುನ್ನ ಅವರು ಉಸಿರು ತಂಡದ ಸದಸ್ಯರೊಬ್ಬರಿಗೆ ಡೆತ್ ಸರ್ಟಿಫಿಕೇಟ್ ಬಗ್ಗೆ ಕೇಳಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಹೌದು ಈ ವಿಷಯವನ್ನು ‘ಉಸಿರು’ ತಂಡದ ಸದಸ್ಯರಾಗಿರುವ ಮಾದೇಶ್ ತಿಳಿಸಿದ್ದಾರೆ‌. ಖಾಸಗಿ ಸುದ್ದಿ ಚಾನೆಲ್ ಒಂದರ ಜೊತೆ ಮಾತನಾಡುತ್ತ ಅವರು, “ಶನಿವಾರ 11.30 ಗೆ ಸಂಚಾರಿ ವಿಜಯ್ ಅವರು ಪೋರಿಯಾ ಫಾರ್ಮ್ ಅಂದರೆ ಸತ್ತೋದವರಿಗೆ ಅಥವ ಡಾಕ್ಯುಮೆಂಟ್ ಗಾಗಿ ಡೆತ್ ಸರ್ಟಿಫಿಕೇಟ್ ಗಾಗಿ ಬೇಕಾಗುವ ಪೋರಿಯಾ ಫಾರ್ಮ್ ಬೇಕು ಅಂತ ಲಾಸ್ಟ್ ಮೆಸೇಜ್ ಮಾಡಿದ್ದರು‌. ಆ ಲಾಸ್ಟ್ ಮೆಸೇಜ್ ಮಾಡೋಕೂ ಮೊದಲು ಅವರು ಫುಡ್ ಕಿಟ್ ಕೊಡೋದಾಗ್ಲಿ, ರೇಷನ್ ಕಿಟ್ ಕೊಡೋದಾಗ್ಲಿ, ಮೆಡಿಸನ್ ಗಳಾಗಲಿ, ಟ್ಯಾಬ್ಲೆಟ್ ಆಗಲಿ ಬೇಕಾದ್ರೆ ಪಾಪ ಅವರು ರಾತ್ರಿ 12 ಗಂಟೆ ಆದ್ರೂ ಕೂಡ ಅವರು ನಮಗೆ ತಲುಪಿಸಿದಾರೆ‌.

ವಿಡಿಯೋ ನೋಡಿ

ಉಸಿರು ತಂಡದ ಸಹಾಯಕ್ಕಾಗಿ ಸದಾ ಕೆಲಸ ಮಾಡಿದಾರೆ. ಅವತ್ತು ಗುಬ್ಲಾಳ ಯಾವ ವಾರ್ಡ್ ಗೆ ಬರುತ್ತೆ ಅಂತ ಅವರು ಗ್ರೂಪಲ್ಲಿ ಮೆಸೇಜ್ ಮಾಡಿದ್ದೇ ಅವರ ಲಾಸ್ಟ್ ಮೆಸೆಜ್ ಆಗಿತ್ತು. ಯಾರಿಗಾಗದರೂ ಸಹಾಯ ಬೇಕಿದ್ರೆ ತಕ್ಷಣವೇ ಸಹಾಯಕ್ಕೆ ಬರ್ತಿದ್ರು. ಸಹಾಯ ಕೇಳಿಕೊಂಡು ಬಂದವರಿಗೆ ಕೈ ಮುಗಿತಿದ್ರು. ಆ ಥರದ ಭಾವನಾತ್ಮಕ ಜೀವಿಯನ್ನ ನಾ ನೋಡೇ ಇರಲಿಲ್ಲ.

ಈ ಕಳೆದ ಒಂದೂವರೆ ತಿಂಗಳಿಂದ ನಮ್ಮ ಉಸಿರು ತಂಡದಲ್ಲಿ ಅವರು ಕೆಲಸ ಮಾಡಿದ್ದನ್ನ ನಾವು ಮರೆಯೋಕೆ ಸಾಧ್ಯವೇ ಇಲ್ಲ. ಆ ತರಹದ ಸರಳ ಜೀವಿ, ಭಾವನಾತ್ಮಕ ಜೀವಿಯನ್ನ ನಾನು ನನ್ನ ಜೀವನದಲ್ಲಿ ನೋಡಿದ್ದು ಮೊದಲೇ ಬಾರಿ. ಅಂತಹ ವ್ಯಕ್ತಿ ಇವತ್ತು ನಮ್ಮ ಜೊತೆ ಇಲ್ಲ ಅಂತ ಊಹಿಸಿಕೊಳ್ಳೋಕೂ ಸಾಧ್ಯವಾಗ್ತಾ ಇಲ್ಲ” ಅಂತ ಸಂಚಾರಿ ವಿಜಯ್ ಜೊತೆಗಿನ ಒಡನಾಟವನ್ನ ಹಂಚಿಕೊಂಡಿದ್ದಾರೆ.

Advertisement
Share this on...