ಅಯ್ಯಪ್ಪ ಸ್ವಾಮಿ ಮತ್ತು ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ಬೈರಿ ನರೇಶ್‌ನನ್ನ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೊಡಂಗಲ್ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬೈರಿ ನರೇಶ್ ಅಯ್ಯಪ್ಪ ಸ್ವಾಮಿಯ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದ. ನರೇಶ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ನರೇಶ್ ವಿರುದ್ಧ ಹೈದರಾಬಾದ್ ಪೊಲೀಸ್ ವಿಭಾಗದ ಸೈಬರ್ ಕ್ರೈಮ್ ಸೆಲ್ ನಿಂದ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಈತನ ವಿರುದ್ಧ ಪ್ರಕರಣ ದಾಖಲಿಸಿತ್ತು.
ಬೈರಿ ನರೇಶ್‌ನ ಅವಹೇಳನಕಾರಿ ಹೇಳಿಕೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅಯ್ಯಪ್ಪ ಸ್ವಾಮಿಯ ಭಕ್ತರು ಆಕ್ರೋಶಗೊಂಡಿದ್ದಾರೆ. ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರಿಂದ ಪ್ರತಿಭಟನೆಗಳು ನಡೆದವು. ‘ಭಾರತ್ ನಾಸ್ತಿಕ್ ಸಮಾಜಂ’ ಅಧ್ಯಕ್ಷ ಬ್ಯಾರಿ ನರೇಶ್‌ನನ್ನ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಮಾಹಿತಿಯ ಪ್ರಕಾರ ತೆಲಂಗಾಣ ಪೊಲೀಸರು ಹನಮಕೊಂಡ ಜಿಲ್ಲೆಯ ನರೇಶ್‌ನನ್ನು ಬಂಧಿಸಿದ್ದಾರೆ.
Telangana cops book atheist for comments on Lord #Ayyappa amid outrage from #BJP https://t.co/ph3MMraNkt
— TheNewsMinute (@thenewsminute) December 31, 2022
ಪೋಲಿಸರು ಬಂಧಿಸಿದ್ದಾರೆ ಅನ್ನೋದಕ್ಕಿಂತ ಬೈರಿ ನರೇಶನೇ ಅಯ್ಯಪ್ಪ ಸ್ವಾಮಿಯ ಭಕ್ತರಿಂದ ಪ್ರಾಣ ಉಳಿಸಿಕೊಳ್ಳೋಕೆ ತಾನೇ ಸರೆಂಡರ್ ಆಗಿ ಜೈಲಿಗೆ ಓಡಿ ಹೋಗಿದ್ದಾನೆ ಎಂದೇ ಹೇಳಬಹುದು. ವಿಡಿಯೋ ನೋಡಿ
ನೆನ್ನೆ ನೀಲಿ ಶಾಲು ಹಾಕ್ಕೊಂಡು 'ನಾಸ್ತಿಕವಾದ', ಬಾಬಾಸಾಹೇಬ್ ಅಂಬೇಡ್ಕರ್ ಹೆಸರು ಹೇಳ್ಕೊಂಡು ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನು ನಿಂದಿಸಿದ್ದ #ಬೈರಿ_ನರೇಶ ಇಂದು ಅಯ್ಯಪ್ಪ ಸ್ವಾಮಿ ಭಕ್ತರಿಂದ ಜೀವ ಉಳಿಸಿಕೊಳ್ಳೋಕೆ ತಾನೇ ಓಡಿ ಜೈಲಿಗೆ ಹೋಗ್ತಿರೋ ದೃಶ್ಯ 😍
ಸ್ವಾಮಿಯೇ ಶರಣಂ ಅಯ್ಯಪ್ಪ 🚩 pic.twitter.com/Krh6Ed1Fcc
— Nationalist Views (@ntnlstviews) December 31, 2022
ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತರು ನರೇಶ್ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ನರೇಶ್ ವಿರುದ್ಧ ರಾಜ್ಯಾದ್ಯಂತ ಐಪಿಸಿ ಸೆಕ್ಷನ್ 153ಎ, 295ಎ, 208 ಮತ್ತು 505(2) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಲ್ಲದೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಇಡೀ ಪ್ರಕರಣದ ಕುರಿತು ತೆಲಂಗಾಣದ ಭಾರತ ರಾಷ್ಟ್ರ ಸಮಿತಿಯನ್ನು (BRS) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಸಿಆರ್ ಧರ್ಮನಿಂದನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತೆಲಂಗಾಣದಲ್ಲಿ ಹಿಂದೂ ದೇವತೆಗಳನ್ನು ನಿಂದಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಂಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಕೆಸಿಆರ್ ಅವರು ನಿಜವಾದ ಹಿಂದೂ ಎಂದು ಹೇಳಿಕೊಳ್ಳುತ್ತಾರೆ ಆದರೆ ಇಲ್ಲಿಯವರೆಗೆ ಕೊಡಂಗಲ್‌ನಲ್ಲಿ ವಿಷ್ಣು, ಶಿವ ಮತ್ತು ಅಯ್ಯಪ್ಪನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಕೇಳಿದರು.
