VIDEO| ಅಥ್ಲೀಟ್ ಗಳನ್ನೇ ರೇಸ್ ನಲ್ಲಿ ಹಿಂದಿಕ್ಕಿ ಓಡಿದ ಕ್ಯಾಮರಾಮೆನ್: ವಿಡಿಯೋ ವೈರಲ್

in Kannada News/News/ಕ್ರೀಡೆ 128 views

ನೆಟ್ಟಿಗರನ್ನು ದಂಗುಬಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಡಟಾಂಗ್ ವಿವಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.

100 ಮೀಟರ್‌ ಓಟದ ಸ್ಫರ್ಧೆಯೊಂದರಲ್ಲಿ ಅಥ್ಲೀಟ್‌ಗಳು ಓಡಲು ಸಜ್ಜಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಓಟ ಆರಂಭಗೊಳ್ಳುತ್ತಲೇ ಅಥ್ಲೀಟ್‌ಗಳೊಂದಿಗೆ ಕ್ಯಾಮೆರಾಮನ್ ಸಹ ಓಡಲು ಆರಂಭಿಸುತ್ತಾರೆ.

ಕ್ಯಾಮೆರಾ, ಮೈಕ್ ಸೇರಿದಂತೆ ತಮ್ಮೊಂದಿಗೆ ನಾಲ್ಕು ಕೆಜಿಗೂ ಹೆಚ್ಚು ತೂಕದ ಸಲಕರಣೆಗಳನ್ನು ಹೊತ್ತುಕೊಂಡ ಕ್ಯಾಮೆರಾಮನ್‌ ಓಟಗಾರರಿಗಿಂತಲೂ ವೇಗವಾಗಿ ಓಡಿಕೊಂಡು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Advertisement

ಎಲ್ಲಾ ಓಟಗಾರರಿಗಿಂತ ಕ್ಯಾಮೆರಾಮನ್ ಸಾಕಷ್ಟು ಅಂತರ ಕಾಯ್ದುಕೊಂಡು ಮುಂದೆ ಓಡುತ್ತಿರುವ ಈ ದೃಶ್ಯವನ್ನು ಸಿಸಿ ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿದ್ದು ಈ ಕ್ಲಿಪ್ ಈಗ ವೈರಲ್ ಆಗಿದೆ.

ಇದನ್ನೂ ಓದಿ: ಅಂದು ಧೋನಿಯೊಂದಿಗಿದ್ದ ಈ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಪುಟ್ಟ ಬಾಲಕನೋರ್ವ ಜೊತೆಗಿರುವ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ. ಅಂದು ಪುಟ್ಟ ಬಾಲಕನಾಗಿದ್ದ ಈ ಹುಡುಗ ಇಂದು ಧೋನಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಡುವಷ್ಟುರ ಮಟ್ಟಿಗೆ ಬೆಳೆದಿದ್ದಾನೆ.

ಹಳೆಯ ಫೋಟೋ ಒಂದರಲ್ಲಿ ಧೋನಿ ಜೊತೆಗೆ ಪುಟ್ಟ ಬಾಲಕನೋರ್ವ ನಿಂತು ಫೋಟೋಗೆ ಪೋಸ್ ನೀಡಿದ್ದ. ಆ ಬಾಲಕ ಇಂದು ಧೋನಿಯೊಂದಿಗೆ ಐಪಿಎಲ್‍ನಲ್ಲಿ ಆಡುತ್ತಿದ್ದಾನೆ. ಹೌದು ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‍ರೌಂಡರ್ 19 ವರ್ಷದ ರಿಯಾನ್ ಪರಾಗ್ ಧೋನಿಯೊಂದಿಗೆ ಫೋಟೋದಲ್ಲಿರುವ ಆ ಪುಟ್ಟ ಬಾಲಕ. ಅಂದು ಸಣ್ಣ ಬಾಲಕನಾಗಿದ್ದ ವೇಳೆ ಧೋನಿಯೊಂದಿಗೆ ನಿಂತು ಛಾಯಚಿತ್ರ ತೆಗೆದುಕೊಂಡಿದ್ದರು. ಆ ಫೋಟೋವನ್ನು ಇದೀಗ ರಾಜಸ್ಥಾನ ರಾಯಲ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ತಂಡದ ಸ್ಟಾರ್ ಆಟಗಾರರ ಬೆಳವಣಿಗೆಯನ್ನು ಕೊಂಡಾಡಿದೆ.

ರಾಜಸ್ಥಾನ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಧೋನಿ ಜೊತೆ ಇರುವ ಪರಾಗ್ ಅವರ ಪುಟ್ಟ ಬಾಲಕನ ಫೋಟೋ ಮತ್ತು ಇತ್ತೀಚಿನ ಚಿತ್ರವೊಂದನ್ನು ಸೇರಿಸಿ ಪೋಸ್ಟ್ ಮಾಡಿ, ನೀವು ವಿಕಸನಗೊಳ್ಳುತ್ತೀರಿ, ನೀವು ಕಲಿಯುತ್ತಿರಿ, ನೀವು ಬೆಳೆಯುತ್ತಿರಿ, ಧೋನಿಯೊಂದಿಗೆ ಫ್ಯಾನ್ ಬಾಯ್ ರಿಯನ್ ಪರಾಗ್ ಎಂದು ಎಂದು ಬರೆದುಕೊಂಡಿದೆ.

ಈ ಹಿಂದೆ ಐಪಿಎಲ್‍ನಲ್ಲಿ ಆಡುವಾಗ ಪರಾಗ್ ಈ ಫೋಟೋವನ್ನು ನೆನಪಿಸಿಕೊಂಡು ನಾನು 6 ವರ್ಷದ ಬಾಲಕನಾಗಿರುವಾಗ ಧೋನಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ಆದರೆ ಇದೀಗ ನಾನು ಧೋನಿಗೆ ಬೌಲಿಂಗ್ ಮಾಡುತ್ತೇನೆ. ಧೋನಿ ವಿರುದ್ಧ ಫೀಲ್ಡಿಂಗ್ ಮಾಡುತ್ತೇನೆ. ನಾನು ಬ್ಯಾಟಿಂಗ್ ಮಾಡುವಾಗ ವಿಕೆಟ್ ಹಿಂದೆ ಧೋನಿಯನ್ನು ಕಾಣುತ್ತೇನೆ ಎಂದು ಸಹ ಆಟಗಾರನೊಂದಿಗೆ ಸಂಭ್ರಮ ಹಂಚಿಕೊಂಡಿದ್ದರು.

ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2019ರಲ್ಲಿ ಪಾದಾರ್ಪಣೆ ಮಾಡಿದರು ಆ ಬಳಿಕ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಸ್ಟಾರ್ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2019ರಿಂದ 2021ರ ವರೆಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡದ ಪರ ಒಟ್ಟು 26 ಪಂದ್ಯಗಳನ್ನು ಆಡಿ 324 ರನ್ ಮತ್ತು 3 ವಿಕೆಟ್ ಪಡೆದು ಭರವಸೆಯ ಯುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Advertisement
Share this on...