VIDEO| ಗೋಮಾತೆಯ ಅಪ್ಪುಗೆಯಿಂದ ಎಂತಹ ರೋಗಗಳಿದ್ದರೂ ಗುಣಮುಖ: ವೇಗವಾಗಿ ಬೆಳೆಯುತ್ತಿದೆ ಈ ಚಿಕಿತ್ಸೆ, ಒಂದು ಗಂಟೆಗೆ ಎಷ್ಟು ಹಣ ಗೊತ್ತಾ?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 662 views

ಕ್ಯಾಲಿಫೋರ್ನಿಯಾ: ಭಾರತದ ಪ್ರತಿಯೊಂದು ಸಂಪ್ರದಾಯ, ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಕುಳಿತಿದ್ದರೆ, ಭಾರತೀಯರು ನಿಜಕ್ಕೂ ತಲೆತಗ್ಗಿಸಬೇಕಾದ ಟ್ರೆಂಡ್‌ ಒಂದು ಅಮೆರಿಕದಲ್ಲಿ ಶುರುವಾಗಿದೆ. ಭಾರತೀಯರು ಗೋಮಾತೆ ಎಂದು ಪೂಜಿಸುವ ಹಸುಗಳನ್ನು ತಬ್ಬಿಕೊಂಡರೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು ಎಂದು ಅರ್ಥ ಮಾಡಿಕೊಂಡಿರುವ ಅಮೆರಿಕನ್ನರು ಇದೀಗ ಹಣ ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.

ಕೌ ಹಗ್ಗಿಂಗ್‌ (COW HUGGING- ಹಸುಗಳನ್ನು ಅಪ್ಪಿಕೊಳ್ಳುವುದು) ಎಂಬ ಟ್ರೆಂಡ್‌ ಶುರುವಾಗಿದ್ದು, ಒಮ್ಮೆ ಹಸು ಅಪ್ಪಿಕೊಳ್ಳಲು ಒಂದು ತಾಸಿಗೆ 200 ಡಾಲರ್‌ (ಸುಮಾರು 15 ಸಾವಿರ ರೂ.) ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.

Advertisement

ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್‌ಗಳನ್ನು ಆರಂಭಿಸಲಾಗಿದೆ. ನಂಬಲು ಅಸಾಧ್ಯ ಅಂದರೆ, ಜುಲೈ ವರೆಗೂ ಬುಕಿಂಗ್‌ ಆಗಿದ್ದು, ಹಸುಗಳು ಸಿಗುತ್ತಿಲ್ಲವಂತೆ! ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸೆಂಚುರಿ, ಅಮೆರಿಕದ ಅಭಯಾರಣ್ಯಗಳಲ್ಲಿ ಹಸುಗಳನ್ನು ತಬ್ಬಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕೋವಿಡ್‌ನ ಈ ಅವಧಿಯಲ್ಲಿ ಭಯಭೀತರಾಗಿರುವ ಸಂದರ್ಭದಲ್ಲಿ ಹಸುಗಳನ್ನು ತಬ್ಬಿಕೊಂಡರೆ ಉಲ್ಲಾಸದ ಭಾವನೆ ಮೂಡುತ್ತದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ, ಇದು ಸಾಬೀತಾಗಿದೆ ಕೂಡ ಎನ್ನುತ್ತಾರೆ ಇಲ್ಲಿಯ ಜನರು.

ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ ಎನ್ನುತ್ತಾರೆ ಅವರು. ಅಮೆರಿಕ ಮಾತ್ರವಲ್ಲದೇ ನೆದರ್ಲೆಂಡ್‌, ಸ್ವಿಜರ್ಲ್ಯಾಂಡ್, ಬ್ರಿಟನ್‌ನಲ್ಲಿಯೂ ಈ ರೀತಿಯ ಚಿಕಿತ್ಸಾ ಪದ್ಧತಿ ಇದೆ ಎನ್ನಲಾಗಿದೆ. ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.