BRS govt gives security to Munawar Faruqui who insults goddess Seethamma & permission to others to hold meetings & make derogatory remarks on Lord Ayyappa Swamy’s birth.@BJP4Telangana demands strong action against offender for hurting sentiments of Hindus.
— Bandi Sanjay Kumar (@bandisanjay_bjp) December 30, 2022
ಮತ್ತೊಂದು ಟ್ವೀಟ್ ಮಾಡುತ್ತ ಅವರು, “TRS ಸರ್ಕಾರ ಸೀತಾಮಾತೆಯನ್ನ ಅಪಮಾನ ಮಾಡಿದ್ದ ಮುನವ್ವರ್ ಫಾರುಕಿಗೆ ಭದ್ರತೆ ನೀಡುತ್ತೆ. ಇದರ ಜೊತೆ ಜೊತೆಗೆ ಭಗವಾನ್ ಅಯ್ಯಪ್ಪ ಸ್ವಾಮಿಯ ಜನ್ಮದಿನದಂದೇ ಅವಹೇನಕಾರಿ ಹೇಳಿಕೆ ನೀಡುವಂತಹ ಬೈಠಕ್ ಮತ್ತು ಕಾರ್ಯಕ್ರಮ ಆಯೋಜನೆ ಮಾಡಲೂ ಅನುಮತಿ ನೀಡುತ್ತೆ” ಎಂದಿದ್ದಾರೆ.
क्या हम इस व्यक्ति के खिलाफ कोई कार्रवाई की उम्मीद कर सकते हैं @TelanganaDGP, @TelanganaCMO जो हमारे देवताओं और भगवान अयप्पा को गाली दे रहा है। pic.twitter.com/69hDvyoJwm
— Raja Singh (@TigerRajaSingh) December 29, 2022
ಎರಡು ದಿನಗಳ ಹಿಂದೆ ಕೊಡಂಗಲ್ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬೈರಿ ನರೇಶ್ ಅಯ್ಯಪ್ಪ ಸ್ವಾಮಿಯ ಕುರಿತು ಅವಹೇಳನಕಾರಿ ಪದ ಬಳಸಿದ್ದ. ಇದಕ್ಕಾಗಿ ಶುಕ್ರವಾರ (ಡಿಸೆಂಬರ್ 30, 2022) ಅಯ್ಯಪ್ಪ ಸ್ವಾಮಿಯ ಭಕ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು ಮತ್ತು ಬೈರಿ ನರೇಶ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಮತ್ತೊಂದು ವರದಿಯ ಪ್ರಕಾರ ನರೇಶ್ ಮತ್ತು ಆತನ ಸಂಗಡಿಗರನ್ನ ಅಯ್ಯಪ್ಪ ಭಕ್ತರು ಅಟ್ಟಾಡಿಸಿ ಹೊಡೆದಿದ್ದಾರೆ ಎಂಬ ವಿಡಿಯೋ ಕೂಡ ವೈರಲ್ ಆಗಿದೆ.
ಅಯ್ಯಪ್ಪ ಸ್ವಾಮಿಯನ್ನ ನಿಂದಿಸಿದ ದರಬೇಸಿಯನ್ನ ಅಟ್ಟಾಡಿಸಿ ಹೊಡೆದ ಹಿಂದುಗಳು, “ಹೊಸ ವರ್ಷ”ಕ್ಕೆ ಇದಕ್ಕಿಂತಾ ಎಂಟರ್ಟೇನಿಂಗ್ ವಿಡಿಯೋ ಬೇಕಾ? 😂
ಸ್ವಾಮಿಯೇ ಶರಣಂ ಅಯ್ಯಪ್ಪ 🚩 pic.twitter.com/Fo965lJtxk
— Nationalist Views (@ntnlstviews) December 31, 2022