VIDEO| ಕೊರೋನಾ ವ್ಯಾಕ್ಸಿನ್‌ನ ಎರಡೂ ಡೋಸ್ ಪಡೆದ ವ್ಯಕ್ತಿಯಲ್ಲಿ ಕಂಡುಬಂತಿ ಮಹತ್ವದ ಬದಲಾವಣೆ: ವಿಡಿಯೋ ವೈರಲ್

in Kannada News/News 232 views

ಕೊರೊನಾ ಲಸಿಕೆ ಪಡೆದ ಬಳಿಕ ಮೈ ಕೈ ನೋವು, ಜ್ವರ, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತೆ ಅನ್ನೋದು ಈಗಂತೂ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಹಾರಾಷ್ಟ್ರದ ನಾಸಿಕ್​​ನ ನಿವಾಸಿಯೊಬ್ಬರು ಕೊರೊನಾ ಲಸಿಕೆ ಪಡೆದ ಬಳಿಕ ವಿಚಿತ್ರ ಸೈಡ್​ ಎಫೆಕ್ಟ್​ ಒಂದನ್ನ ಅನುಭವಿಸಿದ್ದಾರಂತೆ..!

Advertisement

ನಾಸಿಕ್​ನ ಶಿವಾಜಿ ಚೌಕ್​ ನಿವಾಸಿಯಾಗಿರುವ ಅರವಿಂದ್​ ಸೋನಾರ್​​​ ಎಂಬ ವೃದ್ಧ ಎರಡು ಡೋಸ್​ ಕೊರೊನಾ ಲಸಿಕೆಯನ್ನ ಪಡೆದ ಬಳಿಕ ತಮ್ಮ ದೇಹ ಅಯಸ್ಕಾಂತದ ಗುಣವನ್ನ ಪಡೆದುಕೊಂಡಿದೆ ಎಂದು ಹೇಳ್ತಿದ್ದಾರೆ.

ಸೋನಾರ್​ರ ದೇಹಕ್ಕೆ ಕಬ್ಬಿಣದ ವಸ್ತುಗಳನ್ನ ಹಿಡಿದರೆ ಅದು ಅವರ ದೇಹಕ್ಕೆ ಅಂಟಿಕೊಳ್ಳುತ್ತಿದೆಯಂತೆ. ಅಲ್ಲದೇ ತಮ್ಮ ವಾದಕ್ಕೆ ಪುಷ್ಠಿ ನೀಡುವ ಸಲುವಾಗಿ ವಿಡಿಯೋವನ್ನ ಮಾಡಿರುವ ಸೋನಾರ್​ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಸೋನಾರ್​ರ ದೇಹಕ್ಕೆ ನಾಣ್ಯಗಳು, ಚಮಚಗಳು ಅಂಟಿಕೊಂಡಿರೋದನ್ನ ನೀವು ನೋಡಬಹುದಾಗಿದೆ.

ಮೊದಲ ಬಾರಿಗೆ ಸೋನಾರ್​ ದೇಹಕ್ಕೆ ಈ ರೀತಿ ಲೋಹಗಳು ಅಂಟಿಕೊಂಡಿದ್ದನ್ನ ನೋಡಿದ ಕುಟುಂಬಸ್ಥರು ಬೆವರಿನಿಂದ ಹೀಗೆ ಆಗ್ತಿರಬಹುದು ಎಂದೇ ಭಾವಿಸಿದ್ದರಂತೆ. ಆದರೆ ಸ್ನಾನ ಮಾಡಿ ಬಂದ ಬಳಿಕವೂ ಲೋಹವು ದೇಹವನ್ನ ಆಕರ್ಷಿಸ್ತಾ ಇರೋದನ್ನ ನೋಡಿ ಕಂಗಾಲಾಗಿದ್ದಾರೆ.