ಭಾರತದಲ್ಲಿ ಗೋಮಾತೆಗಿರುವ ಮಹತ್ವ ಹಾಗು ಅದರಿಂದ ಸಿಗುವ ವೈಜ್ಞಾನಿಕ ಚಿಕಿತ್ಸೆಗಳು

ಹಸು (ಗೋವು) ವಿಗೆ ಭಾರತದಲ್ಲಿ ಮಾತೆಯ ಸ್ಥಾನಮಾನ ಸಿಕ್ಕಿದೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಸುವನ್ನು ತಾಯಿಯಾಗಿ ಸ್ವೀಕರಿಸಲಾಗಿದೆ. ಇದರ ಹಿಂದಿನ ಒಂದು ದೊಡ್ಡ ಕಾರಣವೆಂದರೆ ಹಸು ಬಹಳ ಉಪಯುಕ್ತ ಪ್ರಾಣಿ. ಹೊಲಗಳನ್ನು ಉಳುಮೆ ಮಾಡಲು ಹಸುಗಳನ್ನು ಬಳಸಲಾಗುತ್ತದೆ, ಇದಲ್ಲದೆ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್ ಇತ್ಯಾದಿಗಳು ಮನೆಯ ಅಡುಗೆಮನೆಯ ಶೋಭೆಯನ್ನ ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಪೂಜಾ ಪಾಠ ಹಾಗು ಇತ್ಯಾದಿಗಳಲ್ಲಿ ಹಸುವಿನ ಗೋಮೀತ್ರ ಮತ್ತು ಸಗಣಿಯನ್ನ ಬಳಸಲಾಗುತ್ತದೆ.

ಹಸುವಿನ ಮಹತ್ವವನ್ನು ಕೇವಲ ಪುರಾಣಗಳಲ್ಲಿ ಮಾತ್ರವಲ್ಲ ವಾಸ್ತು ಶಾಸ್ತ್ರದಲ್ಲಿ ಗೋಮಾತೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹಸು ವಾಸಿಸುವ ಸ್ಥಳದಲ್ಲಿ, ಎಲ್ಲಾ ವಾಸ್ತು ದೋಷಗಳು ತಾವಾಗಿಯೇ ಹೋಗುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಹಸುವಿನ ಬಗ್ಗೆ ಇತರ ಕೆಲವು ವಿಷಯಗಳನ್ನ ತಿಳಿಯೋಣ ಬನ್ನಿ….

ವಾಸ್ತು ದೋ-ಷ-ಕ್ಕೆ ಮುಕ್ತಿ ನೀಡುತ್ತದೆ ಗೋಮಾತೆ

ಮಾನ್ಯತೆಯ ಪ್ರಕಾರ ಹಸು ಯಾವ ಜಾಗದಲ್ಲಿ ನಿಂತು ಶಾಂತಿಯಿಂದ ಉಸಿರಾಡುವ ಸ್ಥಳದಲ್ಲಿ ಎಲ್ಲಾ ವಾಸ್ತು ದೋ-ಷ-ಗಳು ದೂರವಾಗುತ್ತವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಯಾವ ಮನೆಯಲ್ಲಿ ಗೋಮಾತೆ ಸಂತೋಷದಿಂದ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿಯ ವಾಸವೂ ಇರುತ್ತದೆ ಗೋಮಾತೆಯ ಕೊರಳಿಗೆ ಗಂಟೆಯನ್ನು ಕಟ್ಟಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಏಕೆಂದರೆ ಹಸುವಿನ ಕೊರಳಿಗೆ ಕಟ್ಟಿದ ಗಂಟೆ ಶಬ್ದವಾಗುವುದರಿದ ಗೋಮಾತೆಯ ಆರತಿಯಾದಂತೆ ಎಂದು ಹೇಳಲಾಗುತ್ತದೆ.

ನಿಮ್ಮ ಮನೆಯಲ್ಲಿ ಹಸುಗಳಿಲ್ಲ ಆದರೆ ಹಸುಗಳು ಪ್ರತಿದಿನ ಮನೆಯ ಮುಂದೆ ಬರುತ್ತವೆಯೆಂದರೆ, ಅವು ಒಳ್ಳೆಯ ದಿನಗಳ ಸಂಕೇತಗಳಾಗಿವೆ. ಅದೇ ಸಮಯದಲ್ಲಿ, ವಾಸ್ತು ದೋ-ಷ-ಗಳು ಮನೆಯ ಮುಖ್ಯ ದ್ವಾರದಿಂದ ಕಣ್ಮರೆಯಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ.

ಗೋಮಾತೆಯ ಸೇವೆಯಿಂದ ಈ ಲಾಭಗಳಾಗುತ್ತವೆ

ಗೋಮಾತೆಯನ್ನ ನಿಯಮಿತವಾಗಿ ಪೂಜಿಸುವ ಮತ್ತು ಸೇವೆ ಮಾಡುವ ಜನರಿಗೆ ಕಷ್ಟ ಕಾರ್ಪಣ್ಯಗಳು ಹತ್ತಿರವು ಸುಳಿಯಲ್ಲ ಎಂದು ನಂಬಲಾಗಿದೆ. ಅಂತಹ ಜನರ ಮೇಲಿನ ಎಲ್ಲಾ ವಿಪತ್ತುಗಳ ನಾಶಕ್ಕೆ ಗೋಮಾತೆ ಕಾರಣಳಾಗುತ್ತಾಳೆ.  ಗೋಮಾತೆಯಲ್ಲಿ ದೇವ ದೇವಾದಿಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ, ಅಂಥದ್ರಲ್ಲಿ ಗೋಮಾತೆ ಯಾವ್ಯಾವ ಸ್ಥಳಗಳಿಗೆ ಹೋಗುತ್ತದೆಯೋ ಅಲ್ಲಿ ಹಾ-ವು ಚೇ-ಳು-ಗಳು ಎಂದಿಗೂ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಗೋಮಾತೆಯ ಬಾಲದಿಂದ ದೂರವಾಗುತ್ತದೆ ದೃಷ್ಟಿ ದೋ-ಷ

ಪೌರಾಣಿಕ ಮಾನ್ಯತೆಗಳ ಪ್ರಕಾರ ಹಸುವಿನ ಸಗಣಿಯಲ್ಲಿ ತಾಯಿ ಲಕ್ಷ್ಮಿ ನಿವಾಸವಿರುತ್ತದೆ ಮತ್ತು ಗೋಮಾತೆಯ ಒಂದು ಕಣ್ಣಿನಲ್ಲಿ ಸೂರ್ಯನಿದ್ದರೆ ಮತ್ತೊಂದು ಕಣ್ಣಿನಲ್ಲಿ ಚಂದ್ರ ದೇವ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಇದಲ್ಲದೆ, ಹಸುವಿನ ಹಾಲಿನಲ್ಲಿ ಕೆಲ ಅದ್ಭುತ ತತ್ವಗಳಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋ-ಗ-ಗಳ ವಿ-ರು-ದ್ಧ ಹೋರಾಡುವ ಸಾಮರ್ಥ್ಯವನ್ನು ಮನುಷ್ಯನಿಗೆ ನೀಡುತ್ತದೆ.

ಗೋಮಾತೆಯ ಬಾಲದಲ್ಲಿ ಹನುಮಂತ ನೆಲೆಸಿರುತ್ತಾನೆ. ಹಾಗಾಗಿ ಯಾರ ಮೇಲಾದರೂ ಕೆಟ್ಟ ದೃಷ್ಟಿ ಬಿದ್ದರೆ ಆಗ ಗೋಮಾತೆಯ ಬಾಲದಿಂದ ದೃಷ್ಟಿ ತೆಗೆಯಲಾಗುತ್ತದೆ

ರೋ-ಗ-ಗಳ ನಾ-ಶ-ಪಡಿಸುತ್ತದೆ ಗೋಮಾತೆ

ಗೋಮಾತೆಯ ಬೆನ್ನ ಮೇಲಿರುವ ಡುಬ್ಬದ ಮೇಲೆ ಸೂರ್ಯದೇವ ಕೇತು ನಾಡಿಯಿರುತ್ತದೆ. ಮಾನ್ಯತೆಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ ಗೋಮಾತೆಯ ಬೆನ್ನ ಮೇಲೆ ಕೈ ಸವರುವುದರಿಂದ ಎಲ್ಲ ರೋ-ಗ-ಗಳೂ ನಾ-ಶ-ವಾಗುತ್ತವೆ. ಗೋವಿಗೆ ಮೇವು ತನ್ನಿಸುವುದರಿಂದ 33 ಕೋಟಿ ದೇವತೆಗಳ ಸಂತೃಪ್ತರಾಗುತ್ತಾರೆ. ಯಾಕಂದ್ರೆ ಗೋಮಾತೆಯಲ್ಲಿ 33 ಕೋಟಿ ದೇವತೆಗಳಿದ್ದಾರೆ ಎಂಬ ನಂಬಿಕೆಯಿದೆ. ಅಂಥದ್ರಲ್ಲಿ ಅಂತಹ ಗೋಮಾತೆಗೆ ಮೇವು ತಿನ್ನಿಸಲೇಬೇಕು.