ಈ ಬಗ್ಗೆ ನಾಸಿಕ್​​ ಮುನ್ಸಿಪಾಲ್​ ಕಾರ್ಪೋರೇಷನ್​​​ ತನಿಖೆಯನ್ನ ನಡೆಸುತ್ತಿದ್ದು ಸೋನಾರ್​ ದೇಹದಲ್ಲಿ ಯಾಕೆ ಈ ರೀತಿಯ ಬದಲಾವಣೆ ಆಯ್ತು ಅನ್ನೋದರ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ.

ಇದನ್ನೂ ಓದಿ: ಯಾವುದೋ ಗುಂಗಿನಲ್ಲಿ ಒಂದೇ ಬಾರಿಗೆ ಎರಡೂ ಡೋಸ್ ವ್ಯಾಕ್ಸಿನ್ ಕೊಟ್ಟ ನರ್ಸ್! ಬಳಿಕ ಆಗಿದ್ದೇ ಅನಾಹುತ

ಲಖನೌ: ಕರೊನಾ ಲಸಿಕೆಯ ಎರಡು ಡೋಸ್‌ಗಳ ನಡುವೆ ಒಂದಿಷ್ಟು ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಬಗ್ಗೆ ಇದಾಗಲೇ ಆರೋಗ್ಯ ಇಲಾಖೆ ಪ್ರಕಟಣೆ ನೀಡುತ್ತಾ ಬಂದಿದೆ. ಆದರೆ ಇಲ್ಲೊಬ್ಬ ನರ್ಸ್‌ ಯಾವುದೋ ಮೂಡ್‌ನಲ್ಲಿ ಎರಡೂ ಡೋಸ್‌ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂನಲ್ಲಿ. ಐದು ನಿಮಿಷಗಳ ಅಂತರದಲ್ಲೇ ಎರಡೂ ಡೋಸ್‌ಗಳನ್ನು ನೀಡಿದ್ದಾರೆ ನರ್ಸ್‌. ಲಸಿಕೆ ಹಾಕುವಾಗ ಮಾತುಕತೆಯಲ್ಲಿ ನಿರತರಾಗಿದ್ದ ನರ್ಸ್‌ನಿಂದ ಈ ಎಡವಟ್ಟು ಆಗಿದೆ ಎಂಬ ಆರೋಪ ಕೇಳಿಬಂದಿದೆ.

ಲಸಿಕೆ ಹಾಕಿಸಿಕೊಂಡು ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಮನೆಯವರು ಕಂಗಾಲಾಗಿದ್ದಾರೆ. ಆಗ ಅವರಿಗೆ ಎರಡು ಡೋಸ್‌ ನೀಡಿರುವುದು ತಿಳಿದಿದೆ. ಲಸಿಕೆ ಹಾಕಿಸಿಕೊಳ್ಳುವಾಗ ಎರಡು ಬಾರಿ ಹಾಕಿದ್ದರೂ ಇದು ಎರಡು ಬಾರಿಯ ಡೋಸ್‌ಗಳು ಎಂದು ನನಗೆ ತಿಳಿಯಲಿಲ್ಲ. ಹೀಗೆಯೇ ಲಸಿಕೆ ಹಾಕುವುದು ಎಂದುಕೊಂಡಿದ್ದೆ. ನಂತರ ಮನೆಯವರಲ್ಲಿ ವಿಷಯ ತಿಳಿಸಿದಾಗ ಎರಡೂ ಡೋಸ್‌ ಒಟ್ಟಿಗೇ ಕೊಟ್ಟಿರುವುದು ತಿಳಿದಿದೆ ಎಂದು ವ್ಯಕ್ತಿ ಹೇಳಿದ್ದಾರೆ.

ಕೂಡಲೇ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಲಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎರಡು ಡೋಸ್‌ಗಳನ್ನು ಒಟ್ಟಿಗೆ ನೀಡುವುದರಿಂದ ಅಂಥ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಇದು ಕರ್ತವ್ಯಲೋಪ. ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು, ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

Advertisement
Share this on...