ಅದೃಷ್ಟ ತರುತ್ತಾಳೆ ಗೋಮಾತೆ

ನೀವು ಮಾಡುವ ಕೆಲಸಗಳು ಫೇಲ್ ಆಗುತ್ತಿದ್ದರೆ ಮತ್ತು ಅದೃಷ್ಟವು ನಿಮಗೆ ಸಾಥ್ ನೀಡದಿರುತ್ತಿದ್ದತೆ ನೀಡದಿದ್ದರೆ, ಈ ಕ್ರಮಗಳು ನಿಮಗೆ ತುಂಬಾ ಪರಿಣಾಮಕಾರಿಯಾಗಿ ಸಾಬೀತಾಗಬಹುದು. ಹಾಗಾಗಿ ನಿಮ್ಮ ಅದೃಷ್ಟವನ್ನ ಖುಲಾಯಿಸಲು ಸ್ವಲ್ಪ ಬೆಲ್ಲವನ್ನು ಅಂಗೈಯಲ್ಲಿ ಇರಿಸಿ ಅದನ್ನ ಹಸುವಿನ ನಾಲಿಗೆಯಿಂದ ನೆಕ್ಕಿಸಿ‌.

ಒಂದು ವೇಳೆ ನಿಮ್ಮ ಅಂಗೈಯಲ್ಲಿರುವ ಬೆಲ್ಲವನ್ನ ಗೋಮಾತೆ ತನ್ನ ನಾಲಿಗೆಯಿಂದ ನೆಕ್ಲಿದರೆ ನಿಮ್ಮ ಅದೃಷ್ಟ ಖುಲಾಯಿಸಿತೆಂದೇ ಅಂದಯಕೊಳ್ಳಿ. ಅದರ ಜೊತೆಗೆ ಗೋಮಾತೆಯ ನಾಲ್ಕೂ ಕಾಲುಗಳ ಮಧ್ಯದಿಂದ ಪರಿಕ್ರಮ ಮಾಡುವುದರಿಂದ ಮನುಷ್ಯ ಭ-ಯ-ಮುಕ್ತನಾಗುತ್ತಾನೆ.

ನವಗ್ರಹಗಳನ್ನ ಈ ರೀತಿಯಾಗಿ ಶಾಂತಗೊಳಿಸುತ್ತೆ ಗೋಮಾತೆ

ಹಿಂದೂ ಧರ್ಮದ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಕಪ್ಪು ಬಣ್ಣದ ಗೋಮಾತೆಯನ್ನ ಪೂಜಿಸುವುದರಿಂದ ನವಗ್ರಹಗಳು ಶಾಂತವಾಗುತ್ತವೆ. ಅಷ್ಟೇ ಅಲ್ಲ ವ್ಯಕ್ತಿ ಸಂಪೂರ್ಣ ವಿಧಿವಿಧಾನಗಳೊಂದಿಗೆ ಗೋಮಾತೆಯ ಪೂಜೆ ಮಾಡಿದರೆ ಅಂತಹ ವ್ಯಕ್ತಿಗೆ ಶ-ತ್ರು-ಗಳಿಂದ ಮುಕ್ತಿ ಸಿಗುತ್ತದೆ.

ನಿಮ್ಮ ಯಾವುದಾದರೂ ಕೆಲಸಗಳು ಫೇಲ್ ಆಗುತ್ತಿದ್ದರೆ ಅಥವ ನಿಮಗೆ ಕಷ್ಟಗಳು ದೂರವಾಗುತ್ತಿರಲಿಲ್ಲವೆಂದರೆ ಆ ವಿಷಯವನ್ನು ನೀವು ಯಾರ ಹತ್ತಿರವೂ ಹೇಳಿಕೊಳ್ಳಲಾಗದಿದ್ದರೆ ಅದನ್ನ ನೀವು ಗೋಮಾತೆಯ ಕಿವಿಯಲ್ಲಿ ಹೇಳಿ. ನಿಮ್ಮ ನಿಂತ ಕೆಲಸಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತವೆ‌.

Advertisement
Share this on...